ಕೊಲೆ ಯತ್ನ: ನಾಲ್ವರು ಆರೋಪಿಗಳ ಬಂಧನ

Team Udayavani, May 15, 2019, 3:02 AM IST

ಬೆಂಗಳೂರು: ಕ್ರಿಕೆಟ್‌ ಆಡುವಾಗ ನಡೆದ ಗಲಾಟೆ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದ ನಾಲ್ವರು ಆರೋಪಿಗಳನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಸುಬ್ರಹ್ಮಣ್ಯನಗರದ ಮಂಜುನಾಥ (27), ಗಾಯತ್ರಿನಗರದ ವಿನೋದ್‌ (28), ಮನೋಜ್‌ ಕುಮಾರ್‌(19) ಮತ್ತು ರಾಕೇಶ್‌ (19) ಬಂಧಿತರು. ಆರೋಪಿಗಳು ಏ.24ರಂದು ಮಂಜುನಾಥನಗರದ ಜೆ.ಸಿ.ಬೇಕರಿ ಸಮೀಪದ ಭರತ್‌ ಕುಮಾರ್‌ ಎಂಬಾತನ ಮೇಲೆ ಮಾರಕಾಸðಗಳಿಂದ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದರು.

ಸಂಜಯ್‌ನಗರದ ಮೈದಾನದಲ್ಲಿ ಕ್ರಿಕೆಟ್‌ ಆಡುವಾಗ ಭರತ್‌ಕುಮಾರ್‌ ಹಾಗೂ ಸ್ನೇಹಿತರ ಜತೆ ಆರೋಪಿಗಳು ವಾಗ್ವಾದ ನಡೆಸಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಏ.24ರಂದು ತಡರಾತ್ರಿ 12.30ರ ಸುಮಾರಿಗೆ ಮಂಜುನಾಥನಗರದ ಜೆ.ಸಿ.ಬೇಕರಿ ಬಳಿ ಬೈಕ್‌ನಲ್ಲಿ ಬಂದ ಆರೋಪಿಗಳು,

ಸ್ನೇಹಿತರಾದ ಪ್ರಮೋದ್‌ ಹಾಗೂ ಮಹೇಂದ್ರ ಜತೆ ಮಾತನಾಡುತ್ತಾ ನಿಂತಿದ್ದ ಭರತ್‌ಕುಮಾರ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಪರಿಣಾಮ ಭರತ್‌ ಕುಮಾರ್‌ ಕೈ ಮತ್ತು ಎದೆಗೆ ಗಂಭೀರ ಗಾಯವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ