ಬೆಂಗಳೂರು ಹನಿಟ್ರ್ಯಾಪ್‌


Team Udayavani, Nov 20, 2017, 10:42 AM IST

Honey-Trap.jpg

ಇದು ಹನಿಟ್ರ್ಯಾಪ್‌ ಕಥೆ…!
ಮತ್ತೂಬ್ಬರ ತೆಕ್ಕೆಯಲ್ಲಿ ಗೊತ್ತಿಲ್ಲದೇ ಬೀಳುವ ವ್ಯಥೆ. ಬೆಂಗಳೂರಂಥ ಬೆಂಗಳೂರೇ ಈಗ ಹನಿಟ್ರ್ಯಾಪ್‌ ಕಹಾನಿಗೆ ಬೆಚ್ಚಿ ಕೂರುತ್ತಿದೆ. ದುಡ್ಡಿರುವವರನ್ನೇ ಗುರಿಯಾಗಿಟ್ಟುಕೊಂಡು, ಸುಲಭವಾಗಿಯೇ ಖೆಡ್ಡಾಗೆ ಬೀಳಿಸಿಕೊಂಡು ಹಣ ಮಾಡುತ್ತಿರುವವರ ಉಪಟಳ ಹೆಚ್ಚಾಗುತ್ತಿದ್ದು, ಮರ್ಯಾದೆಗೆ ಅಂಜಿ ದೂರುಕೊಡುವವರ ಸಂಖ್ಯೆಯೂ ಕಡಿಮೆ ಇದೆ. ಆದರೆ ಒಂದಿಬ್ಬರು ಧೈರ್ಯ ಮಾಡಿ ತಮ್ಮ ಕಥೆ ಬಯಲು ಮಾಡಿದಾಗ, ಈ ಹನಿಲೋಕದ ಮಾಯಾಜಾಲ ಅನಾವರಣಗೊಳ್ಳುತ್ತದೆ.

ಖೆಡ್ಡಾಕ್ಕೆ ಬೀಳಿಸಿದ ಫೇಸ್‌ಬುಕ್‌ ಸ್ನೇಹ
ಫೇಸ್‌ಬುಕ್‌ ರೂಪದಲ್ಲಿ ಬಂದ ಸ್ನೇಹ, ಕರೆಯ ರೂಪದಲ್ಲಿ ಶುರುವಾದ ಸಂಬಂಧ… ಹೇಗೆ ಶ್ರೀಮಂತ ವ್ಯಕ್ತಿಯೊಬ್ಬನನ್ನು ಖೆಡ್ಡಾಗೆ ಬೀಳಿಸಬಹುದು ಎಂಬುದಕ್ಕೆ ಈ ಕಥೆಯೇ ಸಾಕ್ಷಿ!

ರಿಯಲ್‌ ಎಸ್ಟೇಟ್‌ ಅಂದರೆ ಅದು ಲಕ್ಷಗಳಲ್ಲ, ಕೋಟಿಗಳ ಲೆಕ್ಕಾಚಾರದ ವ್ಯವಹಾರ. ತನ್ನ ಈ ವ್ಯವಹಾರವೇ ಬಿಡಿಸಿಕೊಳ್ಳಲಾರದ ಖೆಡ್ಡಾವೊಂದಕ್ಕೆ ಬೀಳಿಸಬಹುದು ಎಂಬ ಕಿಂಚಿತ್ತೂ ಅನುಮಾನವೇ ಇರಲಿಲ್ಲ ಅವನಿಗೆ. ಆದರೆ ಫೇಸ್‌ಬುಕ್‌ನಲ್ಲಿನ ಸ್ನೇಹದ ಕೋರಿಕೆ ರೂಪದಲ್ಲಿ ಬಂದ ಆಕೆ, ಈ ರಿಯಲ್‌ ಕುಳವನ್ನು ತನ್ನ ಹನಿಖೆಡ್ಡಾದಲ್ಲಿ ಬೀಳಿಸಿಕೊಂಡು ಬಿಟ್ಟಿದ್ದಳು. ಯಾರು ಇಲ್ಲದ ವೇಳೆಯಲ್ಲಿ ಮನೆಗೆ ಕರೆದು, ಆತನ ಮರ್ಯಾದೆಯನ್ನೇ ತನ್ನ ಬಂಡವಾಳ ಮಾಡಿಕೊಂಡು ಬಿಟ್ಟಳು. 

ಹೌದು, ಈ ಕಥೆ ಹಾಗೆಯೇ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಆಕೆ, ದಿನದಿಂದ ದಿನಕ್ಕೆ ಮೊಬೈಲ್‌
ಕರೆಗಳು ಮತ್ತು ಸಂದೇಶಗಳ ರೂಪದಲ್ಲಿ ಹತ್ತಿರವಾಗುತ್ತಿದ್ದಳು. ಅದೊಂದು ದಿನ ಕರೆ ಮಾಡಿದ್ದ ಆಕೆ, ನಿಮ್ಮ ರಿಯಲ್‌ ಎಸ್ಟೇಟ್‌ ವ್ಯವಹಾರ ಚೆನ್ನಾಗಿ ನಡೆಯುತ್ತಿದೆ ಎಂದು ಕೇಳಿದ್ದೇನೆ. ನಮ್ಮದೇ ಒಂದು ಜಮೀನು ಮಾರಾಟವಾಗಬೇಕಿದೆ, ನೆರವು ನೀಡಿ ಎಂದು ಕೇಳಿಕೊಂಡಿದ್ದಳು. ಇದಕ್ಕೆ ಸ್ಪಂದಿಸಿದ್ದ ಉದ್ಯಮಿ ಕಚೇರಿಗೆ ಬನ್ನಿ ಮಾತನಾಡೋಣ ಎಂದಿದ್ದ. ಆದರೆ, ಕಚೇರಿಗೆ ಬರಲು ಅಸಾಧ್ಯ. ನನ್ನ ತಾಯಿ ನಡೆದಾಡುವ ಸ್ಥಿತಿಯಲ್ಲೇ ಇಲ್ಲ. ನೀವೇ ಬನ್ನಿ ಎಂದು ಹೇಳಿದ್ದಳು. ಈ ನಡುವೆಯೇ ಆತನ ಮೊಬೈಲ್‌ಗೆ ಪ್ರಚೋದನಕಾರಿ ಸಂದೇಶ, ಫೋಟೋಗಳ ಕಳುಹಿಸಿದ್ದ ಆಕೆ, ಅವನ ಮನವನ್ನು ಒಂದಷ್ಟು ಕೆಡಿಸಿದ್ದಳು ಕೂಡ. ಆಕೆಯ ಕೋರಿಕೆಯಂತೆಯೇ ಮನೆಗೋದವನಿಗೆ ಕಂಡದ್ದು ಆಕೆ ಮಾತ್ರ. ಆತ ಎಚ್ಚೆತ್ತುಕೊಳ್ಳುವ ವೇಳೆಗೆ ಹನಿಟ್ರ್ಯಾಪ್‌ಗೆ ಬಿದ್ದಾಗಿತ್ತು. ಬಳಿಕ ನಾಲ್ಕೈದು ಮಂದಿ ಸೇರಿ ಬ್ಲಾಕ್‌ ಮೇಲ್‌ ಶುರು ಮಾಡಿದ ಆಕೆ ಲಕ್ಷ ಲಕ್ಷ ಹಣವನ್ನು ಕೀಳಲು ಶುರು ಮಾಡಿದ್ದಳು. 

ಗಾಂಧಿನಗರದ ಕನಸುಳ್ಳ ಯುವಕ
ಇದಕ್ಕಿಂತ ಕೊಂಚ ಭಿನ್ನವಾದ ಇನ್ನೊಂದು ಇಂಟರೆಸ್ಟಿಂಗ್‌ ಕಥೆ ಆಗತಾನೇ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟು, ಹೊಸ ಭವಿಷ್ಯದ ಕನಸು ಕಾಣುತ್ತಿದ್ದ ಯುವಕನದ್ದು. “ಗಾಂಧೀನಗರಕ್ಕೆ ಬಂದು ಕೆಲ ದಿನಗಳಾಗಿತ್ತು. ಒಂದು ದಿನ ಮೊಬೈಲ್‌ಗೆ ಮಿಸ್ಡ್ ಕಾಲ್‌ ಬಂತು. ಜತೆಗೆ ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್‌ ಕೂಡ ಬಂತು. ಅದರಲ್ಲಿ ನಾನು ನಿಮ್ಮನ್ನು ಭೇಟಿಯಾಗಬೇಕಿದೆ ಎಂಬ ಬೇಡಿಕೆಯಿತ್ತು. ಆದರೆ, ಅದು ಯಾರ ಮೊಬೈಲ್‌ ಸಂಖ್ಯೆ ಎಂದು ಗೊತ್ತಾಗಲಿಲ್ಲ. ಆದರೂ ಪ್ರತಿಕ್ರಿಯಿಸುತ್ತಿದ್ದನೇ ಹೊರತು ಭೇಟಿ ಮಾಡಲು ಒಪ್ಪಿರಲಿಲ್ಲ. ಸ್ವಲ್ಪ ದಿನಗಳ ಬಳಿಕ ಮೆಸೇಜ್‌ ಮಾಡುತ್ತಿರುವುದು ಹುಡುಗಿ ಮತ್ತು ಆಕೆ ಯಾವ ಪ್ರದೇಶದಲ್ಲಿದ್ದಾಳೆ ಎಂದು ಗೊತ್ತಾಯಿತು. ಹೀಗಾಗಿ ಮೆಸೇಜ್‌ ಗೆಳೆತನ ಮುಂದುವರಿಸಿದ್ದ.

ಈ ಮಧ್ಯೆ ಒಂದು ದಿನ ತನ್ನ ಗೆಳೆಯನನ್ನು ಭೇಟಿ ಮಾಡಲೆಂದು ಆಕೆ ಇದ್ದ ಪ್ರದೇಶಕ್ಕೆ ಹೋಗಿದ್ದ. ಆದರೆ, ಗೆಳೆಯ ಬರುವುದು ಇನ್ನೂ ತಡವಾಗುತ್ತದೆ ಎನ್ನುವಾಗ ಅವನಿಗೆ ಯುವತಿಯ ನೆನಪಾ ಯಿತು. ಆಕೆಗೆ ಕರೆ ಮಾಡಿ, ನಾನು ನಿಮ್ಮ ಏರಿಯಾದಲ್ಲೇ ಇದ್ದೇನೆ. ಸಿಗುತ್ತೀರಾ ಎಂದು ಕೇಳಿದ. ತಕ್ಷಣ ಆಕೆ, ಎಲ್ಲಿದ್ದೀರಿ ಎಂದು ಕೇಳಿ ಬರಲು ಒಪ್ಪಿಕೊಂಡಳು. ಸುಮಾರು 54 ನಿಮಿಷದ ಬಳಿಕ ತಾನಿದ್ದಲ್ಲಿ ಬಂದ ನಾಲ್ಕೈದು ಮಂದಿ ಯುವತಿಯ ಹೆಸರು ಹೇಳಿ ತನ್ನನ್ನು ಮಾತನಾಡಿಸಿದರು. ಆಕೆಯ ಮನೆಗೆ ಕರೆದೊಯ್ಯು ತ್ತೇವೆ ಎಂದು ಹೇಳಿ ರಹಸ್ಯ ಸ್ಥಳವೊಂದಕ್ಕೆ ಕರೆ ದೊಯ್ದು ಕತ್ತಿಗೆ ಚಾಕು ಇಟ್ಟು ಹಣ, ಮೈಮೇಲಿದ್ದ ಆಭರಣ ಗಳನ್ನು ಕಿತ್ತುಕೊಂಡು ಪರಾರಿಯಾದರು.

-ಇದು ಒಬ್ಬ ರಿಯಲ್‌ ಎಸ್ಟೇಟ್‌ ಉದ್ಯಮಿ ಅಥವಾ ಭವಿಷ್ಯದ ಕನಸಿನೊಂದಿಗೆ ಗಾಂಧಿನಗರಕ್ಕೆ ಕಾಲಿಟ್ಟ ಯುವಕನ ಕಥೆಯಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಸಾಕಷ್ಟು ಪ್ರಕರಣಗಳು ನಡೆಯುತ್ತಿದ್ದು, ಬೆಂಗಳೂರು ಹನಿಟ್ರ್ಯಾಪ್‌ನ ಹಬ್‌ ಆಗಿ ಪರಿವರ್ತನೆಯಾಗುತ್ತಿದೆಯೋ ಎಂಬ ಆತಂಕ ಸೃಷ್ಟಿಯಾಗುತ್ತಿದೆ. ಯುವತಿಯರ ಬಣ್ಣದ ಮಾತುಗಳಿಗೆ ಮರುಳಾಗಿ, ಅವರ ಮೋಹದ ಬಲೆಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡವರು ರಾಜಧಾನಿ ಬೆಂಗಳೂರಿನಲ್ಲಿ ಸಾಕಷ್ಟು ಮಂದಿ ಇದ್ದಾರೆ 

ಅನಾದಿಕಾಲದ ಇತಿಹಾಸ
ಹನಿಟ್ರ್ಯಾಪ್‌ಗೆ ದೊಡ್ಡ ಇತಿಹಾಸವೇ ಇದೆ. ಈ ಮೊದಲು ಮಹಾ ತಪಸ್ವಿ ವಿಶ್ವಾಮಿತ್ರನ ತಪ್ಪಸ್ಸು ಭಂಗ ಮಾಡಲು ದೇವಕನ್ನಿಕೆಯರನ್ನು ಬಳಕೆ ಮಾಡಿಕೊಳ್ಳಲಾಯಿತು. ಅನಂತರ ರಾಜ-ಮಹಾರಾಜರು ತಮ್ಮ ಎದುರಾಳಿಯನ್ನು ಸೆದೆಬಡಿಯಲು ಮಾದಕ ಯುವತಿಯರನ್ನು ಕಳುಹಿಸಿ ಗೆಲುವು ಸಾಧಿಸುತ್ತಿದ್ದರು. ಹೀಗೆ ಶತಮಾನಗಳ ಕಳೆದಂತೆ ಇದರ ಸ್ವರೂಪ, ವಿಶ್ಲೇಷಣೆ ಬದಲಾಯಿತು. ತಾಂತ್ರಿಕವಾಗಿ ವ್ಯಕ್ತಿಗಳ ಮಾಹಿತಿ ಕಲೆ ಹಾಕಿ ಅವರ ದೌರ್ಬಲ್ಯವನ್ನು ತಿಳಿದುಕೊಂಡು ಟಾರ್ಗೆಟ್‌ ಮಾಡುವ ಮಟ್ಟಿಗೆ ಈ ಹನಿಟ್ರ್ಯಾಪ್‌ ಆಧುನಿಕ ಯುಗದಲ್ಲಿ ಬೆಳೆದು ನಿಂತಿದೆ. ಈ ರೀತಿ ವಂಚನೆಗೆ ಗುರಿಯಾದ ವ್ಯಕ್ತಿಗಳು ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ನೀಡುವುದಿಲ್ಲ. ಹೊರ ಜಗತ್ತಿಗೂ ಹೇಳಿಕೊಳ್ಳುವುದಿಲ್ಲ. ಹೀಗಾಗಿ ಈ ದಂಧೆ ದಿನಕಳೆದ್ದಂತೆ ತನ್ನ ಬೃಹತ್‌ ಜಾಲವನ್ನು ವಿಸ್ತರಿಕೊಳ್ಳುತ್ತಿದೆ

ಸ್ವಾಮೀಜಿಗೂ ಸಂಕಷ್ಟ
ಈ ಮೊದಲು ಸೇನೆ, ಕಾರ್ಪೊರೇಟ್‌ ಸಂಸ್ಥೆಗಳ ರಹಸ್ಯ ಮಾಹಿತಿ ಕದಿಯಲು ಬಳಕೆ ಆಗುತ್ತಿದ್ದ ಈ ದಂಧೆ ಇಂದು, ದರೋಡೆ, ಸುಲಿಗೆ, ಹಣ ಸಂಪಾದನೆ, ಕೊಲೆ ಇನ್ನಿತರೆ ಪ್ರಕರಣಗಳಲ್ಲಿ ಕಾಣಿಸುತ್ತಿದೆ. ವೆಬ್‌ ಸೈಟ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮೂಲಕ ಪರಿಚಯಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ದರೋಡೆ ಮಾಡುತ್ತಿರುವ ಪ್ರಕರಣಗಳು ನಗರದಲ್ಲಿ ಅತ್ಯಧಿಕವಾಗುತ್ತಿವೆ. ನಟಿ ನಯನಾಕೃಷ್ಣಳಿಂದ ಹಿಡಿದು ದಯಾನಂದ ಸ್ವಾಮೀಜಿವರೆಗಿನ ಪ್ರಕರಣಗಳೇ ಇದಕ್ಕೆ ಸಾಕ್ಷಿ. ಇತ್ತೀಚೆಗೆ ಹುಣಸೆಮಾರನಹಳ್ಳಿ ಜಂಗಮಮಠದ ದಯಾನಂದ ಸ್ವಾಮೀಜಿ ರಾಸಲೀಲೆ ಪ್ರಕರಣ ಬಹಿರಂಗದ ಹಿಂದೆಯೂ ಹನಿ ಟ್ರ್ಯಾಪ್‌ ದಂಧೆ ಕೆಲಸ ಮಾಡಿತ್ತು. ಸ್ವಾಮೀಜಿಯಿಂದ ಕೋಟಿಗಟ್ಟಲೇ ಹಣ ಪೀಕಿದ ದುಷ್ಕರ್ಮಿಗಳು ಕೊನೆಗೆ ವಿಡಿಯೋ ಬಹಿರಂಗ ಮಾಡಿದರು. ಇದನ್ನು ಖುದ್ದು ಸ್ವಾಮೀಜಿಯೇ ನೇರವಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.

ಟಾರ್ಗೆಟ್‌ಗೆ ಯಾವ ಸಂದರ್ಭ?
ರಾಜಕೀಯ ಜಿದ್ದಾಜಿದ್ದಿ, ಚುನಾವಣೆ ವೇಳೆ, ವೈಯಕ್ತಿಕ ವೈಷಮ್ಯ, ಅಕ್ರಮವಾಗಿ ದೇಶದ ಗಡಿ ಪ್ರವೇಶ ಮಾಡುವಾಗ, ಎದುರಾಳಿ ಸಂಸ್ಥೆಯ ಉತ್ಪನ್ನಗಳ ಮಾಹಿತಿ ಪಡೆಯಲು, ದೇಶದ ರಕ್ಷಣಾ ವಿಭಾಗದ ಚಲನವಲನಗಳ ಮಾಹಿತಿ ಪಡೆಯಲು, ಹಣದ ಅಗತ್ಯಕ್ಕೆ ಹೀಗೆ ನಾನಾ ಸಂದರ್ಭದಲ್ಲಿ ಟಾರ್ಗೆಟ್‌ ಮಾಡ್ತಾರೆ.

ದೊಡ್ಡ ಮಿಕಗಳೇ ಟಾರ್ಗೆಟ್‌
ಮೇಲ್ವರ್ಗದ ಜನರು, ಮಂತರು, ಸ್ವಾಮೀಜಿಗಳು, ಸಿನಿಮಾ ನಟರು, ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ರಕ್ಷಣಾ ಇಲಾಖೆಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿದ್ದ ಈ ಕಣ್ಣಮುಚ್ಚಾಲೆ ಆಟ ಇದೀಗ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಂಡಿದೆ. ವಿಪರ್ಯಾಸವೆಂದರೆ ಗಂಡಸರು ಮಾತ್ರ ಇದರ ಬಲಿಪಶುಗಳಲ್ಲ, ಮಹಿಳೆಯರೂ ಇದಕ್ಕೆ ಸಿಕ್ಕಿ ನಲುಗಿದ ಸಾಕಷ್ಟು ಉದಾಹರಣೆಗಳಿವೆ. ಸಾಮಾನ್ಯವಾಗಿ ಹನಿಟ್ರಾಪ್‌ ಎರಡು ಮಾದರಿಯಲ್ಲಿ ನಡೆಯುತ್ತಿತ್ತು. ಒಂದು ಕಾರ್ಪೋರೇಟ್‌ ಹನಿಟ್ರಾಪ್‌. ಮತ್ತೂಂದು ಗೂಢಚರ್ಯೆ ಹನಿಟ್ರಾಪ್‌. ಪ್ರತಿಷ್ಠಿತ ಕಂಪೆನಿಗಳ ರಹಸ್ಯ ಮಾಹಿತಿ, ಡಾಟಾಗಳು, ಆಡಳಿತಾತ್ಮಕ ವಿಚಾರಗಳನ್ನು ತಿಳಿಯಲು ಸಂಸ್ಥೆಯ ಯೋಜನಾಧಿಕಾರಿಯ (ಪ್ಲಾನಿಂಗ್‌ ಆಫೀಸರ್‌) ಹಿಂದೆ ಯುವತಿಯನ್ನು ಬಿಟ್ಟು ಮಾಹಿತಿಗಳನ್ನು ಪಡೆಯುತ್ತಿದ್ದರು. ಮತ್ತೂಂದು ದೇಶದ ರಕ್ಷಣಾ ಇಲಾಖೆಯ ರಹಸ್ಯ ಮಾಹಿತಿಗಳು, ಮಿಲಿಟರಿಯ ಚಲನವಲನಗಳನ್ನು ಪಡೆಯುವ ಸಲುವಾಗಿ ಮಾಡುವುದು. ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್‌, ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವೆಬ್‌ಸೈಟ್‌ ಇತರೆ ತಾಣಗಳಲ್ಲಿ ದಂಧೆಕೋರರು ಸಕ್ರಿಯರಾಗಿದ್ದಾರೆ

ಆಪರೇಶನ್‌ ಹನಿಟ್ರ್ಯಾಪ್‌
ವಿಶ್ವದಲ್ಲಿ ಹನಿಟ್ರ್ಯಾಪ್‌ ಮಾಡಲೆಂದೇ ದುಷ್ಕರ್ಮಿಗಳು ಒಂದಿಷ್ಟು ಸಂಘಟನೆಗಳನ್ನು ಕಟ್ಟಿಕೊಂಡಿದ್ದಾರೆ. ಆರಂಭದಲ್ಲಿ ಟಾರ್ಗೆಟ್‌ ಮಾಡುವ ವ್ಯಕ್ತಿಯ ಜೀವನ ಶೈಲಿ, ಆತನ ಕುರಿತಾದ ಮಾಹಿತಿಯನ್ನು ಫೇಸ್‌ಬುಕ್‌, ಟ್ವಿಟರ್‌, ಇತರೆ ಸಾಮಾಜಿಕ ಜಾಲತಾಣಗಳು ಹಾಗೂ ಬಾತ್ಮೀದಾರರ ಮೂಲಕ ಸಂಗ್ರಹಿಸುತ್ತಾರೆ. ಬಳಿಕ ಆತನ ದೌರ್ಬಲ್ಯ ತಿಳಿದುಕೊಂಡು ಆ ವ್ಯಕ್ತಿಯ ಹಿಂದೆ ಮಹಿಳೆಯನ್ನು ಬಿಡುತ್ತಾರೆ. ಆಕೆ ಬಣ್ಣದ ಮಾತುಗಳಲ್ಲಿ ಆತನನ್ನು ಮರುಳು ಮಾಡಿ, ಒಂದೆರೆಡು ಬಾರಿ ಭೇಟಿಯಾಗಿ ಮಾದಕ ನೋಟ ಬೀರಿ ಖೆಡ್ಡಾಕ್ಕೆ ಬೀಳಿಸುತ್ತಾಳೆ. ನಂತರ ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ಅದನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡು ಹಣಕ್ಕಾಗಿ ಬ್ಲಾಕ್‌ ಮೇಲ್‌ ಮಾಡುತ್ತಾಳೆ., ಇಲ್ಲವೇ ಕೇವಲ ಮೊಬೈಲ್‌ ಮೂಲಕ ಮಾತನಾಡಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು, ತನ್ನ ಮುಖ ಪರಿಚಯವನ್ನೇ ಮಾಡದೆ ತನ್ನ ಸಹಚರರ ಮೂಲಕ ದಾಳಿ ಮಾಡಿಸಿ ಹಣ ಅಥವಾ ಮಾಹಿತಿ ಪಡೆದುಕೊಳ್ಳುತ್ತಾರೆ. ವೇಶ್ಯಾವಾಟಿಕೆ ಹೆಸರಿನಲ್ಲಿ ಮನೆ ಅಥವಾ ಹೋಟೆಲ್‌ಗೆ ಕರೆಸಿಕೊಂಡು ಸುಲಿಗೆ ಮಾಡುವುದು.
 
ಪ್ರತ್ಯೇಕ ಕಾನೂನು ಇಲ್ಲ
ಇಂತಹ ತೆರೆಯ ಹಿಂದಿನ ಆಟದಲ್ಲಿ ಸಿಲುಕಿದರೆ ಹೊರಬರುವುದು ಬಹಳ ಕಷ್ಟ. ಅಷ್ಟೇ ಅಲ್ಲ, ಈ ಪ್ರಕರಣಗಳನ್ನು ಬೇಧಿಸಿದ ಪೊಲೀಸರಿಗೆ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸುವುದು ದೊಡ್ಡ ತಲೆನೋವಿನ ಕೆಲಸ. ಸೂಕ್ತ ಸಾಕ್ಷ್ಯಾಧಾರಗಳು ಸಿಗುವುದಿಲ್ಲ. ಸಿಕ್ಕರೂ ಅವು ಸಿಂಧು ಸಹ
ಆಗುವುದಿಲ್ಲ. ಮತ್ತೂಂದೆಡೆ ದೇಶದ ಐಪಿಸಿ ಸೆಕ್ಷನ್‌, ಸಿಆರ್‌ಪಿಸಿ ಮತ್ತು ಐಟಿ ಕಾಯ್ದೆಗಳಲ್ಲೂ ಇದಕ್ಕೆ ಪ್ರತ್ಯೇಕವಾದ ಕಾನೂನುಗಳಿಲ್ಲ. ಆದರೆ, ಇಂತಹ ಪ್ರಕರಣಗಳಲ್ಲಿ ಕೃತ್ಯದ ಮಾದರಿಯನ್ನಾಧರಿಸಿ ಬೆದರಿಸಿ ದರೋಡೆ, ಬ್ಲಾಕ್‌ವೆುàಲ್‌, ದೇಶದ್ರೋಹ ಆರೋಪದಡಿ ಕೇಸ್‌ ದಾಖಲಿಸಲಾಗುತ್ತದೆ. ಇದನ್ನು ಹೊರತು ಪಡಿಸಿದರೆ ನ್ಯಾಯಾಲಯದಲ್ಲಿ ಮಾನನಷ್ಠ ಮೊಕದ್ದಮೆ ಹೂಡಬಹುದು.

ಎರಡು ಮಾದರಿಯಲ್ಲಿ ಹನಿಟ್ರ್ಯಾಪ್‌ ಮಾಡ್ತಾರೆ. ತಾಂತ್ರಿಕವಾಗಿ ನಡೆಯೋ ಹನಿಟ್ರ್ಯಾಪ್‌ ಬೇರೆ. ರೆಗ್ಯುಲರ್‌ ಕ್ರೈಂನಲ್ಲಿ ನಡೆಯುವ ಹನಿಟ್ರ್ಯಾಪ್‌ ಬೇರೆ. ಇಂದು ವೆಬ್‌ಸೈಟ್‌, ಡೇಟಾ ಮೂಲಕ, ಹನಿಪಾಟ್‌ ಮೂಲಕ ಖೆಡ್ಡಾಕ್ಕೆ ಬೀಳಿಸಿಕೊಂಡು ವಂಚಿಸುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆದಷ್ಟು ತಮ್ಮ ವೈಯಕ್ತಿಕ ವಿಚಾರಗಳು ಮತ್ತು ಫೋಟೋಗಳನ್ನು ಪ್ರಕಟಿಸುವುದು ಸೂಕ್ತವಲ್ಲ.
 ● ಶುಭಮಂಗಳ, ಸೈಬರ್‌ ತಜ್ಞೆ

ಹನಿಟ್ರ್ಯಾಪ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕ ಕಾನೂನುಗಳಿಲ್ಲ. ಹೀಗಾಗಿ ಇರುವ ದಂಡನೀಯ ಕಾನೂನುಗಳಲ್ಲಿ ಸೂಕ್ತ ತಿದ್ದುಪಡಿ ಮಾಡುವುದು ಅಥವಾ ಈ ಪ್ರಕರಣ ಕುರಿತ ವಿಶೇಷ ಕಾನೂನಿನ ಅನುಷ್ಠಾನದ ಅಗತ್ಯವಿದೆ. ತನ್ಮೂಲಕ ಹನಿಟ್ರ್ಯಾಪ್‌ ಸಂಚಿಗೆ ಒಳಗಾಗುವ ಅಮಾಯಕ ವ್ಯಕ್ತಿಗಳನ್ನು ರಕ್ಷಿಸಬೇಕು.
 ● ಶಿವರಾಮ್‌ ಬಿ.ಆರ್‌.ವಕೀಲರು

ಜನಸಾಮಾನ್ಯರೂ ಬೀಳುವ ಬಲೆ…
ಅಪರಿಚಿತ ವ್ಯಕ್ತಿ, ಸಂಘಟನೆ ಅಥವಾ ಸಂಸ್ಥೆ ಯುವತಿಯನ್ನು ಮುಂದಿಟ್ಟುಕೊಂಡು ತಮಗೆ ಬೇಕಾದ ಹಣ, ಮಾಹಿತಿ ಅಥವಾ ಡೇಟಾ ಪಡೆಯುವ ಬೃಹತ್‌ ದಂಧೆಯೇ ಹನಿಟ್ರ್ಯಾಪ್‌. ಕಳೆದ ಹತ್ತು- ಹದಿನೈದು ವರ್ಷಗಳ ಹಿಂದೆ ರಾಜ್ಯದಲ್ಲಿ ಈ ಪದ ಕಿವಿಗೆ ಬಿದ್ದರೆ ಬಹುತೇಕರಿಗೆ ಏನಿದು ಎಂದೇ ಹೊತ್ತಾಗುತ್ತಿರಲಿಲ್ಲ. ಆದರೆ, ಈಗ ಆ ಹೆಸರು ಹೇಳಿದರೆ ಬೆಚ್ಚಿ ಬೀಳುವ, ಹನಿಟ್ರ್ಯಾಪ್‌ ಒಳಗಾಗಿದ್ದೇನೆ ಎಂದು ಯಾರಾದರೂ ಹೇಳಿದರೆ ಮುಸಿಮುಸಿ ನಗುವಷ್ಟು ರೂಢಿಯಾಗಿಬಿಟ್ಟಿದೆ. ವರ್ಷಗಳು ಉರುಳಿದಂತೆ ಅಪರಾಧಗಳನ್ನು ಎಸಗಲು ಕ್ರಿಮಿನಲ್‌ಗ‌ಳು ಅಪರಾಧ ಶೈಲಿಯ ರೂಪ ಬದಲಿಸತೊಡಗಿದ ಪರಿಣಾಮವೇ ಹುಟ್ಟಿಕೊಂಡ ಹೆಸರೇ “ಹನಿಟ್ರ್ಯಾಪ್‌’. ಅತಿ ಕಡಿಮೆ ಅವಧಿಯಲ್ಲಿ ಸುಲಭವಾಗಿ ದುಡ್ಡುಗಳಿಸುವ ಮಾರ್ಗವಾಗಿ ರೂಪುಗೊಂಡ ಇದು, ಒಂದು ಕಾಲದಲ್ಲಿ ಕಾಮವಾಂಛೆಯಲ್ಲಿ ವಿಪರೀತ ಆಸಕ್ತಿ ಹೊಂದಿದ್ದ ರಾಜಕಾರಣಿಗಳು, ಸಮಾಜದ ಗಣ್ಯರು, ವಿದೇಶಿ ರಾಯಭಾರಿಗಳನ್ನು ಟಾರ್ಗೆಟ್‌ ಮಾಡಿಕೊಂಡಿತ್ತು. ಬರಬರುತ್ತಾ ಇದರ ಮಾದಕ ಬೇರುಗಳು, ಮಠಾಧೀಶರು, ಚಿತ್ರನಟರು, ವೈದ್ಯರು, ಜನಸಾಮಾನ್ಯರನ್ನೂ ತನ್ನ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಳ್ಳುವ ಹಂತಕ್ಕೆ ಬಂದು ನಿಂತಿ¨.

ಅಕ್ಟೋಬರ್‌ 2014
ನಟಿ ನಯನಾಕೃಷ್ಣ, ರಿಹನಾ ಮತ್ತು ಸೋನು ಸೇರಿದಂತೆ ನಾಲ್ಕೈದು ಮಂದಿ ಯುವಕರು ಜಯನಗರದ ಕ್ಲಿನಿಕ್‌ನ 68 ವರ್ಷದ ವೃದ್ಧ ವೈದ್ಯರನ್ನು ಬಲೆಗೆ ಬೀಳಿಸಿಕೊಂಡಿದ್ದರು. ವೈದ್ಯರ ಜತೆ ನಟಿಯರು ಕಳೆದ ರಸನಿಮಿಷಗಳನ್ನು ಚಿತ್ರೀಕರಿಸಿಕೊಂಡು ಲಕ್ಷಾಂತರ ರುಪಾಯಿ ಹಣ ಪಡೆದಿದ್ದರು. ಇದನ್ನು ಮಾಧ್ಯಮಗಳಿಗೆ ಹಂಚುವುದಾಗಿ ಬೆದರಿಕೆಯೊಡಿದ್ದರು. ಈ ಪ್ರಕರಣದಲ್ಲಿ ನಟಿ ನಯನಾಕೃಷ್ಣ, ಸುದ್ದಿವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್‌, ಸುನೀಲ್‌ ಕುಮಾರ್‌, ಮಲ್ಲೇಶ್‌ ಹಾಗೂ ಜಿಮ್‌ ರಘು ಪ್ರಮುಖ ಆರೋಪಿಗಳು.

ಏಪ್ರಿಲ್‌ 2016
ಯುವತಿಯರನ್ನು ಮುಂದಿಟ್ಟುಕೊಂಡು ಮೂವರು ಪೊಲೀಸರು ದಂಧೆ ನಡೆಸಿದ್ದರು. ಪೀಣ್ಯದ ಠಾಣೆ ಪೇದೆ ವಿಜಯ್‌ ಕುಮಾರ್‌, ಸಂಜಯ್‌ನಗರ ಠಾಣೆ ಇಲಿಯಾಜ್‌ ಹಾಗೂ ಸಿಸಿಬಿಯ ಬಸವರಾಜು ಮಠಪತಿ ನಿಶಾ ಅಲಿಯಾಸ್‌ ಯಾಸ್ಮಿನ್‌ ತಾಜ್‌ ಎಂಬ ಯುವತಿ ಮೂಲಕ ಟ್ರ್ಯಾಪ್‌ ಮಾಡುತ್ತಿದ್ದರು. ರಿಯಲ್‌ ಎಸ್ಟೇಟ್‌ ಉದ್ಯಮಿ ವೆಂಕಟಪ್ಪ ಎಂಬುವರನ್ನು ನಿಶಾ ಮೂಲಕ ಜಮೀನು ಮಾರಾಟ ವಿಚಾರ ಸಂಬಂಧ ಕರೆದು ಟ್ರ್ಯಾಪ್‌ ಮಾಡಿದ್ದರು. ಆರೋಪಿಗಳನ್ನು ಬಂಧಿಸಲಾಗಿತ್ತು.

ಜನವರಿ 2017
ವಿಜಯನಗರದಲ್ಲಿ ಯುವತಿಯೊಬ್ಬಳನ್ನು ಮುಂದಿಟ್ಟುಕೊಂಡು ಟೆಕ್ಕಿಯೊಬ್ಬರನ್ನು ಬಲೆಗೆ ಕೆಡವಿದ್ದರು. ಪ್ರಕರಣದಲ್ಲಿ ಆನಂದ್‌ ಆಚಾರ್ಯ, ರವಿಕುಮಾರ್‌, ರವಿ ಸೇರಿದಂತೆ ಒಬ್ಬ ಮಹಿಳೆ ಭಾಗಿಯಾಗಿದ್ದರು. ಎನ್‌ಜಿಓ ಹೆಸರಿನಲ್ಲಿ, ಲೋಕ್ಯಾಂಟೋ ವೆಬ್‌ಸೈಟ್‌ ಮೂಲಕ ದಂಧೆ ಮಾಡುತ್ತಿದ್ದರು.

ಏಪ್ರಿಲ್‌ 1 2017 
ಮೋಜಿನ ಜೀವನಕ್ಕಾಗಿ ರಿಯಲ್‌ ಎಸ್ಟೇಟ್‌ ಉದ್ಯಮಿ ಗಂಗಾಧರ್‌ ಎಂಬುವವರನ್ನು ಅಪಹರಿಸಿ ಲಕ್ಷಾಂತರ ರೂ. ಹಣ ಹಾಗೂ ಚಿನ್ನಾಭರಣ ದರೋಡೆ ಮಾಡಿದ್ದರು. ಕೆಂಗೇರಿಯ ಮಂಜುನಾಥ್‌, ಮಹದೇವ, ಮಹೇಶ್‌, ಸ್ವಾಮಿ, ಬ್ಯಾಂಕ್‌ ಕಾಲೋನಿ ನಿವಾಸಿ ಜಯಂತಿ ಮತ್ತು ಕೋಣನಕುಂಟೆ ನಿವಾಸಿ ರುಕ್ಮಿಣಿ ಬಂಧಿತರು. ಇವರು 1.95 ಲಕ್ಷ ನಗದು, ಇಂಡಿಕಾ ಕಾರು, 75 ಗ್ರಾಂ ಚಿನ್ನ, 3 ಉಂಗುರ ದರೋಡೆ ಮಾಡಿದ್ದರು.ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದ ಗಂಗಾಧರ್‌ಗೆ ಆರೋಪಿ ಜಯಂತಿ ಕರೆ ಮಾಡಿ ಖಾಸಗಿ ಬ್ಯಾಂಕ್‌ವೊಂದರ ಮುಖ್ಯಸ್ಥೆ ಎಂದು ಪರಿಚಯಿಸಿಕೊಂಡು ಮಾ.17ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೈಸೂರು ರಸ್ತೆ ಬಳಿಯ ಕಸ್ತೂರಿ ಬಾ ನಗರದ ನಿವಾಸಿ ಗಂಗಾಧರ ಅವರನ್ನು ಅಪಹರಿಸಿದ್ದರು. 

ಅಕ್ಟೋಬರ್‌ 2017
ಹುಣಸೆಮಾರನಹಳ್ಳಿ ಜಂಗಮಮಠದ ದಯಾನಂದ ಸ್ವಾಮೀಜಿ ನಟಿಯೊಬ್ಬರ ಜತೆ ರಾಸಲೀನೆ ನಡೆಸಿದ ವಿಡಿಯೋವನ್ನು ತೋರಿಸಿ ಸ್ವಾಮೀಜಿಯಿಂದ ನಾಲ್ಕೈದು ಮಂದಿ ಕೋಟಿಗಟ್ಟಲೇ ಹಣ ಪಡೆದುಕೊಂಡಿದ್ದರು. ಈ ಸಂಬಂಧ ಇದುವರೆಗೂ ದೂರು ದಾಖಲಾಗಿಲ್ಲ. ಆದರೆ, ರಾಜ್ಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸ್ವಾಮೀಜಿ ತಮ್ಮ ಪೀಠವನ್ನು ತೊರೆದಿದ್ದರು.

 ● ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.