ಕೋವಿಡ್ : ರಾಜ್ಯದಲ್ಲಿಂದು 442 ಹೊಸ ಪ್ರಕರಣ ಪತ್ತೆ | 635 ಸೋಂಕಿತರು ಗುಣಮುಖ
Team Udayavani, Oct 7, 2021, 7:26 PM IST
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 442 ಕೋವಿಡ್ ನೂತನ ಪಕ್ರಣಗಳು ಪತ್ತೆಯಾಗಿದ್ದು, 7 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಅ.7) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ 635 ಜನ ಸೋಂಕಿತರು ಗುಣಮುಖರಾಗಿ ರಾಜ್ಯದ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು 11619 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ 0.36% ಹಾಗೂ ಡೆತ್ ರೇಟ್ 1.58 % ಇದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-0, ಬಳ್ಳಾರಿ-5, ಬೆಳಗಾವಿ-2, ಬೆಂಗಳೂರು ಗ್ರಾಮಾಂತರ-7, ಬೆಂಗಳೂರು ನಗರ-166, ಬೀದರ್-0, ಚಾಮರಾಜನಗರ-1, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-14, ಚಿತ್ರದುರ್ಗ-2, ದಕ್ಷಿಣ ಕನ್ನಡ-43, ದಾವಣಗೆರೆ-2, ಧಾರವಾಡ-2, ಗದಗ-0, ಹಾಸನ-35, ಹಾವೇರಿ-2, ಕಲಬುರಗಿ-2, ಕೊಡಗು-12, ಕೋಲಾರ-13, ಕೊಪ್ಪಳ-0, ಮಂಡ್ಯ-15, ಮೈಸೂರು-31, ರಾಯಚೂರು-1, ರಾಮನಗರ-2, ಶಿವಮೊಗ್ಗ-8, ತುಮಕೂರು-36, ಉಡುಪಿ-17, ಉತ್ತರ ಕನ್ನಡ-23, ವಿಜಯಪುರ-0, ಯಾದಗಿರಿ-0.