ಬನಶಂಕರಿ: ಸ್ಕೂಲ್ ಬಸ್ ಢಿಕ್ಕಿಯಾಗಿ 16 ವರ್ಷದ ಬಾಲಕಿ ಸ್ಥಳದಲ್ಲೇ ಸಾವು
Team Udayavani, May 26, 2022, 3:44 PM IST
ಬೆಂಗಳೂರು : ನಗರದ ಬನಶಂಕರಿಯಲ್ಲಿ ಗುರುವಾರ ಬೆಳಗ್ಗೆ ಸ್ಕೂಲ್ ಬಸ್ ಢಿಕ್ಕಿಯಾಗಿ 16 ವರ್ಷದ ಬಾಲಕಿಯೊಬ್ಬಳು ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಅವಘಡ ನಡೆದಿದೆ.
ಹಾರೋಹಳ್ಳಿಯ ನಿವಾಸಿ ದರ್ಶನ್ (21) ಎಂಬುವವರು ಕೀರ್ತನ ಮತ್ತು ಹರ್ಷಿತ 15 ವರ್ಷ ರವರನ್ನು ಬೈಕ್ ನಲ್ಲಿ ಹಿಂಬದಿಯಲ್ಲಿ ಕೂರಿಸಿಕೊಂಡು ಕಿತ್ತೂರು ರಾಣಿ ಚೆನ್ನಮ್ಮ ಜಂಕ್ಷನ್ ಕಡೆಯಿಂದ ಕಾಮಾಕ್ಯ ಕಡೆಗೆ ಹೋಗುತ್ತಿರುವಾಗ ಫ್ಲೈ ಓವರ್ ಮೇಲಿನಿಂದ ಬಂದ ಖಾಸಗಿ ಶಾಲಾ ಬಸ್ ಚಾಲಕ ವೈಟ್ ರಾಕ್ ಹೋಟೆಲ್ ಮುಂಭಾಗ ಬೈಕ್ ಗೆ ಗುದ್ದಿದ ಪರಿಣಾಮ, ಮೂವರೂ ವಾಹನ ಸಮೇತವಾಗಿ ರಸ್ತೆ ಮೇಲೆ ಬಿದ್ದಾಗ, ಸ್ಕೂಲ್ ಬಸ್ಸಿನ ಚಕ್ರ ಹಿಂಬದಿಯಲ್ಲಿದ್ದ ಕೀರ್ತನ ತಲೆಯ ಮೇಲೆ ಹರಿದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಸಂಬಂಧ ಬನಶಂಕರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಘಟನೆ ಬಳಿಕ ಪರಾರಿಯಾಗಿರುವ ಬಸ್ ಚಾಲಕನಿಗಾಗಿ ಶೋಧ ನಡೆಸಲಾಗುತ್ತಿದೆ. ವೇಗವಾಗಿ ಮತ್ತು ನಿರ್ಲಕ್ಷತೆ ಯಿಂದ ಚಾಲನೆ ಮಾಡಿಕೊಂಡು ಬಂದದ್ದೆ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನ್ನಡಿಗರಲ್ಲಿ ಪ್ರತ್ಯೇಕ ರಾಜ್ಯದ ಕಿಚ್ಚು ಹಚ್ಚುತ್ತಿರುವ ಕತ್ತಿ ಹೇಳಿಕೆ ಖಂಡನೀಯ : ಜೋಶಿ
ಉದ್ಯಮಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯ ಪೂರೈಕೆ: ಸಚಿವ ಅಶ್ವತ್ಥನಾರಾಯಣ
ಮಗಳ ಹತ್ಯೆಗೆ ಯತ್ನ: ತಂದೆ ಬಂಧನ
ಬೆಳ್ಳಂಬೆಳಗ್ಗೆ ಘರ್ಜಿಸಿದ ಜೆಸಿಬಿ: 100 ಕೋಟಿ ರೂಪಾಯಿ ಮೌಲ್ಯದ ಬಿಡಿಎ ಆಸ್ತಿ ವಶ
ಮೀನು ಸಾಯುವ, ವಲಸೆ ಹಕ್ಕಿ ಬರುವುದನ್ನು ನಿಲ್ಲಿಸುವ ಮೊದಲು ಕೆರೆ ಸ್ವಚ್ಛಗೊಳಿಸಿ: ಬಿಜ್ಜೂರ್