ಸರ್ಕಾರಿ ಶಾಲೆ ಉಳಿಸಲು ನಟಿ ಆಸಕ್ತಿ

Team Udayavani, Aug 14, 2019, 3:03 AM IST

ಬೆಂಗಳೂರು: ಸರ್ಕಾರಿ ಶಾಲೆ ಉಳಿಸಿ ಆಂದೋಲನ ಆರಂಭಿಸುವ ಮೂಲಕ ನಟಿ ಸಂಯುಕ್ತ ಹೊರನಾಡ್‌ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಗಳ ಅವ್ಯವಸ್ಥೆ ನೋಡಿ ಪೋಷಕರು ಹಾಗೂ ಸರ್ಕಾರ ಶಾಲೆಗಳ ಸಮಸ್ಯೆಗೆ ಅಭಿವೃದ್ಧಿಯ ಬಣ್ಣ ಬಳಿಯಲು ಸರ್ಕಾರಿ ಶಾಲೆಗಳ ಉಳಿಸಿ ಎಂಬ ಘೋಷಣೆಯೊಂದಿಗೆ ನಟಿ ಸಂಯುಕ್ತ ಈ ಆಂದೋಲನ ಶುರು ಮಾಡಿದ್ದಾರೆ.

ಬೆಂಗಳೂರಿನ ಅಮೃತಹಳ್ಳಿಯ ಸರ್ಕಾರಿ ಶಾಲೆಗೆ ಈಗ ಹೊಸ ಮೆರಗು ಬಂದಿದೆ. ನಟಿ ಸಂಯುಕ್ತಾ ಹಾರ್ಮನಿ ಫೌಂಡೇಶನ್‌ ಜೊತೆ ಹಾಗು ತಮ್ಮ ಸ್ವಂತ ಖರ್ಚಿನಲ್ಲಿ ಗ್ರಂಥಾಲಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಜೊತೆಗೆ ಮತ್ತಷ್ಟು ಸ್ಯಾಂಡಲ್‌ ವುಡ್‌ ಸೆಲೆಬ್ರೆಟಿಗಳನ್ನ ಸರ್ಕಾರಿ ಶಾಲೆ ಉಳಿಸಿ ಆಂದೋಲದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.

ಸರ್ಕಾರಿ ಶಾಲೆಯ ಕಟ್ಟಡಕ್ಕೆ ಬಣ್ಣ ಬಳೆದ ನಟಿ ಮಕ್ಕಳ ಜೊತೆ ಆಟ ಆಡಿ ಸಂಭ್ರಮಿಸಿದರು. ಇನ್ನು ಸರ್ಕಾರಿ ಶಾಲೆ ಉಳಿಸಲು ಸೇವ್‌ ಗವರ್ನಮೆಂಟ್‌ ಎನ್‌ಜಿಒ ಮುಂದಾಗಿರುವ ಬಗ್ಗೆ ಶಾಲೆಯ ಪ್ರಿನ್ಸಿಪಲ್‌ ತಿಮ್ಮಪ್ಪ ಸಂತಸ ವ್ಯಕ್ತಪಡಿಸಿದರು. ಈಗಾಗಲೇ ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಈಗಾಗಲೇ 10 ಶಾಲೆಗಳ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡಿದೆ.

ಆಸಕ್ತಿ ಇದ್ದವರು www.savegovtschools.org ನೋಂದಾಯಿಸಿ. ಮಾಹಿತಿಗೆ 9886136894 ಸಂಪರ್ಕಿಸಿ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ