ಕರವೇ ಕಾರ್ಯಕರ್ತರ ಬಂಧನ
Team Udayavani, Sep 30, 2018, 12:28 PM IST
ಯಲಹಂಕ: ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಸ್ಥಳೀಯರಿಂದ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಟೋಲ್ ಸಂಗ್ರಹ ಕೇಂದ್ರಕ್ಕೆ ನುಗ್ಗಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ 9ರ ಮಾರಸಂದ್ರದ ಕಡತನಮಲೆ ಬಳಿ ಇರುವ ನೂತನ ಟೋಲ್ ಸಂಗ್ರಹ ಕೇಂದ್ರಕ್ಕೆ ಶನಿವಾರ àಕಾಏಕಿ ನುಗ್ಗಿರುವ ಕರವೇಯ 10ಕ್ಕೂ ಹೆಚ್ಚು ಕಾರ್ಯಕರ್ತರು, ಟೋಲ್ ಕೇಂದ್ರದ ಗೇಟ್‌ಗಳನ್ನು ಕಿತ್ತೆಸೆದಿದ್ದಾರೆ. ಜತೆಗೆ ಕೇಂದ್ರದ ಸಿಬ್ಬಂದಿ ಮೇಲೂ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ 12 ಗಂಟೆಗೆ ಟೋಲ್ ಗೇಟ್‌ಗೆ ಬಂದ ಕರವೇ ಕಾರ್ಯಕರ್ತರ ಗುಂಪು, ವಾಹನಗಳನ್ನು ಪಡೆಯಲು ಅಳವಡಿಸಿರುವ ಗೇಟ್‌ಗಳನ್ನು ಕಿತ್ತೆಸೆದಿದ್ದಾರೆ. ಇದನ್ನು ತಡೆಯಲು ಮುಂದಾದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ನೋಡು ನೋಡುತ್ತಿದ್ದಂತೆ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಪರಾರಿಯಾಗಿದ್ದಾರೆ.
ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಬಸ್ ಅನ್ನು ಹಿಂಬಾಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗ್ರಾಮದ ಮುನಿರಾಜು ವಿರುದ್ಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಟೋಲ್ ಸಂಗ್ರಹಿಸುತ್ತಿರುವ ರಸ್ತೆಯ ಕಾಮಗಾರಿ ಇನ್ನೂ ಮುಗಿದಿಲ್ಲ. ಬಹುತೇಕ ಕಡೆ ರಸ್ತೆ ನಿರ್ಮಾಣ ಅಪೂರ್ಣವಾಗಿದ್ದು, ಪ್ರತಿದಿನ ಸಂಭವಿಸುವ ಅಪಘಾತಗಳಲ್ಲಿ ಹತ್ತಾರು ಜನ ಗಾಯಗೊಳ್ಳುತ್ತಿದ್ದಾರೆ. ಸ್ಥಳೀಯ ರೈತರು, ವಿದ್ಯಾರ್ಥಿಗಳನ್ನು ಕರೆದೊಯ್ಯುವ ಶಾಲಾ ಬಸ್‌ಗಳಿಂದಲೂ ಟೋಲ್ ಸಂಗ್ರಹಿಸಲಾಗುತ್ತಿದೆ. ದರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಯಲಹಂಕ ಕ್ಷೇತ್ರದ ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ತಿಲಕ್‌ನಾರಾಯಣ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅದು ಹಳೇಯ ಆಡಿಯೋ, ಈಗಿನದ್ದಲ್ಲ.. ಆಡಿಯೋ ಲೀಕ್ ಬಗ್ಗೆ ಪ್ರಸನ್ನ ಕುಮಾರ್ ಸ್ಪಷ್ಟನೆ
ಬಿಡಿಎ ನಿವೇಶನ ಫ್ಯಾನ್ಸಿ ನಂಬರ್ 1,000ಕ್ಕೆ 1.30 ಕೋಟಿ ರೂ.!
ನಗರದ 29 ಆಸ್ಪತ್ರೆಗಳಲ್ಲಿ ಲಸಿಕೆ ಸೌಲಭ್ಯ
ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ 2,100 ಕೋ. ರೂ. ದೇಣಿಗೆ ಸಂಗ್ರಹ : ಪೇಜಾವರ ಶ್ರೀ
ಎಸೆಸೆಲ್ಸಿ : ಶೇ. 30ರಷ್ಟು ಪಠ್ಯ ಕಡಿತ : ಮಂಗಳೂರಿನಲ್ಲಿ ಸಚಿವ ಸುರೇಶ್ ಕುಮಾರ್ ಹೇಳಿಕೆ
MUST WATCH
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3
ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು
ಹೊಸ ಸೇರ್ಪಡೆ
ಅಲೆಮಾರಿ ಜನಾಂಗದ ಬದುಕಿನ ಯಾತನೆ
ವಿಶ್ವ ಚಾಂಪಿಯನ್ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತೀಯ ಕುಸ್ತಿ ಪಟು ವಿನೇಶ್ ಪೋಗಟ್
ಮಹಾ ಸಾಧಕಿ ಮಾನಸಿ ಜೋಶಿ; ಕಾಲು ಕಳೆದುಕೊಂಡರೂ ಆತ್ಮವಿಶ್ವಾಸ ಅಡ್ಡಿಯಾಗಲಿಲ್ಲ
ಅಂಬಾನಿ ನಿವಾಸದ ಬಳಿ ಜಿಲೆಟಿನ್ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್-ಉಲ್-ಹಿಂದ್
ಬ್ರಾಹ್ಮಣರಿಂದ ಅರ್ಚಕ ವೃತ್ತಿ ಕಿತ್ತುಕೊಳ್ಳುವ ಪ್ರಯತ್ನ ಸರ್ಕಾರ ಮಾಡುತ್ತಿದೆ :ಪೇಜಾವರ ಶ್ರೀ