ಅಂಬೇಡ್ಕರ್ ಒಂದುವಿಶ್ವಕೋಶ: ಶಿವಣ್ಣ
Team Udayavani, Jul 31, 2018, 11:27 AM IST
ಕೆಂಗೇರಿ: ಅಂಬೇಡ್ಕರ್ ಒಂದು ವಿಶ್ವಕೋಶ. ಅವರ ಬದುಕು, ಬರಹಗಳ ಅಧ್ಯಯನ ಭಾರತದ ಸಾಮಾಜಿಕ ಹಾಗೂ ಆರ್ಥಿಕ ಇತಿಹಾಸದ ಸಮಗ್ರ ಚಿತ್ರಣವಿದ್ದಂತೆ ಎಂದು ಸಿಂಡಿಕೇಟ್ ಸದಸ್ಯ ಶಿವಣ್ಣ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಯುವ ಜನತೆಯಲ್ಲಿ ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಗೊಂದಲವಿದೆ. ಇದನ್ನು ನಿವಾರಿಸಲು ಸಂವಿಧಾನ ಶಿಲ್ಪಿ ಕುರಿತು ಯುವಪೀಳಿಗೆಗೆ ಸರಿಯಾದ ಮಾಹಿತಿ ನೀಡುವುದು ನಮ್ಮ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಆರ್. ಶ್ರೀನಿವಾಸ್, ಪ್ರಭಾರ ನಿರ್ದೇಶಕ ಕಾರ್ತಿಕೇಯನ್, ವಿತ್ತಾಧಿಕಾರಿ ಡಾ.ಎ.ಲೋಕೇಶ್, ಸಿಂಡಿಕೆಟ್ ಸದಸ್ಯ ವಸಂತಕುಮಾರ್, ಸಂಪನ್ಮೂಲ ವ್ಯಕ್ತಿ ಶಿವಸುಂದರ್ ಇತರರು ಇದ್ದರು.