Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Team Udayavani, Sep 7, 2024, 12:30 PM IST

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

ಬೆಂಗಳೂರು: ಮನೆ ನವೀಕರಣ ಗುತ್ತಿಗೆದಾರನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು 5 ಲಕ್ಷ ರೂ. ಲಪಟಾಯಿಸಿದ್ದ 8 ಮಂದಿ ಆರೋಪಿಗಳು ಶ್ರೀರಾಮಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಶ್ರೀರಾಮಪುರದ ಅರುಣ್‌, ಪ್ರತಾಪ್‌, ಅಕ್ರಂ, ಅಖೀಲೇಶ್‌, ಅನ್ಸರ್‌, ನವೀನ್‌, ರೆಹಮಾನ್‌, ಸೈಯದ್‌ ಬಕಾಸ್‌ ಬಂಧಿತರು. ಶ್ರೀರಾಂಪುರದ ಮೊಹಮ್ಮದ್‌ ಮೂಸಾ ಅಪಹರಣಕ್ಕೊಳಗಾದವರು.

ಆ.17ರಂದು ಶ್ರೀರಾಂಪುರದ ಮೊಹಮ್ಮದ್‌ ಮೂಸಾ ಎಂಬಾತನ ಮನೆ ಬಳಿ ಆಗಮಿಸಿದ್ದ ನವೀನ್‌, “ನಾನು ನಿಮ್ಮ ಪಕ್ಕದ ಮನೆಯವನಾದ ಸುರೇಶ್‌ನ ಪರಿಚಿತ. ನಮ್ಮ ಮನೆಯ ನವೀಕರಣದ ಆಗಬೇಕು’ ಎಂದು ಹೇಳಿದ್ದ. ಬಳಿಕ ತನ್ನ ಸ್ವಿಫ್ಟ್ ಕಾರಿನಲ್ಲಿ ಮೂಸಾನನ್ನು ಕರೆದೊಯ್ದಿದ್ದ. ಕಾರಿನಲ್ಲಿ ಅದಾಗಲೇ ಮೂರು ಜನ ಇದ್ದು, ಹೋಗುವ ದಾರಿ ಮಧ್ಯೆ ಸುಂಕದಕಟ್ಟೆಯ ಹತ್ತಿರ ಮತ್ತಿಬ್ಬರು ಹತ್ತಿಕೊಂಡಿದ್ದಾರೆ. ಸ್ವಲ್ಪ ದೂರು ಹೋಗುತ್ತಿದ್ದಂತೆ ಮೂಸನ ಮೊಬೈಲ್‌ ಕಸಿದುಕೊಂಡ ಆರೋಪಿಗಳು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

ನಂತರ ಚಿಕ್ಕ ಬಾಣಾವರ ಕಡೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಬಳಿಕ ಅಲ್ಲಿಂದ ಬಿಡದಿಗೆ ಕರೆದುಕೊಂಡು ಹೋದಾಗ ದ್ವಿಚಕ್ರ ವಾಹನದಲ್ಲಿ ಇನ್ನಿಬ್ಬರು ಗ್ಯಾಂಗ್‌ ಸದಸ್ಯರು ಇವರೊಂದಿಗೆ ಸೇರಿಕೊಂಡಿ ದ್ದರು. ಬಳಿಕ ಮೂಸಾನ ಜೇಬಿನಲ್ಲಿದ್ದ 1,500 ರೂ. ತೆಗೆದುಕೊಂಡು ಅದೇ ಹಣದಲ್ಲೇ ಮದ್ಯ ತರಿಸಿಕೊಂಡು ಕುಡಿದು ಮತ್ತೆ ಹಲ್ಲೆ ನಡೆಸಿದ್ದಾರೆ.

ನಂತರ ಆತನ ಮೊಬೈಲ್‌ ನಿಂದ 5 ಸಾವಿರ ರೂ. ತಮ್ಮ ಮೊಬೈಲ್‌ಗೆ ಆನ್‌ಲೈನ್‌ ಮೂಲಕ ಹಾಕಿಸಿಕೊಂಡು ಅದರಲ್ಲಿ ಮತ್ತೆ 2,800 ರೂ. ಮದ್ಯ ತರಿಸಿಕೊಂಡು ಕುಡಿದಿದ್ದರು. ಮೂಸಾಗೆ 50 ಲಕ್ಷ ರೂ.ಗೆ ಬೇಡಿಕೆಯಿಟ್ಟು ಕೊಲೆ ಮಾಡುವುದಾಗಿ ಬೆದರಿಸಿದ್ದರು.

ಆಗ ಮೂಸ ನನ್ನ ಬಳಿ ಅಷ್ಟೊಂದು ಹಣ ಇಲ್ಲ ಎಂದಾಗ 2 ಲಕ್ಷ ರೂ. ಕೊಡುವಂತೆ ಸೂಚಿಸಿದ್ದ. ಕುಟುಂಬಸ್ಥರು ಹಣ ತಲುಪಿಸಿದ ಬಳಿಕ ಅಂಚೆಪಾಳ್ಯ ಬಳಿ ಮೂಸನನ್ನ ಬಿಟ್ಟು ಪರಾರಿ ಆಗಿದ್ದಾರೆ. ಶ್ರೀರಾಮಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸಾಲ ವಾಪಸ್‌ ಕೇಳಿದ್ದಕ್ಕೆ ಅಪಹರಣ :

ಮೊಹಮ್ಮದ್‌ ಮೂಸ ಹಾಗೂ ಆರೋಪಿ ರೆಹಮಾನ್‌ 10 ವರ್ಷದಿಂದ ಪರಿಚಿತರಾಗಿದ್ದರು. ಮೂಸಾ ಹಿಂದೆ ರೆಹಮಾನ್‌ ಮನೆ ನವೀಕರಣ ಮಾಡಿದ್ದ. ರಿನೋವೇಶನ್‌ಗೆ ಸುಮಾರು 27 ಲಕ್ಷ ರೂ. ಖರ್ಚಾಗಿತ್ತು. ರಿನೋವೇಷನ್‌ ಮಾಡಿದ ಹಣ ಕೊಡದ ಹಿನ್ನೆಲೆಯಲ್ಲಿ ಅದೇ ಮನೆಯನ್ನು 95 ಲಕ್ಷಕ್ಕೆ ಮೂಸ ತೆಗೆದುಕೊಂಡಿದ್ದ. ಹಣಕಾಸಿನ ಸಮಸ್ಯೆಯಿಂದ ಮತ್ತೆ ಮೂಸಾನ ಬಳಿ ರೆಹಮಾನ್‌ ಒಂದೂವರೆ ಲಕ್ಷ ರೂ. ಸಾಲ ಮಾಡಿದ್ದ. ಆ ಹಣ ಕೊಡುವಂತೆ ಮೂಸಾ ಒತ್ತಾಯಿಸುತ್ತಿದ್ದ. ಇದರಿಂದ ರೆಹೆಮಾನ್‌ ಆಕ್ರೋಶಗೊಂಡು ಇತರ ಆರೋಪಿಗಳಿಂದ ಮೂಸಾನನ್ನು ಅಪಹರಿಸಿದ್ದ.

ಟಾಪ್ ನ್ಯೂಸ್

Ratan Tata: ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ

Ratan Tata: ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ

ಸತೀಶ್ ಜಾರಕಿಹೊಳಿಯಂತಹ ಸರಳ ಸಜ್ಜನ ಮತ್ತೊಬ್ಬರಿಲ್ಲ: ಶಾಸಕ ಹೆಚ್.ಡಿ.ತಮ್ಮಯ್ಯ

ಸತೀಶ್ ಜಾರಕಿಹೊಳಿಯಂತಹ ಸರಳ ಸಜ್ಜನ ಮತ್ತೊಬ್ಬರಿಲ್ಲ: ಶಾಸಕ ಹೆಚ್.ಡಿ.ತಮ್ಮಯ್ಯ

BBK11: ಬಿಗ್‌ ಬಾಸ್‌ ಮನೆಯಲ್ಲಿ ದೆವ್ವಗಳ ಕಾಟ..  ಸ್ಪರ್ಧಿಗಳಿಗೆ ಶುರುವಾಯಿತು ಭೀತಿ

BBK11: ಬಿಗ್‌ ಬಾಸ್‌ ಮನೆಯಲ್ಲಿ ದೆವ್ವಗಳ ಕಾಟ.. ಸ್ಪರ್ಧಿಗಳಿಗೆ ಶುರುವಾಯಿತು ಭೀತಿ

Charmady: ಭಾರಿ ಮಳೆಗೆ ಚಾರ್ಮಾಡಿ ಘಾಟಿ 3ನೇ ತಿರುವಿನಲ್ಲಿ ಲಘು ಭೂ ಕುಸಿತ.. ಟ್ರಾಫಿಕ್ ಜಾಮ್

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿ 3ನೇ ತಿರುವಿನಲ್ಲಿ ಲಘು ಭೂ ಕುಸಿತ.. ಟ್ರಾಫಿಕ್ ಜಾಮ್

Bhool Bhulaiyaa 3 trailer: ʼಮಂಜುಲಿಕಾʼಗಳ ರಹಸ್ಯ ಬಯಲಿಗೆ ʼರೂಹ್‌ ಬಾಬಾʼನಾದ ಕಾರ್ತಿಕ್‌

Bhool Bhulaiyaa 3 trailer: ʼಮಂಜುಲಿಕಾʼಗಳ ರಹಸ್ಯ ಬಯಲಿಗೆ ʼರೂಹ್‌ ಬಾಬಾʼನಾದ ಕಾರ್ತಿಕ್‌

MUDA CASE: ಮರೆಮಾಚಲು ಜಾತಿಗಣತಿ ಉದ್ಭವ: ಶಾಸಕ ಕಂದಕೂರ

MUDA CASE: ಮರೆಮಾಚಲು ಜಾತಿಗಣತಿ ಉದ್ಭವ: ಶಾಸಕ ಕಂದಕೂರ

ಕಾಂಗ್ರೆಸ್ ನಲ್ಲೇ ಸಿದ್ದರಾಮಯ್ಯ ವಿರುದ್ಧ ತೆರೆಮರೆಯ ಚಟುವಟಿಕೆ ನಡೆಯುತ್ತಿದೆ: ಸಿ.ಟಿ. ರವಿ

ಕಾಂಗ್ರೆಸ್ ನಲ್ಲೇ ಸಿದ್ದರಾಮಯ್ಯ ವಿರುದ್ಧ ತೆರೆಮರೆಯ ಚಟುವಟಿಕೆ ನಡೆಯುತ್ತಿದೆ: ಸಿ.ಟಿ. ರವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High Court: ವಕೀಲರ ವಾಕ್‌ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಾರ್‌ ಕೌನ್ಸಿಲ್‌ಗೆ ಇಲ್ಲ

High Court: ವಕೀಲರ ವಾಕ್‌ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಾರ್‌ ಕೌನ್ಸಿಲ್‌ಗೆ ಇಲ್ಲ

Arrested: ತ.ನಾಡಿನಿಂದ ಬಂದು ಲ್ಯಾಪ್‌ಟಾಪ್‌ ಕಳ್ಳತನ

Arrested: ತ.ನಾಡಿನಿಂದ ಬಂದು ಲ್ಯಾಪ್‌ಟಾಪ್‌ ಕಳ್ಳತನ

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

Theft: ಪಿಜಿಗಳ ಗುರಿಯಾಗಿಸಿ ಲ್ಯಾಪ್‌ಟಾಪ್‌, ಫೋನ್‌ ಕಳ್ಳತನ

Theft: ಪಿಜಿಗಳ ಗುರಿಯಾಗಿಸಿ ಲ್ಯಾಪ್‌ಟಾಪ್‌, ಫೋನ್‌ ಕಳ್ಳತನ

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

fraudd

Kundapura: ನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ಪಡೆದು ವಂಚನೆ

accident

Bajpe: ಪೊರ್ಕೋಡಿ ದ್ವಾರದ ಬಳಿ ಹೈಮಾಸ್ಟ್‌ ದೀಪದ ಕಂಬಕ್ಕೆ ಟಿಪ್ಪರ್‌ ಢಿಕ್ಕಿ

Ratan Tata: ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ

Ratan Tata: ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ

ಸತೀಶ್ ಜಾರಕಿಹೊಳಿಯಂತಹ ಸರಳ ಸಜ್ಜನ ಮತ್ತೊಬ್ಬರಿಲ್ಲ: ಶಾಸಕ ಹೆಚ್.ಡಿ.ತಮ್ಮಯ್ಯ

ಸತೀಶ್ ಜಾರಕಿಹೊಳಿಯಂತಹ ಸರಳ ಸಜ್ಜನ ಮತ್ತೊಬ್ಬರಿಲ್ಲ: ಶಾಸಕ ಹೆಚ್.ಡಿ.ತಮ್ಮಯ್ಯ

ud

Bramavara: ಬಾರ್‌ನಲ್ಲಿ ಗಲಾಟೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.