2000 ಮನೆ ನಿರ್ಮಾಣ ನನೆಗುದಿಗೆ

Team Udayavani, Jul 19, 2019, 8:05 AM IST

ಅಧಿಕಾರಿಗಳೇ ಮನೆ ಬಾಗಿಲಿಗೆ ಹೋಗಿ ದುಂಬಾಲು ಬಿದ್ದರೂ ಮನೆ ನಿರ್ಮಿಸಲು ಫ‌ಲಾನುಭವಿಗಳ ಹಿಂದೇಟು

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬಸವ, ಅಂಬೇಡ್ಕರ್‌ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ಮನೆ ಮಂಜೂರಾದರೂ, ಫಲಾನುಭವಿಗಳು ಮಾತ್ರ ಮನೆ ನಿರ್ಮಿಸಲು ಮುಂದಾಗುತ್ತಿಲ್ಲ.

ಹೀಗಾಗಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಸತಿ ನಿರ್ಮಾಣ ನನೆಗುದಿಗೆ ಬಿದ್ದಿದ್ದು, ಅಧಿಕಾರಿಗಳೇ ಫಲಾನುಭವಿಗಳ ಮನೆಗೆ ಹೋಗಿ ದುಂಬಾಲು ಬಿದ್ದರೂ, ವಸತಿ ನಿರ್ಮಾಣಕ್ಕೆ ಮನಸ್ಸು ಮಾಡುತ್ತಿಲ್ಲ. ಸಕಾಲದಲ್ಲಿ ಮನೆ ನಿರ್ಮಾಣ ಮಾಡದ ಕಾರಣ ಯೋಜನೆ ಫಲಾನುಭವಿಗಳ ಕೈತಪ್ಪುವ ಸಾಧ್ಯತೆಯಿದೆ.

ಈ ಮನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಆಲೋಚನೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಇದೆ. ಆದರೆ ನಿರೀಕ್ಷೆಯಷ್ಟು ಫ‌ಲಾನುಭವಿಗಳಿಂದ ಸಹಕಾರ ಸಿಗುತ್ತಿಲ್ಲ ಎಂದು ಅಧಿಕಾರಿಗಳು ನೆಪ ಹೇಳುತ್ತಾರೆ. ರಾಜೀವ್‌ ಗಾಂಧಿ ಗ್ರಾಮೀಣಾಭಿವೃದ್ಧಿ ಹೌಸಿಂಗ್‌ ಕಾರ್ಪೊರೇಷನ್‌ ಲಿಮಿಟೆಡ್‌ನ‌ ಪ್ರಗತಿ ಪರಿಶೀಲನೆ ಮಾಹಿತಿ ಪ್ರಕಾರ 2019ರ ಜೂನ್‌ 27ರವರೆಗೂ ಬೆಂಗಳೂರು ನಗರ ಜಿ.ಪಂ ಹೇಳಿಕೊಳ್ಳುವಂತ ಸಾಧನೆ ಮಾಡಿಲ್ಲ. 2019ರ ಅಂತ್ಯದ ವೇಳೆಗೆ 2538 ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಆದರೆ ಇಲ್ಲಿವರೆಗೂ ಕೇವಲ 167 ಮನೆಗಳನ್ನು ಮಾತ್ರ ನಿರ್ಮಾಣ ಮಾಡಲಾಗಿದೆ.

ಪ್ರಗತಿ ಕೇವಲ ಶೇ.6.58: ವಸತಿ ನಿರ್ಮಾಣ ಕಾರ್ಯದಲ್ಲಿ ಬೆಂಗಳೂರು ನಗರ ಜಿ.ಪಂ ಶೇ.100ರಷ್ಟು ಸಾಧನೆ ಮಾಡುವ ಉತ್ಸಾಹದಲ್ಲಿದೆ. ಆದರೆ ವಿವಿಧ ಕಾರಣಗಳಿಂದಾಗಿ ನಿರೀಕ್ಷಿತ ಪ್ರಮಾಣದ ಗುರಿ ಸಾಧನೆ ಸಾಧ್ಯವಾಗುತ್ತಿಲ್ಲ. ಪರಿಣಾಮ ಇಲ್ಲಿವರೆಗೂ ಶೇ.6.58ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಇನ್ನೂ 2371 ಮನೆಗಳು ನಿರ್ಮಾಣವಾಗಬೇಕಿದ್ದು, ಆಯಾ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಪ್ರಗತಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ನಗರ ಜಿಲ್ಲಾಡಳಿತ ಸೂಚಿಸಿದೆ. ಮನೆ ನಿರ್ಮಿಸಲು ಮುಂದಾಗ ದವರನ್ನು ಫ‌ಲಾನುಭವಿ ಪಟ್ಟಿಯಿಂದ ತೆಗೆದು ಬೇರೆಯ ಅರ್ಹರಿಗೆ ಅವಕಾಶ ನೀಡುವ ಚಿಂತನೆ ನಡೆದಿದೆ.

ತಾಲೂಕುವಾರು ಪ್ರಗತಿ: ಆನೇಕಲ್ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ 1005 ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಇದರಲ್ಲಿ ಕೇವಲ 70 ವಸತಿಗಳು ಮಾತ್ರ ಪೂರ್ಣಗೊಂಡಿದ್ದು, ಶೇ.6.97ರಷ್ಟು ಪ್ರಗತಿ ಸಾಧಿಸಲಾಗಿದೆ.

ಬೆಂಗಳೂರು ಪೂರ್ವ ತಾಲೂಕಿನಲ್ಲಿ 191 ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಇದರಲ್ಲಿ ಕೇವಲ 4 (ಶೇ.2.9) ಮನೆ ನಿರ್ಮಿಸಲಾಗಿದೆ. ಹಾಗೇ ಬೆಂಗಳೂರು ಉತ್ತರ ವ್ಯಾಪ್ತಿಯಲ್ಲಿ 767 ಮನೆಗಳ ಗುರಿ ಪೈಕಿ ಕೇವಲ 66 (ಶೇ.8.6) ಮನೆಗಳನ್ನು ನಿರ್ಮಿಸಲಾಗಿದೆ.

ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ 575 ಮನೆಗಳ ಗುರಿಯಲ್ಲಿ ಕೇವಲ 27 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಶೇ.4.7ರಷ್ಟು ಪ್ರಗತಿ ಸಾಧಿಸಲಾಗಿದೆ.

ವಸತಿ ನಿರ್ಮಾಣಕ್ಕೆ ನಿರಾಸಕ್ತಿ ಏಕೆ?: ಫ‌ಲಾನುಭವಿಗಳು ಸಕಾಲಕ್ಕೆ ಮನೆ ನಿರ್ಮಾಣ ಮಾಡದೇ ಇರುವುದಕ್ಕೆ ಏನು ಕಾರಣ ಎಂದು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮನೆಕಟ್ಟಲು ಬೇಕಾಗುವ ಮರಳು, ಕಲ್ಲು ಸೇರಿದಂತೆ ಅಗತ್ಯ ಪರಿಕರಗಳ ಬೆಲೆ ದುಪ್ಪಟ್ಟಾಗಿರುವ ಕಾರಣವನ್ನು ಫ‌ಲಾನುಭವಿಗಳು ನೀಡುತ್ತಿದ್ದಾರೆ. ಇದರೊಂದಿಗೆ ಸರ್ಕಾರ ನೀಡುತ್ತಿರುವ ಅನುದಾನ ನಗರ ಪ್ರದೇಶದ ವ್ಯಾಪ್ತಿಯ ಫ‌ಲಾನುಭವಿಗಳಿಗೆ ಸಾಕಾಗುತ್ತಿಲ್ಲ ಎಂದು ದೂರುತ್ತಾರೆ ಎಂದು ಮಾಹಿತಿ ನೀಡಿದರು.

ಯಾವ ಯೋಜನೆಗೆ ಎಷ್ಟು ಅನುದಾನ: ರಾಜ್ಯ ಸರ್ಕಾರ ಬಸವ ಯೋಜನೆಯಡಿ 1,34,800 ರೂ. ಅನುದಾನ ನೀಡುತ್ತದೆ. ಹಾಗೇ ಕೇಂದ್ರ ಸರ್ಕಾರ ಅಂಬೇಡ್ಕರ್‌ ನಿವಾಸ್‌ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ 1,64,800 ರೂ. ಅನುದಾನ ನೀಡುತ್ತದೆ.

‘ಫಲಾನುಭವಿ ಮನೆಯ ಅಡಿಪಾಯ ಹಾಕಿದ ವೇಳೆ 35 ಸಾವಿರ ರೂ. ಬಿಡುಗಡೆ ಮಾಡಲಾಗುತ್ತದೆ. ಉಳಿದ ಹಣ ಹಂತ ಹಂತವಾಗಿ ಬಿಡುಗಡೆಯಾಗುತ್ತದೆ. ಒಂದೊಮ್ಮೆ ಫಲಾನುಭವಿಯು ತನಗೆ ವಸತಿ ಮಂಜೂರಾದ 3 ತಿಂಗಳ ಒಳಗೆ ನಿರ್ಮಾಣ ಕಾರ್ಯ ಆರಂಭಿಸದಿದ್ದರೆ ಆತನಿಗೆ ಮಂಜೂರಾದ ಹಣ ಸರ್ಕಾರಕ್ಕೆ ವಾಪಸ್‌ ಹೋಗುತ್ತದೆ,’ ಎಂದು ಬೆಂಗಳೂರು ನಗರ ಜಿ.ಪಂ ಹಿರಿಯ ಅಧಿಕಾರಿ ‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

 

•ಬೆಂಗಳೂರು ನಗರ ಜಿ.ಪಂ.ಗೆ ಗುರಿ ಸಾಧನೆ ಚಿಂತೆ

•ಈವರೆಗೆ ಸಾಧಿಸಿರುವ ಪ್ರಗತಿ ಶೇ.6.58ರಷ್ಟು ಮಾತ್ರ

•ಮನೆ ನಿರ್ಮಿಸದವರನ್ನು ಪಟ್ಟಿಯಿಂದ ಕೈಬಿಡಲು ಚಿಂತನೆ

•ಹೊಸ ಫ‌ಲಾನುಭವಿಗಳಗೆ ಅವಕಾಶ ನೀಡುವ ಸಾಧ್ಯತೆ

•ಪರಿಕರಗಳ ಬೆಲೆ ದುಪ್ಪಟ್ಟಾಗಿರುವ ಕಾರಣ ಹಿಂದೇಟು

 

● ದೇವೇಶ ಸೂರಗುಪ್ಪ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪದಗ್ರಹಣ ಸಮಾರಂಭ ಇದೇ 27 ರ ಮಂಗಳವಾರದಂದು  ನಡೆಯಲಿದೆ. ರಾಜ್ಯ ಬಿಜೆಪಿ  ಕಛೇರಿ ಜಗನ್ನಾಥ...

  • ಬೆಂಗಳೂರು: ಕೇವಲ ಎಂಟು ವರ್ಷಗಳ ಹಿಂದಿನ ಮಾತು. ನಗರದಲ್ಲಿ ಪ್ರತಿಷ್ಠಾಪನೆ ಆಗುತ್ತಿದ್ದ ಗಣೇಶ ಮೂರ್ತಿಗಳ ಸಂಖ್ಯೆ 12-14 ಲಕ್ಷ. ಇದರಲ್ಲಿ "ಪರಿಸರ ಸ್ನೇಹಿ'ಗಳ ಸಂಖ್ಯೆ...

  • ಬೆಂಗಳೂರು: "ನಗರದ ಹೃದಯ ಭಾಗದಲ್ಲಿರುವ ಶಾಲೆ, ಕಾಲೇಜುಗಳ ವಾಹನಗಳನ್ನು ರಸ್ತೆ ಬದಿ ನಿಲ್ಲಿಸುತ್ತಾರೆ. ಕೇಳಿದರೆ "ಪೊಲೀಸ್ರೇ ಕೇಳಲ್ಲ ನೀವು ಯಾರು ಕೇಳ್ಳೋಕೆ?' ಎಂದು...

  • ಬೆಂಗಳೂರು: ನಗರದಲ್ಲಿ ವಾಣಿಜ್ಯ ಜಾಹೀರಾತು ಪ್ರದರ್ಶನ ನಿಷೇಧಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ರೂಪಿಸಿದ್ದ "ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿ...

  • ಬೆಂಗಳೂರು: ಬಾಯಲ್ಲಿ ನೀರೂರಿಸುವ ಹಲಸಿನ ಹಪ್ಪಳ, ಚಿಪ್ಸ್‌ ರುಚಿ ನೋಡಿರುತ್ತೀರ. ಆದರೆ, ಹಲಸಿನ ಚಾಕೋಲೇಟ್‌ ತಿಂದಿರುವಿರಾ? ಅಂದುಕೊಂಡಂತೆ ಎಲ್ಲವೂ ನಡೆದರೆ, ಶೀಘ್ರದಲ್ಲೇ...

ಹೊಸ ಸೇರ್ಪಡೆ