ರಾಜ್ಯದಲ್ಲಿ ಎಚ್1ಎನ್1ಗೆ 5 ಬಲಿ
Team Udayavani, Oct 13, 2018, 2:45 PM IST
ಬೆಂಗಳೂರು: ರಾಜ್ಯದಲ್ಲಿ ತಿಂಗಳಿನಿಂದೀಚೆಗೆ ಎಚ್1ನ್1 ಸೋಂಕಿಗೆ ನಾಲ್ಕು ಮಂದಿ ಮೃತಪಟ್ಟಿದ್ದು, ಪ್ರಸಕ್ತ ವರ್ಷದಲ್ಲಿ ಗರ್ಭಿಣಿ ಸೇರಿದಂತೆ ಈವರೆಗೆ ಒಟ್ಟು ಐದು ಮಂದಿ ಸಾವಿಗೀಡಾಗಿರುವುದು ತಡವಾಗಿ ದೃಢಪಟ್ಟಿದೆ.
ತೀವ್ರ ಜ್ವರದಿಂದ ಮೃತಪಟ್ಟವರ ಪೈಕಿ ಐದು ಮಂದಿ ಎಚ್1ಎನ್1 ಸೋಂಕಿಗೆ ಬಲಿಯಾಗಿರುವುದನ್ನು ತಜ್ಞರ ಸಮಿತಿ ದೃಢಪಡಿಸಿದೆ. ಅದರಂತೆ ಕಳೆದ ಮಾರ್ಚ್‌ನಲ್ಲಿ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಗರ್ಭಿಣಿ ಕಾವ್ಯಾ (24) ಅವರಿಗೂ ಎಚ್1ಎನ್1 ಸೋಂಕು ತಗುಲಿರುವುದು ದೃಢಪಟ್ಟಿದೆ.
ಹಾಗೆಯೆ, ನಗರದ ರಾಜೀವ್‌ಗಾಂಧಿ ಎದೆ ರೋಗಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರದ ಅಮೀನಾಬಿ (45), ಗೋವಿಂದನ್ (58), ದೊಡ್ಡಬಳ್ಳಾಪುರ ನಿವಾಸಿ ಗಂಗರತ್ನಮ್ಮ (57), ರಾಮನಗರದ ಪುಟ್ಟಮ್ಮ (60) ಅವರು
ಇದೇ ಸೋಂಕಿನಿಂದಲೇ ಮೃತಪಟ್ಟಿರುವುದು ಸ್ಪಷ್ಟವಾಗಿದೆ. ತೀವ್ರ ಜ್ವರದಿಂದ ಮೃತಪಟ್ಟವರು ಸೇರಿದಂತೆ ಎಚ್1ಎನ್1 ಸೋಂಕು ತಗುಲಿದ ಶಂಕಿತ ಪ್ರಕರಣಗಳಲ್ಲಿ ಮೃತರ ರಕ್ತದ ಮಾದರಿಯನ್ನು ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ತಜ್ಞರ ಸಮಿತಿಯು ಪರಿಶೀಲನೆ ನಡೆಸಿ ಸೋಂಕಿನಿಂದ ಸಾವಿಗೀಡಾಗಿರುವುದನ್ನು ದೃಢಪಡಿಸಿದ್ದು, ಶುಕ್ರವಾರ ಇಲಾಖೆಗೆ ವರದಿ ಸಲ್ಲಿಸಿತ್ತು ಎಂದು ಮೂಲಗಳು ತಿಳಿಸಿವೆ.
ರಕ್ತದೊತ್ತಡ, ಮಧುಮೇಹ, ಹೃದ್ರೋಗಿಗಳು, ಗರ್ಭಿಣಿಯರಿಗೆ ಎಚ್1ಎನ್1 ಸೋಂಕು ತಗುಲಿದರೆ ತೀವ್ರತೆ ಹೆಚ್ಚಿರುತ್ತದೆ. ಸಂಪೂರ್ಣ ಗುಣಮುಖರಾಗಲು ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ಇದೇ ಸೋಂಕಿನಿಂದ ಮೃತಪಟ್ಟ ಐದು ಮಂದಿ ಪೈಕಿ ನಾಲ್ಕು ಮಂದಿಗೆ ರಕ್ತದೊತ್ತಡ ಹಾಗೂ ಮಧುಮೇಹವಿರುವುದು ಗೊತ್ತಾಗಿದೆ. ತುಮಕೂರಿನ ಗರ್ಭಿಣಿ ಕಾವ್ಯಾ ಅವರು, ಎಚ್ 1ಎನ್1 ಸೋಂಕಿನಿಂದಾಗಿ ಮೃತಪಟ್ಟಿರುವುದು ಪ್ರಯೋಗಾಲಯದ ವರದಿಯಿಂದ ಗೊತ್ತಾಗಿದೆ ಎಂದು ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗ ವಿಭಾಗದ ಜಂಟಿ ನಿರ್ದೇಶಕ ಡಾ.ಶಿವರಾಜ್ ಸಜ್ಜನ್ ಶೆಟ್ಟಿ ತಿಳಿಸಿದ್ದಾರೆ.
ಎಚ್1ಎನ್1 ಸೋಂಕು ಸೆಪ್ಟೆಂಬರ್‌ನಿಂದ ಉಲ್ಬಣವಾಗಿದ್ದು, ರಾಜ್ಯದಲ್ಲಿ ಈವರೆಗೂ ಒಟ್ಟು 456 ಮಂದಿಗೆ ಕಾಣಿಸಿಕೊಂಡಿದೆ. ಹೀಗಾಗಿ, ರೋಗದ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮನವಿ
ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಂಗಳೂರು : ಶಾಪಿಂಗ್ ಮಾಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು
ಯಾರು ಭ್ರಷ್ಟರು, ಯಾರು ಭ್ರಷ್ಟರಲ್ಲ ಎಂದು ಜನರಿಗೆ ಗೊತ್ತಿದೆ : ಸಿಎಂ ಬೊಮ್ಮಾಯಿ
ಯಾವುದೇ ಸೌಲಭ್ಯ ನೀಡದೆ 11 ಸಾವಿರ ಬಿಸಿಯೂಟ ನೌಕರರ ವಜಾ : ಸರಕಾರದ ನಿರ್ಧಾರಕ್ಕೆ ಡಿಕೆಶಿ ಗರಂ
ಸಾಯಿ ಲೇಔಟ್ ನಿವಾಸಿಗಳಿಗೆ ಭವಿಷ್ಯದ ಚಿಂತೆ
ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಕರೆ ಮಾಡಿ.. ಜೈಲಿಗೆ ಹೋದ ಭಾಮೈದುನ