ಅಕ್ಷಯ ತೃತೀಯಕ್ಕೆ ಗ್ರಾಹಕರಿಗೆ ಭರ್ಜರಿ ಆಫ‌ರ್‌

Team Udayavani, May 6, 2019, 3:06 AM IST

akshaya-tr

ಬೆಂಗಳೂರು: ಅಕ್ಷಯ ತೃತೀಯ ಸ್ವಾಗತಕ್ಕೆ ರಾಜಧಾನಿಯ ಚಿನ್ನದ ಮಳಿಗೆಗಳು ಸಜ್ಜಾಗಿದ್ದು, ವಿವಿಧ ರಿಯಾಯಿತಿ ಹಾಗೂ ಕೊಡುಗೆಗಳನ್ನು ಘೋಷಿಸಿದ್ದು, ಮತ್ತೂಂದೆಡೆ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸುವ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಲ್ಲಿ ಚಿನ್ನ ಖರೀದಿಸಲು ಗ್ರಾಹಕರು ಯೋಜನೆ ರೂಪಿಸಿದ್ದಾರೆ.

ಹಿಂದೂ ಸಂಪ್ರದಾಯದ ಪ್ರಕಾರ ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಶುಭವೆಂಬ ನಂಬಿಕೆಯಿದೆ. ಅದರಂತೆಯೇ ವರ್ಷವಿಡಿ ಈ ದಿನಕ್ಕಾಗಿ ಕೆಲವರು ಕಾದು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವುದು ವಾಡಿಕೆ. ಜತೆಗೆ ಅಕ್ಷಯ ತೃತೀಯ ದಿನದಂದು ರಿಯಾಯಿತಿ ಹಾಗೂ ಹಲವು ಕೊಡುಗೆಗಳಿರುತ್ತವೆ ಹೀಗಾಗಿ ಗ್ರಾಹಕರು ಚಿನ್ನ ಖರೀದಿಗೆ ಮುಂದಾಗಿದ್ದಾರೆ.

ಅಕ್ಷಯ ತೃತೀಯವು ಮಂಗಳವಾರ ಬೆಳಗ್ಗೆ 3.17ಕ್ಕೆ ಆರಂಭವಾಗಿ ಬುಧವಾರ ಮಧ್ಯಾಹ್ನ 2.17ಕ್ಕೆ ಮುಕ್ತಾಯಗೊಳ್ಳಲಿದ್ದು, ಈ ಎರಡೂ ದಿನವೂ ಜನ ಚಿನ್ನ ಖರೀದಿ ಮಾಡಲಿದ್ದಾರೆ. ಅಕ್ಷಯ ತೃತೀಯಕ್ಕೆ ಪೂರಕವೆಂಬಂತೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಇಳಿಕೆಯಾಗಿರುವ ಗ್ರಾಹಕರ ಸಂತಸವನ್ನು ಇಮ್ಮಡಿಗೊಳಿಸಿದೆ.

ಸಿದ್ಧಗೊಂಡ ಆಭರಣ ಅಂಗಡಿಗಳು: ನಗರದ ಕೆಲವು ಆಭರಣ ಮಳಿಗೆಗಳಲ್ಲಿ ಅಕ್ಷಯ ತೃತೀಯ ವಿಶೇಷ ಮಾರಾಟ ಯೋಜನೆ ಆರಂಭಿಸಲಾಗಿದೆ. ಮಲಬಾರ್‌, ತನಿಷ್ಕ್, ಭೀಮಾ, ಕಲ್ಯಾಣ, ಸಾಯಿ ಗೋಲ್ಡ್‌ ಪ್ಯಾಲೆಸ್‌, ಸುಲ್ತಾನ್‌ ಸೇರಿದಂತೆ ಪ್ರಮುಖ ಮಳಿಗೆಗಳಲ್ಲಿ ಚಿನ್ನಾಭರಣ ಖರೀದಿಗೆ ಆಗಮಿಸುವ ಗ್ರಾಹಕರಿಗೆ ಹಲವು ರೀತಿಯ ರಿಯಾಯಿತಿ, ಉಡುಗೊರೆ ನೀಡಲಾಗುತ್ತಿದೆ.

ಇದರೊಂದಿಗೆ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಮಳಿಗೆಗಳನ್ನು ವಿಶೇಷವಾಗಿ ಅಲಂಕಾರಿಸಲಾಗಿದೆ. ಭದ್ರತೆಯನ್ನೂ ಒದಗಿಸಲಾಗಿದೆ.

ಒಂದು ಗ್ರಾಂ ನಾಣ್ಯ: ಅಕ್ಷಯ ತೃತೀಯ ದಿನದಂದು ಪ್ರತಿಯೊಬ್ಬರು ಚಿನ್ನ ಖರೀದಿಸಬೇಕೆಂಬ ಉದ್ದೇಶದಿಂದ ನಗರದ ಬಹುತೇಕ ಚಿನ್ನದ ಮಳಿಗೆಗಳಲ್ಲಿ 1 ಗ್ರಾಂ ಚಿನ್ನದ ನಾಣ್ಯಗಳನ್ನು ತಯಾರಿಸಿ ಇಡಲಾಗಿದೆ. ಈ ನಾಣ್ಯಕ್ಕೆ ಗ್ರಾಹಕರಿಂದ ಯಾವುದೇ ರೀತಿಯ ತಯಾರಿಕಾ ವೆಚ್ಚ ಪಡೆಯದೆ ಮೂಲ ಬೆಲೆಗೆ ನೀಡುವ ಕೊಡುಗೆಯನ್ನು ಘೋಷಿಸಲಾಗಿದೆ.

ರಾಜಕೀಯ ನಾಯಕರ ಚಿನ್ನದ ಭಾವಚಿತ್ರಗಳಿಗೆ ಭಾರಿ ಬೇಡಿಕೆ!: ಅಕ್ಷಯ ತೃತೀಯ (ಮೇ 7)ದ ಚಿನ್ನ ಖರೀದಿಯಲ್ಲಿ ರಾಜಕೀಯ ನಾಯಕರ ಭಾವಚಿತ್ರವುಳ್ಳ ಒಡವೆಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ತಮಿಳುನಾಡಿನ ರಾಜಕೀಯ ಬೆಂಬಲಿಗರ ಪ್ರವೃತ್ತಿ ಕರ್ನಾಟಕ್ಕೂ ಕಾಲಿಟ್ಟಿದ್ದೂ, ನೆಚ್ಚಿನ ಪಕ್ಷಗಳ ಚಿಹ್ನೆ ಮತ್ತು ನಾಯಕರ ಚಿತ್ರವುಳ್ಳ ಒಡವೆಗಳಿಗೆ ಬೆಂಬಲಿಗರು ಮತ್ತು ಕಾರ್ಯಕರ್ತರು ಬೇಡಿಕೆ ಸಲ್ಲಿಸಿದ್ದಾರೆ.

ಹಲವು ಮಂದಿ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ದುಪ್ಪಟ್ಟಾಗುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ರಾಜಕೀಯ ಪಕ್ಷಗಳ ಚಿಹ್ನೆಯ ಆಭರಣ ಧರಿಸುವುದರಿಂದ ನಾಯಕರಿಗೆ ಮತ್ತು ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂಬಂತೆ ಅಕ್ಷಯ ತೃತೀಯ ನಂಬಿಕೆಯ ಸ್ವರೂಪ ಬದಲಾಗಿದೆ. ಆ ದಿನ ಅಂತಹ ಒಡವೆ ಧರಿಸಿದರೆ ತಮಗು ಕೂಡ ಉನ್ನತ ಸ್ಥಾನಮಾನಗಳು ಧಕ್ಕುತ್ತವೆ ಎಂಬ ನಂಬಿಕೆ ಕಾರ್ಯಕರ್ತರಲ್ಲಿ ಮತ್ತು ಬೆಂಬಲಿಗರಲ್ಲಿ ಮೂಡಿದೆ.

ಬಿಜೆಪಿ ಬೆಂಬಲಿಗರು ತಾವರೆ, ಮೋದಿ ಹಾಗೂ ಯಡಿಯೂರಪ್ಪ ಮುಖದ ನಮೂನೆ ಅಥವಾ ಭಾವಚಿತ್ರವುಳ್ಳ ಡಾಲರ್‌ ಮತ್ತು ಉಂಗುರಗಳಿಗೆ ಹಾಗೂ ಕಾಂಗ್ರೆಸ್‌ನ ಕಾರ್ಯಕರ್ತರು ಇಂದಿರಾಗಾಂಧಿ ಮತ್ತು ಸೋನಿಯಾಗಾಂಧಿ ಮುಖಚಿತ್ರ ಹೊಂದಿರುವ ಒಡವೆಗಳಿಗೆ ಬೇಡಿಕೆಯನ್ನಿಟ್ಟಿದ್ದಾರೆ.

ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅವರು ಕೂಡ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾವಚಿತ್ರವುಳ್ಳ ಆಭರಣಗಳನ್ನು ಮಾಡಿಕೊಡುವಂತೆ ತಿಳಿಸಿದ್ದಾರೆ. ಇದರೊಂದಿಗೆ ಸ್ಥಳೀಯ ನಾಯಕರ ಮುಖಚಿತ್ರವಿರುವ ಒಡವೆಗಳಿಗೂ ಆಯಾ ಭಾಗದಲ್ಲಿರುವ ಚಿನ್ನದ ಅಂಗಡಿಗಳಿಗೆ ಬೇಡಿಕೆ ಬಂದಿದೆ.

ಮೋದಿ ಮತ್ತು ಸೋನಿಯಾಗಾಂಧಿ ಭಾವಚಿತ್ರದ ಆಭರಣಗಳಿಗೆ ಸಾರ್ವಜನಿಕರಿಂದಲೂ ಬೇಡಿಕೆ ಉಂಟಾಗಿದೆ. ಅದರಲ್ಲೂ ಮುಖ್ಯವಾಗಿ ಅನಿವಾಸಿ ಭಾರತೀಯರಿಂದ ಮೋದಿ ಭಾವಚಿತ್ರವಿರುವ ಡಾಲರ್‌, ಪೆಂಡೆಂಟ್‌, ಬ್ರೈಸ್‌ಲೈಟ್‌ ಮತ್ತು ಉಂಗುರುಗಳಿಗೆ ಹೆಚ್ಚಿನ ಆರ್ಡರ್‌ ಬರುತ್ತಿದೆ.

ಅಲ್ಲದೆ ಬೆಳ್ಳಿ ಆಭರಣಗಳಿಗೆ ಸೂಕ್ತವಾಗುವ ವಿನ್ಯಾಸದಲ್ಲಿ ಮೋದಿ ಡಾಲರ್‌ ಮಾಡಿಕೊಂಡುವಂತೆ ಅನಿವಾಸಿ ಭಾರತೀಯರು ಚಿನ್ನದ ವ್ಯಾಪಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಬಿ. ರಾಮಾಚಾರಿ.
ಅಕ್ಷಯ ತೃತೀಯಕ್ಕೆ ಅಭಿಮಾನಿಗಳ ಪ್ರವರ ಇದಾದರೆ, ಆಭರಣ ಮಾರಾಟಗಾರರು ನಾವೇನು ಕಮ್ಮಿಯಿಲ್ಲ ಎಂಬಂತೆ ಗ್ರಾಹಕರಿಂದ ಬರುವ ಬೇಡಿಕೆಗೂ ಮುನ್ನವೇ ಮೋದಿ, ಕಮಲದ ಚಿಹ್ನೆ, ಹಸ್ತದ ಚಿಹ್ನೆಯುಳ್ಳ ಆಭರಣಗಳ ಪ್ರತಿಕೃತಿಗಳನ್ನು ಮಾಡಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.

ಅಕ್ಷಯ ತೃತೀಯ ಈ ಬಾರಿ ನಗರದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜತೆಗೆ ಚಿನ್ನದ ಬೆಲೆಯೂ ಕಡಿಮೆಯಾಗಿರುವುದು ಸಹ ಇದಕ್ಕೆ ಕಾರಣವಾಗಿದೆ. ಅದರಂತೆ ಮಂಗಳವಾರ ಬೆಳಗ್ಗೆ 7 ರಿಂದಲೇ ಮಳಿಗೆ ಆರಂಭವಾಗಲಿದ್ದು, ರಾತ್ರಿ 10.30ರವರೆಗೆ ತೆರೆದಿರಲಿದೆ. ಬಡವರು ಅಕ್ಷಯ ತೃತೀಯ ಆಚರಿಸಬೇಕೆಂಬ ಉದ್ದೇಶದಿಂದ 1 ಚಿನ್ನದ ನಾಣ್ಯ ಹಾಗೂ 5 ಗ್ರಾಂ ಬೆಳ್ಳಿ ನಾಣ್ಯಗಳನ್ನು ಮಾರಾಟ ಮಾಡಲಾಗುತ್ತಿದೆ.
-ಟಿ.ಎ. ಶರವಣ. ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ ಮಾಲೀಕ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.