ಸಾರಿಗೆ ಸಂಸ್ಥೆಗಳ ನಷ್ಟ ಶೇ.25: ಪರಿಹಾರ ಶೇ.50

ಬೆಂಗಳೂರು ಮಹಾನಗರ ಸಾರಿಗೆ ನಷ್ಟದ ಅಂತರ ಶೇ. 55 „ ಮುಂದಿನ ದಿನಗಳಲ್ಲಿ ನಿಗಮಗಳಿಗೇ ಹೊರೆ?

Team Udayavani, Dec 4, 2020, 9:30 AM IST

ಸಾರಿಗೆ ಸಂಸ್ಥೆಗಳ ನಷ್ಟ ಶೇ.25: ಪರಿಹಾರ ಶೇ.50

ಬೆಂಗಳೂರು: ಸತತ ಎಂಟನೇ ತಿಂಗಳು ಸಾರಿಗೆ ನೌಕರರ ವೇತನ ಬಿಡುಗಡೆಗೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಹೀಗೆ ಬಿಡುಗಡೆಯಾದ ವೇತನ ಆಯಾ ನಿಗಮಗಳು ಎದುರಿಸುತ್ತಿರುವ “ಆದಾಯ ಕೊರತೆ’ ಆಧಾರದ ಮೇಲಿಲ್ಲ. ಬದಲಿಗೆ ಏಕರೂಪ ದಲ್ಲಿದ್ದು, ಈ ಬಗ್ಗೆ ನಿಗಮಗಳ ವಲಯದಲ್ಲೇ ಅಪಸ್ವರ ಕೇಳಿಬರುತ್ತಿದೆ.

ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ಸೇರಿದಂತೆ ಮೂರೂ ನಿಗಮಗಳು ಬಹುತೇಕ ಸಹಜ ಸ್ಥಿತಿಗೆ ಮರಳುತ್ತಿವೆ. ಕೋವಿಡ್‌-19 ಪೂರ್ವ ಸ್ಥಿತಿಗೆ ಹೋಲಿಸಿದರೆ ಗರಿಷ್ಠ ಶೇ. 30ರಿಂದಕನಿಷ್ಠ15 ಆದಾಯದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮಾತ್ರ ಶೇ.55ರಷ್ಟು ಆದಾಯ ಕೊರತೆ ಎದುರಿಸುತ್ತಿವೆ. ಆದರೆ, ಸರ್ಕಾರವು ನಾಲ್ಕೂ ಸಾರಿಗೆ ನಿಗಮಗಳಿಗೆ ಏಕರೂಪದಲ್ಲಿ ಅಕ್ಟೋಬರ್‌ ಮತ್ತು ನವೆಂಬರ್‌ಗೆ ತಲಾ ಶೇ. 50 ವೇತನ ಬಿಡುಗಡೆ ಮಾಡಿದೆ.

ನ. 1ರಿಂದ 20ರವರೆಗಿನ ಅಂಕಿ-ಅಂಶಗಳ ಪ್ರಕಾರ ಕೆಎಸ್‌ಆರ್‌ಟಿಸಿ ಶೇ. 25-30 ಆದಾಯ ಕೊರತೆ ಎದುರಿಸುತ್ತಿವೆ. ಅದೇ ರೀತಿ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ತಲಾ ಸರಾಸರಿ ಶೇ. 15 ರಿಂದ 20 ಕೊರತೆ ಕಂಡುಬರುತ್ತಿದೆ. ಆದರೆ, ಬಿಎಂಟಿಸಿಯಲ್ಲಿ ಈ ಪ್ರಮಾಣ ಶೇ. 55ರಷ್ಟಿದೆ. ವಸ್ತುಸ್ಥಿತಿ ಹೀಗಿರುವಾಗ, ಸರ್ಕಾರ ಎಲ್ಲ ನಿಗಮಗಳಿಗೂ ಏಕರೂಪದ ಅಂದರೆ ಶೇ.50 ವೇತನ ಬಿಡುಗಡೆ ಮಾಡಿದೆ. ಇದು ಎಷ್ಟು ಸರಿ? ಬಿಡುಗಡೆ ಪ್ರಮಾಣ ಅವೈಜ್ಞಾನಿಕವಾಗಿದೆ ಎಂಬ ಆಕ್ಷೇಪ ಕೇಳಿ ಬರುತ್ತಿದೆ. ಸಹಾಯಧನದ ಮರು ಹೊಂದಾಣಿಕೆ ಅನುದಾನವನ್ನೂ ಇದು ಒಳಗೊಂಡಿರುವುದರಿಂದ, ಪರೋಕ್ಷವಾಗಿ ಮುಂಬರುವ ದಿನಗಳಲ್ಲಿ ಇದು ಆಯಾ ನಿಗಮಗಳಿಗೇ ಹೊರೆ ಆಗಲಿದೆ.

ಇದನ್ನೂ ಓದಿ : ಭಾರತ-ಆಸ್ಟ್ರೇಲಿಯ ಮೊದಲ ಟಿ20: ತಿರುಗೇಟು ನೀಡಲು ಕೊಹ್ಲಿ ಪಡೆಗೊಂದು ಅವಕಾಶ

ಸರ್ಕಾರವು ಆದೇಶದಲ್ಲಿ ವಿಧಿಸಿರುವ ಷರತ್ತುಗಳಿಂದಲೇ ಇದು ಸ್ಪಷ್ಟವಾಗುತ್ತದೆ. ನವೆಂಬರ್‌ನಲ್ಲಿ ದೀಪಾವಳಿ ಹಬ್ಬ ಇದ್ದುದರಿಂದ ಸಾರಿಗೆ ನಿಗಮಗಳಿಗೆ ಹೆಚ್ಚು ಆದಾಯ ಬಂದಿದ್ದು, ನಷ್ಟದ ಪ್ರಮಾಣ ಕಡಿಮೆ ಎಂದು ಹೇಳಬಹುದು.ಆದರೆ,ಬಸ್‌ ಗಳ ಕಾರ್ಯಾಚರಣೆ ಲೆಕ್ಕಹಾಕಿದ್ದ‌ರೂ ಮೂರು ನಿಗಮಗಳು ರಸ್ತೆಗಿಳಿಸಿದ ಅನುಸೂಚಿಗಳ ಸಂಖ್ಯೆ ಕಡಿಮೆ ಇದ್ದು, ಅದು ಡೀಸೆಲ್‌, ಬಸ್‌ಗಳ ನಿರ್ವಹಣೆ ಸೇರಿದಂತೆ ಮತ್ತಿತರ ರೂಪದಲ್ಲಿ ಉಳಿತಾಯ ರೂಪದಲ್ಲಿ ಪರಿಣಮಿಸುತ್ತದೆ. ಉದಾಹರಣೆಗೆ ಕೆಎಸ್‌ ಆರ್‌ಟಿಸಿಯು8,250 ಬಸ್‌ಗಳ ಪೈಕಿ 5,800 ಬಸ್‌ಗಳನ್ನು ರಸ್ತೆಗಿಳಿಸಿದೆ. ಇದರಿಂದ 8.5 ಕೋಟಿ ರೂ. ಬದಲಿಗೆ ಏಳು ಕೋಟಿ ಆದಾಯ ಗಳಿಸುತ್ತಿದೆ. ಆದರೆ, ಬಿಎಂಟಿಸಿ 6,100 ಅನುಸೂಚಿಗಳಲ್ಲಿ 5,000 ಬಸ್‌ಗಳು ಸೇವೆ ನೀಡುತ್ತಿದ್ದು, ಒಂದೂವರೆಕೋಟಿ ರೂ. ಆದಾಯ ತರುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸುತ್ತಾರೆ.

ಇನ್ನು ಕಳೆದ ತಿಂಗಳು ದಸರಾ ಇತ್ತು. ಆಗ, ಅ. 1ರಿಂದ 31ರವರೆಗಿನ ಆದಾಯ ಕೊರತೆ ಅಂತರ ಲೆಕ್ಕಹಾಕಿದರೂ ಬಿಎಂಟಿಸಿ ಶೇ.60-65 ನಷ್ಟ ಅನುಭವಿಸಿದ್ದನ್ನು ಕಾಣಬಹುದು. ಉಳಿದಂತೆ ಕೆಎಸ್‌ಆರ್‌ಟಿಸಿ, ಎನ್‌ಇಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಕ್ರಮವಾಗಿ ಶೇ. 40ರಿಂದ 45 ನಷ್ಟ ಎದುರಿಸಿವೆ.ಈಮಧ್ಯೆ ಮೂರೂ ಸಾರಿಗೆ ನಿಗಮಗಳು ಕೆಲವೆಡೆ ಅಂತರ ರಾಜ್ಯ ಸೇವೆ ಆರಂಭಿಸಿರುವುದರಿಂದ ಸಹಜವಾಗಿ ಈ ಆದಾಯದ ಪ್ರಮಾಣ ಏರಿಕೆ ಕ್ರಮದಲ್ಲೇ ಸಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಉಳಿದ ನಿಗಮಗಳಿಗೆ ಹೋಲಿಸಿದರೆ, ಬಿಎಂಟಿಸಿ ಆದಾಯ ನಷ್ಟದ ಅಂತರ ಹೆಚ್ಚಿದೆ. ಹೀಗಾಗಿ, ಎಲ್ಲ ನಿಗಮಗಳು ಸೇರಿ ಶೇ. 75ರಷ್ಟು ವೇತನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಸರ್ಕಾರ ಶೇ. 50ರಷ್ಟು ಬಿಡುಗಡೆ ಮಾಡಿದೆ. ಇದು ತೃಪ್ತಿ ತಂದಿದೆ. – ಸಿ. ಶಿಖಾ, ವ್ಯವಸ್ಥಾಪಕ ನಿರ್ದೇಶರು, ಬಿಎಂಟಿಸಿ

-ವಿಶೇಷ ವರದಿ

ಟಾಪ್ ನ್ಯೂಸ್

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.