ಪೊಲೀಸರ ಹೆಸರು ಬಳಸಿಕೊಂಡು ಸುಲಿಗೆ: ಆರೋಪಿ ಬಂಧನ
Team Udayavani, May 17, 2022, 1:30 PM IST
ಬೆಂಗಳೂರು: ಕ್ಲಬ್‌ಗಳಲ್ಲಿ ಜೂಜಾಟ ನಡೆಸಲು ಒಪ್ಪಂದ ಮಾಡಿಕೊಂಡು ಪೊಲೀಸರಿಗೆ ಹಣ ಕೊಟ್ಟರೆ ರಕ್ಷಣೆ ನೀಡುತ್ತಾರೆ ಎಂದು ಮಾತ ನಾಡಿರುವ ಆಡಿಯೋ ವೈರಲ್ ಸಂಬಂಧ ಆರ್ ಟಿಐ ಕಾರ್ಯಕರ್ತ ಅಶೋಕ್ ಕುಮಾರ್ ಅಡಿಗ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಆರೋಪಿಯನ್ನು ಕೋರ್ಟಿಗೆ ಹಾಜರು ಪಡಿಸಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ವೈರಲ್ ಆಗಿರುವ ಆಡಿಯೋದಲ್ಲಿ ಅಶೋಕ್ ಕುಮಾರ್ ಅಡಿಗ, “ಸಿಸಿಬಿ ಪೊಲೀಸರು ಹಾಗೂ ಠಾಣಾ ಮಟ್ಟದ ಪೊಲೀಸರಿಗೆ ತಿಂಗಳು ಅಥವಾ ವಾರಕ್ಕೆ ಇಂತಿಷ್ಟು ನಿಗದಿ ಮಾಡಲಾಗಿದೆ’ ಎಂದು ಕ್ಲಬ್ ಮಾಲೀಕರೊಬ್ಬರ ಜತೆ ಮಾತನಾಡಿದ್ದಾರೆ.
ಅಲ್ಲದೆ, ಕ್ಲಬ್‌ಗಳನ್ನು ತನ್ನ ಹೆಸರಿಗೆ ಅಗ್ರಿಮೆಂಟ್ ಮಾಡಿಕೊಟ್ಟರೆ, “ನಗರ ಪೊಲೀಸ ಆಯುಕ್ತರು, ಸಿಸಿಬಿ ಮುಖ್ಯಸ್ಥ ರಮಣಗುಪ್ತಾ ಸೇರಿ ಕಾನ್‌ಸ್ಟೇಬಲ್ ವರೆಗೂ ಯಾವೊಬ್ಬ ಅಧಿಕಾರಿಯೂ ತೊಂದರೆ ಕೊಡದಂತೆ ನೋಡಿಕೊಳ್ಳುತ್ತೇನೆ. ವಿಷಯ ಏನೆಂದರೆ, ಅಡಿಗ ಹೆಸರಿನಲ್ಲಿ ಕ್ಲಬ್‌ಗಳ ಅಗ್ರಿಮೆಂಟ್‌ಗಳಿದ್ದರೆ ಯಾವುದೇ ದಾಳಿ ನಡೆಸುವುದಿಲ್ಲ ಎಂದು ಪೊಲೀಸ್ ಇನ್‌ಸೆಕ್ಟರ್‌ಗಳೇ ಹೇಳುತ್ತಿದ್ದಾರೆ. ಹೀಗಾಗಿ ಕ್ಲಬ್‌ಗಳನ್ನು ತನ್ನ ಹೆಸರಿಗೆ ಅಗ್ರಿಮೆಂಟ್ ಮಾಡಿಕೊಡುವಂತೆ’ ಅಡಿಗ ಮಾತನಾಡಿದ್ದಾನೆ.
ಕ್ಲಬ್ ಮಾಲೀಕರಿಂದ ದೂರು: ಈ ಸಂಬಂಧ ಅಶೋಕ್ ಕುಮಾರ್ ಅಡಿಗ ಕಳೆದ ತಿಂಗಳು ಮಾಗಡಿ ರಸ್ತೆಯ ಕ್ಲಬ್‌ವೊಂದರಲ್ಲಿ ಇಸ್ಪೀಟ್ ಕ್ಲಬ್ ಮಾಲೀಕರ ಸಭೆ ನಡೆಸಿದ್ದ. ಈ ವೇಳೆ ತನ್ನ ಹೆಸರಿಗೆ ಕ್ಲಬ್‌ಗಳನ್ನು ಅಗ್ರಿಮೆಂಟ್ ಮಾಡಿಕೊಡುವಂತೆ ಕ್ಲಬ್‌ಗಳ ಮಾಲೀಕರಿಗೆ ಸೂಚಿಸಿದ್ದ. ಅದಕ್ಕಾಗಿ ಪ್ರತಿ ತಿಂಗಳು 50 ಸಾವಿರ ರೂ.ನೀಡ ಬೇಕು ಎಂದು ಬೇಡಿಕೆ ಇಟ್ಟಿದ್ದ. ಅದಕ್ಕೆ ಒಪ್ಪದ ರಮೇಶ್ ಹಾಗೂ ಇತರರು ಅಡಿಗಗೆ ಎಚ್ಚರಿಕೆ ನೀಡಿದ್ದರು.
ಅದರಿಂದ ಆಕ್ರೋಶಗೊಂಡ ಆರೋಪಿ, ತನ್ನ ಸಹಕಾರ ಇಲ್ಲದೆ ಕ್ಲಬ್‌ಗಳನ್ನು ಹೇಗೆ ನಡೆಸುತ್ತಿರಾ? ಎಂದು ಪಿಸ್ತೂಲ್ ತೋರಿಸಿ ಇನ್ನು ಅರ್ಧ ಗಂಟೆಯಲ್ಲಿ ಕ್ಲಬ್ ಮುಚ್ಚಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಅದರಿಂದ ಹೆದರಿದ ಶ್ರೀನಿವಾಸ್ ಎಂಬ ಕ್ಲಬ್ ಮಾಲೀಕ 50 ಸಾವಿರ ರೂ. ಕೊಟ್ಟಿದ್ದರು ಎಂದು ರಮೇಶ್ ಮಾಗಡಿ ರಸ್ತೆ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರ್‌ಟಿಐ ಕಾರ್ಯಕರ್ತನ ಸೋಗಿನಲ್ಲಿ ವಂಚನೆ : ಅಶೋಕ್ ಕುಮಾರ್ ಅಡಿಗ ಆರ್‌ಟಿಐ ಕಾರ್ಯಕರ್ತನ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಅಮಾಯಕರ ಬಳಿ ಹಣ ಸುಲಿಗೆ ಮಾಡುತ್ತಿದ್ದ. ಪೊಲೀಸರ ಹೆಸರು ಬಳಸಿಕೊಂಡು ನಿರಂತರವಾಗಿ ಕ್ಲಬ್ ಮಾಲೀಕರು, ಹೋಟೆಲ್ ಮಾಲೀಕರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ಎಂಬ ಆರೋಪ ಕೂಡ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಸಂಬಂಧ 10 ದಿನಗಳ ಕಾಲ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ತನ್ನ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾತನಾಡಿದ ಖಾದರ್
ಚಿಕ್ಕಮಗಳೂರು : ವೀಲಿಂಗ್ ಶೋಕಿ ಮಾಡಿದವರಿಗೆ ಖಾಕಿಗಳ ಬುಲ್ಡೋಜರ್ ಟ್ರೀಟ್ಮೆಂಟ್
ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ
ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್ ಬುಕ್
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಹೊಸ ಸೇರ್ಪಡೆ
ವಿಂಬಲ್ಡನ್ 2022: 4 ಸೆಟ್ಗಳಲ್ಲಿ ಗೆದ್ದ ನೊವಾಕ್ ಜೊಕೋವಿಕ್
ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಓಟ ಬೆಳೆಸುವರೇ ಸಿಂಧು?
ಲೀಡ್ಸ್ ಟೆಸ್ಟ್: ಇಂಗ್ಲೆಂಡ್ 3-0 ಪರಾಕ್ರಮ: ಸ್ಟೋಕ್ಸ್ ಬಳಗಕ್ಕೆ 7 ವಿಕೆಟ್ ಜಯ
ರಾಜ್ಯಾದ್ಯಂತ ಆರಂಭವಾದ ಎಸೆಸೆಲ್ಸಿ ಪೂರಕ ಪರೀಕ್ಷೆ: ಮೊದಲ ದಿನ ಯಶಸ್ವಿ
ಟೆಂಪೋ ಟ್ರಾವೆಲರ್ – ಸರಕಾರಿ ಬಸ್ ನಡುವೆ ಭೀಕರ ರಸ್ತೆ ಅಪಘಾತ : ಓರ್ವ ಸಾವು, ನಾಲ್ವರು ಗಂಭೀರ