ಪ್ಲಾಸ್ಟಿಕ್ ಬಳಸಿದ 199 ಮಂದಿಗೆ ನೋಟಿಸ್
Team Udayavani, Jul 18, 2019, 3:04 AM IST
ಬೆಂಗಳೂರು: ನಿಷೇಧಿತ ಪ್ಲಾಸ್ಟಿಕ್ ಬಳಸುವವರಿಗೆ ದಂಡ ವಿಧಿಸುವ ಆಂದೋಲನ ಮುಂದುವರಿದಿದ್ದು, ಬಿಬಿಎಂಪಿ ಎಂಟು ವಲಯಗಳಲ್ಲಿ ದಾಳಿ ನಡೆಸಿ 1,171 ಅಂಗಡಿಗಳು ಹಾಗೂ 821 ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ.
ಈ ವೇಳೆ 697 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ 199 ಜನರಿಗೆ ನೋಟಿಸ್ ಜಾರಿಗೊಳಿಸಿದ್ದು, 3,01,430 ರೂ. ದಂಡ ವಿಧಿಸಲಾಗಿದೆ.
ಶಾಸಕಿ ಭಾಗಿ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಬುಧವಾರ ಆರೋಗ್ಯಾಧಿಕಾರಿಗಳ ಜತೆ ಜಯನಗರ 8ನೇ ಬ್ಲಾಕ್ನಲ್ಲಿರುವ ವಾಸುದೇವ್ ಅಡಿಗಾಸ್ ಹೋಟೆಲ್ಗೆ ದಿಢೀರ್ ಭೆಟಿ ನೀಡಿ, 100 ಕೆ.ಜಿ.ಗೂ ಹೆಚ್ಚು ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಿದ್ದು, 50 ಸಾವಿರ ರೂ. ದಂಡ ವಿಧಿಸಿ ಹೋಟೆಲ್ಗೆ ನೋಟೀಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.