ರೇರಾ: ಶೀಘ್ರ ಸುಪ್ರೀಂಗೆ ಅರ್ಜಿ
Team Udayavani, Aug 12, 2017, 7:40 AM IST
ಬೆಂಗಳೂರು: ಗೃಹ ನಿರ್ಮಾಣ ಸಹಕಾರ ಸಂಘಗಳನ್ನು ರೇರಾ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡುವಂತೆ ಕೋರಿ ದೇಶದ ವಿವಿಧ ಹೈಕೋರ್ಟ್ಗಳಲ್ಲಿ ದಾಖಲಾಗಿರುವ ಅರ್ಜಿಗಳ ವರ್ಗಾವಣೆಗೆ ಕೇಂದ್ರ ಸರಕಾರ ಶೀಘ್ರವೇ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಶುಕ್ರವಾರ ಹೈಕೋರ್ಟ್ಗೆ ಜ್ಞಾಪನ ಪತ್ರ ಸಲ್ಲಿಸಿದರು.
ಏಕಸದಸ್ಯ ಪೀಠವು ಅರ್ಜಿಯನ್ನು ಮಾನ್ಯ ಮಾಡಿ ವಿಚಾರಣೆಯನ್ನು 22ಕ್ಕೆ ಮುಂದೂಡಿತು. ರೇರಾ ಅಡಿಯಲ್ಲಿ ಸಹಕಾರ ಸಂಘಗಳನ್ನು ತಂದಿರುವುದು ಅಸಾಂವಿಧಾನಿಕ ಎಂದು ಆಕ್ಷೇಪಿಸಿ 14 ಗೃಹ ನಿರ್ಮಾಣ ಸಹಕಾರ ಸಂಘಗಳು ರಿಟ್ ಅರ್ಜಿ ಸಲ್ಲಿಸಿವೆ.