ಕೊಲಂಬಿಯಾ ಮೂಲದ ಯುವತಿ ಅನುಮಾನಾಸ್ಪದ ಸಾವು


Team Udayavani, Dec 10, 2018, 11:20 AM IST

blore-2.jpg

ಬೆಂಗಳೂರು: ಕೊಲಂಬಿಯಾ ಮೂಲದ ಯುವತಿ ತಾನು ವಾಸವಿದ್ದ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ಅನುಮಾನಾಸ್ಪದ ರೀತಿಯಲ್ಲಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಹಳೆ ವಿಮಾನ ನಿಲ್ದಾಣ ರಸ್ತೆಯ ಸಮೀಪ ಭಾನುವಾರ ಮುಂಜಾನೆ ನಡೆದಿದೆ.

ಕರೆನ್‌ ಡ್ಯಾನಿಯಲ್‌ (25) ಮೃತರು. ಈ ಕುರಿತು ಮಾರಿಯಾ ಎಂಬುವವರು ನೀಡಿರುವ ದೂರಿನ ಅನ್ವಯ ಜೀವನ್‌ ಭೀಮಾ ನಗರ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಪ್ರತಿಷ್ಠಿತ ಹೋಟೆಲ್‌ ಒಂದರಲ್ಲಿ ಭಾಷಾಂತರಕಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಕರೆನ್‌ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ವೈಲ್ಡ್‌ ಫ್ಲವರ್‌ ಅಪಾರ್ಟ್‌ ಮೆಂಟ್‌ನ ಎರಡನೇ ಫ್ಲೋರ್‌ನ ಫ್ಲ್ಯಾಟ್‌ನಲ್ಲಿ ಸ್ನೇಹಿತೆ ಜತೆ ವಾಸವಿದ್ದರು. ಶನಿವಾರ ರಾತ್ರಿ ಸ್ಪೇನ್‌ ಮೂಲದ ಮಾರಿಯಾ ಹಾಗೂ ಇತರೆ ಸ್ನೇಹಿತರ ಜತೆಗೂಡಿ ವೈಟ್‌ಫಿಲ್ಡ್‌ನಲ್ಲಿ ತಡರಾತ್ರಿಯವರೆಗೂ ಪಾರ್ಟಿ ಮಾಡಿದ್ದಾರೆ. ಮೂರು ಗಂಟೆ ಸುಮಾರಿಗೆ ಮಾರಿಯಾ ಜತೆ ಫ್ಲ್ಯಾಟ್‌ಗೆ ಆಗಮಿಸಿದ್ದಾರೆ.

ಕೆಲ ಹೊತ್ತಿನ ಬಳಿಕ ಕರೆನ್‌ ಮೂರನೇ ಮಹಡಿಗೆ ತೆರಳಿದ್ದು, ಕೆಲವೇ ನಿಮಿಷಗಳಲ್ಲಿ ಕೂಗಿ ಕೊಂಡಿದ್ದಾರೆ. ಕೂಗು ಕೇಳಿ ಕೊಠಡಿಯಿಂದ ಹೊರಗೆ ಬಂದ ಮಾರಿಯಾ, ನೋಡು ನೋಡುತ್ತಿದ್ದಂತೆ ಕರೆನ್‌ ಕೆಳಗೆ ಬಿದ್ದಿದ್ದಾರೆ. ಕೆಳಗಡೆ ಇಳಿದು ಬಂದು ನೋಡುವಷ್ಟರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕರೆನ್‌ ಡ್ಯಾನಿಯಲ್‌ ಸ್ಥಳದಲ್ಲೇ ಮೃತ ಪಟ್ಟಿದ್ದರು ಎಂದು ಮಾರಿಯಾ ದೂರಿನಲ್ಲಿ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಆಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕರೆನ್‌ ಯಾವ ಉದ್ದೇಶಕ್ಕೆ ಮೂರನೇ ಮಹಡಿಗೆ ತೆರಳಿದ್ದರು ಎಂಬ ಬಗ್ಗೆ ಇನ್ನೂ ಗೊತ್ತಾಗಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಆಯತಪ್ಪಿ ಕೆಳಗೆ ಬಿದ್ದಿರುವುದು ಗೊತ್ತಾಗಿದೆ. ಆಕೆಯ ಸ್ನೇಹಿತರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ. ಮೃತ ಯುವತಿಯ ಮರಣೋತ್ತರ ಪರೀಕ್ಷಾ ವರದಿ ಬರಬೇಕಿದೆ ಎಂದು ಅಧಿಕಾರಿ ಹೇಳಿದರು.

ವಿದೇಶಿಯರ ಪ್ರಾದೇಶಿಕ ನೋಂದಣಿ (ಎಫ್ಆರ್‌ಆರ್‌ಒ) ಕಚೇರಿ ಮೂಲಕ ಕೆರನ್‌ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಅವರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿ ಹೇಳಿದರು.

ಟಾಪ್ ನ್ಯೂಸ್

1-saASs

ಬೊಮ್ಮಾಯಿ ನೇತೃತ್ವದಲ್ಲೇ ಅವಧಿ ಪೂರ್ಣ: ಕೇಂದ್ರ ಸಚಿವ‌ ನಾರಾಯಣಸ್ವಾಮಿ

ಕಾಂಗ್ರೆಸ್‌ ಈಗ ಡಬಲ್‌ ಡೋರ್‌ ಬಸ್‌: ಸಚಿವ ಸುಧಾಕರ್‌ ವ್ಯಂಗ್ಯ

ಕಾಂಗ್ರೆಸ್‌ ಈಗ ಡಬಲ್‌ ಡೋರ್‌ ಬಸ್‌: ಸಚಿವ ಸುಧಾಕರ್‌ ವ್ಯಂಗ್ಯ

1—ASsASas

ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳನ್ನು ನಿರಾಕರಿಸಿದರೆ ಕಠಿಣ ಕ್ರಮ: ಡಾ.ಕೆ.ಸುಧಾಕರ್‌

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 515 ಅಂಕ ಜಿಗಿತ; 59,000 ಗಡಿ ದಾಟಿದ ಸೂಚ್ಯಂಕ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 515 ಅಂಕ ಜಿಗಿತ; 59,000 ಗಡಿ ದಾಟಿದ ಸೂಚ್ಯಂಕ

ಪ್ರಾಣಿಗಳೂ ಈ ಆಹಾರ ತಿನ್ನಲ್ಲ..: ಮೆಸ್ ಫುಡ್ ಬಗ್ಗೆ ಆಕ್ರೋಶ ಹೊರಹಾಕಿದ ಉ.ಪ್ರದೇಶ ಪೊಲೀಸ್

ಪ್ರಾಣಿಗಳೂ ಈ ಆಹಾರ ತಿನ್ನಲ್ಲ..: ಮೆಸ್ ಫುಡ್ ಬಗ್ಗೆ ಆಕ್ರೋಶ ಹೊರಹಾಕಿದ ಉ.ಪ್ರದೇಶ ಪೊಲೀಸ್

section

ಕೊಪ್ಪಳ: ಕ್ಷುಲ್ಲಕ ಕಾರಣಕ್ಕೆ ಗುಂಪುಗಳ ಮಾರಾಮಾರಿ; ಇಬ್ಬರ ಸಾವು

ರಾಕಿಭಾಯ್‌ ಗೆ ರಾಖಿ ಕಟ್ಟಿದ ಮುದ್ದಿನ ತಂಗಿ: ಫೋಟೋ ಹಂಚಿ ಶುಭಾಶಯ ಕೋರಿದ ಯಶ್

ರಾಕಿಭಾಯ್‌ ಗೆ ರಾಖಿ ಕಟ್ಟಿದ ಮುದ್ದಿನ ತಂಗಿ: ಫೋಟೋ ಹಂಚಿ ಶುಭಾಶಯ ಕೋರಿದ ಯಶ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ‘ಸ್ವಾತಂತ್ರ್ಯ ನಡಿಗೆ’

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ‘ಸ್ವಾತಂತ್ರ್ಯ ನಡಿಗೆ’

ಗುರುವಾರದ ರಾಶಿ ಫಲ… ಇಲ್ಲಿವೆ ನಿಮ್ಮ ಗ್ರಹಬಲ

ಗುರುವಾರದ ರಾಶಿ ಫಲ… ಇಲ್ಲಿವೆ ನಿಮ್ಮ ಗ್ರಹಬಲ

ಬುಧವಾರದ ರಾಶಿ ಫಲ… ಇಲ್ಲಿವೆ ನಿಮ್ಮ ಗ್ರಹಬಲ

ಬುಧವಾರದ ರಾಶಿ ಫಲ… ಇಲ್ಲಿವೆ ನಿಮ್ಮ ಗ್ರಹಬಲ

ಸಿಮ್‌ ಕಾರ್ಡ್‌ ಕದ್ದು ಹಣ ದೋಚಿದವನ ಬಂಧನ

ಸಿಮ್‌ ಕಾರ್ಡ್‌ ಕದ್ದು ಹಣ ದೋಚಿದವನ ಬಂಧನ

ಹತ್ತು ವರ್ಷದ ಮಗಳನ್ನು ನೇಣು ಬಿಗಿದು ಕೊಂದು,ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಹತ್ತು ವರ್ಷದ ಮಗಳನ್ನು ನೇಣು ಬಿಗಿದು ಕೊಂದು,ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

MUST WATCH

udayavani youtube

ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ

udayavani youtube

ವರ್ಗಾವಣೆಗೊಂಡ ಚಿಕ್ಕಮಗಳೂರು ಎಸ್.ಪಿ ಗೆ ಹೂಮಳೆಗೈದು ಬೀಳ್ಕೊಟ್ಟ ಸಿಬ್ಬಂದಿ…

udayavani youtube

3 ವರ್ಷಗಳ ಬಳಿಕ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್

udayavani youtube

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

udayavani youtube

ಪ್ರವೀಣ್‌ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ

ಹೊಸ ಸೇರ್ಪಡೆ

12-act

ಜನನ-ಮರಣ ತಿದ್ದುಪಡಿ ಹಿಂಪಡೆಗೆ ಮನವಿ

20

ವೃತ್ತಗಳಿಗೆ ಸ್ವಾತಂತ್ರ್ಯ ಯೋಧರ ಹೆಸರು

11-road

ರಾಜ್ಯ ಹೆದ್ದಾರಿಯಲ್ಲಿ ತಗ್ಗು; ನಿರ್ಲಕ್ಷ್ಯಕ್ಕೆ ಆಕ್ರೋಶ

10-demand

ಆಲೂರು(ಬಿ) ಘಟನೆ; ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

19

ರಾಸಾಯನಿಕ ಮುಕ್ತ ಕೃಷಿ ಅಳವಡಿಸಿಕೊಳ್ಳಿ: ಕನ್ಹೇರಿ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.