ಭೀಕರ ಅಪಘಾತ: ಜನಪ್ರಿಯ ರಿಯಾಲಿಟಿ ಶೋನ ಸ್ಪರ್ಧಿ 6 ವರ್ಷದ ಬಾಲಕಿ ಸ್ಥಳದಲ್ಲೇ ಸಾವು
Team Udayavani, Jan 13, 2022, 9:31 PM IST
ಬೆಂಗಳೂರು: ಟಿಪ್ಪರ್ ಲಾರಿ – ದ್ವಿಚಕ್ರ ವಾಹನ ಅಪಘಾತವಾಗಿ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ವಾಜರಹಳ್ಳಿ ಬಳಿ ನಡೆದಿದೆ.
ಸಮನ್ವಿ(6) ಮೃತ ದುರ್ಧೈವಿ. ಸಮನ್ವಿ ಖಾಸಗಿ ವಾಹಿನಿ ಜನಪ್ರಿಯ ರಿಯಾಲಿಟಿ ಶೋವೊಂದರಲ್ಲಿ ಸ್ಪರ್ಧಿಯಾಗಿದ್ದಳು.
ದ್ವಿಚಕ್ರ ವಾಹನದಲ್ಲಿ ತಾಯಿ – ಮಗು ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ತೆರಳ್ತಿದ್ದಾಗ ಟಿಪ್ಪರ್ ಢಿಕ್ಕಿ ಹೊಡೆದು ಅಪಘಾತವಾಗಿದ್ದು, ಪರಿಣಾಮ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಅಪಘಾತದಲ್ಲಿ ಬಾಲಕಿಯ ತಾಯಿ ಅಮೃತಾ ನಾಯ್ಡು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಮರಣೋತ್ತರ ಪರೀಕ್ಷೆಗೆ ಬಾಲಕಿ ಮೃತದೇಹ ಕಿಮ್ಸ್ ಗೆ ರವಾನಿಸಲಾಗಿದ್ದು, ಆರೋಪಿ ಟಿಪ್ಪರ್ ಲಾರಿ ಚಾಲಕನನ್ನು ಕೆ.ಎಸ್.ಲೇಔಟ್ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಮಾರಸ್ವಾಮಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯಾದ್ಯಂತ ಆರಂಭವಾದ ಎಸೆಸೆಲ್ಸಿ ಪೂರಕ ಪರೀಕ್ಷೆ: ಮೊದಲ ದಿನ ಯಶಸ್ವಿ
ಟೆಂಪೋ ಟ್ರಾವೆಲರ್ – ಸರಕಾರಿ ಬಸ್ ನಡುವೆ ಭೀಕರ ರಸ್ತೆ ಅಪಘಾತ : ಓರ್ವ ಸಾವು, ನಾಲ್ವರು ಗಂಭೀರ
ಅಂಜನಾದ್ರಿಗೆ ಭೂಸ್ವಾಧೀನ : ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ, ಹೆಚ್ಚಿನ ಪರಿಹಾರಕ್ಕೆ ಪಟ್ಟು
ವಿದ್ಯುತ್ ಕಂಪೆನಿಗಳ ಸುಧಾರಣೆ: ಏಕಸದಸ್ಯ ಸಮಿತಿ ಅವಧಿ ಮುಂದುವರಿಕೆ ;ಸಿಎಂ ಸೂಚನೆ
ಬಹುನಿರೀಕ್ಷಿತ ಕಾಶಿ ಯಾತ್ರೆಗೆ ಅಂತಿಮ ಮಾರ್ಗಸೂಚಿ: ಸರಕಾರದಿಂದ ಅಧಿಕೃತ ಆದೇಶ