ಆಟೋ ಚಾಲಕನ ಕತ್ತು ಕುಯ್ದು ಕೊಲೆ

Team Udayavani, Feb 27, 2020, 3:06 AM IST

ವಿನೋದ್‌ ಅಲಿಯಾಸ್‌ ಗುಂಡ

ಬೆಂಗಳೂರು: ನಗರದ ಎರಡು ಪ್ರತ್ಯೇಕ ಭಾಗಗಳಲ್ಲಿ ಬುಧವಾರ ಇಬ್ಬರ ಕೊಲೆ ನಡೆದಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಪ್ರಯಾಣಿಕರ ಸೋಗಿನಲ್ಲಿ ಆಟೋ ಹತ್ತಿದ್ದ ದುಷ್ಕರ್ಮಿಗಳು ದೇವರ ಜೀವನ ಹಳ್ಳಿಯ ಶ್ಯಾಂಪುರ ರೈಲ್ವೆ ಗೇಟ್‌ ಬಳಿ ಆಟೋ ಚಾಲಕ ವಿನೋದ್‌ ಅಲಿಯಾಸ್‌ ಗುಂಡ (30) ಎಂಬಾತನನ್ನು ಕತ್ತುಕುಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮತ್ತೂಂದೆಡೆ ಕೆ.ಆರ್‌ ಮಾರ್ಕೆಟ್‌ನಲ್ಲಿ ದುಷ್ಕರ್ಮಿ ಗಳು ರಮೇಶ್‌ (24) ಎಂಬಾತನನ್ನು ಕೊಂದಿದ್ದಾರೆ. ಎರಡೂ ಕೊಲೆ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಡಿ.ಜೆ.ಹಳ್ಳಿ ಹಾಗೂ ಕೆ.ಆರ್‌ ಮಾರ್ಕೆಟ್‌ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರಿಸಿದ್ದಾರೆ.

ಆಟೋಚಾಲಕ ವಿನೋದ್‌ ಬುಧವಾರ ಬೆಳಗ್ಗೆ ಎಂದಿನಂತೆ ಆಟೋ ಓಡಿಸಿಕೊಂಡಿ ದ್ದರು. 9 ಗಂಟೆ ಸುಮಾರಿಗೆ ಚಲಿಸುತ್ತಿದ್ದ ಆಟೋದಲ್ಲಿಯೇ ಶ್ಯಾಂಪುರ ಗೇಟ್‌ ಸಮೀಪ ಅವರ ಕತ್ತು ಕುಯ್ದು ಮಾರಕಾಸ್ತ್ರ ಗಳಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸಾರ್ವಜನಿಕರ ಕಣ್ಣೆದುರೇ ಈ ಭೀಕರ ಕೊಲೆ ನಡೆದಿದ್ದು, ಸ್ಥಳದಲ್ಲಿದ್ದವರು ಸಹಾ ಯಕ್ಕೆ ಬರುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಹೋದಾಗ ವಿನೋದ್‌ ಮೃತಪಟ್ಟಿ ದ್ದರು. ಪತ್ನಿ ಹಾಗೂ ಮೂವರು ಮಕ್ಕಳ ಜತೆ ವಿನೋದ್‌ ಶಾಂಪುರದಲ್ಲಿ ವಾಸವಿ ದ್ದರು. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ಗೊತ್ತಾಗಿಲ್ಲ. ವಿನೋದ್‌ಗೆ ಅಪರಾಧ ಹಿನ್ನೆಲೆಯೂ ಇರಲಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ಎದೆಗೆ ಇರಿದು ಕೊಲೆ: ಬುಧವಾರ ಮುಂಜಾನೆ ಕೆ.ಆರ್‌.ಮಾರುಕಟ್ಟೆಯಲ್ಲಿ ಮೂಟೆ ಹೊರುವ ಕೆಲಸ ಮಾಡಿಕೊಂಡಿದ್ದ ರಮೇಶ್‌ ಎಂಬಾತನ ಎದೆಗೆ ಇರಿದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕಾಟನ್‌ ಪೇಟೆ ಭಕ್ಷಿ ಗಾರ್ಡನ್‌ ನಿವಾಸಿ ರಮೇಶ್‌ ಮೂಟೆ ಹೊರುವ ಕೆಲಸಕ್ಕೆ ಬಂದಾಗ ಹಿಂಬಾಲಿಸಿದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಕೆಲ ದಿನಗಳ ಹಿಂದೆ ರಮೇಶ್‌ ಮಾರ್ಕೆಟ್‌ನಲ್ಲಿ ಕೆಲವರ ಜತೆ ಜಗಳವಾಡಿದ್ದ ಮಾಹಿತಿಯಿದೆ. ಅವರೇ ಕೊಲೆ ಮಾಡಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ