ಕಾರ್ಯಕರ್ತರ ಮೇಲಿದೆ ನಾಲ್ಕು ಲಸಿಕೆಗಳ ಹೊಣೆ


Team Udayavani, Dec 29, 2021, 2:37 PM IST

ಕಾರ್ಯಕರ್ತರ ಮೇಲಿದೆ ನಾಲ್ಕು ಲಸಿಕೆಗಳ ಹೊಣೆ

ಬೆಂಗಳೂರು: ಹೊಸ ವರ್ಷದ ಮೊದಲ ತಿಂಗಳು ಆರೋಗ್ಯ ಕಾರ್ಯಕರ್ತರ ಪಾಲಿಗೆ ಸವಾಲಿನದಾಗಿದ್ದು, ಒಂದಲ್ಲಾ ಎರಡಲ್ಲಾಒಟ್ಟಾರೆ ನಾಲ್ಕು ಪ್ರಕಾರದ ಲಸಿಕೆಗಳನ್ನು ವಿವಿಧ ವರ್ಗಗಳಿಗೆ ನೀಡುವ ಹೊಣೆ ಆ ಕಾರ್ಯಕರ್ತರ ಮೇಲಿದೆ!

ಈಗಾಗಲೇ ನಿತ್ಯ ಸಾವಿರಾರು ಜನರಿಗೆ ಆರೋಗ್ಯ ಕಾರ್ಯಕರ್ತರು ಕೋವಿಡ್‌ ಲಸಿಕೆ ನೀಡುತ್ತಿದ್ದಾರೆ. ಜ. 3ರಿಂದ 15ರಿಂದ 18 ವರ್ಷದ ಒಳಗಿನವರು ಈ ಲಸಿಕೆ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.

ಬೆನ್ನಲ್ಲೇ ಜ. 10ರಿಂದ 60 ವರ್ಷ ಮೇಲ್ಪಟ್ಟ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಮತ್ತು ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ನೀಡಬೇಕಾಗಿದೆ. ಈ ಮಧ್ಯೆ ಮಕ್ಕಳಿಗೆ ಜ. 23ರಿಂದ ಪಲ್ಸ್‌ ಪೋಲಿಯೋ ಲಸಿಕೆ ಕೂಡ ವಿತರಿಸಬೇಕಾಗಿದೆ. ಇದರೊಂದಿಗೆ ಒಮಿಕ್ರಾನ್‌ ಪ್ರಕರಣಗಳು ಹರಡದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಇದೆ. ಇದೆಲ್ಲವೂ ಪ್ರಮುಖವಾಗಿದ್ದು, ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಸರಣಿ ಸಭೆಗಳು ನಡೆಯುತ್ತಿವೆ. ಸರ್ಕಾರದ ಮಾರ್ಗಸೂಚಿ ಎದುರು ನೋಡಲಾಗುತ್ತಿದೆ. ಈ ಮಧ್ಯೆ ಒಮಿಕ್ರಾನ್‌ ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ವಿಧಿಸಿರುವುದು ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಸರಿಸುಮಾರು ವರ್ಷದಿಂದ ನಿರಂತರವಾಗಿ ನಗರದಾದ್ಯಂತ ಆಶಾ ಕಾರ್ಯಕರ್ತರು, ಸಹಾಯಕ ಶುಶ್ರೂಷಕಿಯರು ಕೋವಿಡ್‌ಲಸಿಕೆ ವಿತರಣೆಯಲ್ಲಿ ಸಕ್ರಿಯರಾಗಿದ್ದಾರೆ. ನಿತ್ಯ ಹತ್ತಾರು ಕಿ.ಮೀ.ನಡೆದು ಮನೆ-ಮನೆಗೆ ತೆರಳಿ ಲಸಿಕೆ ನೀಡುತ್ತಿದ್ದರೂ ಗುರಿ ತಲು ಪಲು ಸಾಧ್ಯವಾಗುತ್ತಿಲ್ಲ. ಲಕ್ಷಾಂತರ ಜನ ಇನ್ನೂ ಮೊದಲ ಡೋಸ್‌ ನಿಂದಲೇ ದೂರ ಉಳಿದಿದ್ದಾರೆ. ಈ ನಡುವೆ ಮತ್ತೆ ಮೂರುವರ್ಗಗಳಿಗೆ ಲಸಿಕೆ ವಿತರಣೆ ಆರೋಗ್ಯ ಕಾರ್ಯಕರ್ತರ ಮೇಲಿದ್ದು,ಈ ಒತ್ತಡ ನಿಭಾಯಿಸಲು ಪಾಲಿಕೆಯ ಆರೋಗ್ಯ ವಿಭಾಗದಲ್ಲಿ ಇನ್ನಿಲ್ಲದ ಕಸರತ್ತು ನಡೆದಿದೆ.

ಯಾರು ಮತ್ತು ಎಷ್ಟು?: ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 850 ಆಶಾ ಕಾರ್ಯಕರ್ತರಿದ್ದು, 300ಕ್ಕೂ ಅಧಿಕ ಸಹಾಯಕಶುಶ್ರೂಷಕಿಯರಿದ್ದಾರೆ. ಜತೆಗೆ ವೈದ್ಯಕೀಯ ಸಿಬ್ಬಂದಿ ಕೂಡಇದ್ದಾರೆ. ಇವರಲ್ಲಿ ಪ್ರತಿಯೊಬ್ಬರು ದಿನಕ್ಕೆ 250-300 ಕೋವಿಡ್‌ ಲಸಿಕೆ ನೀಡುತ್ತಿದ್ದಾರೆ. ಇದೇ ತಂಡವು 60 ವರ್ಷ ಮೇಲ್ಪಟ್ಟಸುಮಾರು 20 ಲಕ್ಷ ಜನರಿಗೆ ಬೂಸ್ಟರ್‌ ಡೋಸ್‌ ಹಾಗೂ 15-18ವರ್ಷದ ಒಳಗಿನ ಅಂದಾಜು 7ರಿಂದ 7.5 ಲಕ್ಷ ಮಂದಿಗೆ ಲಸಿಕೆನೀಡಬೇಕಾಗಿದೆ. ಇನ್ನು 0-5 ವರ್ಷದ ಒಳಗಿನ ಮಕ್ಕಳು ನಗರದಲ್ಲಿ7-8 ಲಕ್ಷ ಇದ್ದಾರೆ ಎಂದು ಅಂದಾಜಿಸಲಾಗಿದೆ. ಈ ಎಲ್ಲವರ್ಗವನ್ನು ನಿಗದಿತ ಅವಧಿಯಲ್ಲಿ ತಲುಪುವುದು ಸಹಜವಾಗಿಸವಾಲಿನ ಕೆಲಸ. ಆದರೆ, ಪಲ್ಸ್‌ ಪೋಲಿಯೋ ಅಭಿಯಾನಕ್ಕೆವೈದ್ಯಕೀಯ ಕಾಲೇಜು ಮತ್ತು ನರ್ಸಿಂಗ್‌ ಕಾಲೇಜುಗಳಿಂದ ವಿದ್ಯಾರ್ಥಿಗಳ ನೆರವು ಪಡೆಯಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

15 ಸಾವಿರ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ : ಪಲ್ಸ್‌ ಪೋಲಿಯೋ ಲಸಿಕೆ ಅಷ್ಟಾಗಿ ಸಮಸ್ಯೆಆಗದಿರಬಹುದು. ಆದರೂ ಅಭಿಯಾನಕ್ಕೆ ಪೂರ್ವತಯಾರಿಅತ್ಯಗತ್ಯ. ಲಸಿಕೆಯನ್ನು ವಿವಿಎಂನಲ್ಲಿ 8 ಡಿಗ್ರಿಗಿಂತ ಕಡಿಮೆತಾಪಮಾನದಲ್ಲಿ ಇರುವಂತೆ ನೋಡಿಕೊಳ್ಳಬೇಕು, ಮಕ್ಕಳಿಗೆಜ್ವರ ಇದ್ದರೆ ಹಾಕಬೇಕೇ ಅಥವಾ ಬೇಡವೇ ಎಂಬುದನ್ನು ತಿಳಿದುಕೊಳ್ಳಬೇಕು, ಮನೆ-ಮನೆಗೆ ಭೇಟಿ ನೀಡಿದಾಗ ಗುರುತು ಹಾಕಿ ಬರಬೇಕು, ಬ್ಯಾಲನ್ಸ್‌ಶೀಟ್‌ನಲ್ಲಿದಾಖಲಿಸಿಕೊಳ್ಳುವುದು ಸೇರಿದಂತೆ ಹಲವು ಜವಾಬ್ದಾರಿಗಳು ಇರುತ್ತವೆ. ಈ ಬಗ್ಗೆ ತರಬೇತಿಯೂ ಅಗತ್ಯ. ಇದಕ್ಕಾಗಿಸುಮಾರು 15 ಸಾವಿರ ವಿದ್ಯಾರ್ಥಿಗಳ ನೆರವು

ಪಡೆಯಲಾಗುವುದು. ಜ. 23ರಿಂದ ನಾಲ್ಕು ದಿನಗಳ ಕಾಲಈ ಅಭಿಯಾನ ನಡೆಯಲಿದೆ ಎಂದು ಬಿಬಿಎಂಪಿ ಮುಖ್ಯಆರೋಗ್ಯಾಧಿಕಾರಿ ಡಾ.ಬಾಲಸುಂದರ್‌ ಮಾಹಿತಿ ನೀಡಿದರು.ಇನ್ನು ಬೂಸ್ಟರ್‌ ಡೋಸ್‌ ಮತ್ತು 15-18 ವರ್ಷದ ಮಕ್ಕಳಿಗೆಲಸಿಕೆ ನೀಡಲು ಮಾರ್ಗಸೂಚಿ ಬರಲಿದೆ. ಅದನ್ನು ಆಧರಿಸಿಯೋಜನೆ ರೂಪಿಸಿಕೊಳ್ಳಲಾಗುವುದು. ಆದರೆ, ಎಲ್ಲರಿಗೂಒಮ್ಮೆಲೆ ಲಸಿಕೆ ಕೊಡುವುದಿಲ್ಲ. ದಿನಕ್ಕೆ ಗುರಿನಿಗದಿಪಡಿಸಿಕೊಂಡು, ಅದರಂತೆ ಅನುಷ್ಠಾನಗೊಳಿಸಲಾಗುವುದು ಎಂದರು.

-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.