ನಿಷೇಧಿತ ನೋಟುಗಳ ಬದಲಾವಣೆ ಯತ್ನ

ಬಿಬಿಎಂಪಿ ಉಪ ಗುತ್ತಿಗೆದಾರ ಸೇರಿ ಐವರ ಬಂಧನ | 80 ಲಕ್ಷ ರೂ. ಮೌಲ್ಯದ ಅಮಾನ್ಯಗೊಂಡ ನೋಟು ವಶ

Team Udayavani, Oct 27, 2021, 9:55 AM IST

ನಿಷೇಧಿತ ನೋಟುಗಳ ಬದಲಾವಣೆ ಯತ್ನ ಬಿಬಿಎಂಪಿ ಉಪ ಗುತ್ತಿಗೆದಾರ ಸೇರಿ ಐವರ ಬಂಧನ | 80 ಲಕ್ಷ ರೂ. ಮೌಲ್ಯದ ಅಮಾನ್ಯಗೊಂಡ ನೋಟು ವಶ

ಬೆಂಗಳೂರು: ಐದು ವರ್ಷಗಳ ಹಿಂದೆ ಅಮಾನ್ಯಗೊಂಡ 500 ಮತ್ತು 1000 ರೂ. ಮುಖ ಬೆಲೆಯ ನೋಟುಗಳು ಹಾಗೂ ಕಲರ್‌ ಜೆರಾಕ್ಸ್‌ನ ನಕಲಿ ನೋಟುಗಳ ಬದಲಾವಣೆಗೆ ಸಿದ್ಧತೆ ನಡೆಸಿದ್ದ ಬಿಬಿಎಂಪಿಯ ಉಪ ಗುತ್ತಿಗೆ ದಾರ ಸೇರಿ ಐವರು ಆರೋಪಿಗಳು ಗೋವಿಂದಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೆ.ಆರ್‌.ಪುರಂ ನಿವಾಸಿ ಸುರೇಶ್‌ ಕುಮಾರ್‌(32), ರಾಜಾಜಿನಗರ ನಿವಾಸಿ ರಾಮಕೃಷ್ಣ (32), ಆನೇಕಲ್‌ ನಿವಾಸಿ ಮಂಜುನಾಥ್‌ (43), ಹೊಂಗಸಂದ್ರದ ವೆಂಕಟೇಶ್‌(53), ದಯಾನಂದ(45) ಬಂಧಿತರು.

ಕೇರಳ ಮೂಲದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಅವರಿಂದ 80 ಲಕ್ಷ ರೂ. ಮೌಲ್ಯದ ಅಮಾನ್ಯಗೊಂಡಿರುವ 500 ಮತ್ತು 1000 ಮುಖ ಬೆಲೆಯ ನೋಟುಗಳು ಮತ್ತು ಐದು ಕೋಟಿ ರೂ. ಮೌಲ್ಯದ ಕಲರ್‌ ಜೆರಾಕ್ಸ್‌ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಪೈಕಿ ಸುರೇಶ್‌, ರಾಮಕೃಷ್ಣ ಬಟ್ಟೆ ವ್ಯಾಪಾರಿಗಳಾಗಿದ್ದಾರೆ. ಮಂಜು ನಾಥ್‌, ದಯಾನಂದ್‌ ರೈತರಾಗಿದ್ದು, ವೆಂಕಟೇಶ್‌ ಬಿಬಿಎಂಪಿಯ ಉಪ ಗುತ್ತಿಗೆದಾರನಾಗಿದ್ದಾನೆ. ಆರೋ ಪಿಗಳು ಪರಸ್ಪರ ಪರಿಚಯವಾಗಿದ್ದು, ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ;- ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ

ಇತ್ತೀಚೆಗೆ ಗೋವಿಂದಪುರ ಠಾಣಾ ವ್ಯಾಪ್ತಿಯ ಎಚ್‌ಬಿಆರ್‌ ಲೇಔಟ್‌ನ ಪೆಟ್ರೋಲ್‌ ಬಂಕ್‌ ಬಳಿ ಮೂವರು ಅರೋಪಿಗಳು ಹಳೆಯ ನೋಟುಗಳನ್ನು ಬದಲಾವಣೆ ಮಾಡಲು ಯತ್ನಿಸಿರುವ ಮಾಹಿತಿ ಮೇರೆಗೆ ಗೋವಿಂದ ಠಾಣೆ ಪೊಲೀಸರು ದಾಳಿ ನಡೆಸಿ ನಿಷೇಧಿತ 500 ಮತ್ತು 1000 ಮುಖ ಬೆಲೆಯ 45 ಲಕ್ಷ ರೂ. ಮೌಲ್ಯದ ನೋಟುಗಳನ್ನು ಜಪ್ತಿ ಮಾಡಲಾಗಿತ್ತು.

ಬಳಿಕ ಮೂವರು ನಿಷೇಧಿತ ನೋಟುಗಳ ಬದಲಾವಣೆಗೆ ಬಂದಿರುವುದಾಗಿ ಹೇಳಿದ್ದರು. ಅವರ ವಿಚಾರಣೆ ಯಲ್ಲಿ ಇತರೆ ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ಪಡೆದು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಕೇರಳದಿಂದ ಬಂದಿದ್ದ ನೋಟುಗಳು: ಅಲ್ಲದೆ, ಕೇರಳದ ಕಾಸರಗೋಡಿನಿಂದ ಕೋಟ್ಯಂತರ ರೂ. ನೋಟುಗಳು ಬರುತ್ತಿದ್ದು, ಅವುಗಳ ಬದಲಾವಣೆ ಮಾಡಿದರೆ ಇಂತಿಷ್ಟು ಕಮಿಷನ್‌ ನೀಡುವುದಾಗಿ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಕೇರಳದ ಬೇನೂರು-ಕುಂದಡುಕ್ಕುಂ ರಸ್ತೆಯಲ್ಲಿರುವ ಫಾರ್ಮ್ ಹೌಸ್‌ಗೆ ಆರೋಪಿಗಳನ್ನು ಕರೆದೊಯ್ದಾಗ ಅಲ್ಲಿಯೂ 500 ಮತ್ತು 1000 ರೂ. ಮುಖ ಬೆಲೆಂಯ ನೋಟುಗಳನ್ನು ಕಲರ್‌ ಜೆರಾಕ್ಸ್‌ ಮಾಡಿಸಿ ಮೂಟೆಗಳಲ್ಲಿ ತುಂಬಿಸಿ ಜೋಡಿಸಿದ್ದರು. ಕೆಲವೊಂದು ನೋಟುಗಳನ್ನು ಥರ್ಮಾಕೋಲ್‌ ಮೇಲೆ ಅಂಟಿಸಿ ಬಂಡಲ್‌ ರೀತಿಯಲ್ಲಿ ಮಾಡಿರುವುದು ಕಂಡುಬಂದಿದೆ. ಒಟ್ಟು 12 ಥರ್ಮಾಕೋಲ್‌ಗ‌ಳು ಹಾಗೂ 24 ಮೂಟೆಗಳಲ್ಲಿ ತುಂಬಿದ್ದ ಕಲರ್‌ ಜೆರಾಕ್ಸ್‌ ಮಾಡಿದ್ದ 5 ಕೋಟಿ ರೂ. ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

ರಿಕ್ಲೆಟನ್‌, ಮಗಾಲ: ದ. ಆಫ್ರಿಕಾ ಟೆಸ್ಟ್‌ ತಂಡದಲ್ಲಿಎರಡು ಹೊಸ ಮುಖ

ರಿಕ್ಲೆಟನ್‌, ಮಗಾಲ: ದ. ಆಫ್ರಿಕಾ ಟೆಸ್ಟ್‌ ತಂಡದಲ್ಲಿಎರಡು ಹೊಸ ಮುಖ

ಉದ್ಯೋಗ ನೀಡಿ ಆತ್ಮನಿರ್ಭರ ಸಾಕಾರಗೊಳಿಸಿ : ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್

ಉದ್ಯೋಗ ನೀಡಿ ಆತ್ಮನಿರ್ಭರ ಸಾಕಾರಗೊಳಿಸಿ : ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್

ವಿಧಾನ ಪರಿಷತ್‌ ಚುನಾವಣೆ: ಅವಧಿ ಮುಗಿದರೂ ಕ್ಷೇತ್ರದಲ್ಲಿ ಉಳಿದರೆ ಕಾನೂನು ಕ್ರಮ: ಡಿಸಿ

ವಿಧಾನ ಪರಿಷತ್‌ ಚುನಾವಣೆ: ಅವಧಿ ಮುಗಿದರೂ ಕ್ಷೇತ್ರದಲ್ಲಿ ಉಳಿದರೆ ಕಾನೂನು ಕ್ರಮ: ಡಿಸಿ

ಎಟಿಪಿ ಕಪ್‌-2022: ಸರ್ಬಿಯಾ ತಂಡದಲ್ಲಿ ಜೊಕೋವಿಕ್‌

ಎಟಿಪಿ ಕಪ್‌-2022: ಸರ್ಬಿಯಾ ತಂಡದಲ್ಲಿ ಜೊಕೋವಿಕ್‌

ಪಾಕಿಸ್ಥಾನದ ಸ್ಪಿನ್ನರ್‌ ಸಾಜಿದ್‌ ಖಾನ್‌ ಬೌಲಿಂಗ್‌ ದಾಳಿಗೆ ತತ್ತರಿಸಿದ ಬಾಂಗ್ಲಾ

ಪಾಕಿಸ್ಥಾನದ ಸ್ಪಿನ್ನರ್‌ ಸಾಜಿದ್‌ ಖಾನ್‌ ಬೌಲಿಂಗ್‌ ದಾಳಿಗೆ ತತ್ತರಿಸಿದ ಬಾಂಗ್ಲಾ

ಇಂದಿನಿಂದ ವಿಜಯ್‌ ಹಜಾರೆ ಟ್ರೋಫಿ ಏಕದಿನ ಸರಣಿ

ಇಂದಿನಿಂದ ವಿಜಯ್‌ ಹಜಾರೆ ಟ್ರೋಫಿ ಏಕದಿನ ಸರಣಿ

ಕೇನ್‌ ವಿಲಿಯಮ್ಸನ್‌ಗೆ ಎರಡು ತಿಂಗಳು ವಿಶ್ರಾಂತಿ

ಕೇನ್‌ ವಿಲಿಯಮ್ಸನ್‌ಗೆ ಎರಡು ತಿಂಗಳು ವಿಶ್ರಾಂತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಇಂದಿರಾಗಾಂಧಿ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ತೆರೆ

ಇಂದಿರಾಗಾಂಧಿ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ತೆರೆ

ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್‌ ವಿರುದ್ಧ ಎಫ್ಐಆರ್‌

ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್‌ ವಿರುದ್ಧ ಎಫ್ಐಆರ್‌

ಗುತ್ತಿಗೆಯಲ್ಲಿ ಅಕ್ರಮ : ನ್ಯಾಯಾಂಗ ತನಿಖೆ ಕೋರಿ ಎಎಪಿಯಿಂದ ರಾಜ್ಯಪಾಲರ ಭೇಟಿ

ಗುತ್ತಿಗೆಯಲ್ಲಿ ಅಕ್ರಮ : ನ್ಯಾಯಾಂಗ ತನಿಖೆ ಕೋರಿ ಎಎಪಿಯಿಂದ ರಾಜ್ಯಪಾಲರ ಭೇಟಿ

mantri mall

ಆಸ್ತಿ ತೆರಿಗೆ ಬಾಕಿ: ಮಂತ್ರಿಮಾಲ್‌ಗೆ ಬೀಗ..!

MUST WATCH

udayavani youtube

ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

ಹೊಸ ಸೇರ್ಪಡೆ

ಕುಕ್ಕೆ: ಇಂದು ಪಂಚಮಿ ರಥೋತ್ಸವ; ತೈಲಾಭ್ಯಂಜನ

ಕುಕ್ಕೆ: ಇಂದು ಪಂಚಮಿ ರಥೋತ್ಸವ; ತೈಲಾಭ್ಯಂಜನ

ರಿಕ್ಲೆಟನ್‌, ಮಗಾಲ: ದ. ಆಫ್ರಿಕಾ ಟೆಸ್ಟ್‌ ತಂಡದಲ್ಲಿಎರಡು ಹೊಸ ಮುಖ

ರಿಕ್ಲೆಟನ್‌, ಮಗಾಲ: ದ. ಆಫ್ರಿಕಾ ಟೆಸ್ಟ್‌ ತಂಡದಲ್ಲಿಎರಡು ಹೊಸ ಮುಖ

ಉದ್ಯೋಗ ನೀಡಿ ಆತ್ಮನಿರ್ಭರ ಸಾಕಾರಗೊಳಿಸಿ : ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್

ಉದ್ಯೋಗ ನೀಡಿ ಆತ್ಮನಿರ್ಭರ ಸಾಕಾರಗೊಳಿಸಿ : ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್

ವಿಧಾನ ಪರಿಷತ್‌ ಚುನಾವಣೆ: ಅವಧಿ ಮುಗಿದರೂ ಕ್ಷೇತ್ರದಲ್ಲಿ ಉಳಿದರೆ ಕಾನೂನು ಕ್ರಮ: ಡಿಸಿ

ವಿಧಾನ ಪರಿಷತ್‌ ಚುನಾವಣೆ: ಅವಧಿ ಮುಗಿದರೂ ಕ್ಷೇತ್ರದಲ್ಲಿ ಉಳಿದರೆ ಕಾನೂನು ಕ್ರಮ: ಡಿಸಿ

ಎಟಿಪಿ ಕಪ್‌-2022: ಸರ್ಬಿಯಾ ತಂಡದಲ್ಲಿ ಜೊಕೋವಿಕ್‌

ಎಟಿಪಿ ಕಪ್‌-2022: ಸರ್ಬಿಯಾ ತಂಡದಲ್ಲಿ ಜೊಕೋವಿಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.