ತಾಯಿಯ ಸಾವಿಗೆ ಕಾರಣವಾಯ್ತು ಮಗನ ವಿಡಿಯೋ ಕಾಲ್ !
Team Udayavani, Nov 23, 2020, 11:42 AM IST
ಬಾಗಲಕೋಟೆ: ಮಗನ ವಿಡಿಯೋ ಕಾಲ್, ತಾಯಿಯ ಸಾವಿಗೆ ಕಾರಣವಾದ ಘಟನೆ ಸೋಮವಾರ ಬೆಳಗ್ಗೆ ಜಿಲ್ಲೆಯಲ್ಲಿ ಸಂಭವಿಸಿದೆ.
ಹೌದು, ಯೋಧ ಶೇಖರಯ್ಯ ವಿಭೂತಿ ಮತ್ತು ಪತ್ನಿ ಪುಷ್ಪಾವತಿ ಅವರು ಬೈಕನಲ್ಲಿ ಹುನಗುಂದ ತಾಲೂಕು ಮುಗನೂರ ಬಳಿ ಹೊರಟಿದ್ದರು. ಈ ವೇಳೆ ಯೋಧ ಶೇಖರಯ್ಯ ಅವರ ಪುತ್ರನ ವಿಡಿಯೋ ಕಾಲ್ ಬಂದಿದ್ದು, ಬೈಕ್ ಓಡಿಸುತ್ತಲೇ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತ ಹೊರಟಿದ್ದರು.
ಈ ವೇಳೆ ಮುಗನೂರ ಗ್ರಾಮದ ಬಳಿ ರಸ್ತೆಯಲ್ಲಿ ಹಂಪ್ಸ್ ಇದ್ದು, ಅದನ್ನು ಗಮನಿಸದೆ ಶೇಖರಯ್ಯ ಅವರು ವೇಗವಾಗಿ ಹಂಪ್ಸ್ ಮೇಲಿನಿಂದ ಬೈಕ್ ಜಿಗಿಸಿದ್ದಾರೆ. ಇದರಿಂದ ಬೈಕ್ ನ ಹಿಂಬದಿ ಕುಳುತಿದ್ದ ಪುಷ್ಪಾವತಿ (35) ಆಯತಪ್ಪಿ ರಸ್ತೆಯ ಮೇಲೆ ಬಿದ್ದಿದ್ದಾರೆ. ಆಗ ತಲೆಗೆ ತೀವ್ರ ಪೆಟ್ಟುಬಿದ್ದು ಪುಷ್ಪಾವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಸಿಎಂಗೆ ತಮ್ಮ ಸರ್ಕಾರ ಉಳಿಸಿಕೊಳ್ಳುವುದು ಮುಖ್ಯ, ರೈತರ ಹಿತವಲ್ಲ: ಡಿ ಕೆ ಶಿವಕುಮಾರ್
ಹಿಂಬದಿ ಕುಳಿತ ಪತ್ನಿ ರಸ್ತೆಯ ಮೇಲೆ ಬಿದ್ದು ಸಾವನ್ನಪ್ಪಿರುವುದು ಕಂಡ ಯೋಧ ಶೇಖರಯ್ಯ, ಪತ್ನಿಯ ಶವವನ್ನು ಅಪ್ಪಿ ಗೋಳಾಡಿ ಅಳುತ್ತಿದ್ದ ದೃಶ್ಯ ಮನಕಲುಕುವಂತಿತ್ತು.
ಇಂದು ಬೆಳಿಗ್ಗೆ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ಹೊರಡಬೇಕಿದ್ದ ಯೋಧ, ಪತ್ನಿಯನ್ನು ತವರು ಮನೆ ಹಿರೆಮಳಗಾವಿ ಗ್ರಾಮಕ್ಕೆ ಬಿಡಲು ಹೊರಟಿದ್ದರು.
ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ಪರಿಶೀಲಿಸಿದ್ದು, ಪ್ರಕರಣ ದಾಖಲಾಗಿದೆ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಿಷ್ಟಾಚಾರ ಉಲ್ಲಂಘಿಸಿದ ತಹಶೀಲ್ದಾರ್ : ಶರಣು ಬೆಲ್ಲದ ಆರೋಪ
ರೈತರು- ಜನರ ಅಭಿವೃದ್ದಿಗೆ ಯಡಿಯೂರಪ್ಪ ಯಾವುದೇ ರೀತಿ ಹಿಂದೆ ಬಿದ್ದಿಲ್ಲ: ಅಮಿತ್ ಶಾ
ಮುಚ್ಚಿದ ಸಕ್ಕರೆ ಕಾರ್ಖಾನೆ ಆರಂಭಿಸಿ :ಕಾರ್ಖಾನೆ ಬಂದ್ನಿಂದ ಸಾವಿರಾರು ಕಾರ್ಮಿಕರು ಬೀದಿಪಾಲು
ರೈತರಿಗೆ ಅನ್ಯಾಯವಾಗಲು ಬಿಡಲ್ಲ: ಸಚಿವ ಮುರುಗೇಶ ನಿರಾಣಿ ಅಭಯ
ಹನಗಂಡಿಯಲ್ಲಿ “ವ್ಯೋಮಕಾಯ ಸಿದ್ಧ ಶ್ರೀ ಅಲ್ಲಮಪ್ರಭು’ ಚಿತ್ರೀಕರಣ