ಕಟ್ಟಡ ಕುಸಿತ ಘಟನೆಗಳಿಂದ ಎಚ್ಚೆತ್ತ ಬಾಡಿಗೆದಾರರು

ವಿಚಾರಣೆ: ಈಗ ಬಾಡಿಗೆದಾರರ ಸರದಿ | ಬಾಡಿಗೆ ಚೌಕಾಸಿಗಿಂತ ಮನೆ ಗುಣಮಟ್ಟ ನೋಡುತ್ತಿರುವ ಬಾಡಿಗೆದಾರರು

Team Udayavani, Oct 22, 2021, 10:35 AM IST

Awake tenants from building collapse incidents

ಬೆಂಗಳೂರು: ಕೇವಲ ವರ್ಷದ ಹಿಂದಿನ ಮಾತು. ಹೊರಗಡೆಯಿಂದ ಬಂದವರಿಗೆ ಬಾಡಿಗೆ ನೀಡಲು ಮಾಲೀಕರೇ ಹಿಂದೇಟು ಹಾಕುತ್ತಿದ್ದರು. ಆದರೆ, ಈ ಪರಿಸ್ಥಿತಿ ತದ್ವಿರುದ್ಧವಾಗಿದೆ. ಬಾಡಿಗೆದಾರರು ಮನೆಗಳ ಗುಣಮಟ್ಟ ಪರೀಕ್ಷಿಸಿ ಕಾಲಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದಕ್ಕೆ ಕಾರಣ ಇಪ್ಪತ್ತು ದಿನಗಳಲ್ಲಿ ನಗರದಲ್ಲಿ ವರದಿಯಾದ ಕಟ್ಟಡ ಕುಸಿತ ಘಟನೆಗಳು ! ಕೊರೊನಾ ಮೊದಲ ಮತ್ತು ಎರಡನೇ ಅಲೆಯು ತೀವ್ರವಿದ್ದ ಸಂದರ್ಭದಲ್ಲಿ ಬಾಡಿಗೆ ಅಥವಾ ಭೋಗ್ಯಕ್ಕೆಂದು ಮನೆ ಕೇಳಿಕೊಂಡು ಬರುವವರನ್ನು ಕಟ್ಟಡ ಮಾಲೀಕರು ಕೊರೊನಾ ನೆಗೆಟಿವ್‌ ವರದಿ ಇದೆಯೇ? ಇತ್ತೀಚೆಗೆ ಕೊರೊನಾ ಬಂದಿತ್ತಾ? ಎಲ್ಲಿ ಕೆಲಸ ಮಾಡುತ್ತೀರೀ? ಎಂಬ ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದರು. ಯಾಕೆ ಎಂದು ಕೇಳಿದರೆ ಮನೆಯಲ್ಲಿ ಹಿರಿಯರು, ಚಿಕ್ಕಮಕ್ಕಳಿದ್ದಾರೆ ಆರೋಗ್ಯ ರಕ್ಷಣೆಗೆ ಮುಂಜಾಗ್ರತೆ ಎಂದು ಉತ್ತರಿಸುತ್ತಿದ್ದರು.

ಆದರೆ, ಅಕ್ಟೋಬರ್‌ನಿಂದೀಚೆಗೆ ನಗರ ದಲ್ಲಿ 10ಕ್ಕೂ ಹೆಚ್ಚು ಕಟ್ಟಡಗಳು ಕುಸಿತವಾಗಿ ದ್ದು, 568 ಕಟ್ಟಡಗಳು ಶಿಥಿಲವಾಗಿವೆ ಎಂದು ಬಿಬಿಎಂಪಿ ಸಮೀಕ್ಷೆಯಲ್ಲಿ ಗುರುತಿಸಿದೆ. ಅಲ್ಲದೆ, 5000ಕ್ಕೂ ಅಧಿಕ ಮನೆಗಳು ಅನುಮತಿಗಿಂತ ಹೆಚ್ಚು ಎತ್ತರ ಕಟ್ಟಿಸಿದ್ದು, ಅಕ್ರಮಕಟ್ಟಡಗಳ ಪಟ್ಟಿಯಲ್ಲಿವೆ. ನಗರ ವಾಸಿಗಳು ಆತಂಕ ದಲ್ಲಿದ್ದಾರೆ. ಇದರಿಂದಾಗಿ ಮನೆಯ ಮಾಲೀಕರಿಗೆ ಬಾಡಿಗೆದಾರರು ಯಾವಾಗ ಮನೆ ನಿರ್ಮಾಣವಾಗಿದೆ, ಎಷ್ಟು ಅಂತಸ್ಥಿಗೆ ಅನುಮತಿ ಪಡೆದಿದ್ದೀರಿ, ನಿರ್ವಹಣೆ ಮಾಡುತ್ತಿದ್ದೀರಾ? ಗುಣಮಟ್ಟ ಪರಿಶೀಲನೆ ಮಾಡಲಾಗಿದೆಯೇ? ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ.

ಈಗಾಗಲೇ ನಗರದ ಹಲವೆಡೆ ಬಾಡಿಗೆದಾದರರು ತಮ್ಮ ಮನೆಯ ಮಾಲೀಕರಿಗೆ ಈ ಬಗ್ಗೆ ವಿಚಾರಿಸುತ್ತಿದ್ದಾರೆ. ಇನ್ನು ಕೆಲವರು ಹಳೆ ಮನೆಗಳನ್ನು ಬಿಟ್ಟು ಹೊಸ ಅಥವಾ ಸುಸ್ಥಿರ ಮನೆಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನು ಕೊರೊನಾದಿಂದ ಸಾಕಷ್ಟು ಮಂದಿ ಬೆಂಗಳೂರು ತೊರೆದಿದ್ದು, ಸಾಕಷ್ಟು ಮನೆಗಳು ಬಾಡಿಗೆಗೆ ಲಭ್ಯವಿರುವ ಕಾರಣ ಮನೆ ಬದಲಾವಣೆಗೆ ಅನುಕೂಲಕರವಾಗಿದೆ.

ಇದನ್ನೂ ಓದಿ:– 200 ಕೋಟಿ ವೆಚ್ಚದಲ್ಲಿ ಕಲಾಗ್ರಾಮ ಸ್ಥಾಪನೆ ಯೋಜನೆ

ಘಟನೆಗಳಿಂದ ಎಚ್ಚೆತ್ತ ಬಾಡಿಗೆದಾರರು!: ಸೆ.27 ಲಕ್ಕಸಂದ್ರ, ಅ.8 ರಂದು ಕುಸಿದ ಕಸ್ತೂರಿ ನಗರದ ಕಟ್ಟಡ, ಅ.13 ರಂದು ಕಮಲನಗರ ಕಟ್ಟಡ, ಅ.17 ರಂದು ರಾಜಾಜಿನಗರ ಕಟ್ಟಡ ಸೇರಿದಂತೆ ಬಹುತೇಕ ಕಟ್ಟಡ ಕುಸಿತ ಪ್ರಕರಣಗಳಲ್ಲಿ ಬಾಡಿಗೆ ದಾರರು ಅತಂತ್ರವಾಗಿದ್ದಾರೆ. ಒಂದು ಕ್ಷಣ ಮೈರೆತಿದ್ದರು ಜೀವಕ್ಕೆ ಹಾನಿಯಾಗುತ್ತಿತ್ತು. ಇನ್ನು ಘಟನೆಯಿಂದ ಜೀವಹಾನಿಯಾಗದಿ ದ್ದರೂ, ಜೀವನ ಪೂರ್ತಿ ದುಡಿದು ಸಂಪಾ ದಿಸಿದ್ದ ಹಣದಲ್ಲಿ ಖರೀದಿಸಿದ್ದ ಗೃಹೋಪಯೋಗಿ ವಸ್ತುಗಳು, ಒಡವೆ, ಪ್ರಮುಖ ಕಾಗದ ಪತ್ರಗಳು ನಾಶವಾದವು.

ದಿನಪೂರ್ತಿ ಬೀದಿಯಲ್ಲಿ ನಿಂತು ಕಣ್ಣೀರು ಹಾಕಿದ್ದರು. ಅಲ್ಲದೆ, ಮಾಲೀಕರು ಲೀಸ್‌ ಹಣ , ಬಾಡಿಗೆ ಮುಂಗಡ ಹಣ ಹಿಂದಿರುಗಿಸದ ಪರಿಸ್ಥಿತಿಯಲಿದ್ದಾರೆ. ಇಂದಿಗೂ ಹಲವರು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಬಾಡಿಗೆದಾರರಿಗೆ ಉಂಟಾದ ನಷ್ಟವನ್ನು ಬಿಬಿಎಂಪಿ ಬರಿಸುವುದಿಲ್ಲ ಎಂದು ತಿಳಿಸಿದ್ದು, ಮಾಲೀಕರನ್ನೆ ಅವಲಂಭಿಸಬೇಕಿದೆ. ಆದರೆ, ಘಟನೆಯಿಂದ ಮಾಲೀಕರು ಕೂಡಾ ಹಣ ಹಿಂದಿರುಗಿಸುವ ಅಥವಾ ನಷ್ಟ ಪರಿಹಾರ ಮಾಡಿಕೊಡುವ ಸ್ಥಿತಿಯಲ್ಲಿಲ್ಲ. ಈ ಎಲ್ಲಾ ಅಂಶಗಳಿಂದ ಬಾಡಿಗೆದಾರರು ಎಚ್ಚೆತ್ತಕೊಂಡಿದ್ದಾರೆ.

  • ಅಕ್ಟೋಬರ್‌ನಿಂದೀಚೆಗೆ ನಗರದಲ್ಲಿ 10ಕ್ಕೂ ಹೆಚ್ಚು ಕಟ್ಟಡಗಳು ಕುಸಿತ
  • ಘಟನೆಗಳಿಂದ ಎಚ್ಚೆತ್ತ ಬಾಡಿಗೆದಾರರು!

ಬಾಡಿಗೆದಾರರೇ ಗಮನಿಸಿ…

  • ಕಟ್ಟಡದ ಗೋಡೆ ಬಿರುಕು ಬಿಟ್ಟಿದೆಯೇ? ಅಥವಾ ನೀರು ತೊಟ್ಟಿಕ್ಕುತ್ತಿದೆಯೇ?
  • ಮಾಲೀಕರು ಕಟ್ಟಡ ನಿರ್ವಹಣೆ ಮಾಡಲಾಗುತ್ತಿದೆಯೇ.
  • ಸಾಧ್ಯವಾದರೆ ಕಾಗದ ಪತ್ರ ಪಡೆದು ಅನುಮತಿ ಅನುಸಾರ ನಿರ್ಮಿಸಿದ್ದಾರೆಯೇ?
  • ಮನೆಯ ಅಕ್ಕಪಕ್ಕ ಶಿಥಿಲ ಕಟ್ಟಡಗಳಿವೆಯೇ?
  • ರಾಜಕಾಲುವೆ, ಕೆರೆ ಒತ್ತುವರಿ ಮಾಡಲಾಗಿದೆಯೇ?
  • 30 ವರ್ಷದ ಹಿಂದಿನ ಕಟ್ಟಡವಾಗಿದ್ದರೆ ಗುಣಮಟ್ಟ ಪರೀಕ್ಷೆ ಮಾಡಿಸಿದ್ದಾರೆಯೇ?
  • ನಿಯಮಕ್ಕಿಂತ ಹೆಚ್ಚು ಅಂತಸ್ತು ನಿರ್ಮಿಸಿದ್ದಾರೆ?

ನಮ್ಮ ಕಟ್ಟಡವು 30 ವರ್ಷದ ಹಿಂದೆ ನಿರ್ಮಿಸಿದ್ದು, ನೀರು ತೊಟ್ಟಿಕ್ಕುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಮನೆ ಬದಲಾವಣೆಗೆ ಮುಂದಾಗಿದ್ದೇವೆ. ಸದ್ಯ ನಗರದಲ್ಲಿ ಸಾಕಷ್ಟು ಮನೆ ಖಾಲಿ ಇದ್ದು, ಸಮಸ್ಯೆಯಾಗುವುದಿಲ್ಲ. –ಆಕಾಶ್‌, ಬಾಡಿಗೆದಾರರು,

ನಾಗಸಂದ್ರ ವೃತ್ತ ಘಟನೆಗಳಿಂದ ಎಚ್ಚೆತ್ತುಕೊಂಡಿದ್ದೇವೆ. ಬಾಡಿಗೆ ಚೌಕಾಸಿಗೆ ಸೀಮಿತವಾಗದೇ, ಕಟ್ಟಡ ಬಗ್ಗೆ ಮಾಲೀಕರ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ದಾಖಲಾತಿಗಳು ಸರಿ ಇದ್ದು, ಬಾಡಿಗೆ ಮನೆ ಮುಂದುವರಿಸಿದ್ದೇವೆ. ಇದೇ ರೀತಿ ನಗರ ವಾಸಿಗಳು ಮುಂಜಾಗ್ರತಾ ಕ್ರಮಕೈಗೊಳ್ಳುವುದು ಒಳಿತು.  ಆನಂದ ಹಳ್ಳೂರ್‌,

ಬಿಟಿಎಂ ನಿವಾಸಿ. 5000ಕ್ಕೂ ಹೆಚ್ಚು ಅನಧಿಕೃತ ನಿರ್ಮಾಣ ಕಟ್ಟಡಗಳಿವೆ. 500ಕ್ಕೂ ಅಧಿಕ ಶಿಥಿಲ ಕಟ್ಟಡಗಳಿವೆ. ಹೀಗಾಗಿ, ಬಾಡಿಗೆದಾರರು ತಾವು ವಾಸಿಸುವ ಕಟ್ಟಡದ ಮಾಹಿತಿ ಪಡೆದು ಪರಿಶೀಲನೆ ನಡೆಸಿಕೊ ಳ್ಳುವುದು ಒಳಿತು.ಶ್ರೀನಿವಾಸ, ನಿವೃತ್ತ ಎಂಜಿನಿಯರ್‌

ಟಾಪ್ ನ್ಯೂಸ್

Untitled-2

ಬೀದರ್: ಬಿಸಿಯೂಟದಲ್ಲಿ ಮೊಟ್ಟೆ: ಯೋಜನೆ ಕೈಬಿಡಲು ಆಗ್ರಹ

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 195 ಅಂಕ ಇಳಿಕೆ; 17 ಸಾವಿರಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 195 ಅಂಕ ಇಳಿಕೆ; 17 ಸಾವಿರಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಡಿಕೆಶಿ, ಸಿದ್ಧರಾಮಯ್ಯನವರು ಭಂಡಾಸುರ- ಮಂಡಾಸುರರು: ಶ್ರೀರಾಮುಲು

ಡಿಕೆಶಿ, ಸಿದ್ಧರಾಮಯ್ಯನವರು ಭಂಡಾಸುರ- ಮಂಡಾಸುರರು: ಶ್ರೀರಾಮುಲು

ಯಾವುದೇ ಕಾರಣಕ್ಕೂ ಸನ್ ಬರ್ನ್ ಸಂಗೀತೋತ್ಸವಕ್ಕೆ ಅವಕಾಶ ನೀಡುವುದಿಲ್ಲ: ಪ್ರಮೋದ್ ಸಾವಂತ್

ಯಾವುದೇ ಕಾರಣಕ್ಕೂ ಸನ್ ಬರ್ನ್ ಸಂಗೀತೋತ್ಸವಕ್ಕೆ ಅವಕಾಶ ನೀಡುವುದಿಲ್ಲ: ಪ್ರಮೋದ್ ಸಾವಂತ್

ಟ್ರೈಲರ್ ನಲ್ಲಿ ಮಿಂಚು ಹರಿಸಿದ ರಣವೀರ್ ಸಿಂಗ್ ಅಭಿನಯದ ‘83’

ಟ್ರೈಲರ್ ನಲ್ಲಿ ಮಿಂಚು ಹರಿಸಿದ ರಣವೀರ್ ಸಿಂಗ್ ಅಭಿನಯದ ‘83’

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

highcourt of karnataka

ಜೂಜಾಟ ಆರೋಪ: ಪ್ರಕರಣ ರದ್ದು

finance minister

5 ಲಕ್ಷದವರೆಗಿನ ಠೇವಣಿ ವಿಮೆ ಮರುಪಾವತಿ

education meet

ಅಸ್ಸಾಂ ಸಿಎಂ ಭೇಟಿಯಾದ ಅಶ್ವತ್ಥ ನಾರಾಯಣ

ಕಡಲೆಕಾಯಿ ಪರಿಷೆ

ಮೂರು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆ

fake id

ಇನ್ಫೋಸಿಸ್‌ ಕಂಪನಿ ನಕಲಿ ಐಡಿ ಬಳಸಿ ವಂಚನೆ

MUST WATCH

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

udayavani youtube

ಉಡುಪಿ-ಕಾಸರಗೋಡು 400KV ವಿದ್ಯುತ್ ಮಾರ್ಗ ವಿರೋಧಿಸಿ ರೈತರ ಬೃಹತ್ ಪ್ರತಿಭಟನೆ

udayavani youtube

Side effects ಇಲ್ಲ ಎಂದು ಖುದ್ದು DC ಬರೆದುಕೊಟ್ಟರು !

udayavani youtube

ಈ ನೀರು ಕುಡಿದ್ರೆ ಕೊರೋನಾ, ಓಮಿಕ್ರಾನ್ ಅಲ್ಲ ಇನ್ನೂ ಅಪಾಯಕಾರಿ ರೋಗ ಬರಬಹುದು

ಹೊಸ ಸೇರ್ಪಡೆ

ಆರೋಗ್ಯ ಕಾಳಜಿಗೆ ಪೊಲೀಸರಿಗೆ ಡಿಸಿ ಸಲಹೆ

ಆರೋಗ್ಯ ಕಾಳಜಿಗೆ ಪೊಲೀಸರಿಗೆ ಡಿಸಿ ಸಲಹೆ

ಆಹಾರದ ಕೊರತೆ ಇಲ್ಲ

ದೇಶದಲ್ಲಿ ಆಹಾರ ಪದಾರ್ಥಗಳ ಕೊರತೆ ಇಲ್ಲ

Untitled-2

ಬೀದರ್: ಬಿಸಿಯೂಟದಲ್ಲಿ ಮೊಟ್ಟೆ: ಯೋಜನೆ ಕೈಬಿಡಲು ಆಗ್ರಹ

ಎಲ್ಲರಿಗೂ ಪ್ರಥಮ ಚಿಕಿತ್ಸೆ ಮಾಹಿತಿ ಅಗತ್ಯ

ಎಲ್ಲರಿಗೂ ಪ್ರಥಮ ಚಿಕಿತ್ಸೆ ಮಾಹಿತಿ ಅಗತ್ಯ

ಅಪ್ಪು ನೆನಪು

ಗುಡ್ಡೇನಹಳ್ಳಿಯಲ್ಲಿ ಅಪ್ಪು ನೆನಪಿನಲ್ಲಿ ಆರೋಗ್ಯ ಶಿಬಿರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.