‘ತನಿಖೆಗೆ ಸಿದ್ಧ- ಓಡಿ ಹೋಗಲ್ಲ’

Team Udayavani, Feb 12, 2019, 12:40 AM IST

ಬೆಂಗಳೂರು: ‘ನಾವು ತನಿಖೆಗೆ ಸಿದ್ದರಿದ್ದೇವೆ. ತನಿಖೆ ಕಾರಣಕ್ಕೆ ಓಡಿ ಹೋಗುತ್ತಿಲ್ಲ. ಆದರೆ ಸರ್ಕಾರವೇ ಅಪರಾಧಿ ಸ್ಥಾನದಲ್ಲಿ ನಿಂತಿದ್ದು, ಮುಖ್ಯಮಂತ್ರಿಗಳೇ ಮೊದಲ ಅಪರಾಧಿಯಾಗಿರುವಾಗ ಅವರ ಕೈಕೆಳಗಿನ ಸಂಸ್ಥೆಗಳು ತನಿಖೆ ನಡೆಸುವುದು ಸೂಕ್ತವಲ್ಲ ಎಂಬುದು ನಮ್ಮ ಹಾಗೂ ಜನರ ಅಪೇಕ್ಷೆ ಎಂದು ಭಾವಿಸಿದ್ದೇನೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಧಾನಸಭೆಯಲ್ಲಿ ಸೋಮವಾರ ಇಡೀ ದಿನ ಸುದೀರ್ಘ‌ ಚರ್ಚೆ ವೇಳೆ ಮೌನವಾಗಿದ್ದ ಅವರು ಕಲಾಪ ಮುಗಿದ ಬಳಿಕ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಸೋಮವಾರ ಸದನದೊಳಗೆ ಸಭಾಧ್ಯಕ್ಷರೊಂದಿಗೆ ಬಹಳ ಗೌರವದಿಂದ ನಡೆದುಕೊಂಡಿದ್ದೇವೆ. ಎಲ್ಲ ಘಟನೆಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಪ್ರೇರಣೆ ನೀಡಿದ್ದಾರೆ. ರಾತ್ರಿ 12.30ಕ್ಕೆ ಅವರೇ ಕಳುಹಿಸಿಕೊಟ್ಟು, ಗೊಂದಲ ಸೃಷ್ಟಿಸಿ ಅಲ್ಲಿಂದಲೇ ರೆಕಾರ್ಡ್‌ ಮಾಡಿದ್ದಾರೆ. ಬಳಿಕ ಬಜೆಟ್ ಮಂಡನೆಗೂ ಮುನ್ನ ಮಾಧ್ಯಮ ಗೋಷ್ಠಿಯಲ್ಲಿ ರಮೇಶ್‌ ಕುಮಾರ್‌ ಅವರಿಗೆ 50 ಕೋಟಿ ರೂ. ನೀಡಲು ಯಾರೋ ಹೊರಟಿದ್ದರು ಎಂದು ಹೇಳುವ ಮೂಲಕ ಕುಮಾರಸ್ವಾಮಿಯವರು ಸಭಾಧ್ಯಕ್ಷರನ್ನು ಅಪಮಾನ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.

ಹೀಗಾಗಿ ಮುಖ್ಯಮಂತ್ರಿಗಳ ಕೈಕೆಳಗೆ ಯಾವುದೇ ತನಿಖೆಯಾಗುವುದನ್ನು ನಾಡಿನ ಆರೂವರೆ ಕೋಟಿ ಜನ ಒಪ್ಪುವುದಿಲ್ಲ. ನಾವು ತನಿಖೆಗೆ ಸಿದ್ಧರಿದ್ದೇವೆ. ಆದರೆ ಸದನ ಸಮಿತಿ ರಚಿಸಲಿ, ಇಲ್ಲವೇ ನ್ಯಾಯಾಂಗ ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದ್ದೇವೆ. ಮಂಗಳವಾರವೂ ಪಕ್ಷ ಇದೇ ನಿಲುವು ತೆಗೆದುಕೊಳ್ಳಲಿದೆ ಎಂದು ತಿರುಗೇಟು ನೀಡಿದರು. ಮಂಗಳವಾರವೂ ಸಭಾಧ್ಯಕ್ಷರಿಗೆ ನಮ್ಮ ನಿಲುವನ್ನು ಸ್ಪಷ್ಟಪಡಿಸಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ. ತರಾತುರಿಯಲ್ಲಿ ಈ ರೀತಿಯ ತನಿಖೆ ಮಾಡಬಾರದು ಎಂಬುದು ನಮ್ಮ ಅಪೇಕ್ಷೆ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕಡೂರು: ತಾಲೂಕಿಗೆ ಕೃಷ್ಣಾ ಕೊಳ್ಳದಿಂದ ಮಂಜೂರಾಗಿರುವ 1.45 ಟಿಎಂಸಿ ನೀರಿನ ಸದುಪಯೋಗ ಸಂಪೂರ್ಣವಾಗಿ ತಾಲೂಕಿಗೆ ಲಭಿಸಲಿ ಎಂದು ಮಾಜಿ ಶಾಸಕ ವೈ.ಎಸ್‌.ವಿ ದತ್ತ ಹೇಳಿದರು. ಸುದ್ದಿಗೋಷ್ಠಿಯಲ್ಲಿ...

  • ಚಿತ್ರದುರ್ಗ: ಕಳೆದೊಂದು ವಾರದಿಂದ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಕಡೆಗೂ ಸೆರೆ ಹಿಡಿಯಲಾಗಿದೆ. ದಸರಾ ಆನೆ ಅಭಿಮನ್ಯು ನೇತೃತ್ವದ...

  • ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ವಿಭೂತಿಕೆರೆ ಗ್ರಾಮದ ಮಾವಿನ ತೋಟವೊಂದರಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ಅಕ್ರಮ ರೇವ್‌ ಪಾರ್ಟಿಯ ಮೇಲೆ ಗ್ರಾಮಾಂತರ...

  • ತಿರುವನಂತಪುರಂ:  ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಕೇರಳದ ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌, ತಿರುವನಂತಪುರಂಗೆ ಭಾರತ ತಂಡದೊಂದಿಗೆ...

  • ಹರಪನಹಳ್ಳಿ: ಮುಂದಿನ ದಿನಗಳಲ್ಲಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕಾರಕ್ಕೆ ಉಪನ್ಯಾಸಕರು...