ಕಾಫಿ ಪೌಡರ್ ಖರೀದಿ ಸೋಗಿನಲ್ಲಿ 4.50 ಲಕ್ಷ ರೂ. ವಂಚನೆ
Team Udayavani, Jun 24, 2022, 11:42 AM IST
ಬೆಂಗಳೂರು: ಕಾಫಿ ಪೌಡರ್ ಖರೀದಿ ನೆಪದಲ್ಲಿ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು ನಾಲ್ಕೂವರೆ ಲಕ್ಷ ರೂ. ವಂಚಿಸಿದ್ದಾರೆ.
ಈ ಸಂಬಂಧ ಮಹಾಲಕ್ಷ್ಮೀಲೇಔಟ್ ನಿವಾಸಿ ಶೋಭಾ ಶ್ರೀಕಾಂತ್ ಉತ್ತರ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶೋಭಾ ಅವರು ಮೈಸೂರು ಕನ್ಸರ್ನ್ ಕಾಫಿ ಪೌಡರ್ ಶಾಪ್ ಇಟ್ಟುಕೊಂಡಿದ್ದು, ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಭಾರತೀಯ ಸೇನೆಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಕಾಫಿ ಪೌಡರ್ ಖರೀದಿಸುತ್ತೇನೆ ಎಂದು ನಂಬಿಸಿ ದೂರುದಾರ ಮಹಿಳೆಯಿಂದ ಬ್ಯಾಂಕ್ ಖಾತೆ ವಿವರ ಪಡೆದುಕೊಂಡು, ಅವರ ಖಾತೆಯಿಂದಲೇ 4.50 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. ಹೀಗಾಗಿ ವಂಚಿಸಿದ ಆರೋಪಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಶೋಭಾ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಇದನ್ನೂ ಓದಿ:ಎಫ್‌ಬಿ ಪರಿಚಿತ ವಿದೇಶಿ ಮಹಿಳೆಯಿಂದ ದೋಖಾ