ಪ್ರಾಣಿಗಳಿಗೆ ಸಕಾಲದಲ್ಲಿ ಸಿಗುತ್ತಿಲ್ಲ ಔಷಧ?

ಇಂದು ರಾಷ್ಟ್ರೀಯ ವಿಶ್ವ ಸಾಕುಪ್ರಾಣಿ ದಿನ

Team Udayavani, Apr 11, 2020, 12:49 PM IST

BNG-TDY-6

ಬೆಂಗಳೂರು: ಲಾಕ್‌ಡೌನ್‌ನಿಂದ ಅಗತ್ಯಸೇವೆಗಳಡಿ ಮನುಷ್ಯರಿಗೆ ಸಕಾಲದಲ್ಲಿ ಚಿಕಿತ್ಸೆ ಮತ್ತು ಔಷಧ ವಿತರಣೆ ಆಗುತ್ತಿದೆ. ಆದರೆ ಈ ವಿಚಾರದಲ್ಲಿ ಪ್ರಾಣಿಗಳು ನಿರ್ಲಕ್ಷ್ಯಕ್ಕೊಳಗಾಗಿದ್ದು, ನಗರದ ಹೊರವಲಯದಲ್ಲಿರುವ ಪ್ರಾಣಿಗಳಿಗೆ ಇದರ ಬಿಸಿ ತುಸು ಜೋರಾಗಿ ತಟ್ಟಿದೆ.

ಅನಾರೋಗ್ಯದಿಂದ ಬಳಲುತ್ತಿರುವ ಎಮು ಕೋಳಿ, ಪಾರಿವಾಳ, ಆಮೆ, ಕುರಿ, ನಾಯಿ, ಬೆಕ್ಕುಗಳು ಸೇರಿದಂತೆ ನಾನಾ ಸಾಕು ಪ್ರಾಣಿಗಳಿಗೆ ಚಿಕಿತ್ಸೆಗಾಗಿ ನಿತ್ಯ ಹೆಬ್ಟಾಳದ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಹತ್ತಾರು ಕರೆಗಳು ಬರುತ್ತಿವೆ. ಕೆಲವರು ವೀಡಿಯೊ ಅಥವಾ ಫೋಟೋಗಳನ್ನು ಪಶುವೈದ್ಯರಿಗೆ ಕಳುಹಿಸಿ, ಚಿಕಿತೆಗೆ ಮೊರೆ ಇಡುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಫೋನ್‌ ಮೂಲಕವೇ ವೈದ್ಯರು ಸಲಹೆಗಳನ್ನೂ ನೀಡುತ್ತಿದ್ದಾರೆ.

ಆದರೆ, ಆ ಔಷಧಗಳ ಖರೀದಿಯೇ ಸವಾಲಾಗಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ, ಪೊಲೀಸರು ತರಾಟೆಗೆ ತೆಗೆದುಕೊಳ್ಳುತ್ತಾರೆ. ಪ್ರಾಣಿಗಳಿಗೆ ಔಷಧಿ ಖರೀದಿ ಅವಶ್ಯಕತೆ ಇದೆ ಎಂದು ಹೇಳಿದರೂ ಕೇಳುವುದಿಲ್ಲ. ಪಾಸಿಗಾಗಿ ಆನ್‌ಲೈನ್‌ನಲ್ಲಿ ಮನವಿ ಮಾಡಿದರೆ, “ಎಮರ್ಜನ್ಸಿ ಕೇಸು ಅಲ್ಲ’ ಎಂಬ ಉತ್ತರ ಬರುತ್ತದೆ ಎಂದು ಸಾಕುಪ್ರಾಣಿ ಪ್ರಿಯರು ದೂರುತ್ತಾರೆ. ಆನ್‌ಲೈನ್‌ ಮೂಲಕ ಬುಕಿಂಗ್‌ ಮಾಡಬೇಕೆಂದರೆ, ಕನಕಪುರ, ಹೊಸಕೋಟೆ, ಆನೇಕಲ್‌, ಜಿಗಣಿಯಂತಹ ಪ್ರದೇಶಗಳಿಗೆ ಡೆಲಿವರಿ ಬಾಯ್‌ಗಳು ಬರುವುದಿಲ್ಲ. ಇದು ತಲೆನೋವಾಗಿ ಪರಿಣಮಿಸಿದೆ. ಆಮೆಯಿಂದ ಆನೆವರೆಗೂ 5 ಗ್ರಾಂನಿಂದ 5 ಟನ್‌ವರೆಗಿನ ಪ್ರಾಣಿಗಳಿಗೆ ನಾನಾ ಭಾಗಗಳಿಂದ ಕರೆಗಳು ಬರುತ್ತಿವೆ. ಪ್ರಾಣಿಗಳ ಔಷಧ ಅಂಗಡಿಗಳು ತೆರೆದಿವೆ. ಪಶುವೈದ್ಯರ ಸಲಹೆಗಳೂ ದೊರೆಯುತ್ತಿವೆ. ಆದರೆ, ಔಷಧ ಖರೀದಿಗೆ ಸಂಪರ್ಕ ಕೊಂಡಿ ಇಲ್ಲವಾಗಿದೆ.

ನಗರದಲ್ಲಿ ಕೆಲ ವೃದ್ಧ ದಂಪತಿಗಳು ನಾಯಿ ಅಥವಾ ಬೆಕ್ಕು ಸಾಕಿದ್ದಾರೆ. ಅವುಗಳ ಆರೋಗ್ಯದಲ್ಲಿ ಏರುಪೇರಾದಾಗ ಕರೆ ಮಾಡಿ, ಸಲಹೆ ಪಡೆಯುತ್ತಾರೆ. ಔಷಧಗಳನ್ನು ಸೂಚಿಸಿದಾಗ, ಮಾರುಕಟ್ಟೆಯಿಂದ ತರಲು ಎದುರಾಗುತ್ತಿರುವ ಸಮಸ್ಯೆ ಮುಂದಿಡುತ್ತಾರೆ ಎಂದು ಹೆಬ್ಟಾಳದ ಕರ್ನಾಟಕ ಪಶುವೈದ್ಯಕೀಯ, ಹೈನು ಮತ್ತು ಮೀನುಗಾರಿಕೆಗಳ ವಿಜ್ಞಾನಗಳ ಮಹಾವಿದ್ಯಾಲಯದ ಸಹಾಯ ಪ್ರಾಧ್ಯಾಪಕ ಹಾಗೂ ವನ್ಯಜೀವಿ ತಜ್ಞ ಡಾ.ಎಚ್‌.ಎಸ್‌. ಪ್ರಯಾಗ್‌ ತಿಳಿಸಿದರು.

ವಿದೇಶಗಳಲ್ಲಿ ಪ್ರಾಣಿಗಳ ಮೇಲೂ ಕೋವಿಡ್ 19 ವೈರಸ್‌ ದಾಳಿ ಮಾಡಿದ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪ್ರಾಣಿ ಪ್ರಿಯರು ಮತ್ತಷ್ಟು ಸೂಕ್ಷ್ಮವಾಗಿ ಸಾಕುಪ್ರಾಣಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ. ಸ್ವಲ್ಪ ವ್ಯತ್ಯಾಸ ಕಂಡುಬಂದರೂ ಸಾಕು, ಕರೆ ಮಾಡಿ ಸಲಹೆ ಪಡೆಯುತ್ತಾರೆ. ಡೆಂಝೋ, ಸ್ವಿಗ್ಗಿ ಸೇರಿದಂತೆ ಹಲವು ಕಂಪನಿಗಳಿಂದ ಬುಕಿಂಗ್‌ ಮಾಡಿ, ಔಷಧ ತರಿಸಿಕೊಳ್ಳಲು ಅವಕಾಶ ಇದೆ. ಆದರೆ, ಹೊರವಲಯದಲ್ಲಿರುವವರಿಗೆ ಆ್ಯಪ್‌ ಇರುವುದು ಗೊತ್ತಿಲ್ಲ. ಇದ್ದರೂ ಅಲ್ಲಿಯವರೆಗೆ ಬರಲು ಕೆಲವರು ಹಿಂದೇಟು ಹಾಕುತ್ತಾರೆ ಎಂದೂ ಹೇಳುತ್ತಿರುವುದು ಕಂಡುಬಂದಿದೆ ಎಂದು ಡಾ.ಪ್ರಯಾಗ್‌ ಹೇಳಿದರು.

ಮುಂಜಾಗ್ರತೆ ಮುಖ್ಯ :  ಕರ್ನಾಟಕ ಸೇರಿದಂತೆ ದೇಶದ ಯಾವುದೇ ಯಾವುದೇ ಭಾಗದಲ್ಲಿ ಜಾನುವಾರಿಗೆ ಕೋವಿಡ್ 19 ವೈರಸ್‌ ಸೋಂಕು ಬಂದಿರುವ ಬಗ್ಗೆ ದೂರು ದಾಖಲಾಗಿಲ್ಲ. ಈ ವೈರಸ್‌ ಸೋಂಕಿತ ವ್ಯಕ್ತಿ ಪ್ರಾಣಿಯನ್ನು ಉಪಚರಿಸಿದಾಗ ಬರುವ ಸಾಧ್ಯತೆ ಇದೆಯೇ ಹೊರತು, ಬೇರೆ ಕಾರಣಗಳಿಗೆ ಸಾಕು ಪ್ರಾಣಿಗಳಲ್ಲಿ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಜನರು ಅಗತ್ಯ ಮುಂಜಾಗೃತೆ ವಹಿಸಿದರೆ ಸಾಕು, ಭಯಪಡುವ ಅಗತ್ಯವಿಲ್ಲ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ನಿರ್ದೇಶಕ ಡಾ.ಮಂಜುನಾಥ್‌ ಎಂ.ಟಿ. ಮಾಹಿತಿ ನೀಡಿದರು.

ಟಾಪ್ ನ್ಯೂಸ್

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGML ಜಮೀನು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸಚಿವ ‌ನಿರಾಣಿ ಸೂಚನೆ

BGML ಜಮೀನು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸಚಿವ ‌ನಿರಾಣಿ ಸೂಚನೆ

ಬಿಡಿಎಗೆ 15 ಸಾವಿರ ಕೋಟಿ ಸಂಗ್ರಹದ ಗುರಿ: ವಿಶ್ವನಾಥ್

ಬಿಡಿಎಗೆ 15 ಸಾವಿರ ಕೋಟಿ ಸಂಗ್ರಹದ ಗುರಿ: ವಿಶ್ವನಾಥ್

highcourt of karnataka

ಜೂಜಾಟ ಆರೋಪ: ಪ್ರಕರಣ ರದ್ದು

finance minister

5 ಲಕ್ಷದವರೆಗಿನ ಠೇವಣಿ ವಿಮೆ ಮರುಪಾವತಿ

education meet

ಅಸ್ಸಾಂ ಸಿಎಂ ಭೇಟಿಯಾದ ಅಶ್ವತ್ಥ ನಾರಾಯಣ

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.