Udayavni Special

ನಗರದಿಂದ ಮತ್ತೂಂದು ಮಹಾವಲಸೆ

ಲಾಕ್‌ಡೌನ್‌ನಿಂದ ಊರುಗಳಿಗೆ ತೆರಳಲು ಜನ ನಿರ್ಧಾರ

Team Udayavani, Jul 14, 2020, 9:53 AM IST

BNG-TDY-1

ಬೆಂಗಳೂರು: ಸೋಂಕು ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ಅಲ್ಪಾವಧಿಯ ಲಾಕ್‌ಡೌನ್‌ ಸೋಂಕು ವಿಸ್ತರಣೆಗೆ ರಹದಾರಿ ಆಗಲಿದೆಯೇ? – ಲಾಕ್‌ಡೌನ್‌ ಘೋಷಣೆ ಬೆನ್ನಲ್ಲೇ ರಾಜಧಾನಿಯಲ್ಲಿ ಶುರುವಾದ ಮತ್ತೂಂದು ಸುತ್ತಿನ ಮಹಾವಲಸೆ ಈ ಆತಂಕ ಸೃಷ್ಟಿಸಿದೆ.

ಸಾವಿರಾರು ಸಂಖ್ಯೆಯಲ್ಲಿ ಜನ ನಗರ ತೊರೆದು ಸ್ವಂತ ಊರುಗಳತ್ತ ಮುಖಮಾಡುತ್ತಿದ್ದಾರೆ. ಸರ್ಕಾರ ಕೂಡ ಹೋಗುವವರು ಹೋಗಬಹುದು ಎಂದು ಹೇಳುವುದರ ಜತೆಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕೂಡ ಕಲ್ಪಿಸಿದೆ. ಆದರೆ ಹೀಗೆ ವಾಪಸ್‌ ಹೊರಟವರಲ್ಲಿ ಯಾರಿಗಾದರೂ ಸೋಂಕು ತಗುಲಿದ್ದರೆ, ಅಕ್ಷರಶಃ ಅವರು “ಕೋವಿಡ್ ಕ್ಯಾರಿಯರ್‌’ (ಕೋವಿಡ್ ವೈರಸ್‌ ವಾಹಕ) ಆಗಲಿದ್ದಾರೆ. ಆಗ ಸೋಂಕಿನ ಸ್ಥಾನಪಲ್ಲಟ ಆಗಲಿದೆ.

ಬೆಂಗಳೂರಿನ ಮೂಲಕವೇ ಕೋವಿಡ್ ವೈರಸ್‌ ರಾಜ್ಯಕ್ಕೆ ಕಾಲಿಟ್ಟಿತ್ತು. ನಂತರ ನಾನಾ ಮಾರ್ಗದಲ್ಲಿ ಎಲ್ಲ ಕಡೆ ವಿಸ್ತರಿಸಿತ್ತು. ಈಗ ಮತ್ತೆ ಸಿಲಿಕಾನ್‌ಸಿಟಿಯಲ್ಲಿ ಸೋಂಕು “ಪೀಕ್‌’ನಲ್ಲಿದೆ. ಈ ವೇಳೆ ಜನ ಹಳ್ಳಿಗಳತ್ತ ಮುಖಮಾಡುತ್ತಿದ್ದಾರೆ. ಅವರಲ್ಲಿ ಲಕ್ಷಣಗಳು ಇಲ್ಲದಿದ್ದರೂ, ತಮಗರಿವಿಲ್ಲದೆ ಕೆಲವರು ವೈರಸ್‌ನೊಂದಿಗೆ ಊರುಗಳನ್ನು ಪ್ರವೇಶಿಸಿದರೂ ಅಚ್ಚರಿ ಇಲ್ಲ. ಇದು ಸರ್ಕಾರದ ಮೇಲೆ ಬೇರೆ ರೀತಿಯ ಪರಿಣಾಮ ಬೀರಲಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಸೇರಿದಂತೆ ನಾನಾ ಭಾಗಗಳಿಗೆ ಜನ ಗಂಟುಮೂಟೆ ಕಟ್ಟಿಕೊಂಡು ಪ್ರಯಾಣ ಬೆಳೆಸಿದ್ದಾರೆ. ಇದಕ್ಕೆ ಸ್ವತಃ ಸರ್ಕಾರ ಹೆಚ್ಚುವರಿ ಬಸ್‌ ಗಳನ್ನು ನಿಯೋಜಿಸಿ, ಪೂರಕ ವಾತಾವರಣ ಕಲ್ಪಿಸುತ್ತಿದೆ. ಬಹುತೇಕರು ಸೋಮವಾರ ಸಂಜೆಯಿಂದಲೇ ಕಾಲ್ಕಿàಳುತ್ತಿದ್ದಾರೆ. ಇದರಿಂದ ಪ್ರವೇಶ ದ್ವಾರಗಳಲ್ಲಿ ವಾಹನದಟ್ಟಣೆ ಉಂಟಾಗಿ, ಹೆಜ್ಜೆ- ಹೆಜ್ಜೆಗೂ ಜನ ಪರದಾಡುವಂತಾಯಿತು. ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು. ಮತ್ತೆ ಹಳ್ಳಿಗಳ ನಿದ್ದೆಗೆಡಿಸಿದ ವಲಸೆ: ಮತ್ತೂಂ  ದೆಡೆ ಹಳ್ಳಿಗಳಲ್ಲಿ ಜನ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಹಿಂದೆ ರಾತ್ರೋರಾತ್ರಿ ಬೆಂಗಳೂರಿನಿಂದ ವಲಸೆ ಬಂದ ಜನರಲ್ಲಿ ಕೆಲವರು ವೈರಸ್‌ ಹೊತ್ತುತಂದಿದ್ದರು. ಆದರೂ ಊರಿನವರನ್ನು ಅಪ್ಪಿಕೊಂಡರು. ಇದು ಅತಿಯಾದಾಗ ಊರು ಪ್ರವೇಶದ್ವಾರಗಳಲ್ಲಿ ಬೇಲಿ ಹಾಕಿ, ಜಾಗರಣೆ ಮಾಡಿದ ಉದಾಹರಣೆಗಳೂ ಇವೆ. ಇದಾದ ನಂತರ ಮಹಾರಾಷ್ಟ್ರ, ಗೋವಾ ಸೇರಿದಂತೆ ನಾನಾ ಭಾಗಗಳಲ್ಲಿ ನೆಲೆಸಿದ್ದ ಜನ ವಾಪಸ್‌ ಊರುಗಳಿಗೆ ಬಂದಾಗಲೂ ಈ ಸಮಸ್ಯೆ ಎದುರಾಗಿತ್ತು. ತದನಂತರದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ಆಶಾ ಕಾರ್ಯಕರ್ತೆಯರಿಂದ ಸಮೀಕ್ಷೆ ನಡೆಸಿ, ಸೋಂಕು ತಡೆಗೆ ಕಸರತ್ತು ನಡೆಸಿದರು.

ಈಗ ಮತ್ತೂಂದು ಹಂತದ ವಲಸೆ ಶುರುವಾಗಿದ್ದು, ಸೋಂಕಿನ ಪ್ರಕರಣಗಳಲ್ಲಿ ಶೇ. 50ರಷ್ಟು ರಾಜಧಾನಿಯಲ್ಲೇ ಪತ್ತೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಜನ ಸ್ವಂತ ಊರುಗಳಿಗೆ ವಾಪಸ್ಸಾಗುತ್ತಿರುವುದು ಸಹಜವಾಗಿ ಹಳ್ಳಿಗರಲ್ಲಿ ಆತಂಕ ಸೃಷ್ಟಿಸಿದೆ. ಕೆಲವು ತಾಲೂಕುಗಳಲ್ಲಿ ಅಲ್ಲಿನತಹಶೀಲ್ದಾರರು ಕ್ವಾರಂಟೈನ್‌ ಅಥವಾ ಪರೀಕ್ಷೆ ಕಡ್ಡಾಯಗೊಳಿಸಿ ಆದೇಶವನ್ನೂ ಹೊರಡಿಸಿದ್ದಾರೆ. ಆದರೆ, ಕಡ್ಡಾಯವಾಗಿ ಜಾರಿಯಲ್ಲಿಲ್ಲ. ಸರ್ಕಾರ ಕೂಡ ಈ ಸಂಬಂಧ ಮಾರ್ಗಸೂಚಿ ಹೊರಡಿಸಿಲ್ಲ.

2 ದಿನದಲ್ಲಿ 1,600 ಹೆಚ್ಚುವರಿ ಬಸ್‌! :  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯು ಸೋಮವಾರ ಮತ್ತು ಮಂಗಳವಾರ ತಲಾ 800 ಹೆಚ್ಚುವರಿ ಬಸ್‌ಗಳ ನಿಯೋಜನೆ ಮಾಡಿದ್ದು, ಅಗತ್ಯಬಿದ್ದರೆ, ಇನ್ನೂ 200 ಬಸ್‌ ಗಳ ಕಾರ್ಯಾಚರಣೆಗೆ ಸಿದ್ಧ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಸೋಮವಾರ ಮಧ್ಯಾಹ್ನ 1ರವರೆಗೆ 440 ಬಸ್‌ಗಳು ಕಾರ್ಯಾಚರಣೆ ಮಾಡಿದ್ದು, ಸುಮಾರು 11,466 ಪ್ರಯಾಣಿಕರು ಸಂಚರಿಸಿದ್ದಾರೆ. ಅಷ್ಟೇ ಅಲ್ಲ, 231 ಬಸ್‌ ಗಳಲ್ಲಿ ಆಸನಗಳು ಮುಂಗಡ ಬುಕಿಂಗ್‌ ಆಗಿವೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಪ್ರತಿಯೊಬ್ಬರಿಗೂ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ, ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ.

ಬ್ಯಾಂಕ್‌- ಎಟಿಎಂ ಕೇಂದ್ರಕ್ಕೆ ಮುಗಿಬಿದ್ದ ಜನ  :  ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್‌ಡೌನ್‌ ಪರಿಣಾಮ ಜನ ಸೋಮವಾರ ಎಟಿಎಂ ಕೇಂದ್ರಗಳಿಗೆ ಮುಗಿಬಿದ್ದರು. ಮಂಗಳವಾರ ರಾತ್ರಿ 8ರಿಂದ ಜುಲೈ 22ರ ಬೆಳಗ್ಗೆ 5ರವರೆಗೆ ಲಾಕ್‌ಡೌನ್‌ ಘೋಷಣೆಯಾದ ಬೆನ್ನಲ್ಲೇ ಜನ ಬ್ಯಾಂಕಿಂಗ್‌ ವ್ಯವಹಾರಕ್ಕಾಗಿ ಬ್ಯಾಂಕ್‌ಗಳು ಹಾಗೂ ಹಣ ಡ್ರಾ ಮಾಡಲು ಎಟಿಎಂ ಕೇಂದ್ರಗಳ ಮುಂದೆ “ಕ್ಯೂ’ ನಿಂತಿರುವುದು ಸರ್ವೆಸಾಮಾನ್ಯವಾಗಿತ್ತು. ಹಲವು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಘೋಷಣೆಯಾಗುವ ನಿರೀಕ್ಷೆಯಲ್ಲಿ ರಾಜ್ಯದ ಇತರೆಡೆಯೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್‌ಗಳತ್ತ ಮುಖ ಮಾಡಿದ್ದರು. ಎಟಿಎಂ ಕೇಂದ್ರಗಳಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸದಿರುವ ಬಗ್ಗೆ ಆಕ್ಷೇಪವೂ ವ್ಯಕ್ತವಾಯಿತು. ಎರಡನೇ ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ ಕಾರಣಕ್ಕೆ ಹಲವು ಎಟಿಎಂ ಕೇಂದ್ರಗಳಲ್ಲಿ ಹಣ ಖಾಲಿಯಾಗಿದ್ದರಿಂದ ಸೋಮವಾರ ಬೆಳಗ್ಗೆ ಹಣ ಪಡೆಯಲಾಗದೆ ಪರದಾಡುವಂತಾಗಿತ್ತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: 17 ಮಂದಿಯ ಮೇಲೆ ಎಫ್ಐಆರ್, ನಾಲ್ವರ ಬಂಧನ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: 17 ಮಂದಿಯ ಮೇಲೆ ಎಫ್ಐಆರ್, ನಾಲ್ವರ ಬಂಧನ

“ಪಾರದರ್ಶಕ ತೆರಿಗೆ” ಪಾವತಿ ಪ್ಲಾಟ್ ಫಾರ್ಮ್ ಗೆ ಪ್ರಧಾನಿ ಮೋದಿ ಚಾಲನೆ

Live: “ಪಾರದರ್ಶಕ ತೆರಿಗೆ” ಪಾವತಿ ಪ್ಲಾಟ್ ಫಾರ್ಮ್ ಗೆ ಪ್ರಧಾನಿ ಮೋದಿ ಚಾಲನೆ

ಮಹಮ್ಮದ್ ಪೈಗಂಬರರನ್ನು ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ನೋವಾಗಿದೆ: ಜಮೀರ್ ಅಹಮದ್

ಮಹಮ್ಮದ್ ಪೈಗಂಬರರನ್ನು ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ನೋವಾಗಿದೆ: ಜಮೀರ್ ಅಹಮದ್

ಟಿವಿ-ಮೊಬೈಲ್‌ ಇಲ್ಲದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ

ಟಿವಿ-ಮೊಬೈಲ್‌ ಇಲ್ಲದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ

ಪುಲ್ವಾಮಾ: ಉಗ್ರರ ಅಡಗುತಾಣ ಪತ್ತೆ, ಗ್ರೆನೇಡ್ಸ್, ಸ್ಫೋಟಕ, ಮದ್ದುಗುಂಡು ವಶಕ್ಕೆ

ಪುಲ್ವಾಮಾ: ಉಗ್ರರ ಅಡಗುತಾಣ ಪತ್ತೆ, ಗ್ರೆನೇಡ್ಸ್, ಸ್ಫೋಟಕ, ಮದ್ದುಗುಂಡು ವಶಕ್ಕೆ

ಸರಳ ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ: ಸಾರ್ವಜನಿಕ ಪ್ರವೇಶ, ಸಾಂಸ್ಕೃತಿಕ ಕಾರ್ಯಕ್ರಮವಿಲ್ಲ

ಸರಳ ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ: ಸಾರ್ವಜನಿಕ ಪ್ರವೇಶ, ಸಾಂಸ್ಕೃತಿಕ ಕಾರ್ಯಕ್ರಮವಿಲ್ಲ

ಮುಂಬೈ ಕನಸು ನನಸಾಗಿಸಲು 45 ಸಾವಿರ ರೂ.ಗೆ ಮಗುವನ್ನೇ ಮಾರಿದ ತಾಯಿ!

ಮುಂಬೈ ಕನಸು ನನಸಾಗಿಸಲು 45 ಸಾವಿರ ರೂ.ಗೆ ಮಗುವನ್ನೇ ಮಾರಿದ ತಾಯಿ!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆ.ಜಿ ಹಳ್ಳಿ ಗಲಭೆಯ ಆರೋಪಿ ನವೀನ್ ಬಿಜೆಪಿ ಬೆಂಬಲಿಗ; ಡಿ.ಕೆ ಶಿವಕುಮಾರ್

ಕೆ.ಜಿ ಹಳ್ಳಿ ಗಲಭೆಯ ಆರೋಪಿ ನವೀನ್ ಬಿಜೆಪಿ ಬೆಂಬಲಿಗ; ಡಿ.ಕೆ ಶಿವಕುಮಾರ್

ರೈಲ್ವೆ ನಿಲ್ದಾಣದಲ್ಲಿ ಕೊನೆಗೂ ಕನ್ನಡಕ್ಕೆ ಸ್ಥಾನ

ರೈಲ್ವೆ ನಿಲ್ದಾಣದಲ್ಲಿ ಕೊನೆಗೂ ಕನ್ನಡಕ್ಕೆ ಸ್ಥಾನ

ಮಲೆನಾಡು ಭಾಗಗಳಲ್ಲಿ ಮಂಗನ ಕಾಯಿಲೆ : ವರದಿ ಕೇಳಿದ ಹೈಕೋರ್ಟ್‌

ಮಲೆನಾಡು ಭಾಗಗಳಲ್ಲಿ ಮಂಗನ ಕಾಯಿಲೆ : ವರದಿ ಕೇಳಿದ ಹೈಕೋರ್ಟ್‌

ಡಿ.ಜೆ ಹಳ್ಳಿ ಗಲಭೆ ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳು ಎರಡೂ ಖಂಡನೀಯ: ಸಿದ್ದರಾಮಯ್ಯ

ಡಿ.ಜೆ ಹಳ್ಳಿ ಗಲಭೆ ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳು ಎರಡೂ ಖಂಡನೀಯ: ಸಿದ್ದರಾಮಯ್ಯ

ರೈತರ ಬೆಳೆ ಸಮೀಕ್ಷೆಗೆ ಕೃಷಿ ಸಚಿವರಿಂದ ಆಪ್ ಲೋಕಾರ್ಪಣೆ

ರೈತರ ಬೆಳೆ ಸಮೀಕ್ಷೆಗೆ ಕೃಷಿ ಸಚಿವರಿಂದ ಆ್ಯಪ್ ಲೋಕಾರ್ಪಣೆ

MUST WATCH

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik

udayavani youtube

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Making

udayavani youtube

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆ

udayavani youtube

ಕೋವಿಡ್ ತಡೆಗೆ ಸಿದ್ಧವಾಯ್ತ ವಿಶ್ವದ‌ ಮೊದಲ ಲಸಿಕೆ? ಪುಟಿನ್ ಪುತ್ರಿಗೂ ವ್ಯಾಕ್ಸಿನ್?

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳುಹೊಸ ಸೇರ್ಪಡೆ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: 17 ಮಂದಿಯ ಮೇಲೆ ಎಫ್ಐಆರ್, ನಾಲ್ವರ ಬಂಧನ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: 17 ಮಂದಿಯ ಮೇಲೆ ಎಫ್ಐಆರ್, ನಾಲ್ವರ ಬಂಧನ

ಅಭಿವೃದ್ಧಿ ಕಾರ್ಯ ಶೀಘ್ರ ಪೂರ್ಣಗೊಳಿಸಿ : ಅಧಿಕಾರಿಗಳಿಗೆ ಸಂಸದರ ಸೂಚನೆ

ಅಭಿವೃದ್ಧಿ ಕಾರ್ಯ ಶೀಘ್ರ ಪೂರ್ಣಗೊಳಿಸಿ : ಅಧಿಕಾರಿಗಳಿಗೆ ಸಂಸದರ ಸೂಚನೆ

ಕೊರೊನಾ ಲಾಕ್‌ಡೌನ್‌ನಿಂದಾಗಿ ಅತಿಥಿ ಉಪನ್ಯಾಸಕರ ಪರದಾಟ

ಕೊರೊನಾ ಲಾಕ್‌ಡೌನ್‌ನಿಂದಾಗಿ ಅತಿಥಿ ಉಪನ್ಯಾಸಕರ ಪರದಾಟ

“ಪಾರದರ್ಶಕ ತೆರಿಗೆ” ಪಾವತಿ ಪ್ಲಾಟ್ ಫಾರ್ಮ್ ಗೆ ಪ್ರಧಾನಿ ಮೋದಿ ಚಾಲನೆ

Live: “ಪಾರದರ್ಶಕ ತೆರಿಗೆ” ಪಾವತಿ ಪ್ಲಾಟ್ ಫಾರ್ಮ್ ಗೆ ಪ್ರಧಾನಿ ಮೋದಿ ಚಾಲನೆ

ಮಹಮ್ಮದ್ ಪೈಗಂಬರರನ್ನು ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ನೋವಾಗಿದೆ: ಜಮೀರ್ ಅಹಮದ್

ಮಹಮ್ಮದ್ ಪೈಗಂಬರರನ್ನು ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ನೋವಾಗಿದೆ: ಜಮೀರ್ ಅಹಮದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.