ಜಮ್ಮು-ಕಾಶ್ಮೀರದಲ್ಲಿ ಬಳಬಟ್ಟಿ ಯೋಧ ಹುತಾತ್ಮ

ತರಬೇತಿ ನೀಡುವ ವೇಳೆ ಆರ್‌ಡಿಎಕ್ಸ್‌ ಸ್ಫೋಟ•ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Team Udayavani, May 25, 2019, 11:11 AM IST

ಆಲಮಟ್ಟಿ: ಬಳಬಟ್ಟಿಯಲ್ಲಿ ಹುತಾತ್ಮ ಯೋಧ ಶ್ರೀಶೈಲ ತೋಳಮಟ್ಟಿ ಪಾರ್ಥೀವ ಶರೀರವನ್ನು ಮೆರವಣಿಗೆ ನಡೆಸಲಾಯಿತು.

ಆಲಮಟ್ಟಿ: ಸ್ಫೊಧೀಟದಲ್ಲಿ ಹುತಾತ್ಮರಾಗಿರುವ ವೀರಯೋಧ ಶ್ರೀಶೈಲ ರಾಯಪ್ಪ ತೋಳಮಟ್ಟಿ ಕುರಿ ಕಾಯ್ದು ಕುಟುಂಬ ಸಲುಹಿ ಮುಂದೆ ಸೈನ್ಯ ಸೇರಿ ಅಲ್ಲಿಯೂ ಎಲ್ಲರಿಂದ ಪ್ರಶಂಸೆಗೆ ಒಳಗಾದ ವ್ಯಕ್ತಿ.

ಶ್ರೀಶೈಲ ರಾಯಪ್ಪ ತೋಳಮಟ್ಟಿ ಜಮ್ಮು-ಕಾಶ್ಮೀರದಲ್ಲಿ ಮೇ 22ರಂದು ಹುತಾತ್ಮರಾಗಿರುವ ಸುದ್ದಿ ಕೇಳಿದ ಕುಟುಂಬ ಸದಸ್ಯರಿಗೆ ಸುದ್ದಿಯನ್ನು ಮೊದಲು ನಂಬಲಾಗಲಿಲ್ಲ. ನಂತರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಂದ ಸುದ್ದಿಯೆಂದ ನಂತರವೇ ನಂಬಿ ಕಣ್ಣೀರಾಕಿ ಉಳಿದವರಿಗೂ ಸುದ್ದಿ ತಲುಪಿಸಲಾಯಿತು.

ಹುತಾತ್ಮ ಯೋಧನ ಪಾರ್ಥಿವ ಶರೀರ ಬಳಬಟ್ಟಿಗೆ ಬಂದ ನಂತರ ಮೆರವಣಿಗೆಯುದ್ದಕ್ಕೂ ನಾಗರಿಕರು ಪುಷ್ಪ ಮಳೆಗರೆದರು. ದಾರಿಯುದ್ದಕ್ಕೂ ವಂದೇ ಮಾತರಂ, ಜೈ ಜವಾನ್‌ ಜೈ ಕಿಸಾನ್‌, ಶ್ರೀಶೈಲ ಅಮರ್‌ ಹೇ ಎನ್ನುವ ಘೋಷಣೆಯೊಂದಿಗೆ ಪಟಾಕಿ ಸಿಡಿಸುತ್ತ ಸಾಗಿದರು.

ರಾಯಣ್ಣನ ನಂಟು: ಶ್ರೀಶೈಲನ ತಂದೆ ಹೆಸರೂ ರಾಯಪ್ಪ ಅವರಿಗೆ ಹೆಣ್ಣು ಕೊಟ್ಟ ಮಾವನ ಹೆಸರೂ ರಾಯಪ್ಪ ಮತ್ತು ಆತನ ಅಂತ್ಯಸಂಸ್ಕಾರ ನಡೆದ ಸ್ಥಳವು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತ. ಹೀಗೆ ಶ್ರೀಶೈಲನು ಜನ್ಮ‌ಃತವಾಗಿ ರಾಯಣ್ಣನವರೊಂದಿಗೆ ಅವರ ಸ್ಫೂರ್ತಿ ಸೆಲೆಯಾಗಿ ತಂದೆ ರಾಯಪ್ಪ ಹಾಗೂ ಮಾದೇವಿಯವರ ಪುತ್ರನಾಗಿ ಜೂನ್‌ 10, 1985ರಲ್ಲಿ ಜನಿಸಿ ಪ್ರಾಥಮಿಕ ಶಿಕ್ಷಣವನ್ನು ತನ್ನ ಅಜ್ಜಿಯ ತವರು ಮನೆಯಾಗಿರುವ ಬಾಗಲಕೋಟೆ ತಾಲೂಕಿನ ಇಲಾಳದಲಿ,್ಲ ಪ್ರೌಢ ಶಿಕ್ಷಣವನ್ನು ತನ್ನ ತಂದೆ ಹುಟ್ಟೂರಾದ ಬಳಬಟ್ಟಿಯ ಸರ್ಕಾರಿ ಪ್ರೌಢಶಾಲೆ, ಪಪೂ ಶಿಕ್ಷಣ ಶಂಕ್ರಪ್ಪ ಸಕ್ರಿ ಜ್ಯೂನಿಯರ ಕಾಲೇಜು ಹಾಗೂ ಪದವಿ ಪ್ರಥಮ ವರ್ಷ ಬಸವೇಶ್ವರ ವಿದ್ಯಾಲಯದಲ್ಲಿ ಆಗಿದ್ದು ಪದವಿ ಪ್ರಥಮ ವರ್ಷವಿದ್ದಾಗ 2005 ಸೆ‌ಪೆ‌rಂಬರ್‌ ತಿಂಗಳಿನಲ್ಲಿ ಸೈನ್ಯಕ್ಕೆ ಸೇರಿದ್ದಾನೆ.

2008ರಲ್ಲಿ ಅಂಗಡಗೇರಿಯ ಈರಮ್ಮ ರಾಯಪ್ಪ ಮೆಂಡೆಗಾರ ಅವರ ಪುತ್ರಿ ಗೀತಾ ಅವರೊಂದಿಗೆ ಮದುವೆಯಾಗಿದ್ದು, ವೇದಾಶ್ರೀ ಹಾಗೂ ವಿಶ್ವನಾಥ ಎಂಬ ಎರಡು ಮಕ್ಕಳಿದ್ದಾರೆ. ಹುತಾತ್ಮರಿಗೆ ಬೊಮ್ಮಣ್ಣ ಎಂಬ ಒಬ್ಬ ಸಹೋದರನಿದ್ದು ಆತನೂ ವ್ಯವಸಾಯದಲ್ಲಿ ತೊಡಗಿದ್ದಾನೆ.

ಮುಗ್ದ ಮಕ್ಕಳು: ಶ್ರೀಶೈಲ ರಾಯಪ್ಪ ಬಳಬಟ್ಟಿಯವರಿಗೆ 6 ವರ್ಷದ ವೇದಶ್ರೀ ಹಾಗೂ 4 ವರ್ಷದ ವಿಶ್ವನಾಥ ಎಂಬ ಮಕ್ಕಳಿದ್ದು ಅವರು ತಮ್ಮ ಮನೆಯ ಮುಂದೆ ಸೇರಿದ ಜನರನ್ನು ಕಂಡು ಮುಗ್ದತೆಯಿಂದ ಅವರ ಚಿಕ್ಕಪ್ಪನಿಗೆ ಚಾಕೋಲೇಟ್ ಕೊಡಿಸಲು ಕೇಳಿದಾಗ ಚಿಕ್ಕಪ್ಪನ ರೋಧನ ಮುಗಿಲು ಮುಟ್ಟಿತ್ತು.

ಮಕ್ಕಳು ತಮ್ಮ ತಂದೆ ಹುತಾತ್ಮರಾಗಿರುವದನ್ನೂ ಅರಿಯದ ಕಂದಮ್ಮಗಳನ್ನು ಕಂಡು ನೆರೆದ ಜನರು ಮಕ್ಕಳಿಗೆ ಅರಿವು ಮೂಡುವದಕ್ಕಿಂತ ಮುಂಚೆಯೇ ತಂದೆಯನ್ನು ಕಳೆದುಕೊಂಡ ನತದೃಷ್ಟರು ಎಂದು ಕಣ್ಣಾಲಿಗಳನ್ನು ತುಂಬಿಕೊಂಡು ಮುಗ್ದ ಮಕ್ಕಳನ್ನು ತಬ್ಬಿಕೊಂಡು ಸಂಬಂಧಿಗಳು ರೋಧಿಸುವ ದೃಶ್ಯ ಸಾಮಾನ್ಯವಾಗಿತ್ತು.

ಧೃತಿಗೆಟ್ಟ ಪಾಲಕರು: ನಮ್ಮದು ಮೂಲ ಬಡತನ ಕುಟುಂಬವಾಗಿದ್ದು ನಮ್ಮ ತಂದೆಯವರು ನಾವು ಚಿಕ್ಕವರಿದ್ದಾಗಲೇ ತಾಯಿ ತವರು ಮನೆ ಇಲಾಳ ಗ್ರಾಮಕ್ಕೆ ಹೋಗಿದ್ದರು. ಇದರಿಂದ ನಾವು ಅಲ್ಲಿಯೇ ಇದ್ದು ಮುಂದೆ ನಮಗೆ ಮಕ್ಕಳಾದ ಮೇಲೆ ಅವರಿಗೆ ನಮ್ಮ ಊರಿನ ಹೆಸರನ್ನೇ ಅಡ್ರೆಸ್ಸನ್ನಾಗಿ ಮಾಡಿದ್ದರಿಂದ ತೋಳಮಟ್ಟಿ ಹೋಗಿ ಬಳಬಟ್ಟಿಯಾಯಿತು. ನನಗಿರುವ ಎರಡು ಮಕ್ಕಳಲ್ಲಿ ದೊಡ್ಡವನೇ ಶ್ರೀಶೈಲ ಅವನು ನಮ್ಮೊಂದಿಗೆ ಸಾಕಷ್ಟು ಶ್ರಮವಹಿಸಿ ದುಡಿಮೆಯೊಂದಿಗೆ ಶಿಕ್ಷಣ ಮುಂದುವರಿಸಿ ಸೇನೆಗೆ ಸೇರಿದ ನಂತರ ನಮಗೆಲ್ಲರಿಗೂ ಒಳ್ಳೆದಾಗಿತ್ತರ್ರೀ, ಈಗ ಅವನ ಇಲ್ಲ ಇನ್ನ ಸಣ್ಣ ಮಗ ಒಬ್ನ ಉಳಿದರ ಎಂದು ರೋಧಿಸುತ್ತಾ ಹೇಳಿದರು ರಾಯಪ್ಪ ತೋಳಮಟ್ಟಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ