ರಾಜ್ಯದಲ್ಲಿ ಶೇ.20ರಷ್ಟು “ಡಕೋಟಾ ಎಕ್ಸ್‌ಪೆ‹ಸ್‌’!

Team Udayavani, Nov 27, 2018, 6:00 AM IST

bus.jpg

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ ಶನಿವಾರ ಭೀಕರ ಬಸ್‌ ದುರಂತ ಸಂಭವಿಸಿ ಅಪಾರ ಸಾವು-ನೋವು ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯದ ಸಾರಿಗೆ ವ್ಯವಸ್ಥೆ ಕುರಿತು ಉದಯವಾಣಿ ಇಂದಿನಿಂದ “ಸರಿದಾರಿಗೆ ಬರಲಿ ಸಾರಿಗೆ’ ಸರಣಿ ಆರಂಭಿಸಿದೆ. ರಾಜ್ಯದಲ್ಲಿ ಶೇ.20ರಷ್ಟು ವಾಹನಗಳು 15 ವರ್ಷಕ್ಕಿಂತ ಹಳೆಯದಾಗಿವೆ. ಹೀಗಾಗಿ ನಿತ್ಯ ಲಕ್ಷಾಂತರ ಜನರನ್ನು ಹೊತ್ತೂಯ್ಯುವ ಈ ವಾಹನಗಳ ಸಂಚಾರ “ಸಾವಿನೊಂದಿಗಿನ ಸರಸ’ವಾಗಿದೆ ಎಂಬ ವರದಿ ಇಲ್ಲಿದೆ.

ಬೆಂಗಳೂರು: ರಾಜ್ಯದಲ್ಲಿ ನೋಂದಣಿಯಾದ ಸಾರ್ವಜನಿಕ ಸಾರಿಗೆಗಳಲ್ಲಿ ಶೇ. 20ರಷ್ಟು ವಾಹನಗಳು 15 ವರ್ಷಕ್ಕಿಂತ ಹಳೆಯದಾಗಿವೆ. ಹಾಗಾಗಿ, ನಿತ್ಯ ಲಕ್ಷಾಂತರ ಜನರನ್ನು ಹೊತ್ತೂಯ್ಯುವ ಈ ವಾಹನಗಳ ಸಂಚಾರ “ಸಾವಿನೊಂದಿಗಿನ ಸರಸ’ವೇ ಆಗಿರುತ್ತದೆ.

2017-18ರವರೆಗೆ ರಾಜ್ಯದಲ್ಲಿ ಒಟ್ಟಾರೆ 1.93 ಕೋಟಿ ವಿವಿಧ ಪ್ರಕಾರದ ವಾಹನಗಳು ನೋಂದಣಿಯಾಗಿವೆ. ಈ ಪೈಕಿ ಬಸ್‌, ಒಪ್ಪಂದ ಮತ್ತು ಮಜಲು, ಖಾಸಗಿ ಸೇವಾ ವಾಹನ, ಶಿಕ್ಷಣ ಸಂಸ್ಥೆಯ ವಾಹನಗಳು ಸುಮಾರು ಒಂದು ಲಕ್ಷ ಇವೆ. ಈ ಪೈಕಿ 21 ಸಾವಿರ ವಾಹನಗಳು 15 ವರ್ಷ ಮೇಲ್ಪಟ್ಟು ಹಳೆಯದಾಗಿವೆ. ಲಕ್ಷಾಂತರ ಕಿ.ಮೀ. ಸವೆದು ಸುಣ್ಣವಾಗಿರುವ ಈ ವಾಹನಗಳಲ್ಲಿ ಪ್ರಯಾಣಿಸುವುದು ಅತ್ಯಂತ ಅಪಾಯಕಾರಿಯಾಗಿದ್ದರೂ, ಇವುಗಳಿಗೆ ಬ್ರೇಕ್‌ ಹಾಕಲು ಸ್ವತಃ ಸಾರಿಗೆ ಇಲಾಖೆ ಅಸಹಾಯಕವಾಗಿದೆ.

ನಿಯಮಿತವಾಗಿ ನಿರ್ವಹಣೆ ಮಾಡಿದಾಗ್ಯೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳ ಆಯಸ್ಸು ಹತ್ತು ವರ್ಷ ಅಥವಾ 9 ಲಕ್ಷ ಕಿ.ಮೀ. ಈ ಮಿತಿ ಮೀರಿದರೆ ಅಂತಹ ಬಸ್‌ಗಳನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ಮುಲಾಜಿಲ್ಲದೆ ಗುಜರಿಗೆ ಹಾಕಲಾಗುತ್ತದೆ. ಆದರೆ, ಖಾಸಗಿ ಬಸ್‌ಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಈ ಮಾನದಂಡವೇ ಇಲ್ಲ. ದಶಕಗಳಾದರೂ ಸಾರಿಗೆ ಇಲಾಖೆ ಅಧಿಕಾರಿಗಳು ನೀಡಿದ “ಅರ್ಹತಾ ಪ್ರಮಾಣಪತ್ರ’ವನ್ನು ತೋರಿಸುತ್ತಾ ಓಡಾಡುತ್ತಲೇ ಇವೆ. ಇವು ಆಗಾಗ್ಗೆ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿವೆ. ಈಚೆಗೆ ಮಂಡ್ಯದಲ್ಲಿ ದುರಂತಕ್ಕೀಡಾದ ಬಸ್‌ ಕೂಡ 15 ವರ್ಷ ಮೇಲ್ಪಟ್ಟದ್ದಾಗಿದೆ. ಹಾಗೂ ಅದು ಸಾರಿಗೆ ಇಲಾಖೆಯ ಅರ್ಹತಾ ಪ್ರಮಾಣಪತ್ರ (ಎಫ್ಸಿ)ವನ್ನೂ ಹೊಂದಿದೆ!

ಸಮಸ್ಯೆ ಏನು?
ಸಾಮಾನ್ಯವಾಗಿ ಯಾವುದೇ ಕಂಪೆನಿಯ ಬಸ್‌ಗಳಾಗಿದ್ದರೂ ಅವುಗಳ ಗರಿಷ್ಠ ಬಾಳಿಕೆ 12ರಿಂದ 15 ವರ್ಷಗಳಾಗಿವೆ. ತದನಂತರದಲ್ಲಿ ಅವುಗಳ ಎಂಜಿನ್‌ ಸವೆದು, ಕಾರ್ಯಕ್ಷಮತೆ ಕಡಿಮೆಯಾಗಿರುತ್ತದೆ. ಹಾಗಾಗಿ, ಎಲ್ಲೆಂದರಲ್ಲಿ ಬ್ರೇಕ್‌ಡೌನ್‌ ಆಗುತ್ತವೆ. ಹೆಚ್ಚು ಹೊಗೆ ಉಗುಳುವ ಮೂಲಕ ಪರಿಸರ ಮಾಲಿನ್ಯ ಉಂಟುಮಾಡುತ್ತವೆ. ನಿರ್ವಹಣಾ ವೆಚ್ಚ ಹೆಚ್ಚಳಕ್ಕೂ ಕಾರಣವಾಗುತ್ತವೆ. ಇದೆಲ್ಲದರಿಂದ ಗುಣಮಟ್ಟದ ಸೇವೆ ನೀಡಲಾಗುವುದಿಲ್ಲ. ಹೀಗಿರುವಾಗ ಒಂದೂವರೆ ದಶಕದ ಹಿಂದಿನ ಬಸ್‌ಗಳ ಕಾರ್ಯಾಚರಣೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಕೆಎಸ್‌ಆರ್‌ಟಿಸಿ ತಾಂತ್ರಿಕ ವಿಭಾಗದ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸುತ್ತಾರೆ.

ನೀತಿ ರೂಪಿಸುವ ಅಗತ್ಯವಿದೆ- ತಜ್ಞರು
ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕ ಸಾರಿಗೆ ವಾಹನಗಳ ಕಾರ್ಯಾಚರಣೆಗೆ ಇಂತಿಷ್ಟು ವರ್ಷಗಳು ಎಂದು ನಿಗದಿಪಡಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸ್ಪಷ್ಟ ನೀತಿ ರೂಪಿಸುವ ಅವಶ್ಯಕತೆ ಇದೆ. ಜತೆಗೆ ನಿಯಮ ಉಲ್ಲಂ ಸುವ ವಾಹನಗಳ ಮೇಲೆ ನಿಗಾ ಇಡಲು ಸಾರಿಗೆ ಇಲಾಖೆ ಅಧಿಕಾರಿಗಳಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆಗ ದುರಂತಗಳನ್ನು ತಗ್ಗಿಸಬಹುದು ಎಂದು ಸಾರಿಗೆ ತಜ್ಞರು ತಿಳಿಸುತ್ತಾರೆ.

ದೆಹಲಿಯಲ್ಲಿ 15 ವರ್ಷ ಮೇಲ್ಪಟ್ಟ ವಾಹನಗಳನ್ನು ರಸ್ತೆಗಿಳಿಸಲು ಅವಕಾಶ ಇಲ್ಲ. ಇದೇ ರೀತಿಯ ಮಾದರಿಯನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕೆಂಬ ಉದ್ದೇಶ ನಮಗೂ ಇದೆ. ಆದರೆ, ಖಾಸಗಿಯವರು ಬಿಡುವುದಿಲ್ಲ. ಹಾಗಾಗಿ, ಈ ಚಿಂತನೆ ನೆನೆಗುದಿಗೆ ಬಿದ್ದಿದೆ. ಒಂದು ವೇಳೆ ಮಿತಿ ನಿಗದಿಪಡಿಸಿದರೆ, 50 ಸಾವಿರಕ್ಕೂ ಅಧಿಕ ವಾಹನಗಳು ಗುಜರಿಗೆ ಹೋಗಲಿವೆ. ಈ ಮೂಲಕ ಅಪಘಾತಗಳು ಹಾಗೂ ಮಾಲಿನ್ಯ ಪ್ರಮಾಣ ಎರಡೂ ತಗ್ಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ನೂತನ ಮಸೂದೆಯಲ್ಲಿ ವಾಹನಗಳ ಆಯಸ್ಸು ಕೂಡ ನಿಗದಿಪಡಿಸಲಾಗುತ್ತಿದೆ. ಅಂದರೆ ಇಂತಿಷ್ಟು ವರ್ಷ ದಾಟಿದ ವಾಹನಗಳನ್ನು ಗುಜರಿಗೆ ಹಾಕಬೇಕು ಎಂದು ಸೂಚಿಸಲಿದೆ.

ನೀತಿಗೆ ಸಂಬಂಧಿಸಿದ ಕರಡು ಸಿದ್ಧವಾಗಿದ್ದು, ಸಂಸತ್ತಿನಲ್ಲಿ ಅನುಮೋದನೆಗೊಂಡ ನಂತರ ಮಸೂದೆ ಆಗಲಿದೆ. ಹಾಗೊಂದು ವೇಳೆ ನಿರ್ದಿಷ್ಟ ಮಿತಿ ವಿಧಿಸಿದರೆ, ಸಾವಿರಾರು ವಾಹನಗಳು ಗುಜರಿ ಸೇರಲಿವೆ. ಆದರೆ, ಚುನಾವಣಾ ವರ್ಷ ಇದಾಗಿರುವುದರಿಂದ ಸರ್ಕಾರವು ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕು.

15 ವರ್ಷ ಮೇಲ್ಪಟ್ಟ ವಾಹನಗಳು
ಖಾಸಗಿ ಬಸ್‌ಗಳು- 13,125
ಮಜಲು ವಾಹನ- 442
ಒಪ್ಪಂದದ ವಾಹನ- 1,430
ಖಾಸಗಿ ಸೇವಾ ವಾಹನ- 4,071
ಶಾಲಾ ವಾಹನ- 2,028
ಒಟ್ಟಾರೆ- 21,096

– ವಿಜಯ ಕುಮಾರ್‌ ಚಂದರಗಿ

ಟಾಪ್ ನ್ಯೂಸ್

ವರ್ಲ್ಡ್ ಸ್ಕೂಲ್‌ ಗೇಮ್ಸ್‌ : ಕೊಡಗಿನ ಉನ್ನತಿಗೆ ಕಂಚು

ವರ್ಲ್ಡ್ ಸ್ಕೂಲ್‌ ಗೇಮ್ಸ್‌ : ಕೊಡಗಿನ ಉನ್ನತಿಗೆ ಕಂಚು

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ : ಪಿ.ವಿ. ಸಿಂಧು ಪತನ

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ : ಪಿ.ವಿ. ಸಿಂಧು ಪತನ

ಎಫ್ಐಎಚ್‌ ವನಿತಾ ಪ್ರೊ ಹಾಕಿ ಲೀಗ್‌: ಭಾರತೀಯ ತಂಡ ಪ್ರಕಟ

ಎಫ್ಐಎಚ್‌ ವನಿತಾ ಪ್ರೊ ಹಾಕಿ ಲೀಗ್‌: ಭಾರತೀಯ ತಂಡ ಪ್ರಕಟ

ಕಿವುಡರ ಒಲಿಂಪಿಕ್ಸ್‌ ತಂಡ ಸದಸ್ಯರ ಜತೆ ಮೋದಿ ಸಂವಾದ

ಕಿವುಡರ ಒಲಿಂಪಿಕ್ಸ್‌ ತಂಡ ಸದಸ್ಯರ ಜತೆ ಮೋದಿ ಸಂವಾದ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

ಬಿಜೆಪಿ ನಾಯಕರಲ್ಲಿ ಭಿನ್ನಮತ ಇಲ್ಲ: ಪ್ರಹ್ಲಾದ ಜೋಷಿ

ಬಿಜೆಪಿ ನಾಯಕರಲ್ಲಿ ಭಿನ್ನಮತ ಇಲ್ಲ: ಪ್ರಹ್ಲಾದ ಜೋಷಿ

Online ಮೂಲಕ ಸಲ್ಲಿಸುವ ಜೀವನ ಪ್ರಮಾಣಪತ್ರಕ್ಕೆ ಫೇಸ್‌ ರೆಕಗ್ನಿಷನ್‌ ಇನ್ನು ಅಧಿಕೃತ ಪುರಾವೆ

Online ಮೂಲಕ ಸಲ್ಲಿಸುವ ಜೀವನ ಪ್ರಮಾಣಪತ್ರಕ್ಕೆ ಫೇಸ್‌ ರೆಕಗ್ನಿಷನ್‌ ಇನ್ನು ಅಧಿಕೃತ ಪುರಾವೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

ಬಿಜೆಪಿ ನಾಯಕರಲ್ಲಿ ಭಿನ್ನಮತ ಇಲ್ಲ: ಪ್ರಹ್ಲಾದ ಜೋಷಿ

ಬಿಜೆಪಿ ನಾಯಕರಲ್ಲಿ ಭಿನ್ನಮತ ಇಲ್ಲ: ಪ್ರಹ್ಲಾದ ಜೋಷಿ

ಚಿಂಚೋಳಿ : ಒಂದು ವಾರದಿಂದ ಪಟೇಲ್ ಕಾಲೊನಿಯ ಜನರ ನಿದ್ದೆಗೆಡಿಸಿದ್ದ ಕಾಡು ಬೆಕ್ಕು ಸೆರೆ

ಚಿಂಚೋಳಿ : ಒಂದು ವಾರದಿಂದ ಪಟೇಲ್ ಕಾಲೊನಿಯ ಜನರ ನಿದ್ದೆಗೆಡಿಸಿದ್ದ ಕಾಡು ಬೆಕ್ಕು ಸೆರೆ

ane

ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ : ರೈತರ ಬೆಳೆ ಹಾನಿ

ಶಾಪಿಂಗ್‌ ಮಾಲ್‌ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು

ಬೆಂಗಳೂರು : ಶಾಪಿಂಗ್‌ ಮಾಲ್‌ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು

MUST WATCH

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ವರ್ಲ್ಡ್ ಸ್ಕೂಲ್‌ ಗೇಮ್ಸ್‌ : ಕೊಡಗಿನ ಉನ್ನತಿಗೆ ಕಂಚು

ವರ್ಲ್ಡ್ ಸ್ಕೂಲ್‌ ಗೇಮ್ಸ್‌ : ಕೊಡಗಿನ ಉನ್ನತಿಗೆ ಕಂಚು

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ : ಪಿ.ವಿ. ಸಿಂಧು ಪತನ

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ : ಪಿ.ವಿ. ಸಿಂಧು ಪತನ

ಎಫ್ಐಎಚ್‌ ವನಿತಾ ಪ್ರೊ ಹಾಕಿ ಲೀಗ್‌: ಭಾರತೀಯ ತಂಡ ಪ್ರಕಟ

ಎಫ್ಐಎಚ್‌ ವನಿತಾ ಪ್ರೊ ಹಾಕಿ ಲೀಗ್‌: ಭಾರತೀಯ ತಂಡ ಪ್ರಕಟ

ಕಿವುಡರ ಒಲಿಂಪಿಕ್ಸ್‌ ತಂಡ ಸದಸ್ಯರ ಜತೆ ಮೋದಿ ಸಂವಾದ

ಕಿವುಡರ ಒಲಿಂಪಿಕ್ಸ್‌ ತಂಡ ಸದಸ್ಯರ ಜತೆ ಮೋದಿ ಸಂವಾದ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.