ಅರಣ್ಯ ಸಂರಕ್ಷಣೆಗೆ ಶಾಶ್ವತ ಬೇಲಿಗೆ ಒತ್ತಾ
Team Udayavani, May 23, 2019, 1:08 PM IST
ಬಾಳೆಹೊನ್ನೂರು: ಅಂಡವಾನೆ ಗ್ರಾಮದಲ್ಲಿ ಬೇಲಿ ಹಾಕಲು ಮರದ ಕಂಬಗಳನ್ನು ನಿಲ್ಲಿಸಿರುವುದು.
ಬಾಳೆಹೊನ್ನೂರು: ಅರಣ್ಯ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮರಗಳನ್ನು ಕಡಿದು ಬೇಲಿ ಮಾಡುವ ಬದಲು ಸಿಮೆಂಟ್ ಅಥವಾ ಕಲ್ಲುಕಂಬ ಬಳಸಿ ಶಾಶ್ವತವಾಗಿ ಬೇಲಿ ನಿರ್ಮಿಸಬೇಕೆಂದು ಅಂಡವಾನೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೇಲಿ ಹಾಕುವಾಗ 10 ರಿಂದ 15 ವರ್ಷದ ಹಸಿ ಮರಗಳನ್ನು ಕಡಿದು ಬೇಲಿ ಕಂಬ ಮಾಡುತ್ತಿದ್ದು, ಇದರಿಂದಾಗಿ ಅರಣ್ಯ ನಾಶವಾಗಲಿದೆ. ಮರದ ಕಂಬವು ಕೇವಲ ನಾಲ್ಕೈದು ವರ್ಷ ಮಾತ್ರ ಬಾಳಿಕೆ ಬರುತ್ತಿದ್ದು, ನಂತರ ಗೆದ್ದಲು ತಿಂದು ಬೇಲಿ ನಾಶವಾಗಲಿದೆ. ತಂತಿ ಬೇಲಿಯು ಮಣ್ಣಲ್ಲಿ ಬಿದ್ದು ತುಕ್ಕು ಹಿಡಿದು ಹಾಳಾಗುತ್ತದೆ ಹಾಗೂ ಕೆಲವೆಡೆ ಗುಜಿರಿಗಾಗಿ ಕಳ್ಳರು ತಂತಿಯನ್ನು ಕಳ್ಳತನ ಮಾಡುತ್ತಾರೆ. ಹುಯಿಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ಸಾವಿರಾರು ಮರಗಳನ್ನು ಕಡಿದು ಹಿಂದಿನಿಂದಲೂ ಬೇಲಿ ಹಾಕಲಾಗುತ್ತಿದೆ. ಆದರೆ ಕೆಲವೆಡೆ ಬೇಲಿಗಳು ಕಾಣೆಯಾಗಿದ್ದು, ಶಾಶ್ವತವಾಗಿ ಬೇಲಿ ಹಾಕುವಂತೆ ಅರಣ್ಯ ಸಚಿವರು ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಬೇಲಿಗಾಗಿ ಮರಗಳನ್ನು ಕಡಿಯುವ ಬಗ್ಗೆ ಈ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಮುಂದಾದರೂ ಸರ್ಕಾರ ಈ ಬಗ್ಗೆ ಗಮನಹರಿಸಿ ಅರಣ್ಯ ಸಂರಕ್ಷಣೆ ಮಾಡಬೇಕಿದೆ ಎಂದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ನೀಲಗಿರಿ ಅಥವಾ ಅಕೇಶಿಯಾ ಕಂಬಗಳನ್ನು ಬಳಸುವುದರಿಂದ ಸುಮಾರು 10 ವರ್ಷ ಬಾಳಿಕೆ ಬರಲಿದೆ ಎಂದು ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ವಿಠಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂದುವರಿದ ಭಾರೀ ಮಳೆ: ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ
ನಾರ್ವೆ ಮಾಜಿ ಸಚಿವರ ಟ್ವಿಟರ್ನಲ್ಲಿ ಮರವಂತೆ ಚಿತ್ರ
ಕೋರಿಕೆಗೆ ಸ್ಪಂದಿಸಿದ ಅಮ್ಮಂದಿರು: ಎದೆಹಾಲಿಲ್ಲದೆ ಕಂಗೆಟ್ಟಿದ್ದ ತಾಯಿಗೆ ನೆರವು!
ಗ್ರಾಮ ಪಂಚಾಯತ್ ತ್ಯಾಜ್ಯ ಸಂಗ್ರಹ ವಾಹನಗಳ ಜಿಪಿಎಸ್ ಟ್ರ್ಯಾಕಿಂಗ್ !
ದ.ಕ., ಉಡುಪಿಯಲ್ಲಿ 207 ಡೆಂಗ್ಯೂ ಪ್ರಕರಣ; ಕೊಲ್ಲೂರು,ನೆರಿಯ ಪರಿಸರದಲ್ಲಿ ಅತ್ಯಧಿಕ
MUST WATCH
ಹೊಸ ಸೇರ್ಪಡೆ
ಮುಂದುವರಿದ ಭಾರೀ ಮಳೆ: ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ
ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟ
ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ