ಶ್ರೀ ಮಂಜುನಾಥ ವಿದ್ಯಾಲಯದ ಸಾಧನೆಯ ಹಾದಿ

Team Udayavani, Aug 20, 2018, 12:41 PM IST

sri-manjunatha.jpg

ಬೆಂಗಳೂರು: ದೇಶದ ಪ್ರಗತಿಗೆ ಉತ್ತಮ ಪ್ರಜೆಗಳನ್ನು ನೀಡುವಲ್ಲಿ ಶಿಕ್ಷಣ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಒಂದು ಸದುದ್ದೇಶ ಹಾಗೂ ಗುರಿಯೊಂದಿಗೆ ಹುಟ್ಟಿಕೊಂಡಿರುವ ಶಿಕ್ಷಣ ಸಂಸ್ಥೆಗಳು ಸಾಕಷ್ಟಿವೆ. ಮಧ್ಯಮ, ಬಡ ವರ್ಗದ ಜನರಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳಲ್ಲಿ ಶ್ರೀ ಮಂಜುನಾಥ ವಿದ್ಯಾಲಯ ಕೂಡ ಒಂದಾಗಿದೆ.

ಮಾಗಡಿ ರಸ್ತೆ, ವಿದ್ಯಾರಣ್ಯನಗರಕ್ಕೆ ಹೊಂದಿಕೊಂಡಿರುವ ಶ್ರೀ ಮಂಜುನಾಥ ವಿದ್ಯಾಲಯ ಶಾಲೆ ಕಳೆದ 5 ದಶಕಗಳಿಂದ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಮಕ್ಕಳಲ್ಲಿ ಶಿಸ್ತು, ಭರವಸೆ, ಸದ್ಭಾವನೆ ಮೂಡಿಸುತ್ತಾ ಶ್ರಮಿಸುತ್ತಿದೆ. ಈ ಭಾಗದ ಸುತ್ತಮುತ್ತ ಇರುವ ಶಾಲೆಗಳ ಪೈಕಿ ಅತ್ಯುತ್ತಮ ಶಾಲೆ ಎಂದು ಗುರುತಿಸಿಕೊಂಡಿರುವ ಜತೆಗೆ, ಪೊಷಕರ ನಂಬಿಕೆ ಉಳಿಸಿಕೊಂಡು ಬಂದಿದೆ. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಾಲೆಯಾಗಿ ಮನೆಮಾತಾಗಿದೆ.

ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದುದ್ದೇಶದಿಂದ 1967ರಲ್ಲಿ 10 ವಿದ್ಯಾರ್ಥಿಗಳು ಮತ್ತು ಮೂವರು ಶಿಕ್ಷಕರೊಂದಿಗೆ ಪ್ರಾರಂಭವಾದ ಶ್ರೀ ಮಂಜುನಾಥ ವಿದ್ಯಾಲಯ, ಕರ್ನಾಟಕ ಸರ್ಕಾರದ ಶಾಶ್ವತ ಮಾನ್ಯತೆ ಮತ್ತು ಅನುದಾನಕ್ಕೆ ಒಳಪಟ್ಟಿದೆ. ವ್ಯವಸ್ಥಾಪಕರಾದ ಜೆ.ಎಸ್‌. ನಾಗರಾಜು ಅವರ ಪ್ರಯತ್ನದಿಂದ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಾ ಬರುತ್ತಿದೆ.

ನಿವೃತ್ತಿ ನಂತರ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಜೆ.ಎಸ್‌.ನಾಗರಾಜು ಅವರ ಪತ್ನಿ ಹಾಗೂ ಪುತ್ರರ ಪ್ರೋತ್ಸಾಹ ಕೂಡ ಶಾಲೆ ಪ್ರಗತಿಗೆ ಪೂರಕವಾಗಿದೆ. ಇದರೊಂದಿಗೆ ಶಿಕ್ಷಕರ ಹಾಗೂ ಆಡಳಿತ ಮಂಡಳಿಯವರ ಕೊಡುಗೆಯನ್ನೂ ಮರೆಯುವಂತಿಲ್ಲ. ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾಲಯದ ಪ್ರಾಂಶುಪಾಲರ ನಡುವಿನ ಒಡನಾಟ ಈ ಸಂಸ್ಥೆಗೆ ದಾರಿದೀಪವಾಗಿದೆ.

ವರ್ಷದಿಂದ ವರ್ಷಕ್ಕೆ ಶಾಲೆ ಉತ್ತಮ ಫ‌ಲಿತಾಂಶ ಪಡೆಯುತ್ತಿರುವುದು ಹೆಮ್ಮೆಯ ವಿಷಯ. ಶಾಲೆಯಲ್ಲಿ 1998ರಿಂದ ಕಂಪ್ಯೂಟರ್‌ ಶಿಕ್ಷಣ ಪರಿಚಯಿಸಲಾಗಿದೆ. ಪೋಷಕರ ಸಭೆ ಕರೆಯುವ ಮೂಲಕ ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಪೋಷಕರು ಗಮನಕ್ಕೆ ತರಲಾಗುತ್ತದೆ. ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರ ಸಭೆ ಕರೆದು ಅವರ ಸಲಹೆಗಳನ್ನು ಸ್ವೀಕರಿಸಲಾಗುತ್ತಿದೆ.

ಈ ಮೂಲಕ ಶಾಲೆಯ ಪ್ರಾಂಶುಪಾಲರು ಹಾಗೂ ಪೋಷಕರ ನಡುವೆ ಉತ್ತಮ ಬಾಂಧವ್ಯ ಸೃಷ್ಟಿಯಾಗಿದೆ. ಆಡಳಿತ ಮಂಡಳಿ ಹಾಗೂ ಪ್ರಧಾನ ಅಧ್ಯಾಪಕರು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶನ ನೀಡುವುದು ಉತ್ತಮ ಬೋಧನೆ ಹಾಗೂ ವಿದ್ಯಾರ್ಥಿಗಳ ನಿರಂತರ ಅಧ್ಯಯನಕ್ಕೆ ಕಾರಣವಾಗಿದೆ.

ಪಠ್ಯೇತರ ಚಟುವಟಿಕೆಗೆ ಒತ್ತು: ಶಿಕ್ಷಣದ ಜತೆ ಜತೆಗೆ ಜ್ಞಾನವೇ ಶಕ್ತಿ (Knowladge is power) ಎನ್ನುವ ಹಾಗೆ ಹಿಂದಿ ಪರೀಕ್ಷೆಗಳನ್ನು ನಡೆಸುವುದು, ದಿನ ಪತ್ರಿಕೆಗಳ ಮುಖ್ಯಾಂಶ ಓದಿಸುವುದು, ಸುಭಾಷಿತ ಹೇಳಿಸುವುದು, ಜ್ಞಾನ-ವಿಜ್ಞಾನದ ಪರೀಕ್ಷೆಗಳ ಜತೆಗೆ ವಚನ ಕಮ್ಮಟ ಇತ್ಯಾದಿ ಕಲಿಕೆಗಳಿಗೂ ವಿಶೇಷ ಗಮನ ನೀಡಲಾಗುತ್ತದೆ. A sound mind in a sound body ಎನ್ನುವಂತೆ ಪ್ರತಿ ವರ್ಷ ವಿದ್ಯಾರ್ಥಿಗಳಿಗಾಗಿ ಕ್ರೀಡೋತ್ಸವ ಏರ್ಪಡಿಸಿ, ಅವರಲ್ಲಿ ಕ್ರೀಡಾ ಮನೋಭಾವ ಬೆಳೆಸಲಾಗುತ್ತಿದೆ.

ಎನ್‌ಸಿಸಿಗೆ ಆದ್ಯತೆ: ಶ್ರೀ ಮಂಜುನಾಥ ವಿದ್ಯಾಲಯದ ಆಡಳಿತ ಮಂಡಳಿಯ ಪ್ರಧಾನ ಅಧ್ಯಾಪಕರಾದ ಎನ್‌.ರಘು ಹಾಗೂ ಎಎನ್‌ಓ ಆಗಿರುವ ಪೂರ್ಣಿಮಾ ಸವಣೂರು ಅವರು ಎನ್‌ಸಿಸಿ ವಿಭಾಗಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಎನ್‌ಸಿಸಿಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿ ಒಟ್ಟು 100 ಕೆಡೇಟ್‌ಗಳಿದ್ದಾರೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಸೈನಿಕ ದಳದ ಕರ್ನಲ್‌ ಚಂದ್ರಶೇಖರ್‌ ಅವರ ಶ್ರಮ ಸ್ಮರಣೀಯವಾಗಿದೆ. 

ಅತ್ಯುತ್ತಮ ಸಾಧನೆ: ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅನುಭವಿ ಶಿಕ್ಷಕ ವರ್ಗ ಶಾಲೆ ಪ್ರಗತಿಗೆ ಸಹಕಾರಿಯಾಗಿದೆ. ಪ್ರಾಂಶುಪಾಲರ ವ್ಯವಸ್ಥಿತ ಕಾರ್ಯ ಚಟುವಟಿಕೆಗಳು, ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕಿಯರ ಮಾರ್ಗದರ್ಶನವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪುಷ್ಟಿ ನೀಡಿದೆ. ಈ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫ‌ಲಿತಾಂಶ ಪ್ರಗತಿ ಕಂಡಿದ್ದು, ಅನೇಕ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಗಳಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ವಿದ್ಯಾಲಯದಲ್ಲಿ ಅಭ್ಯಾಸ ಮಾಡಿರುವ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದ ವಿವಿಧ ರಂಗಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಜತೆಗೆ ರಾಜಕೀಯ, ಸಾಮಾಜಿಕ ಸೇವೆ ಕ್ಷೇತ್ರದಲ್ಲೂ ಸಕ್ರಿಯರಾಗಿರುವುದು ಹೆಮ್ಮೆಯ ವಿಷಯವಾಗಿದೆ.

ಕನ್ನಡ ಮಾಧ್ಯಮ ವಿದ್ಯಾ ಪ್ರೋತ್ಸಾಹ ಯೋಜನೆ: ಹೊಸದಾಗಿ ಸೇರ್ಪಡೆಯಾಗುವ 5, 6, 7, 8ನೇ ತರಗತಿ ಕನ್ನಡ ಮಾಧ್ಯಮದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 10,000 (ಹತ್ತು ಸಾವಿರ) ರೂಪಾಯಿಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ. ವಿದ್ಯಾರ್ಥಿಗಳು ಶಾಲೆಗೆ ದಾಖಲಾಗುವ ದಿನದಂದೇ ಪ್ರೋತ್ಸಾಹ ಧನದ ಪ್ರಮಾಣಪತ್ರ ನೀಡಲಾಗುತ್ತದೆ.

ಟಾಪ್ ನ್ಯೂಸ್

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

3

Bengaluru: ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

3

Bengaluru: ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.