20ನೇ ಜಾನುವಾರು ಗಣತಿ ನಾಳೆಯಿಂದ ಪ್ರಾರಂಭ
Team Udayavani, Sep 30, 2018, 6:05 AM IST
ಬೆಂಗಳೂರು: ರಾಷ್ಟ್ರೀಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ 20ನೇ ಜಾನುವಾರು ಗಣತಿ ರಾಜ್ಯಾದ್ಯಂತ ಅಕ್ಟೋಬರ್ 1ರಿಂದ ಪ್ರಾರಂಭಗೊಳ್ಳಲಿದೆ.
ಜಾನುವಾರು ಗಣತಿಯಲ್ಲಿ ಪ್ರಮುಖವಾಗಿ ವಿವಿಧ ತಳಿಯ ಸಾಕು ಪ್ರಾಣಿಗಳಾದ ದನ, ಎಮ್ಮೆ, ಕುರಿ, ಮೇಕೆ, ಹಂದಿ, ಕುದುರೆ,ಕತ್ತೆ, ಒಂಟೆ, ನಾಯಿ, ಮೊಲ, ಆನೆ, ಕುಕ್ಕುಟಗಳಾದ ಕೋಳಿ,ಬಾತುಕೋಳಿ, ಎಮು, ಟರ್ಕಿ, ಕೋಳಿ, ಕೃಷಿಗಾಗಿ ಉಪಯೋಗಿಸಲ್ಪಡುವ ಉಪಕರಣಗಳ ಬಗ್ಗೆ ಹಾಗೂ ಮೀನುಗಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಅ.1ರಿಂದ ಪ್ರಾರಂಭವಾಗುವ ಜಾನುವಾರು ಗಣತಿ ಕಾರ್ಯಕ್ಕೆ ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಇತರ ಇಲಾಖೆಗಳಿಂದ ಅಧಿಕಾರಿ,
ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.