ಆಟೋ ಬಾಡಿಗೆ ದರ ಏರಿಕೆ..!

Team Udayavani, Dec 1, 2021, 11:38 AM IST

riksha benglore

Representative Image used

ಬೆಂಗಳೂರು: ನಿರೀಕ್ಷೆಯಂತೆ ಬುಧವಾರ ದಿಂದ ನಗರದಲ್ಲಿ ಆಟೋ ಪ್ರಯಾಣ ಜನರ ಜೇಬು ಸುಡಲಿದೆ. ಕನಿಷ್ಠ 5 ರೂ.ಯಿಂದ ಗರಿಷ್ಠ 15 ರೂ.ವರೆಗೆ ಈ ದರ ಏರಿಕೆ ಬಿಸಿ ತಟ್ಟಲಿದೆ. ಇದರೊಂದಿಗೆ ತೈಲ, ಅಡುಗೆ ಎಣ್ಣೆ ಮತ್ತು ಅನಿಲ ದರ ಏರಿಕೆ ಜತೆಗೆ ಈಗ ಆಟೋ ಬಾಡಿಗೆ ಕೂಡ ಸೇರಿದಂತಾಗಿದೆ.

ನ.8ರಂದು ಈ ಸಂಬಂಧ ಆದೇಶ ಹೊರಡಿಸಲಾಗಿತ್ತು. ಅದರಂತೆ ಡಿ.1ರಿಂದ ಅಧಿಕೃತವಾಗಿ ಈ ಪರಿಷ್ಕೃತ ದರ ಜಾರಿಗೆ ಬರಲಿದೆ. ಪ್ರಸ್ತುತ ಬಾಡಿಗೆ ಆಟೋ ಕನಿಷ್ಠ ದರ (ಮೊದಲ ಎರಡು ಕಿ.ಮೀ.ಗೆ) 25 ರೂ. ಇದೆ. ಪರಿಷ್ಕೃತ ದರ 30 ರೂ. ಆಗಲಿದೆ. ಮೂವರು ಪ್ರಯಾಣಿಕರಿಗೆ ಮಾತ್ರ ಅವಕಾಶ ಇರಲಿದೆ.

ಅದೇ ರೀತಿ, 2 ಕಿ.ಮೀ. ನಂತರದ ಪ್ರತಿ ಕಿ. ಮೀ. ಗೆ 15 ರೂ. ದರ ನಿಗದಿಪಡಿಸಲಾಗಿದೆ. ಪ್ರಸ್ತುತ ಈ ದರ 13 ರೂ. ಇದೆ. ಇನ್ನು ಮೊದಲ ಐದು ನಿಮಿಷ ಕಾಯುವಿಕೆಗೆ ಯಾವು ದೇ ದರ ವಿಧಿಸುವಂತಿಲ್ಲ. ಮೊದಲ ಹದಿನೈದು ನಿಮಿಷಗಳ ನಂತರ ಮತ್ತು ಪ್ರತಿ ಹದಿನೈದು ನಿಮಿಷಕ್ಕೆ 5 ರೂ. ವಿಧಿಸಲು ಅನುಮತಿ ನೀಡಲಾಗಿದೆ. ಲಗೇಜು ದರ ಮೊದಲ 20 ಕೆಜಿ ಉಚಿತವಾಗಿದ್ದು, 20 ಕೆಜಿ ನಂತÃ ದ ಪ್ರತಿ 20 ಕೆಜಿ ಅಥವಾ ಅದರ ಭಾಗಕ್ಕೆ ತಲಾ 5 ರೂ. ಮತ್ತು ಗರಿಷ್ಠ ಪ್ರಯಾ ಣಿಕರ ಲಗೇಜು 50 ಕೆಜಿಗೆ ಮಿತಿ ಗೊಳಿಸಲಾಗಿದೆ. ಪ್ರಸ್ತುತ ಲಗೇಜು ದರ ಮೊದಲ 20 ಕೆಜಿಗೆ 2 ರೂ. ಇತ್ತು.

ಇದನ್ನೂ ಓದಿ;- ಗುಂಡಿನ ದಾಳಿ ನಡೆಸಿದ ಹೈಸ್ಕೂಲ್ ವಿದ್ಯಾರ್ಥಿ; ಮೂವರು ವಿದ್ಯಾರ್ಥಿಗಳು ಸಾವು, 8 ಮಂದಿಗೆ ಗಾಯ

ಇನ್ನು ರಾತ್ರಿ ವೇಳೆ ಅಂದರೆ 10ರಿಂದ ಬೆಳಗಿನಜಾವ 5ರವರೆಗೆ ಸಾಮಾನ್ಯ ದರದ ಜತೆಗೆ ಅದರ ಅರ್ಧಪಟ್ಟು ಅಂದರೆ ಒಂದೂವರೆಪಟ್ಟು ನಿಗದಿಪಡಿಸಲಾಗಿದೆ. ಉದಾಹರಣೆಗೆ ಹಗಲಿನಲ್ಲಿ ಸಾಮಾನ್ಯದರ 30 ರೂ. ಇದ್ದರೆ, ರಾತ್ರಿ ವೇಳೆ 45 ರೂ. ಆಗಿರಲಿದೆ. ನ. 6ರಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಉಪ ಸಮಿತಿಯ ಶಿಫಾರಸಿನಂತೆ ಈ ದರ ಪರಿಷ್ಕರಿಸಿ ಆದೇಶಿಸಲಾಗಿದೆ. ಅನುಮೋದಿಸಲ್ಪಟ್ಟ ಪರಿಷ್ಕೃತ ದರಗಳನ್ನು ಮೀಟರ್‌ನಲ್ಲಿ ಪ್ರದರ್ಶನವಾಗುವಂತೆ 2022ರ ಫೆಬ್ರವರಿ ಅಂತ್ಯದೊಳಗೆ ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಕಂಪನಿಗಳು ಹಿಂದೇಟು ಹಾಕಿದ್ರೆ, ಹೋರಾಟ

ಸಾಮಾನ್ಯ ಆಟೋ ಬಾಡಿಗೆಗಳಿಗೆ ಮಾತ್ರವಲ್ಲ; ಒಲಾ ಮತ್ತು ಉಬರ್‌ ಅಡಿ ಕಾರ್ಯಾಚರಣೆ ಮಾಡುತ್ತಿರುವ ಆಟೋಗಳಿಗೂ ಇದೇ ದರವನ್ನು ಆಯಾ ಕಂಪೆನಿಗಳು ನಿಗದಿಪಡಿಸಬೇಕು. ಈ ಮೂಲಕ ನಗರದ ಎಲ್ಲ ಆಟೋಗಳಿಗೆ ಏಕರೂಪದ ಬಾಡಿಗೆ ದರ ಜಾರಿಗೊಳ್ಳಬೇಕು. ಇಲ್ಲವಾದರೆ, ಆ ಚಾಲಕರಿಗೆ ಅನ್ಯಾಯ ಆಗಲಿದೆ. ಒಂದು ವೇಳೆ ಇದಕ್ಕೆ ಕಂಪನಿಗಳು ಹಿಂದೇಟು ಹಾಕಿದರೆ, ಹೋರಾಟ ನಡೆಸಲಾಗುವುದು ಎಂದು ಒಲಾ-ಉಬರ್‌ ಚಾಲಕರ ಸಂಘದ ಮುಖ್ಯಸ್ಥ ತನ್ವೀರ್‌ ಪಾಷಾ ಎಚ್ಚರಿಸಿದ್ದಾರೆ.

ಟಾಪ್ ನ್ಯೂಸ್

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ಪ್ರೊ ಕಬಡ್ಡಿ: ದಬಾಂಗ್‌ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು

ಪ್ರೊ ಕಬಡ್ಡಿ: ದಬಾಂಗ್‌ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು: ಪ್ರಧಾನಿ ಮೋದಿ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂರು ತಿಂಗಳೊಳಗೆ ಬಿಬಿಎಂಪಿ ಚುನಾವಣೆ ನಡೆಸುತ್ತೇವೆ: ಸಚಿವ ಸೋಮಣ್ಣ

ಮೂರು ತಿಂಗಳೊಳಗೆ ಬಿಬಿಎಂಪಿ ಚುನಾವಣೆ ನಡೆಸುತ್ತೇವೆ: ಸಚಿವ ಸೋಮಣ್ಣ

1-wqqwe

ಬೈಕ್‌ ಟ್ಯಾಕಿಗೆ ಕಡಿವಾಣ ಹಾಕಲು ಆಟೋ ಚಾಲಕರ ಆಗ್ರಹ

arrested

ವಂಚನೆ: ಆಯೇಷಾ ಅಮಿನಾ ಟ್ರಸ್ಟ್‌ನ ಟ್ರಸ್ಟಿ ಸೆರೆ

rape

ಮ್ಯಾಟ್ರಿಮೋನಿಯಲ್‌ ಪರಿಚಯ: ಯುವತಿ ಖಾಸಗಿ ಫೋಟೋ ಸೆರೆಹಿಡಿದು ಬ್ಲ್ಯಾಕ್‌ಮೇಲ್

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ಪ್ರೊ ಕಬಡ್ಡಿ: ದಬಾಂಗ್‌ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು

ಪ್ರೊ ಕಬಡ್ಡಿ: ದಬಾಂಗ್‌ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.