ಮದುವೆ ಮಾಡಿದ್ರೆ ನೂರೇ ಜನ ಸೇರಿಸಿ!


Team Udayavani, Mar 16, 2020, 3:06 AM IST

bbmp3

ಬೆಂಗಳೂರು: ಕೊರೊನಾ ಸೋಂಕು ಹರಡುವ ಆತಂಕ ಇರುವ ಹಿನ್ನೆಲೆಯಲ್ಲಿ ಮದುವೆಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಪಾಲಿಕೆ ಅಧಿಕಾರಿಗಳು ಸಡಿಲಗೊಳಿಸಿದ್ದಾರೆ. ಆದರೆ, ಮುಂದಿನ ಆದೇಶ ದವರೆಗೆ ಯಾವುದೇ ಹೊಸ ಬುಕ್ಕಿಂಗ್‌ ಮಾಡಿಕೊಳ್ಳದಂತೆ ಕಲ್ಯಾಣ ಮಂಟಪ ಮಾಲೀಕರಿಗೆ ಸೂಚನೆ ನೀಡಲಾಗಿದೆ.

ಮಾ.13ರಂದು ಆರೋಗ್ಯಇಲಾಖೆ ಹೊರಡಿಸಿದ ಆದೇಶದಲ್ಲಿ ಮದುವೆ ಸಮಾರಂಭಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಿತ್ತು. ಇದರಿಂದ ಈಗಾಗಲೇ ಕಲ್ಯಾಣಮಂಟಪ, ಪಾರ್ಟಿ ಹಾಲ್‌, ಹೋಟೆಲ್‌ ಸೇರಿ ಮದುವೆ ಸಮಾರಂಭಕ್ಕೆ ಬುಕ್ಕಿಂಗ್‌ ಮಾಡಿಕೊಡಿದ್ದವರಿಗೆ ಕಷ್ಟವಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಹೀಗಾಗಿ, ನಿಯಮ ಸಡಿಲಿಸಿರುವ ಪಾಲಿಕೆ ಮದುವೆ ಸಮಾರಂಭದಲ್ಲಿ 100ಕ್ಕಿಂತ ಹೆಚ್ಚಿನ ಜನ ಸೇರದಂತೆ ಮದುವೆ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನೀಡಿದೆ.

ಮದುವೆ ನಡೆಸುವವರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಯಾವುದೇ ಕಾರ ಣಕ್ಕೂ 100ಕ್ಕಿಂತ ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸಬೇಕು. ಕೆಮ್ಮು, ಶೀತ, ಜ್ವರ ಸೇರಿ ಕೊರೊನಾ ಸೋಂಕು ಲಕ್ಷಣ ಕಂಡು ಬಂದವರನ್ನು ಕೂಡಲೇ ವೈದ್ಯರ ಬಳಿ ಕಳುಹಿಸಬೇಕು ಎಂದು ಕಲ್ಯಾಣ ಮಂಟಪ ಹಾಗೂ ಪಾರ್ಟಿ ಹಾಲ್‌ಗ‌ಳಿಗೆ ಸೂಚಿಸಲಾಗಿದೆ.

ಇನ್ನು ಕಲ್ಯಾಣ ಮಂಟಪ, ಪಾರ್ಟಿ ಹಾಲ್‌ ಹಾಗೂ ಇತ್ಯಾದಿಗಳಲ್ಲಿ ಬಿಬಿಎಂ ಪಿಯ ಮುಂದಿನ ಆದೇಶದವರೆಗೆ ಮದುವೆ ಸಮಾರಂಭಗಳಿಗೆ ಹೊಸ ಬುಕ್ಕಿಂಗ್‌ ಮಾಡಿಕೊಳ್ಳುವಂತಿಲ್ಲ. ಆದೇಶ ಮೀರಿ ಬುಕ್ಕಿಂಗ್‌ ಮಾಡಿಕೊಂಡರೆ ಆಗುವ ಅನಾಹುತಗಳಿಗೆ ಕಲ್ಯಾಣ ಮಂಟಪದ ಮಾಲೀಕರೆ ಹೊಣೆಯಾಗಿರುತ್ತಾರೆ. ಈ ರೀತಿ ಪ್ರಕರಣಗಳು ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

ನಗರದಲ್ಲಿರುವ ಎಲ್ಲ ಕಲ್ಯಾಣ ಮಂಟಪ, ಪಾರ್ಟಿ ಹಾಲ್‌ಗ‌ಳಿಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸ್‌ ಇಲಾಖೆಯಿಂದ ನೋಟಿಸ್‌ ನೀಡುತ್ತಿದ್ದಾರೆ. ಜತೆಗೆ ಕೊರೊನಾ ಹರಡ ದಂತೆ ಸ್ವಚ್ಛತೆ, ಹೆಚ್ಚಿನ ಜನ ಸೇರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

ಮಾ.13 ರಂದು ಆರೋಗ್ಯ ಇಲಾಖೆ ಹೊರಡಿಸಿದ ಆದೇಶದಲ್ಲಿ ಮದುವೆ ಸಮಾರಂಭಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಬಿ.ಎಸ್‌.ಯಡಿ ಯೂರಪ್ಪ ಸುದ್ದಿಗೋಷ್ಠಿಯಲ್ಲಿ ಸರಳ ವಾಗಿ ಆಚರಣೆ ಮಾಡಿಕೊಳ್ಳುವಂತೆ ಮೌಖೀಕವಾಗಿ ತಿಳಿಸಿದರು. ಇದರಿಂದ ಗೊಂದಲ ವಾತಾವರಣ ಉಂಟಾಗಿತ್ತು.

ಆರೋಗ್ಯ ಇಲಾಖೆಯ ಆದೇಶದಂತೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರು ಮಾ.14ರ ಶನಿ ವಾರ ನಗರದ ವಿವಿಧ ಕಲ್ಯಾಣ ಮಂಟಪ, ಪಾರ್ಟಿ ಹಾಲ್‌ಗ‌ಳಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭ ನಿಲ್ಲಿಸಲು ಹೋಗಿದ್ದರು. ಈ ವೇಳೆ ಸಾರ್ವಜನಿಕರು ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ, ಬಿಬಿಎಂಪಿ ಭಾನುವಾರ ಸ್ಪಷ್ಟನೆ ನೀಡಿದೆ.

ಸಾರ್ವಜನಿಕರು ಸಹಕಾರ ನೀಡಬೇಕು: ಉಳಿದ ಎಲ್ಲ ಕಾರ್ಯಕ್ರಮ ಗಳನ್ನು ಮುಂದೂಡುವುದಕ್ಕೆ ನಗರದ ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಅದೇ ರೀತಿ ಮದುವೆ ಸಮಾರಂಭದ ವಿಚಾರದಲ್ಲೂ ಸಹಾಕರಿಸಬೇಕು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರವಿಕುಮಾರ್‌ ಸುರಪುರ ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

cm

ಗಾಂಧೀಜಿ ಆಶಯದಂತೆ ಜನರೇ ಕಾಂಗ್ರೆಸ್ ವಿಸರ್ಜನೆ ಮಾಡಲು ಸಿದ್ಧರಾಗಿದ್ದಾರೆ: ಸಿಎಂ

1rqr

ಪ್ರಧಾನಿ ಮೋದಿಯೇ ನನಗೆ ರಾಜೀನಾಮೆ ನೀಡುವುದು ಬೇಡ ಎಂದಿದ್ದರು: ಹೆಚ್ ಡಿಡಿ

1dfs

ಯಂಕ, ನಾಣಿ, ಶೀನ ಮನಬಂದಂತೆ ಮಾತನಾಡುತ್ತಾರೆ : ಯಡಿಯೂರಪ್ಪ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

siddu 2

ರಮೇಶ ಜಾರಕಿಹೊಳಿ ಈ ಬಾರಿ ಬಿಜೆಪಿ ಸೋಲಿಸಿದರೆ ಅಚ್ಚರಿಯಿಲ್ಲ: ಸಿದ್ದರಾಮಯ್ಯ

1-fdfd.

ದೂದ್ ಸಾಗರ್ ನಲ್ಲಿ ಕೋವಿಡ್ ಇದೆಯೆಂದು ಸುಳ್ಳು ಪ್ರಚಾರ; ಸ್ಪಷ್ಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nlin kumar

ಕಾಂಗ್ರೆಸ್‌ನಲ್ಲಿ ಶವಯಾತ್ರೆ ಶುರು -‌ ನಳಿನ್

trafic benglore

ಟ್ರಾಫಿಕ್‌ ಉಲ್ಲಂಘನೆಯಾದರೆ ತಕ್ಷಣ ಎಸ್‌ಎಂಎಸ್‌..!

crime news

ಪುತ್ರಿ ಪ್ರಿಯಕರನ ಕೊಲೆ ಆರೋಪಿ ಬಂಧನ

cyber crime

ಸಾಲದ ಕಂತು ಕಡಿಮೆ ಮಾಡುವ ನೆಪದಲ್ಲಿ ವಂಚನೆ

gawraw gupta

ದ.ಆಫ್ರಿಕಾದವರ ಮೇಲೆ ವಿಶೇಷ ನಿಗಾ..!

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

ಯಕ್ಷಗಾನ ಪದ್ಯದೊಂದಿಗೆ‌ ಕವಿಗಳ ಹೆಸರು ಉಳಿಯಬೇಕು : ಸ್ವರ್ಣವಲ್ಲೀ ಶ್ರೀ

ಯಕ್ಷಗಾನ ಪದ್ಯದೊಂದಿಗೆ‌ ಕವಿಗಳ ಹೆಸರು ಉಳಿಯಬೇಕು : ಸ್ವರ್ಣವಲ್ಲೀ ಶ್ರೀ

1-fs

ಮೂಡಿಗೆರೆ : ಹುಲಿ ದಾಳಿಗೆ ಮತ್ತೊಂದು ಹಸು ಬಲಿ

1aa

ತಿಪ್ಪೆ ಗುಂಡಿ‌‌ ಕಸದಲ್ಲೂ ಬಿಜೆಪಿ ದುಡ್ದು ಹೊಡೆಯುತ್ತಿದೆ: ಮಧು ಬಂಗಾರಪ್ಪ

1-d

ಸರಕಾರೀಕರಣದ ವಿರುದ್ದ ಹೋರಾಟ‌ ಮುಂದುವರಿಸಬೇಕು: ಸ್ವರ್ಣವಲ್ಲಿ ಶ್ರೀ

cm

ಗಾಂಧೀಜಿ ಆಶಯದಂತೆ ಜನರೇ ಕಾಂಗ್ರೆಸ್ ವಿಸರ್ಜನೆ ಮಾಡಲು ಸಿದ್ಧರಾಗಿದ್ದಾರೆ: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.