ಕೈ ನಾಯಕರ ನಿಯಂತ್ರಣಕ್ಕೆ ಬ್ಲಾಕ್​ ವೆುೕಲ್ ತಂತ್ರ


Team Udayavani, Jan 29, 2019, 12:30 AM IST

bsy-750.jpg

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡುವುದಾಗಿ ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ಮುಖಾಂತರ ರಾಜ್ಯ ಕಾಂಗ್ರೆಸ್‌ ನಾಯಕರನ್ನು ಹದ್ದುಬಸ್ತಿನಲ್ಲಿಡಲು ಯತ್ನಿಸುತ್ತಿದ್ದು, ಇದೊಂದು ಬ್ಲಾಕ್‌ವೆುೕಲ್‌ ತಂತ್ರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ‘ಟಾಂಗ್‌’ ನೀಡಿದ್ದಾರೆ.

ಮುಖ್ಯಮಂತ್ರಿಗಳ ರಾಜೀನಾಮೆ ಹೇಳಿಕೆ ಕುರಿತು ಸೋಮವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ರಾಜೀನಾಮೆ ಹೇಳಿಕೆ ಅಚ್ಚರಿ ಉಂಟು ಮಾಡಿದ್ದು, ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿನ ಒಳ ಜಗಳಗಳ ಬಗ್ಗೆ ನಾನು ಪದೇಪದೆ ಹೇಳುತ್ತಲೇ ಬಂದಿದ್ದೇನೆ. ಮುಖ್ಯಮಂತ್ರಿಗಳ ಹೇಳಿಕೆ ಇದಕ್ಕೆ ಪುಷ್ಠಿ ನೀಡುತ್ತದೆ. ಜತೆಗೆ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಶಾಸಕರು ಮುಖ್ಯಮಂತ್ರಿಗಳ ವಿರುದ್ಧ ತಿರುಗಿ ಬಿದ್ದಿರುವುದು ಬಹಿರಂಗವಾಗಿದೆ ಎಂದರು.

ಮೈತ್ರಿ ಸರ್ಕಾರದಲ್ಲಿ ಸಮಸ್ಯೆ ಇರುವುದಾದರೆ ರಾಜ್ಯದ ಜನರ ಸಮಸ್ಯೆ ಕೇಳುವವರು ಯಾರು? ರಾಜ್ಯದಲ್ಲಿ ತೀವ್ರ ಬರವಿದ್ದರೂ ಸರ್ಕಾರ ಜನರ ಬಳಿ ಹೋಗುತ್ತಿಲ್ಲ. ಇಷ್ಟಾದರೂ ಮುಖ್ಯಮಂತ್ರಿಗಳು, ಸಚಿವರು ಗಾಢ ನಿದ್ರೆಯಲ್ಲಿದ್ದಾರೆ. ಅವರ ಗೊಂದಲ ಬಗೆಹರಿಸಿಕೊಳ್ಳದೆ ‘ಆಪರೇಷನ್‌ ಕಮಲ’ ಎಂದು ಹೇಳುವ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಸರ್ಕಾರ ನಡೆಸಲು ಸಾಧ್ಯವಾಗದೆ ಸಮ್ಮಿಶ್ರ ಸರ್ಕಾರದ ವೈಫ‌ಲ್ಯವನ್ನು ಮುಚ್ಚಿಕೊಳ್ಳಲು ನಡೆಸುತ್ತಿರುವ ದೊಡ್ಡ ತಂತ್ರವಾಗಿದೆ ಎಂದು ವಾಗ್ಧಾಳಿ ನಡೆಸಿದರು.

ಚಿತ್ರದುರ್ಗ ಜಿಲ್ಲೆಯ ದೊಡ್ಡಚೆಳ್ಳೂರು ಗ್ರಾಮದ ಹನುಮಂತರಾಯಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡು ತಿಂಗಳಾದರೂ ಸಚಿವರಿರಲಿ, ತಾಲೂಕು ಅಧಿಕಾರಿಗಳು ರೈತನ ಮನೆಗೆ ಭೇಟಿ ನೀಡಿಲ್ಲ. ಪರಿಹಾರ ಮಾತು ದೂರವೇ ಉಳಿಯಿತು. ರೈತ ಕುಟುಂಬದ ಕಷ್ಟ ನೋಡಲಾಗದೆ ಸ್ಥಳದಲ್ಲೇ 25 ಸಾವಿರ ರೂ. ನೀಡಿ ಕುಟುಂಬದವರ ಅಳಲನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿ ಬಂದಿದ್ದೇನೆ. ಇದು ಸರ್ಕಾರ ಗಾಢ ನಿದ್ರೆಯಲ್ಲಿದೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂಬುದಕ್ಕೆ ನಿದರ್ಶನ ಎಂದು ಹೇಳಿದರು.

ಸ್ವಾಭಿಮಾನ ಇದ್ದರೆ ರಾಜೀನಾಮೆ ಕೊಡಿ
ಕೊಪ್ಪಳ
: ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಶಾಸಕರ ವಿರುದ್ಧ ಗುಡುಗುವುದಷ್ಟೇ ಅಲ್ಲ, ಸ್ವಾಭಿಮಾನ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜೀನಾಮೆ ಕೊಡ್ತೇನೆ ಎಂದು ಬಾಯಿ ಮಾತಲ್ಲಿ ಹೇಳುವುದಲ್ಲ. ಮಾತಿನಂತೆ ನಡೆದುಕೊಳ್ಳಲಿ. ಕಾಂಗ್ರೆಸ್‌ ಶಾಸಕರ ವರ್ತನೆ ವಿರುದ್ಧ ಮಾತನಾಡುವ ಅವರು, ನಾನು ಮುಳ್ಳಿನ ಹಾದಿಯಲ್ಲಿ ನಡೆಯುತ್ತಿದ್ದೇನೆ. ಸಾಂದರ್ಭಿಕ ಶಿಶು ಎಂದೆಲ್ಲ ಹೇಳಿಕೊಂಡಿದ್ದಾರೆ. ಸುಮ್ಮನೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿ, ಬ್ಲಾಕ್‌ವೆುೕಲ್‌ ತಂತ್ರ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಸಹಿತ ಬ್ಲಾಕ್‌ವೆುೕಲ್‌ ಮಾಡುತ್ತಿದ್ದಾರೆ ಎಂದರು.

ಪರಸ್ಪರ ವಿಶ್ವಾಸವಿಲ್ಲದ ಸರ್ಕಾರ ಬಹಳ ದಿನ ಇರಬಾರದು. ಕಾಂಗ್ರೆಸ್‌-ಜೆಡಿಎಸ್‌ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಹಿನ್ನಡೆಯಾಗಿದೆ. ಆಡಳಿತ ನಡೆಸಲು ಆಗದಿದ್ದರೆ ಸಿಎಂ ರಾಜೀನಾಮೆ ನೀಡಲಿ. ಕುಮಾರಸ್ವಾಮಿ ಕಿರಿಕಿರಿ ಜಾಸ್ತಿಯಾದರೆ ಕಾಂಗ್ರೆಸ್‌ ಬೆಂಬಲ ಹಿಂಪಡೆಯಲಿ. ಒಂದೋ ಬಿಜೆಪಿಗೆ ಸ್ಥಿರ ಸರ್ಕಾರ ಮಾಡಲು ಅವಕಾಶ ನೀಡಲಿ. ಇಲ್ಲವೇ ಜನರನ್ನು ಮುರ್ಖರನ್ನಾಗಿಸುವ ಕಾರ್ಯವನ್ನು ಜೆಡಿಎಸ್‌-ಕಾಂಗ್ರೆಸ್‌ ನಿಲ್ಲಿಸಲಿ.
– ಜಗದೀಶ ಶೆಟ್ಟರ್‌, ಮಾಜಿ ಸಿಎಂ

ಕಾಂಗ್ರೆಸ್‌ನವರು ಕಾಗೆಯಾದರೆ, ಕುಮಾರಸ್ವಾಮಿ ಕೊಂಬೆಯಂತಿದ್ದಾರೆ. ಕಾಗೆ ಕೂರುವುದಕ್ಕೂ ಕೊಂಬೆ ಬೀಳುವುದಕ್ಕೂ ಒಂದೇ ಆಗುತ್ತದೆ. ಮುಖ್ಯಮಂತ್ರಿಗಳು ಸಾಕಷ್ಟು ಬಾರಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅಧಿಕಾರಕ್ಕೆ ಅಂಟಿಕೊಂಡು ಪದೇಪದೆ ರಾಜೀನಾಮೆ ನೀಡುವುದಾಗಿ ಹೇಳುವುದನ್ನು ಬಿಟ್ಟು ಒಮ್ಮೆ ರಾಜೀನಾಮೆ ಕೊಡಲಿ. ಆಗ ಎಲ್ಲವೂ ಮುಗಿಯಲಿದೆ.
– ಅಶೋಕ್‌, ಮಾಜಿ ಡಿಸಿಎಂ

ಕುಮಾರಸ್ವಾಮಿ ಅವರು ನುಡಿದಂತೆ ನಡೆಯಲಿ, ನುಡಿದಂತೆ ನಡೆಯುವ ಮಗನಾಗಲಿ. ಅವರು ಕಳೆದ ಏಳು ತಿಂಗಳಿನಿಂದ
ಇದನ್ನೇ ಹೇಳುತ್ತಿದ್ದಾರೆ. ಈಗಲಾದರೂ ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲಿ. ಏಳು ತಿಂಗಳಿನಿಂದ ಸರ್ಕಾರ ನಿಷ್ಕ್ರಿಯವಾಗಿದೆ. ಮಾಧ್ಯಮಗಳಿಗೆ ಹೇಳಿದಂತೆ ನುಡಿದಂತೆ ನಡೆಯಲಿ.
– ತೇಜಸ್ವಿನಿ ಗೌಡ, ವಿಧಾನ ಪರಿಷತ್‌ ಸದಸ್ಯೆ

ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆಯಿಲ್ಲ ಎಂಬುದು ಸಿಎಂ ಕುಮಾರಸ್ವಾಮಿ ಅವರ ಮಾತಿನಲ್ಲಿಯೇ ಅರ್ಥವಾಗುತ್ತದೆ. ಜನರಿಗೂ ಈ ಸರ್ಕಾರದ ಮೇಲೆ ನಂಬಿಕೆಯಿಲ್ಲ. ಅಧಿ ಕಾರ ನಡೆಸಿ ಇಲ್ಲವೇ ಅಧಿ ಕಾರದಿಂದ ಕೂಡಲೇ ಕೆಳಗಿಳಿಯಿರಿ.ಸಿಎಂ ಕೇವಲ ರಾಜೀನಾಮೆ ಕೊಡ್ತೀನಿ ಎಂದು ಹೇಳ್ಳೋದಲ್ಲ. ಇದು ಅವರಿಗೆ ಶೋಭೆ ತರುವಂತದ್ದಲ್ಲ.
– ಹಾಲಪ್ಪ ಆಚಾರ್‌, ಯಲಬುರ್ಗಾ ಶಾಸಕ

ಟಾಪ್ ನ್ಯೂಸ್

hkjkhgf

ಕೊರೊನಾಕ್ಕಿಂತ ಅಪಾಯಕಾರಿ ಈ ಒಮಿಕ್ರಾನ್‌ : ಏನಿದರ ಸ್ವರೂಪ, ಏಕೆ ಆತಂಕ?

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಸೋಲಿಗೆ ಟಿಕೆಟ್‌ ಕೊಡಿಸಿದವರೇ ಹೊಣೆ

ಸೋಲಿಗೆ ಟಿಕೆಟ್‌ ಕೊಡಿಸಿದವರೇ ಹೊಣೆ

ಕೇರಳ-ದ.ಕ. ಪ್ರವೇಶಕ್ಕೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ

ಕೇರಳ-ದ.ಕ. ಪ್ರವೇಶಕ್ಕೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ

ಒಮಿಕ್ರಾನ್‌ ಎಫೆಕ್ಟ್: ಮಹಾರಾಷ್ಟ್ರದಲ್ಲಿ ಮತ್ತೆ ಟೈಟ್‌ ರೂಲ್ಸ್‌

ಒಮಿಕ್ರಾನ್‌ ಎಫೆಕ್ಟ್: ಮಹಾರಾಷ್ಟ್ರದಲ್ಲಿ ಮತ್ತೆ ಟೈಟ್‌ ರೂಲ್ಸ್‌

ನಿವೃತ್ತಿಗೆ ಸರಿಯಾದ ವಯಸ್ಸು ಯಾವುದು?

ನಿವೃತ್ತಿಗೆ ಸರಿಯಾದ ವಯಸ್ಸು ಯಾವುದು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೋಲಿಗೆ ಟಿಕೆಟ್‌ ಕೊಡಿಸಿದವರೇ ಹೊಣೆ

ಸೋಲಿಗೆ ಟಿಕೆಟ್‌ ಕೊಡಿಸಿದವರೇ ಹೊಣೆ

ಪರ್ಸೆಂಟೇಜ್‌ ಆರೋಪ ಸದನ ಸಮಿತಿ ರಚನೆಗೆ ಡಿಕೆಶಿ ಆಗ್ರಹ

ಪರ್ಸೆಂಟೇಜ್‌ ಆರೋಪ ಸದನ ಸಮಿತಿ ರಚನೆಗೆ ಡಿಕೆಶಿ ಆಗ್ರಹ

ಮೊದಲನೇ ಸುತ್ತಿನ ಸಿಇಟಿ ಸೀಟು ಹಂಚಿಕೆ ಫ‌ಲಿತಾಂಶ ಪ್ರಕಟ

ಮೊದಲನೇ ಸುತ್ತಿನ ಸಿಇಟಿ ಸೀಟು ಹಂಚಿಕೆ ಫ‌ಲಿತಾಂಶ ಪ್ರಕಟ

ವಂಚಕ ಕಂಪನಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ : ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌

ವಂಚಕ ಕಂಪನಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ : ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌

ಗ್ರಾಮ ಪಂಚಾಯತಿಗೆ ಅನುದಾನ ನೀಡದೇ ಗ್ರಾಮಗಳ ಅಭಿವೃದ್ಧಿ ಕುಂಠಿತ : ಭೀಮಣ್ಣ ನಾಯ್ಕ

ಗ್ರಾಮ ಪಂಚಾಯತಿಗೆ ಅನುದಾನ ನೀಡದೇ ಗ್ರಾಮಗಳ ಅಭಿವೃದ್ಧಿ ಕುಂಠಿತ : ಭೀಮಣ್ಣ ನಾಯ್ಕ

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

hkjkhgf

ಕೊರೊನಾಕ್ಕಿಂತ ಅಪಾಯಕಾರಿ ಈ ಒಮಿಕ್ರಾನ್‌ : ಏನಿದರ ಸ್ವರೂಪ, ಏಕೆ ಆತಂಕ?

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಸೋಲಿಗೆ ಟಿಕೆಟ್‌ ಕೊಡಿಸಿದವರೇ ಹೊಣೆ

ಸೋಲಿಗೆ ಟಿಕೆಟ್‌ ಕೊಡಿಸಿದವರೇ ಹೊಣೆ

ಕೇರಳ-ದ.ಕ. ಪ್ರವೇಶಕ್ಕೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ

ಕೇರಳ-ದ.ಕ. ಪ್ರವೇಶಕ್ಕೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.