Udayavni Special

ಒಂದೂವರೆ ವರ್ಷದ ನಂತರ ಗರಿಷ್ಟ ಪ್ರಯಾಣಿಕರು


Team Udayavani, Sep 20, 2021, 1:30 PM IST

bangalore news

ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಶನಿವಾರ ಅತಿ ಹೆಚ್ಚು 2.42 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ರಾಜ್ಯದಲ್ಲಿ ಸುಮಾರು ಒಂದೂವರೆ ವರ್ಷದ ನಂತರ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಈ ಗರಿಷ್ಠ ಪ್ರಮಾಣದ ಪ್ರಯಾಣಿಕರ ಸಂಖ್ಯೆ ದಾಖಲಾಗಿದೆ!

ಕೊರೊನಾ ಹಾವಳಿ ಹಾಗೂ ಅದರಿಂದಜಾರಿಯಾದ ಲಾಕ್‌ಡೌನ್‌ನಿಂದ ಪ್ರಯಾಣಿಕರ ಸಂಖ್ಯೆಬಹುತೇಕ ಇಳಿಮುಖವಾಗಿತ್ತು. ಎರಡು ಲಕ್ಷ ಕೂಡ ತಲುಪಿರಲಿಲ್ಲ. ಈಚೆಗೆ ಎರಡು ವಿಸ್ತರಿಸಿದ ಮಾರ್ಗಗಳಸೇರ್ಪಡೆ ನಂತರ ಕೊಂಚ ಏರಿಕೆ ಕಂಡುಬಂದಿತ್ತು. ಈಮಧ್ಯೆ ಸೋಂಕಿನ ಹಾವಳಿ ತಗ್ಗಿದ್ದು, ಬೆನ್ನಲ್ಲೇ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಸೇವೆಯ ಅವಧಿ ವಿಸ್ತರಿಸಿತ್ತು.

ಪರಿಣಾಮಪ್ರಯಾಣಿಕರ ಸಂಖ್ಯೆ 2.42 ಲಕ್ಷ ದಾಟಿದ್ದು, ಸುಮಾರು44 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.2020ರ ಮಾರ್ಚ್‌ನಲ್ಲಿ ಬೆಂಗಳೂರು ಸೇರಿದಂತೆರಾಜ್ಯದಲ್ಲಿ ಮೊದಲ ಲಾಕ್‌ಡೌನ್‌ ಜಾರಿಯಾಗಿತ್ತು.ಇದಾದ ನಂತರ 2020ರ ಸೆಪ್ಟೆಂಬರ್‌ನಿಂದ 7ರಿಂದಪುನಾರಂಭಗೊಂಡಿತ್ತು. ಆದರೆ, ಒಟ್ಟಾರೆ ಆಸನಗಳಸಾಮರ್ಥ್ಯದ ಶೇ. 50ರಷ್ಟು ಪ್ರಯಾಣಿಕರಿಗೆಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇನ್ನೇನು ಸಹಜಸ್ಥಿತಿಗೆ ಬರುವಷ್ಟರಲ್ಲಿ ಮತ್ತೆ 2021ರ ಏಪ್ರಿಲ್‌27ರಿಂದ ಲಾಕ್‌ಡೌನ್‌ ಜಾರಿಯಾಯಿತು.

ಹಾಗಾಗಿ, ಸಮೂಹ ಸಾರಿಗೆ ಸ್ಥಗಿತಗೊಂಡಿತು.ದೀರ್ಘಾವಧಿ ಬಳಿಕ ಜೂನ್‌ 21ಕ್ಕೆ “ನಮ್ಮಮೆಟ್ರೋ’ ಮತ್ತೆ ಹಳಿಗೆ ಬಂದಿತು. ತಿಂಗಳಅಂತರದಲ್ಲಿ ಅಂದರೆ ಜುಲೈ ಮೊದಲ ವಾರದಲ್ಲೇಒಟ್ಟು ಆಸನಗಳ ಸಾಮರ್ಥ್ಯದ ಶೇ. 100ರಷ್ಟುಪ್ರಯಾಣಿಕರನ್ನು ಹೊತ್ತೂಯ್ಯಲು ಕೂಡಅನುಮತಿ ದೊರೆಯಿತು.

ಇದರಿಂದ ಬಿಎಂಆರ್‌ಸಿಎಲ್‌ಗೆ ಹಾಗೂ ಪ್ರಯಾಣಿಕರಿಗೆ ನಿಟ್ಟುಸಿರುಬಿಡುವಂತಾಯಿತು.ಹೀಗೆ ಒಟ್ಟು ಆಸನಗಳ ಸಾಮರ್ಥ್ಯದ ಶೇ.100ರಷ್ಟು ಪ್ರಯಾಣಿಕರೊಂದಿಗೆ ಕಾರ್ಯಾಚರಣೆಶುರುವಾದಾಗಿನಿಂದ ಸರಾಸರಿ 1.80 ಲಕ್ಷಆಸುಪಾಸು ಪ್ರಯಾಣಿಕರು ಸಂಚರಿಸುತ್ತಿದ್ದರು.ಇದರಿಂದ 35-40 ಲಕ್ಷ ಆದಾಯ ಬರುತ್ತಿತ್ತು.ಹಸಿರು ಮಾರ್ಗದಲ್ಲಿ ಯಲಚೇನಹಳ್ಳಿ- ರಾಷ್ಟ್ರೀಯರೇಷ್ಮೆ ಸಂಸ್ಥೆ ಹಾಗೂ ನೇರಳೆ ಮಾರ್ಗದಲ್ಲಿ ಮೈಸೂರುರಸ್ತೆ- ಕೆಂಗೇರಿವರೆಗೆ ವಿಸ್ತರಣೆಯಾದ ನಂತರಪ್ರಯಾಣಿಕರ ಸಂಖ್ಯೆ ಎರಡು ಲಕ್ಷದ ಗಡಿ ದಾಟಿದ್ದು,ಆದಾಯ ಪ್ರಮಾಣ ಅಂದಾಜು 45-50 ಲಕ್ಷ ರೂ.ತಲುಪಿದೆ.

ಈ ಮಧ್ಯೆ ಎರಡೂವರೆ ತಾಸು ಸೇವೆಅವಧಿ ವಿಸ್ತರಿಸಿದ್ದರಿಂದ ವಾರಾಂತ್ಯದ ನಡುವೆಯೂನಿತ್ಯ 2.30-2.40 ಲಕ್ಷ ಪ್ರಯಾಣಿಕರು ಸಂಚರಿಸಿದ್ದು,ಆದಾಯ 55-57 ಲಕ್ಷ ರೂ. ಬರುತ್ತಿದೆ ಎಂದುಹೆಸರು ಹೇಳಲಿಚ್ಛಿಸದ ನಿಗಮದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

20

ಶೆರ್ಲಿನ್ ದೂರು: ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಗೆ ಬಂಧನದ ಭೀತಿ

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

ವಿಕಲ ಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!

ವಿಕಲ ಚೇತನರ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!

araga jnanendra

ಅಲ್ಪಸಂಖ್ಯಾತ ಮತಗಳಿಗೆ ಸಿದ್ದರಾಮಯ್ಯ, ಎಚ್ಡಿಕೆ ಹಲ್ಲು ಗಿಂಜುತ್ತಿದ್ದಾರೆ: ಆರಗ ಜ್ಞಾನೇಂದ್ರ

communal voilance bangla

ಬಾಂಗ್ಲಾದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರ: ಕಾಳಿ ದೇವಸ್ಥಾನದ 6 ವಿಗ್ರಹಗಳು ಧ್ವಂಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಡಿಕೆಗಿಂತ ವಿದ್ಯುತ್‌ ಪೂರೈಕೆ ಹೆಚ್ಚಿದೆ- ಸುನೀಲ್‌ ಕುಮಾರ್‌

ಬೇಡಿಕೆಗಿಂತ ವಿದ್ಯುತ್‌ ಪೂರೈಕೆ ಹೆಚ್ಚಿದೆ: ಸುನೀಲ್‌ ಕುಮಾರ್‌

ನಗರದ ದೇವಾಲಯಗಳಲ್ಲಿ ದಸರಾ ವೈಭವ

ನಗರದ ದೇವಾಲಯಗಳಲ್ಲಿ ದಸರಾ ವೈಭವ

ಆಯುಧಪೂಜೆ-ವಿಜಯದಶಮಿ ಎಫೆಕ್ಟ್

ಆಯುಧಪೂಜೆ-ವಿಜಯದಶಮಿ ಎಫೆಕ್ಟ್: ಎರಡೇ ದಿನದಲ್ಲಿ 6,200-6,500 ಟನ್‌ ತ್ಯಾಜ್ಯ ಸೃಷ್ಟಿ

ಸರ್ಕಾರಿ ಕೆಲಸ ಕೊಡಿಸುವುದಾಗಿ ಯುವತಿಗೆ 6 ಲಕ್ಷ ರೂ. ವಂಚನೆ

ಸಹಿ ನಕಲು: ಪ್ರಾಧ್ಯಾಪಕ ಬಂಧನ

ಹನಿಟ್ರ್ಯಾಪ್‌ ಮಾಡುತ್ತಿದ್ದ ಮಹಿಳೆ ಸೆರೆ

ಹನಿಟ್ರ್ಯಾಪ್‌ ಮಾಡುತ್ತಿದ್ದ ಮಹಿಳೆ ಸೆರೆ

MUST WATCH

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

ಹೊಸ ಸೇರ್ಪಡೆ

ಹಾಲು ಗುಣಮಟ್ಟ ಸರಿಯಿಲ್ಲ ಎಂದು ಕ್ಯಾತೆ- ಡೇರಿ ಅವ್ಯವಹಾರ ಬೆಳಕಿಗೆ

ಸೋಲೂರು ಹಾಲು ಉತ್ಪಾದಕರ ಪ್ರತಿಭಟನೆ

20

ಶೆರ್ಲಿನ್ ದೂರು: ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಗೆ ಬಂಧನದ ಭೀತಿ

ಬಾಳಗಾರಿನ  ಪಂಚವಟಿಯಲ್ಲಿ ಮಾಯಾಮೃಗ!

ಬಾಳಗಾರಿನ  ಪಂಚವಟಿಯಲ್ಲಿ ಮಾಯಾಮೃಗ!

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.