ಬಿಸ್ಕೆಟ್ ವ್ಯವಹಾರಕ್ಕೆಂದು ಕೋಟಿಗಟ್ಟಲೆ ಸಾಲ ಪಡೆದು ಕ್ಯಾಸಿನೋ ಜೂಜಾಟ ಆಡಿದ ಆರೋಪಿ ಅರೆಸ್ಟ್
Team Udayavani, May 25, 2022, 1:36 PM IST
ಬೆಂಗಳೂರು: ಬಿಸ್ಕೆಟ್ ವ್ಯವಹಾರ ಮಾಡುತ್ತೇನೆ ಎಂದು ನಂಬಿಸಿ ಸ್ನೇಹಿತರು, ಪರಿಚಯಸ್ಥರಿಂದ ಕೋಟಿಗೂ ಅಧಿಕ ಸಾಲ ಪಡೆದು ತಲೆಮರೆಸಿಕೊಂಡಿದ್ದ ಆರೋಪಿ ಕೆಂಪೇಗೌಡನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ನಂಜಾಂಭ ಅಗ್ರಹಾರ ನಿವಾಸಿ ಮನೋಜ್ ರಾವ್ (29) ಬಂಧಿತ. ಎಂ.ಕಾಂ ಪದವೀಧರನಾಗಿರುವ ಮನೋಜ್‌ರಾವ್ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಬದಲಿಗೆ ಆನ್‌ಲೈನ್ ಬೆಟ್ಟಿಂಗ್, ಕ್ರಿಕೆಟ್ ಬೆಟ್ಟಿಂಗ್ ಹಾಗೂ ಕ್ಯಾಸಿನೋ ಜೂಜಾಟ ಅಭ್ಯಾಸ ಮಾಡಿಕೊಂಡಿದ್ದ. ಈ ಮಧ್ಯೆ ತನ್ನ ಚಟಗಳಿಗೆ ಹಣ ಹೊಂದಿಸಲು ಕಷ್ಟವಾಗಿದ್ದು, ಅದರಿಂದ ವಂಚನೆ ದಾರಿ ಹಿಡಿದಿದ್ದ ಎಂದು ಪೊಲೀಸರು ಹೇಳಿದರು.
ಕೋಟಿ ರೂ.ಹೆಚ್ಚು ಸಾಲ: ಪರಿಚಯಸ್ಥರು, ಸ್ನೇಹಿತರಿಗೆ ಬಿಸ್ಕೆಟ್ ವ್ಯವಹಾರ ಮಾಡುತ್ತೇನೆ. ಆದರೆ, ಒಂದಿಷ್ಟು ಹಣ ಬೇಕಾಗಿದೆ. ಸಾಲದ ರೂಪದಲ್ಲಿ ನೀಡಿದರೆ ವಾಪಸ್ ಕೊಡುವುದಾಗಿ ನಂಬಿಸಿದ್ದಾನೆ.
ಅಲ್ಲದೆ, ಕೆಲವರಿಗೆ ವ್ಯವಹಾರದಲ್ಲಿ ಪಾಲುದಾರಿಕೆ ನೀಡುವುದಾಗಿ, ಲಾಭಾಂಶ ಕೊಡುತ್ತೇನೆಂದು ನಂಬಿಸಿದ್ದಾನೆ. ಕುಮುದಾ ಎಂಬುವವರಿಂದ ಬರೋಬ್ಬರಿ 21 ಲಕ್ಷ ರೂ. ಮತ್ತು ನಾಗೇಶ್‌ರಾವ್ ಬಳಿ 11.50 ಲಕ್ಷ ರೂ. ಸಾಲ ಪಡೆದುಕೊಂಡಿದ್ದು, ಆರೋಪಿಯಿಂದ ಚೆಕ್ ಪಡೆದುಕೊಂಡಿದ್ದರು.
ನಿಗದಿತ ಸಮಯದಲ್ಲಿ ಹಣನೀಡದ್ದರಿಂದ ಬ್ಯಾಂಕ್‌ಗೆ ಚೆಕ್ ಹಾಕಿದ್ದಾರೆ. ಚೆಕ್ ಬೌನ್ಸ್‌ಆಗಿದೆ. ಹೀಗಾಗಿ ಆರೋಪಿಗೆ ಹಣ ವಾಪಸ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಅದಕ್ಕೆ ಆರೋಪಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಕುಮುದಾ ಮತ್ತು ನಾಗೇಶ್‌ರಾವ್ ಕೆಂಪೇಗೌಡನಗರ ಠಾಣೆಯಲ್ಲಿ ವಂಚನೆ ಹಾಗೂ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಈ ಬೆನ್ನಲ್ಲೇ ಸುಮಾರು 6 ಮಂದಿ ಆರೋಪಿಯ ವಿರುದ್ಧ ಪ್ರತ್ಯೇಕ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಸ್ನೇಹಿತರು, ಸಂಬಂಧಿಕರಿಂದ ಪಡೆದುಕೊಂಡಿದ್ದ ಸಾಲವನ್ನು ಆರೋಪಿ ಗೋವಾದಲ್ಲಿ ನಡೆಯುವ ಕ್ಯಾಸಿನೋಗೆ ಹೋಗಿ ಲಕ್ಷಾಂತರ ರೂ. ಹೂಡಿಕೆ ಮಾಡಿ ಸೋತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ
ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್ ಬುಕ್
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಹೊಸ ಸೇರ್ಪಡೆ
ಕೇಂದ್ರ ಸರ್ಕಾರದಿಂದ ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳ ದಮನ ನೀತಿ: ಸಿದ್ಧರಾಮಯ್ಯ
ನಾವೂರು: ಇನ್ನಷ್ಟು ಅನುದಾನ ಹರಿದು ಬಂದರೆ ಅಭಿವೃದ್ಧಿ ಮಲ್ಲಿಗೆ ಅರಳೀತು
ತಾಯಿಯಾಗುತ್ತಿರುವ ಸಂತಸ ವ್ಯಕ್ತಪಡಿಸಿದ ಬಾಲಿವುಡ್ ನಟಿ ಆಲಿಯಾ ಭಟ್
ಸನಾತನ ಧರ್ಮದ ನೆಮ್ಮದಿ ವಿದೇಶಿ ಸಂಸ್ಕೃತಿಯಲ್ಲಿಲ್ಲ: ವಿದ್ಯಾಪ್ರಸನ್ನ ಸ್ವಾಮೀಜಿ
ಕಲರ್ಫುಲ್ ಇವೆಂಟ್ನಲ್ಲಿ ‘’ಬೈರಾಗಿ”: ಜುಲೈ 1 ರಿಲೀಸ್