ಕೋವಿಡ್ : ಮೂರು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ: ರಾಜ್ಯದಲ್ಲಿಂದು 1065 ಕೇಸ್ ಪತ್ತೆ
Team Udayavani, Aug 16, 2021, 6:55 PM IST
ಬೆಂಗಳೂರು : ರಾಜ್ಯದಲ್ಲಿ ಸತತ ಎರಡು ದಿನಗಳಿಂದ ಕೋವಿಡ್ ಹೊಸ ಪ್ರಕರಣಗಳ ಪತ್ತೆ ಪ್ರಮಾಣ ಕಡಿಮೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1065 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 28 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು(ಆ.16) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
1486 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಚೇತರಿಕೆ ಕಂಡಿರುವವರ ಸಂಖ್ಯೆ 2871448 ಕ್ಕೆ ತಲುಪಿದೆ.
ರಾಜ್ಯದಲ್ಲಿಂದು 22048 ಕೋವಿಡ್ ಸಕ್ರಿಯ ಪ್ರಕರಣಗಳು ಇವೆ. ಕೋವಿಡ್ ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ (ಪಾಸಿಟಿವಿಟಿ ದರ) 0.93 % ಹಾಗೂ ಮೃತ ಪಟ್ಟವರ ಶೇಕಡಾವಾರು ಪ್ರಮಾಣ 2.62 % ಇದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-1, ಬಳ್ಳಾರಿ-3, ಬೆಳಗಾವಿ-11, ಬೆಂಗಳೂರು ಗ್ರಾಮಾಂತರ-10, ಬೆಂಗಳೂರು ನಗರ-270, ಬೀದರ್-2, ಚಾಮರಾಜನಗರ-11, ಚಿಕ್ಕಬಳ‍್ಳಾಪುರ-3, ಚಿಕ್ಕಮಗಳೂರು-22, ಚಿತ್ರದುರ್ಗ-11, ದಕ್ಷಿಣ ಕನ್ನಡ-284, ದಾವಣಗೆರೆ-5, ಧಾರವಾಡ-7, ಗದಗ-0, ಹಾಸನ-54, ಹಾವೇರಿ-1, ಕಲಬುರಗಿ-6, ಕೊಡಗು-34, ಕೋಲಾರ-21, ಕೊಪ್ಪಳ-0, ಮಂಡ್ಯ-18, ಮೈಸೂರು-63, ರಾಯಚೂರು-0, ರಾಮನಗರ-4, ಶಿವಮೊಗ್ಗ-45, ತುಮಕೂರು-31, ಉಡುಪಿ-107, ಉತ್ತರ ಕನ್ನಡ-38, ವಿಜಯಪುರ-2, ಯಾದಗಿರಿ-1.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದು ಚಿಕ್ಕಬಳ‍್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
Vote ಮಾಡದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ