ಸಿಂಗಂಗಳಾಗಲು ಪೊಲೀಸರು ಸಜ್ಜು


Team Udayavani, Jul 26, 2021, 5:50 PM IST

bangalore news

ಕೊರೊನಾ ಮೊದಲ ಮತ್ತು 2ನೇ ಅಲೆ ವೇಳೆ ಲಾಕ್ಡೌನ್ ಘೋಷಿಸಿದ್ದಾಗ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಹಗಲಿರುಳೆನ್ನದೆ ದಿನದ 24 ಗಂಟೆ ನಿರಂತರವಾಗಿ ಕರ್ತವ್ಯದಲ್ಲಿ ತೊಡಗಿದ್ದರು. ಹೀಗಾಗಿ, ಲಾಕ್ಡೌನ್ ಅವಧಿಯಲ್ಲಿ ಅರೋಗ್ಯ ರಕ್ಷಣೆಯ ವಿಚಾರವಾಗಿ ಅತಿಹೆಚ್ಚು ಅಪಾಯ ಎದುರಿಸಿದ್ದು, ಪೊಲೀಸರು. ಜನರ ಪ್ರಾಣ ರಕ್ಷಣೆಗೆ ತಮ್ಮ ಪ್ರಾಣಗಳನ್ನು ಪಣಕ್ಕಿಟ್ಟು ಕೆಲಸ ಮಾಡಬೇಕಾದ ಅನಿವಾರ್ಯತೆ ಪೊಲೀಸರಿಗಿತ್ತು.

ಜನರ ಪ್ರಾಣ ರಕ್ಷಣೆಯ ಧಾವಂತದಲ್ಲಿ ಅನೇಕ ಪೊಲೀಸರು ತಮ್ಮ ಪ್ರಾಣಗಳನ್ನು ಕಳೆದುಕೊಂಡರು. ಸಾಮಾನ್ಯವಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರ ಆರೋಗ್ಯ ಸ್ಥಿತಿ, ದೈಹಿಕ ಸಾಮರ್ಥ್ಯದ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತದೆ. ಕೊರೊನಾ ಈ ಕುರಿತು ಇನ್ನಷ್ಟು ಗಮನ ಕೇಂದ್ರೀಕರಿಸುವ ಸ್ಥಿತಿ ನಿರ್ಮಿಸಿದೆ.

ಅದಕ್ಕಾಗಿ, ಪೊಲೀಸರ ಆರೋಗ್ಯ, ದೈಹಿಕ ಸಾಮರ್ಥ್ಯವನ್ನು ಸದೃಢಗೊಳಿಸಲು ಅವರ ಮಾನಸಿಕ ಸ್ಥಿಮಿತವನ್ನು ನಿಯಂತ್ರಣದಲ್ಲಿಡಲು ಹತ್ತಾರು ಪ್ರಯೋಗಕ್ಕೆ ತೆರೆದುಕೊಂಡಿದೆ. ಪೊಲೀಸರ ಕರ್ತವ್ಯದೊತ್ತಡ ಕಂಡು ಕೆಲ ಸ್ವಯಂ ಸೇವಾ ಸಂಸ್ಥೆಗಳು ಉಚಿತವಾಗಿ ಪೊಲೀಸರಿಗೆ ನಿಯಮಿತವಾದ ಯೋಗಾಭ್ಯಾಸ, ದೈಹಿಕ ವ್ಯಾಯಾಮ, ಸೈಕ್ಲಿಂಗ್ ಜಾಥಾ ಮತ್ತಿತರರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಇಂಥ ಪ್ರಯತ್ನಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಆಪ್ತಸಮಾಲೋಚಕರಿಂದ ಸಲಹೆ: ವಿಧಾನಸೌಧ, ವಿಕಾಸಸೌಧ, ಮುಖ್ಯಮಂತ್ರಿಗಳು, ಸಚಿವರು, ಗಣ್ಯರ ಭದ್ರತೆ, ಪ್ರೊಟೋಕಾಲ್(ಶಿಷ್ಟಚಾರ)ಗೆ ನಿಯೋಜನೆಗೊಳ್ಳುವ ನಗರ ಸಶಸ್ತ್ರ ಮೀಸಲು(ಸಿಎಆರ್) ಪಡೆಯ ಸಿಬ್ಬಂದಿ ಅಧಿಕ ಕಾರ್ಯದೊತ್ತಡ ದಲ್ಲಿರುತ್ತಾರೆ. ಹೀಗಾಗಿ ತಮ್ಮ ಆರೋಗ್ಯದ ಕಡೆ ಗಮನ ಹರಿಸುವುದಿಲ್ಲ. ಕೊರೊನಾ ಎರಡೂ ಅಲೆ ಸಂದರ್ಭದಲ್ಲಿ ನಗರದಲ್ಲಿರುವ ಎರಡೂವರೆ ಸಾವಿರಕ್ಕೂ ಅಧಿಕ ನಗರ ಸಶಸ್ತ್ರ ಮೀಸಲು(ಸಿಎಆರ್) ಪಡೆಯ ಹತ್ತಾರು ಅಧಿಕಾರಿ-ಸಿಬ್ಬಂದಿ ಪ್ರಾಣಾ ತೆತ್ತಿ ದ್ದಾರೆ.

ಹೀಗಾಗಿ ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಕಳೆದ ಹತ್ತು ತಿಂಗಳಿಂದ ಸಿಎಆರ್ನ ಪ್ರತಿಯೊಬ್ಬ ಅಧಿಕಾರಿ-ಸಿಬ್ಬಂದಿಗೆ ಕೌನ್ಸೆಲಿಂಗ್ ಮಾಡಲಾಗುತ್ತದೆ. ಮುಖಾಮುಖೀ- ಫೋನ್ ಮೂಲಕ ಮಹಿಳಾ ಕೌನ್ಸೆಲರ್ ಸೇರಿ 3-4 ಮಂದಿ ಆಪ್ತ ಸಮಾಲೋಚಕರು ಅಧಿಕಾರಿ-ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೂ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಈ ಮೂಲಕ ಕೊರೊನಾ ಜತೆಗೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ.

ಅಲ್ಲದೆ, ಸೋಂಕಿಗೊಳಗಾದ ಅಧಿಕಾರಿ-ಸಿಬ್ಬಂದಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಡ್ರೈಫೂಲÅಟ್ಸ್ ಹಾಗೂ ಕೊರೊನಾ ಕಿಟ್ಗಳನ್ನು ನಗರ ಪೊಲೀಸ್ ಆಯುಕ್ತರ ಕಡೆಯಿಂದ ನೀಡಿ ಧೈರ್ಯ ತುಂಬಲಾಗುತ್ತಿದೆ.

ರೈಲ್ವೆ ಅಧಿಕಾರಿಸಿಬ್ಬಂದಿ ಆನ್ಲೈನ್ ಯೋಗಾಭ್ಯಾಸ: ನಾಗರೀಕ ಪೊಲೀಸರಂತೆ ರೈಲ್ವೆ ಪೊಲೀಸರು ಹೆಚ್ಚು ಕಾರ್ಯದೊತ್ತಡದಲ್ಲಿರುತ್ತಾರೆ. ರೈಲು ನಿಲ್ದಾಣ, ರೈಲುಗಳ ಭದ್ರತೆಗಾಗಿ ರೈಲುಗಳಲ್ಲಿ ದಿನಗಟ್ಟಲೇ ಪ್ರಯಾಣಿಸುವ ಅಧಿಕಾರಿ-ಸಿಬ್ಬಂದಿಯ ಆಹಾರ ಪದ್ದತಿಯಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಈ ಕುರಿತು ಬೆಂಗಳೂರು ಸೇರಿ ರಾಜ್ಯದ ರೈಲ್ವೆ ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ-ಸಿಬ್ಬಂದಿ ಯೋಗಭ್ಯಾಸ ಮಾಡಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಡಿಜಿಪಿ ಭಾಸ್ಕರ್ ರಾವ್, ಎಸ್ಪಿ ಸಿರಿಗೌರಿ ಮಾರ್ಗದರ್ಶನದಲ್ಲಿ ಇಶಾ ಫೌಂಡೇಶನ್ ಸಂಸ್ಥೆ ರೈಲ್ವೆ ಅಧಿಕಾರಿ-ಸಿಬ್ಬಂದಿಗೆ ವಾರಕ್ಕೊಮ್ಮೆ ಆನ್ಲೈನ್ ಮೂಲಕ ಯೋಗಭ್ಯಾಸಕ್ಕೆ ಸೂಚಿಸಲಾಗಿದೆ. ಪ್ರತಿಭಾನುವಾರ ಬೆಳಗ್ಗೆ ಮತ್ತು ಸಂಜೆ ಒಂದು ಗಂಟೆಗಳ ಕಾಲ ಸಿಬ್ಬಂದಿ ಇರುವಲ್ಲಿಯೇ ಯೋಗಭ್ಯಾಸದಲ್ಲಿ ತೊಡಬೇಕೆಂದು ಸೂಚಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಸಿರಿಗೌರಿ ಅವರು, ರೈಲ್ವೆ ಸಿಬ್ಬಂದಿ ಕಾರ್ಯನಿಮಿತ್ತ ಹೊರಗಡೆ ಹೋದರೆ ಎರಡೂ¾ರು ದಿನಗಳ ಕಾಲ ವಾಪಸ್ ಬರಲಾಗದು. ಹೀಗಾಗಿ ಇಶಾ ಫೌಂಡೇಶನ್ನಿಂದ ಆನ್ಲೈನ್ ತರಗತಿಗೆ ಸೂಚಿಸಿದ್ದು, ಫೌಂಡೇಶನ್ ಅವರು ಆನ್ಲೈನ್ ಲಿಂಕ್ ಕಳುಹಿಸುತ್ತಾರೆ. ಅದರಂತೆ ಎಲ್ಲರೂ ಯೋಗದಲ್ಲಿ ತೊಡಗುತ್ತಾರೆ. 8-10 ತಿಂಗಳಿಂದ ಯೋಗಭ್ಯಾಸ ಮಾಡುತ್ತಿದ್ದು, ಕೆಲವರು ಸ್ವಯಂ ಪ್ರೇರಿತವಾಗಿ ಮನೆ ಅಥವಾ ತಾವು ಉಳಿದುಕೊಂಡಿರುವ ಸ್ಥಳದಲ್ಲೇ ಆಭ್ಯಾಸದಲ್ಲಿ ನಿರತರಾಗಿದ್ದಾರೆ.

ಮೋಹನ್ ಭದ್ರಾವತಿ

ಟಾಪ್ ನ್ಯೂಸ್

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಸಂಸದರ ಅಮಾನತು ಆದೇಶ ಹಿಂಪಡೆಯಲ್ಲ, ನನಗೆ ಪಾಠ ಹೇಳೋದು ಬೇಡ; ಖರ್ಗೆಗೆ ನಾಯ್ದು

ಸಂಸದರ ಅಮಾನತು ಆದೇಶ ಹಿಂಪಡೆಯಲ್ಲ, ನನಗೆ ಪಾಠ ಹೇಳೋದು ಬೇಡ; ಖರ್ಗೆಗೆ ನಾಯ್ದು

Untitled-2

ಪಾದಯಾತ್ರೆಯಿಂದ ಆರಂಭವಾಯಿತು ಲಕ್ಷದೀಪೋತ್ಸವ

say no to lockdown

ಒಮಿಕ್ರಾನ್: “ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ” ಎನ್ನುತ್ತಿರುವ ನೆಟ್ಟಿಗರು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

highcourt of karnataka

ಜೂಜಾಟ ಆರೋಪ: ಪ್ರಕರಣ ರದ್ದು

finance minister

5 ಲಕ್ಷದವರೆಗಿನ ಠೇವಣಿ ವಿಮೆ ಮರುಪಾವತಿ

education meet

ಅಸ್ಸಾಂ ಸಿಎಂ ಭೇಟಿಯಾದ ಅಶ್ವತ್ಥ ನಾರಾಯಣ

ಕಡಲೆಕಾಯಿ ಪರಿಷೆ

ಮೂರು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆ

fake id

ಇನ್ಫೋಸಿಸ್‌ ಕಂಪನಿ ನಕಲಿ ಐಡಿ ಬಳಸಿ ವಂಚನೆ

MUST WATCH

udayavani youtube

ಈ ನೀರು ಕುಡಿದ್ರೆ ಕೊರೋನಾ, ಓಮಿಕ್ರಾನ್ ಅಲ್ಲ ಇನ್ನೂ ಅಪಾಯಕಾರಿ ರೋಗ ಬರಬಹುದು

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

ಹೊಸ ಸೇರ್ಪಡೆ

ಅಮೃತ್‌ ಅಪಾರ್ಟ್‌ಮೆಂಟ್ಸ್‌

‘ಅಮೃತ್‌ ಅಪಾರ್ಟ್‌ಮೆಂಟ್ಸ್‌’ ನಲ್ಲಿ ಗೆಲುವಿನ ನಗೆ

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

girls hostel

ಹಾಸ್ಟೆಲ್‌ನಲ್ಲಿ ಓದಲು ಕರೆಂಟಿಲ್ಲ, ಸ್ನಾನ, ಶೌಚಾಲಯಕ್ಕೂ ನೀರಿಲ್ಲ!

oreo kannada movie

ಬಿಸ್ಕೆಟ್‌ ಹೆಸರು ಈಗ ಸಿನಿಮಾ ಟೈಟಲ್‌

23indian

ಸಂವಿಧಾನ ನಮಗೆಲ್ಲ ದಾರಿದೀಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.