ಮೆಟ್ರೋದಲ್ಲಿ ಶುಕ್ರವಾರ 4.58 ಲಕ್ಷ ಮಂದಿ ಪ್ರಯಾಣ


Team Udayavani, Sep 1, 2019, 3:09 AM IST

shukravara

ಬೆಂಗಳೂರು: “ನಮ್ಮ ಮೆಟ್ರೋ’ ರೈಲು, ಶುಕ್ರವಾರ ಪ್ರಯಾಣಿಕರ ಸಂಚಾರದಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಸರಿಗಟ್ಟಿದೆ. ಕೇವಲ ಒಂದು ದಿನದಲ್ಲಿ ಮೆಟ್ರೋದಲ್ಲಿ 4.58 ಲಕ್ಷ ಮಂದಿ ಪ್ರಯಾಣಿಸಿದ್ದು, 1.09 ಕೋಟಿ ರೂ. ಆದಾಯ ಹರಿದುಬಂದಿದೆ. ಇದು ಗೌರಿ-ಗಣೇಶ ಹಬ್ಬಕ್ಕೆ ಬಿಎಂಆರ್‌ಸಿಗೆ ಬಂದ ಗಿಫ್ಟ್!

ವಾರಾಂತ್ಯದ ಜತೆಗೆ ಹಬ್ಬದ ಹಿನ್ನೆಲೆಯಲ್ಲಿ ಸಾಲು ಮೂರು ದಿನಗಳು ರಜೆ ಇದ್ದು, ನಗರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೇರೆ ಬೇರೆ ಊರುಗಳಿಗೆ ತೆರಳಿದರು. ಇಲ್ಲಿನ ಹತ್ತಿರದ ಬಸ್‌ ನಿಲ್ದಾಣಗಳನ್ನು ತಲುಪಲು ಪ್ರಯಾಣಿಕರು ಮೆಟ್ರೋಗೆ ಮುಗಿಬಿದ್ದರು. ಇದರಿಂದ ಶುಕ್ರವಾರ ರಾತ್ರಿವರೆಗೆ ಒಟ್ಟಾರೆ 4.58 ಲಕ್ಷ ಜನ ಪ್ರಯಾಣಿಸಿದ್ದಾರೆ. ಈ ಪೈಕಿ ನೇರಳೆ ಮಾರ್ಗದಲ್ಲಿ 2,49,162 ಹಾಗೂ ಹಸಿರು ಮಾರ್ಗದಲ್ಲಿ 2,09,076 ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವಾಣ್‌ ತಿಳಿಸಿದ್ದಾರೆ.

ಸಾಮಾನ್ಯವಾಗಿ ಈ ಎರಡೂ ಮಾರ್ಗಗಳಲ್ಲಿ ನಿತ್ಯ ಸರಾಸರಿ 4.20ರಿಂದ 4.30 ಲಕ್ಷ ಜನ ಪ್ರಯಾಣಿಸುತ್ತಾರೆ. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 25ರಿಂದ 30 ಸಾವಿರ ಪ್ರಯಾಣಿಸಿದ್ದಾರೆ. ಒಟ್ಟಾರೆ ಇಡೀ ದಿನ ನೇರಳೆ ಮಾರ್ಗದಿಂದ 54,25,474 ಹಾಗೂ ಹಸಿರು ಮಾರ್ಗದಿಂದ 54,81,372 ರೂ. ಹರಿದುಬಂದಿದೆ. ಈ ಹಿಂದೆ 2019ರ ಆಗಸ್ಟ್‌ 14ರಂದು 4.53 ಲಕ್ಷ ಜನ ಪ್ರಯಾಣಿಸಿದ್ದರು. ಅಲ್ಲದೆ, ಏಪ್ರಿಲ್‌ 4ರಂದು 4.52 ಲಕ್ಷ ಜನ ಸಂಚರಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು ಎಂದು ಅವರು ಮಾಹಿತಿ ನೀಡಿದರು.

“ಈ ಮೈಲುಗಲ್ಲುಗಳು ನಮ್ಮ ಮೆಟ್ರೋ ಸೇವೆಗೆ ಪ್ರಯಾಣಿಕರು ನೀಡಿದ ಸ್ಪಂದನೆಯಿಂದ ಸಾಧ್ಯವಾಗಿದೆ. ಇದಕ್ಕಾಗಿ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸುವ ಮೂಲಕ ಈ ವಿಶ್ವಾಸವನ್ನು ಉಳಿಸಿಕೊಳ್ಳಲಾಗುವುದು’ ಎಂದು ಯಶವಂತ ಚವಾಣ್‌ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಟ್ವಿಟರ್‌ನಲ್ಲೇ ಕೆಲವರು ಬಿಎಂಆರ್‌ಸಿಎಲ್‍ಗೆ ಪ್ರತಿಕ್ರಿಯೆ ರೂಪದಲ್ಲಿ ಕೆಲವು ಸಲಹೆಗಳನ್ನೂ ನೀಡಿದ್ದಾರೆ.

“ನಮ್ಮ ಮೆಟ್ರೋ’ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ಅಗತ್ಯವಿದೆ. ಟ್ರಿಪ್‌ಗಳ ಅಂತರವನ್ನು ಕಡಿಮೆ ಮಾಡುವ ಮೂಲಕ ಫ್ರಿಕ್ವೆನ್ಸಿ ಹೆಚ್ಚಿಸಬೇಕು. ಈಗಲೂ ಹಲವು ಮೂರು ಬೋಗಿಗಳ ಮೆಟ್ರೋ ರೈಲುಗಳಿದ್ದು, ಅವುಗಳ ಸಾಮರ್ಥ್ಯ ದುಪ್ಪಟ್ಟುಗೊಳಿಸುವ ಅವಶ್ಯಕತೆ ಇದೆ. ಅಲ್ಲದೆ, ಹಸಿರು ಮಾರ್ಗದಲ್ಲಿ ಮೊದಲ ಮೂರು ನಿಲ್ದಾಣಗಳ ನಡುವಿನ ಪ್ರಯಾಣ ದರ ಕಡಿಮೆ ಮಾಡಬೇಕು ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

ra Ga

ಬಿಜೆಪಿಯ ‘ದ್ವೇಷ’ದ ರಾಜಕಾರಣ ದೇಶಕ್ಕೆ ಅತ್ಯಂತ ಹಾನಿಕಾರಕ:ರಾಹುಲ್ ಗಾಂಧಿ

1-assadsa

ಯುಪಿ: ಮಾಜಿ ಐಪಿಎಸ್ ಅಧಿಕಾರಿ ಅಸೀಮ್ ಅರುಣ್ ಬಿಜೆಪಿಗೆ ಸೇರ್ಪಡೆ

ಚಿಕ್ಕಮಗಳೂರು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ.!

ಚಿಕ್ಕಮಗಳೂರು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ.!

Untitled-1

ಸಂಕೇಶ್ವರ: ಮಹಿಳೆಯೋರ್ವಳ ಗುಂಡಿಕ್ಕಿ ಹತ್ಯೆ; ಬೆಚ್ಚಿ ಬಿದ್ದ ಗ್ರಾಮಸ್ಥರು

ಕಾಫಿನಾಡಿನ 27 ಪೊಲೀಸರಿಗೆ ಕೋವಿಡ್ ಪಾಸಿಟಿವ್

ಕಾಫಿನಾಡಿನ 27 ಪೊಲೀಸರಿಗೆ ಕೋವಿಡ್ ಪಾಸಿಟಿವ್

baby

ಬೆಳಗಾವಿ: ಚುಚ್ಚುಮದ್ದು ಪಡೆದ ಬಳಿಕ ಮೂರು ಶಿಶುಗಳ ನಿಗೂಢ ಸಾವು; ತನಿಖೆ ಆರಂಭ

1wer

ಭಯಗೊಳ್ಳದೆ ಚುನಾವಣೆ ಎದುರಿಸಿ: ಅರ್ಚನಾಗೆ ಧೈರ್ಯ ತುಂಬಿದ ಪ್ರಿಯಾಂಕಾ ಗಾಂಧಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾಲಿರೈಡ್‌ ಬಂದು ಮದುವೆಗೆ ಎಂದ ಮಹಿಳೆಯರು!

ಜಾಲಿರೈಡ್‌ ಬಂದು ಮದುವೆಗೆ ಎಂದ ಮಹಿಳೆಯರು!

ಹೋಟೆಲ್‌ ಪಾರ್ಸೆಲ್‌ ಸೇವೆಗೂ ಕೋವಿಡ್ ಕಾರ್ಮೋಡ

ಹೋಟೆಲ್‌ ಪಾರ್ಸೆಲ್‌ ಸೇವೆಗೂ ಕೋವಿಡ್ ಕಾರ್ಮೋಡ

ಪೊಲೀಸರ ಸೋಗಿನಲ್ಲಿ ಅತ್ತೆ ಮನೆ ದರೋಡೆ

ಪೊಲೀಸರ ಸೋಗಿನಲ್ಲಿ ಅತ್ತೆ ಮನೆ ದರೋಡೆ

ಮುಷ್ಕರ ಬಿಟ್ಟು ಬೋಧನೆಗೆ ಹಿಂದಿರುಗಿ : ಅತಿಥಿ ಉಪನ್ಯಾಸಕರಿಗೆ ಸಚಿವರ ಮನವಿ

ಮುಷ್ಕರ ಬಿಟ್ಟು ಬೋಧನೆಗೆ ಹಿಂದಿರುಗಿ : ಅತಿಥಿ ಉಪನ್ಯಾಸಕರಿಗೆ ಸಚಿವರ ಮನವಿ

congress

ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಪರಿಸರ ‌ಮಾಲಿನ್ಯ ಆರೋಪ:ಕೈ ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯ

MUST WATCH

udayavani youtube

ನಾವು ಬದಲಾಗೋಣ ಪ್ರಕೃತಿಯನ್ನು ಘೋಷಿಸೋಣಭೂಮಿ ಸುಪೋಷನ ಆಂದೋಲನ

udayavani youtube

ಒಂದು ಕೆ.ಜಿ. ಬಾಳೆ ಹಣ್ಣಿಗೆ 2 ರೂ. : ಸಂಕಷ್ಟದಲ್ಲಿ ಬಾಳೆ ಬೆಳೆದ ರೈತ

udayavani youtube

3-IN-ONE ಮಾದರಿ ವಾಕಿಂಗ್‌ ಸ್ಟಿಕ್‌ ! ಗ್ರಾಮೀಣ ಭಾಗದ ವಿದ್ಯಾರ್ಥಿಯ ಆವಿಷ್ಕಾರ

udayavani youtube

ಉಡುಪಿಯ ರಸ್ತೆಗಳಲ್ಲಿ ಓಡಾಡಿದ Corona Virus !! ವಿಶಿಷ್ಟ ರೀತಿಯಲ್ಲಿ ಜನಜಾಗೃತಿ

udayavani youtube

ಉಡುಪಿ ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಕೊರೊನಾ ವೈರಸ್ !

ಹೊಸ ಸೇರ್ಪಡೆ

ra Ga

ಬಿಜೆಪಿಯ ‘ದ್ವೇಷ’ದ ರಾಜಕಾರಣ ದೇಶಕ್ಕೆ ಅತ್ಯಂತ ಹಾನಿಕಾರಕ:ರಾಹುಲ್ ಗಾಂಧಿ

18tipper

ಮರಳು ಸಾಗಾಟ: ಟಿಪ್ಪರ್‌ ವಶ

17women

ಹೆಣ‍್ಣನ್ನು ದೈವತ್ವಕ್ಕೇರಿಸಿದ್ದು 12ನೇ ಶತಮಾನದ ಬಸವಾದಿ ಶರಣರು

1-assadsa

ಯುಪಿ: ಮಾಜಿ ಐಪಿಎಸ್ ಅಧಿಕಾರಿ ಅಸೀಮ್ ಅರುಣ್ ಬಿಜೆಪಿಗೆ ಸೇರ್ಪಡೆ

ಪ್ರಯಾಣಿಕರ ಕೊರತೆ – ಸಂಕಷ್ಟದಲ್ಲಿ ಆಟೋ ಚಾಲಕರು

ಪ್ರಯಾಣಿಕರ ಕೊರತೆ – ಸಂಕಷ್ಟದಲ್ಲಿ ಆಟೋ ಚಾಲಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.