ಅಡಿಗಾಸ್‌ ಯಾತ್ರಾ ರಜತ ಮಹೋತ್ಸವ ಸಮಾರಂಭ


Team Udayavani, Jan 3, 2019, 12:30 AM IST

adigas-yatra.jpg

ಬೆಂಗಳೂರು: ರಾಜ್ಯದ ಪ್ರಸಿದ್ಧ ಪ್ರವಾಸಿ ಸಂಸ್ಥೆಗಳಲ್ಲೊಂದಾಗಿರುವ ವಂದೇ ಮಾತರಂ ಟ್ರಾವೆಲ್ಸ್‌ ಹಾಗೂ ಅಡಿಗಾಸ್‌ ಯಾತ್ರಾ ಇತ್ತೀಚೆಗೆ ರಜತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದೆ.

1994ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ತನ್ನ ಧ್ಯೇಯೋದ್ದೇಶ ಹಾಗೂ ಸ್ಥಾಪಕ ಕೆ. ನಾಗರಾಜ ಅಡಿಗರ ಸತತ ಪರಿಶ್ರಮ ಮತ್ತು ನೈಪುಣ್ಯದಿಂದ 24 ವರ್ಷಗಳನ್ನು ಪೂರೈಸಿದೆ. 

ರಜತೋತ್ಸವ ಕಾರ್ಯಕ್ರಮವು ಬೆಂಗಳೂರಿನ ಬಸವನಗುಡಿಯಲ್ಲಿರುವ ದ್ವಾರಕಾನಾಥ ಭವನದಲ್ಲಿ ಗಣ್ಯ ಅತಿಥಿಗಳು, ಪತ್ರಕರ್ತರು ಹಾಗೂ ಸಹಸ್ರಾರು ಪ್ರವಾಸಿಗರ ಉಪಸ್ಥಿತಿಯಲ್ಲಿ ನೆರವೇರಿತು. ಬಸವನಗುಡಿ ಪೊಲೀಸ್‌ ಸಬ್‌ ಇನ್ಸ್‌ಸ್ಪೆಕ್ಟರ್‌ ರೇಶ್ಮಾ, ಭೂ ವಿಜ್ಞಾನ ಸಂಸ್ಥೆಯ ಮಾಜಿ ಅಧಿಕಾರಿ ಹಾಗೂ ಲೇಖಕ ಇ.ಡಿ. ನರಹರಿ, ವಾಗ್ಮಿ ಕೋಟೇಶ್ವರ ಸೂರ್ಯನಾರಾಯಣ ರಾವ್‌, ಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಕೆ. ನಾಗರಾಜ ಅಡಿಗ ಹಾಗೂ ಸಂಸ್ಥೆಯ ಮುಖ್ಯಕಾರ್ಯ ನಿರ್ವಾಹಕಿ ಆಶಾ ಎನ್‌. ಅಡಿಗ ಅವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಚಾಲನೆಯನ್ನು ನೀಡಲಾಯಿತು. ಇನ್ಸ್‌ಸ್ಪೆಕ್ಟರ್‌ ರೇಶ್ಮಾ ರಜತ ಮಹೋತ್ಸವದ ಕೈಪಿಡಿ ಬಿಡುಗಡೆಗೊಳಿಸಿದರು.

ಇ.ಡಿ. ನರಹರಿ ಅವರು ಅಡಿಗಾಸ್‌ ಯಾತ್ರಾ ಉತ್ತಮ ಪ್ರವಾಸಗಳನ್ನು ಆಯೋಜಿಸುವುದರ ಮೂಲಕ ಪ್ರವಾಸೋದ್ಯಮಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ. 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಶ್ಲಾಘನೀಯ ಎಂದರು. ಸೂರ್ಯನಾರಾಯಣ ರಾವ್‌ ಅವರು ತಮ್ಮ ಪ್ರವಾಸದ ಅನುಭವಗಳೊಂದಿಗೆ ಅಡಿಗಾಸ್‌ ಯಾತ್ರಾದ ವೈಶಿಷ್ಟ್ಯಗಳನ್ನು ವಿವರಿಸಿದರು. ಪ್ರತಿಕೂಲ ಹವಾಮಾನಗಳಲ್ಲೂ ಅಪರಿಚಿತ ತಾಣಗಳಲ್ಲೂ ಸಂಸ್ಥೆಯ ಸಿಬ್ಬಂದಿ ಪ್ರವಾಸಿಗರ ಬಗ್ಗೆ ವಹಿಸುವ ಕಾಳಜಿ ಸ್ತುತ್ಯರ್ಹ. ಸಂಸ್ಥೆಯ ಸೇವೆಗಳು ಉತ್ತಮ ಗುಣಮಟ್ಟದಿಂದ ಕೂಡಿದೆ. ಅಡಿಗಾಸ್‌ ಯಾತ್ರಾ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುವಂತಾಗಲಿ ಎಂದು ಹರಸಿದರು.

ರಿಯಾಯತಿ ದರದ ಕೊಡುಗೆ:  ಸ್ಥಾಪಕ ಕೆ. ನಾಗರಾಜ ಅಡಿಗರು ಸ್ವಾಗತಿಸಿ, ರಜತ ಮಹೋತ್ಸವ ಅಂಗವಾಗಿ ಈ ವರ್ಷದ ಪ್ರವಾಸದ ವೈಶಿಷ್ಟ್ಯಗಳಾದ ಕಡಿಮೆ ದಿನಗಳಲ್ಲಿ ದೂರದ ಈಶಾನ್ಯ ರಾಜ್ಯಗಳಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

ಅಮರನಾಥ, ಕೇದಾರನಾಥ ಹಾಗೂ ಕೈಲಾಸ ಮಾನಸ ಸರೋವರಕ್ಕೆ ಹೆಲಿಕಾಪ್ಟರ್‌ ಮೂಲಕ ಯಾತ್ರೆ ಆಯೋಜಿಸಲಾಗಿದೆ. 4-5 ದಿನಗಳಿಂದ 8-10 ದಿನಗಳಲ್ಲಿ ಸಂದರ್ಶಿಸುವಂತೆ ವಿಶೇಷವಾಗಿ ದುಬೈ, ಬಾಲಿ, ಮಾಲ್ಡೀವ್ಸ್‌, ಶ್ರೀಲಂಕಾ, ಥೈಲ್ಯಾಂಡ್‌, ಸಿಂಗಾಪುರ, ಮಲೇಷ್ಯಾ, ಲಢಾಖ್‌, ನೇಪಾಳ, ಭೂತಾನ್‌, ಹಾಂಕಾಂಗ್‌ ಮಕಾವ್‌, ಇಂಡೋನೇಷ್ಯಾ, ಅಂಡಮಾನ್‌, ಕಾಶ್ಮೀರ, ಹಿಮಾಚಲ ಪ್ರದೇಶ, ಮೇಘಾಲಯ, ಉತ್ತರಾಂಚಲ ಪ್ರವಾಸಗಳನ್ನು ರೂಪಿಸಲಾಗಿದೆ. ಈ ಬಾರಿ Believe in the best- 24 years of Trustಗೆ ಬದ್ಧರಾಗಿದ್ದೇವೆ ಎಂದರು. ರಜತ ಮಹೋತ್ಸವದ ಪ್ರಯುಕ್ತ ಕೈಲಾಸ ಮಾನಸ ಸರೋವರ ಯಾತ್ರಿಗಳಿಗೆ ಈ ಬಾರಿ ವಿಶೇಷವಾಗಿ 20,000 ರೂ.ಗಳ ರಿಯಾಯಿತಿಯನ್ನು ಘೋಷಿಸಿದರು.

ಒಮ್ಮೆಲೆ ಒಂದು ಪ್ರವಾಸ ಕಾದಿರಿಸಿದವರಿಗೆ ಶೇ. 5, 2 ಪ್ರವಾಸ ಕಾದಿರಿಸಿದವರಿಗೆ ಶೇ.15 ಹಾಗೂ 3 ಪ್ರವಾಸ ಕಾದಿರಿಸಿದವರಿಗೆ ಶೇ. 25ರ ವರೆಗೆ ರಿಯಾಯಿತಿಯನ್ನು ಸೀಮಿತ ಅವಧಿಯ ವರೆಗೆ, ಪ್ರವಾಸಿ ಕೈಪಿಡಿಯಲ್ಲಿನ ಎಲ್ಲ ಪ್ರವಾಸಗಳಿಗೂ ನೀಡಲಾಗಿದೆ. ಈ ಸೌಲಭ್ಯದಲ್ಲಿ 2019ರಾದ್ಯಂತ ಪ್ರವಾಸ ಕೈಗೊಳ್ಳ ಬಹುದಾಗಿದೆ. ಆಶಾ ಎನ್‌. ಅಡಿಗ ಧನ್ಯವಾದ ಸಮರ್ಪಿಸಿದರು.

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.