ಆಸ್ತಿ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಕಸರತ್ತು

Team Udayavani, Jan 22, 2020, 3:10 AM IST

ಬೆಂಗಳೂರು: ನಗರದಲ್ಲಿ ದೀರ್ಘ‌ ಸಮಯದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರ ಆಸ್ತಿ ಜಪ್ತಿ ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪಾಲಿಕೆ ಮುಂದಾಗಿದೆ. ಈ ಮಧ್ಯೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಎಷ್ಟು ಬಾರಿ ನೋಟಿಸ್‌ ನೀಡಲಾಗಿದೆ ಎಂದು ವಿವರಣೆ ಕೇಳಿ ಬಿಬಿಎಂಪಿಯ ಜಂಟಿ ಆಯುಕ್ತರಿಗೆ ನೋಟಿಸ್‌ ನೀಡಲು ಕಂದಾಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರಿ ಇಲಾಖೆಗಳೂ ಸೇರಿದಂತೆ ಹಲವರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಆಸ್ತಿ ಪಾವತಿಸುವಂತೆ ಹಲವು ಬಾರಿ ನೋಟಿಸ್‌ ನೀಡಿದರೂ ಕೆಲವರು ಆಸ್ತಿ ತೆರಿಗೆ ಪಾವತಿ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಪ್ತಿ ಅಸ್ತ್ರ ಬಳಸಲು ಪಾಲಿಕೆ ಇತ್ತೀಚೆಗೆ ನಿರ್ಧರಿಸಿತ್ತು. ಆದರೆ, ಯಾವ ವಲಯದಲ್ಲಿ ಎಷ್ಟು ಸ್ವತ್ತುಗಳಿಗೆ ನೋಟಿಸ್‌ ನೀಡಲಾಗಿದೆ. ಎಷ್ಟು ಬಾರಿ ನೋಟಿಸ್‌ ನೀಡಲಾಗಿದೆ ಎಂಬ ವಿವರವನ್ನೇ ಅಧಿಕಾರಿಗಳು ಕಂದಾಯ ವಿಭಾಗದ ಅಧಿಕಾರಿಗಳಿಗೆ ಸಲ್ಲಿಕೆ ಮಾಡದೆ ಇರುವುದರಿಂದ ವಾಸ್ತವ ಸ್ಥಿತಿ ಏನಿದೆ ಎನ್ನುವುದು ತಿಳಿಯುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಎಂಟು ವಲಯದ ಜಂಟಿ ಆಯುಕ್ತರಿಗೆ ಈ ಬಗ್ಗೆ ನೋಟಿಸ್‌ ಜಾರಿ ಮಾಡಲು ಕಂದಾಯ ವಿಭಾಗದ ಅಧಿಕಾರಿಗಳು ನಿರ್ಧರಿಸಿದ್ದಾರೆ. ನಿಮ್ಮ ವಲಯದಲ್ಲಿ ಎಷ್ಟು ಮಾಲೀಕರು ಆಸ್ತಿ ತೆರಿಗೆ ಮತ್ತು ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಹಾಗೂ ಅವರಿಗೆ ಎಷ್ಟು ಬಾರಿ ನೋಟಿಸ್‌ ನೀಡಲಾಗಿದೆ ಎನ್ನುವ ವಿವರಗಳನ್ನು ಕೂಡಲೇ ನೀಡುವಂತೆ ವಿವರಣೆ ಕೇಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಈ ಮಧ್ಯೆ ನಕ್ಷೆ ಹಾಗೂ ನಿಯಮಾವಳಿ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಿಕೊಂಡಿರುವ ಮಾಲೀಕರಿಗೆ ದುಪ್ಪಟ್ಟು ದಂಡ ವಿಧಿಸುವುದಕ್ಕೆ ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಲಾಗಿದೆ. ಆದರೆ, ಆಸ್ತಿ ಜಪ್ತಿ ಮಾಡುವುದಕ್ಕೆ ಪಾಲಿಕೆಗೆ ಪೂರ್ಣ ಅಧಿಕಾರ ಇಲ್ಲ ಎಂದು ಪಾಲಿಕೆಯ ಕೆಲವು ಸದಸ್ಯರು ತಿಳಿಸಿದ್ದಾರೆ.

ನಿಯಮಗಳೇ ಮುಳುವು: ಸ್ವಯಂ ಘೋಷಿತ ಆಸ್ತಿ ವ್ಯವಸ್ಥೆಯಡಿ ಮಾಲೀಕರೇ ಆಸ್ತಿಯ ಸುತ್ತಳತೆ ವಿವರ ನಮೂದಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಇದರಲ್ಲೂ ಲೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇದರ ಬಗ್ಗೆ ಪರಿಶೀಲನೆ ಮಾಡಿ ಪಾಲಿಕೆಗೆ ಉಂಟಾಗುತ್ತಿರುವ ನಷ್ಟವನ್ನು ತಪ್ಪಿಸುವ ಉದ್ದೇಶದಿಂದ ಟೋಟಲ್‌ ಸ್ಟೇಷನ್‌ ಸರ್ವೇ ಪರಿಚಯಿಸಲಾಗಿತ್ತು. ತಪ್ಪು ಪಾಲಿಕೆಗೆ 290ಕೋಟಿ ರೂ. ನಷ್ಟವುಂಟಾಗಿರುವುದು ಬೆಳಕಿಗೆ ಬಂದಿತ್ತು.

ಆಸ್ತಿ ತೆರಿಗೆ ಸಂಗ್ರಹಕ್ಕೆ ಪಾಲಿಕೆ ತೆಗೆದುಕೊಳ್ಳುತ್ತಿರುವ ಪ್ರತಿ ಸುಧಾರಣಾ ಹಂತದಲ್ಲೂ ಪಾಲಿಕೆಯ ಕೆಲವು ಅಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳದೆ ಇರುವುದರಿಂದ, ಪೂರ್ಣ ಪ್ರಮಾಣದ ಯಶಸ್ಸು ಗಳಿಸಲು ಪಾಲಿಕೆಯಿಂದ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಸರ್ಕಾರಿ ಇಲಾಖೆಗಳಿಂದಲೂ ಪಾಲಿಕೆಗೆ ಅಂದಾಜು 121.41 ಕೋಟಿ ರೂ. ಬಾಕಿ ಇದ್ದು, ಇದರ ವಸೂಲಾತಿಗೂ ಕಠಿಣ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಚಿಂತನೆ ನಡೆಸಿದೆ.

ನಿಯಮ ಪರಿಶೀಲಿಸದ ಅಧಿಕಾರಿಗಳು: ನಕ್ಷೆ ಹಾಗೂ ನಿಯಮಾವಳಿ ಉಲ್ಲಂಘನೆ ಮಾಡಿದ ಮಾಲೀಕರ ಮೇಲೆ ಈಗ ಪಾಲಿಕೆ ಏಕಾಏಕಿ ದುಪ್ಪಟ್ಟು ತೆರಿಗೆ ವಿಧಿಸುವ ಮುನ್ನ ಮಾಲೀಕರು ನಿಯಮ ಉಲ್ಲಂಘನೆ ಮಾಡಲು ಅವಕಾಶ ಮಾಡಿಕೊಟ್ಟ ಪಾಲಿಕೆಯ ಅಧಿಕಾರಿಗಳಿಗೂ ದಂಡ ವಿಧಿಸಬೇಕು ಎಂದು ನಗರಾಭಿವೃದ್ಧಿ ತಜ್ಞ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ವಿ. ರವೀಂದ್ರ ಅಭಿಪ್ರಾಯಪಡುತ್ತಾರೆ.

ಆಸ್ತಿ ತೆರಿಗೆ ಸಂಗ್ರಹ
ವರ್ಷ ನಿಗದಿತ ಗುರಿ ವಸೂಲಾದ ತೆರಿಗೆ ಪ್ರಗತಿ ಸಾಧಿಸಿರುವುದು (ಕೋಟಿ ರೂ.ಗಳಲ್ಲಿ)
2016-17 2300 1997.28 94.85
2017-18 2600 2132.44 83.76
2018-19 3100 2529.42 81.90
2019-20 3500 2425.30 69.29 (ಜ.15ರವರೆಗೆ)

ಸರ್ಕಾರಿ ಇಲಾಖೆಗಳ ಆಸ್ತಿ ತೆರಿಗೆ ಮತ್ತು ಸೇವಾ ತೆರಿಗೆ ಬಾಕಿ ವಿವರ
ವಲಯ ಆಸ್ತಿ ಸಂಖ್ಯೆ ಬಾಕಿಮೊತ್ತ (ಕೋಟಿಗಳಲ್ಲಿ)
ಪೂರ್ವ 161 53.85
ಪಶ್ಚಿಮ 70 2.36
ದಕ್ಷಿಣ 54 13.83
ಮಹದೇವಪುರ 19 31.03
ಬೊಮ್ಮನಹಳ್ಳಿ 15 0.51
ದಾಸರಹಳ್ಳಿ 12 1.45
ರಾಜರಾಜೇಶ್ವರಿ ನಗರ 44 9.81
ಯಲಹಂಕ 32 8.58
ಒಟ್ಟು 407 121.41

ಆಸ್ತಿ ತೆರಿಗೆ ಪಾವತಿ ಮಾಡದೆ ಬಾಕಿ ಉಳಿಸಿ ಕೊಂಡಿರುವ ಮಾಲೀಕರ ಚರ ಆಸ್ತಿಗಳನ್ನು ಜಪ್ತಿ ಮಾಡಬಹುದು. ಒಟ್ಟಾರೆ ಆಸ್ತಿಯನ್ನೇ ಜಪ್ತಿ ಮಾಡಿ ಪಾಲಿಕೆ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳುವುದಕ್ಕೆ ಕಾನೂನಿ ನಲ್ಲಿ ಅವಕಾಶವಿಲ್ಲ. ಸ್ವತ್ತುಗಳ ಮಾಲೀಕರು ಪಾಲಿಕೆಗೆ ನಿಯಮಾನುಸಾರ ಆಸ್ತಿ ತೆರಿಗೆ ಪಾವತಿ ಮಾಡದೆ ಇದ್ದಲ್ಲಿ ಅವರಿಗೆ ನೋಟಿಸ್‌ ಜಾರಿ ಮಾಡಿ ವಿವರಣೆ ಕೇಳಬೇಕಾ ಗುತ್ತದೆ. ಆಗಲೂ ಆಸ್ತಿ ಪಾವತಿ ಮಾಡದೆ ಇದ್ದಲ್ಲಿ ಅವರ ಚರ ಆಸ್ತಿಗಳನ್ನು ಪಾಲಿಕೆ ವಶಕ್ಕೆ ಪಡೆದುಕೊಳ್ಳಬಹುದು.
-ಎಂ.ಶಿವರಾಜು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ

ಆಸ್ತಿ ತೆರಿಗೆ ಹಾಗೂ ಸೇವಾ ತೆರಿಗೆ ಪಾವತಿ ಮಾಡದ ಮಾಲೀಕರ ಮೇಲೆ ನಿಯಮಾನು ಸಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇನ್ನು ಆಸ್ತಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಇಲಾಖೆಗಳ ವಿರುದ್ಧವೂ ನಿಯಮಾನುಸರ ಕ್ರಮ ತೆಗೆದುಕೊಳ್ಳಲಾಗುವುದು.
-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ರವಿ ಪ್ರಕಾಶ್‌ ಪೂಜಾರಿ ಅಲಿಯಾಸ್‌ ರವಿ ಪೂಜಾರಿ ಬರೋಬ್ಬರಿ ನಾಲ್ಕು ಹೆಸರುಗಳಿಂದ ಗುರುತಿಸಿಕೊಡಿದ್ದಾನೆ! ಮುಂಬೈನ ಭೂಗತ ಪಾತಕಿ ಛೋಟಾ ರಾಜನ್‌ ಈತನನ್ನು...

  • ಬೆಂಗಳೂರು: ನಮ್ಮ ಸಾಕು ನಾಯಿಗೆ ಇದುವರೆಗೂ ಮೈಕ್ರೋಚಿಪ್‌ ಅಳವಡಿಸಿಲ್ಲ ಎಂದಾದರೆ ಕೂಡಲೆ ಅಳವಡಿಸಿ. ಹಾಗೇ ಶ್ವಾನಕ್ಕೆ ಪರವಾನಗಿ (ಲೈಸೆನ್ಸ್‌) ಕೂಡ ಮಾಡಿಸಿಬಿಡಿ....

  • ಬೆಂಗಳೂರು: ಇಷ್ಟ ಬಂದಾಗ ಬರೋಕೆ, ಹೋಗೋಕೆ ಇದೇನು ಗೋಪಾಲಪ್ಪನ ಛತ್ರವಲ್ಲ ಎಂದು ಅಧಿಕಾರಿಗಳನ್ನು ಸಚಿವ ಕೆ.ಗೋಪಾಲಯ್ಯ ತರಾಟೆಗೆ ತೆಗೆದುಕೊಂಡರು. ನಗರದ ಕನ್ನಿಂಗ್‌...

  • ಬೆಂಗಳೂರು: ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸದಾಗಿ 25 ಕೋರ್ಸ್‌ಗಳನ್ನು ಆರಂಭಿಸಲಾಗುವುದು ಎಂದು ವೈದ್ಯಕೀಯ...

  • ಬೆಂಗಳೂರು: ಪಡಿತರ ಚೀಟಿಗೆ ಅರ್ಜಿ ಎಲ್ಲಿ ಸಲ್ಲಿಸಬೇಕು. ಆಧಾರ್‌ ನೋಂದಣಿ ಎಂಬಿತ್ಯಾದಿ ಮಾಹಿತಿ ಪಡೆಯಲು ರಾಜ್ಯಾದ್ಯಂತ ಈವರೆಗೆ ಆಹಾರ, ನಾಗರಿಕ ಸರಬರಾಜು ಮತ್ತು...

ಹೊಸ ಸೇರ್ಪಡೆ