ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ಹೊಸ ಕರಡು


Team Udayavani, Aug 5, 2019, 3:07 AM IST

tyajya-ni

ಬೆಂಗಳೂರು: ನಗರದಲ್ಲಿ ನಿತ್ಯ ಉತ್ಪತ್ತಿಯಾಗುತ್ತಿರುವ ಸಾವಿರಾರು ಟನ್‌ ತ್ಯಾಜ್ಯವನ್ನು ಸರ್ಮಪಕವಾಗಿ ವಿಲೇವಾರಿ ಮಾಡುವಲ್ಲಿ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊಸ ತ್ಯಾಜ್ಯ ನಿರ್ವಹಣೆ ಕರಡು-2019 ನೀತಿ ಸಿದ್ಧಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹಸಿತ್ಯಾಜ್ಯ ಮತ್ತು ಒಣ ತ್ಯಾಜ್ಯ ವಿಂಗಡಣೆಯಲ್ಲಿ ಕುಸಿತ, ಸಂಗ್ರಹಣೆಯಲ್ಲಿ ವೈಫ‌ಲ್ಯಗಳ ದೂರು, ಆರೋಪಗಳ ಹಿನ್ನೆಲೆಯಲ್ಲಿ ಕರಡು ರೂಪಿಸಿದ್ದು, ಇದು ಅನುಷ್ಠಾನಕ್ಕೆ ಬಂದರೆ ನಗರದ ತ್ಯಾಜ್ಯ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಹೊಸ ಕಾನೂನು ಪ್ರಕಾರ ಹಸಿ, ಒಣ ತ್ಯಾಜ್ಯ , ಪ್ಲಾಸ್ಟಿಕ್‌, ಕಟ್ಟಡ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ ವಾಹನಗಳಿಗೆ ನೀಡುವುದು ಕಡ್ಡಾಯ. ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯವೆಸೆದು ನಿಯಮ ಉಲ್ಲಂ ಸಿದರೆ 1,000 ರೂ. ನಿಂದ 25 ಸಾವಿರ ರೂ. ವರೆಗೆ ದುಬಾರಿ ದಂಡ ಕಟ್ಟಬೇಕಾಗುತ್ತದೆ. ಪಾಲಿಕೆ ಕೌನ್ಸಿಲ್‌ ಸಭೆ ಅನುಮೋದನೆ ದೊರೆತಿದೆ. ಈ ಕರಡಿನ ಕುರಿತು ಅಧಿಸೂಚನೆ ಪ್ರಕಟಿಣೆ ಬಳಿಕ, ಸಾರ್ವಜನಿಕರಿಂದ ಸಲಹೆ ಅಥವಾ ಅಕ್ಷೇಪಣೆಗಳನ್ನು ಸ್ವೀಕರಿಸಲು 15 ದಿನಗಳ ಕಾಲಾವಕಾಶವನ್ನು ಬಿಬಿಎಂಪಿ ನೀಡಲಿದೆ.

ಶೇ.5 ಉಪಕರ: ಕರಡು ನೀತಿ ಜಾರಿಗೆ ಬಂದ ಮೇಲೆ ಪ್ರತಿ ವರ್ಷ ಆಸ್ತಿ ತೆರಿಗೆದಾರರಿಗೆ ಆಸ್ತಿ ತೆರಿಗೆಯ ಶೇ.5 ರಷ್ಟನ್ನು ಹೆಚ್ಚುವರಿಯಾಗಿ ಘನ ತ್ಯಾಜ್ಯ ನಿರ್ವಹಣಾ ಉಪಕರ ಎಂದು ಪಾವತಿಸಬೇಕು. ಆಸ್ತಿ ತೆರಿಗೆ ಜತೆಯೇ ಇದನ್ನು ಪಾಲಿಕೆ ವಸೂಲಿ ಮಾಡಲಿದೆ. ಇದರೊಂದಿಗೆ ಪಾಲಿಕೆ ಕೌನ್ಸಿಲ್‌ ಅನುಮೋದನೆ ಇಲ್ಲದೆಯೂ ಪ್ರತೀ ವರ್ಷ ಶೇ.5ರಷ್ಟು ಉಪಕರ ಹೆಚ್ಚಿಸಬಹುದಾಗಿದೆ. ಕೌನ್ಸಿಲ್‌ ಅನುಮತಿಯೊಂದಿಗೆ ಹೆಚ್ಚುವರಿ ಉಪಕರ ವಸೂಲಿ ಮಾಡುವ ಅವಕಾಶವನ್ನು ನೀಡಲಾಗಿದೆ.

ಬಿಬಿಎಂಪಿ ತ್ಯಾಜ್ಯ ನಿರ್ವಹಣೆಗೂ ಉಪಕರ ವಿಧಿಸಲು ಮುಂದಾಗಿದ್ದು, ಈ ಮೂಲಕಬೀದಿ ವ್ಯಾಪಾರಿಗಳೂ ಕೂಡ ತಿಂಗಳಿಗೆ ಗರಿಷ್ಠ 50 ರೂ. ಪಾವತಿ ಮಾಡಬೇಕಾಗುತ್ತದೆ. ನಗರದ ಎಲ್ಲಾ ರೀತಿಯ ಖಾಲಿ ನಿವೇಶನಗಳಿಗೂ ಪ್ರತಿ ಚದರಡಿಗೆ ತಿಂಗಳಿಗೆ 20 ಪೈಸೆಯಂತೆ ತ್ಯಾಜ್ಯ ನಿರ್ವಹಣಾ ಉಪಕರ ನಿಗದಿಪಡಿಸಲಾಗಿದೆ. ಸಣ್ಣ ಪ್ರಮಾಣದ ವಾಣಿಜ್ಯ ಉದ್ಯಮಗಳ ಪೈಕಿ, 50 ಆಸನ ಹೊಂದಿರುವ ಹೋಟೆಲ್‌ ಗಳಿಗೆ ಮಾಸಿಕ 500 ರೂ. , ಅದಕ್ಕಿಂತ ಹೆಚ್ಚು ಆಸನ ಇದ್ದರೆ 750 ರೂ ., ಮೆಸ್‌ ಮತ್ತು ಮೊಬೈಲ್‌ ಕ್ಯಾಂಟೀನ್‌ಗಳಿಗೆ 250 ರೂ.,

ಕಾಫಿ, ಟೀ, ಬೇಕರಿಗಳಿಗೆ 100 ರೂ, ಫಾಸ್ಟ್‌ಫ‌ುಡ್‌ ಮಳಿಗೆಗಳಿಗೆ 200 ರೂ., ಮದುವೆ, ಸಭೆ, ಸಮಾರಂಭ ಸಮುದಾಯ ಭವನಗಳಿಗೆ ಮಾಸಿಕ 1000 ರೂ., ಹಾಸ್ಟೆಲ್‌, ಲಾಡ್ಜ್ ಮತ್ತು ಬಾರ್‌, ರೆಸ್ಟೋರೆಂಟ್‌ಗಳಿಗೆ 750 ರೂ., ಮಾಂಸ ವ್ಯಾಪಾರಿ ಮಳಿಗೆಗಳಿಗೆ 500 ರೂ. , ಟೆಕ್ಸ್‌ಟೈಲ್ಸ್‌, ಗಾಮೆಂಟ್ಸ್‌ 150 ರೂ., 50 ಹಾಸಿಗೆ ವರೆಗಿನ ಆಸ್ಪತ್ರೆ, ನರ್ಸಿಂಗ್‌ ಹೋಂಗಳಿಗೆ 400 ರೂ., ಅದಕ್ಕಿಂತ ಹೆಚ್ಚಿದ್ದರೆ 800 ರೂ., ಕ್ಲಿನಿಕ್‌ಗಳಿಗೆ 250 ರೂ., ಚಿತ್ರಮಂದಿರಗಳಿಗೆ 500 ರೂ., ಎಲ್ಲಾ ರೀತಿಯ ವಾಹನಗಳ ಶೋರೂಂಗಳಿಗೆ 1,000ರೂ., ವಾಹನಸರ್ವಿಸ್‌ ಕೇಂದ್ರಗಳಿಗೆ 500 ರೂ. ಇದರೊಂದಿಗೆ ಪ್ರತಿ ವ್ಯಾಪಾರಕ್ಕೂ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ.

ಸಮಾರಂಭಗಳಿಗಿನ್ನು ಮುಂದೆ ತ್ಯಾಜ್ಯ ಕರ: ಬಿಬಿಎಂಪಿ ವ್ಯಾಪ್ತಿಯ ಹೋಟೆಲ್‌, ಸಮುದಾಯ ಭವನ ಸೇರಿದಂತೆ ಸಾರ್ವಜನಿಕ ಅಥವಾ ಖಾಸಗಿ ಕಟ್ಟಡ, ಖಾಲಿ ನಿವೇಶನಗಳಲ್ಲಿ ಕನಿಷ್ಠ ಒಂದು ವಾರ ಅಥವಾ ಅದಕ್ಕೂ ಮೇಲ್ಪಟ್ಟು ನಡೆಯುವ ವಸ್ತು ಪ್ರದರ್ಶನ, ಮದುವೆ ಸಮಾರಂಭಗಳಿಂದ ಉತ್ಪಾದನೆಯಾಗುವ ತ್ಯಾಜ್ಯ ವಿಲೇವಾರಿ ಅವಧಿವಾರು ಪ್ರತ್ಯೇಕ ಕರ ನಿಗದಿಪಡಿಸಲಾಗಿದೆ.

ಇದರ ಅನ್ವಯ ವಾರದವರೆಗೆ 1500 ರೂ., ವಾರದಿಂದ ತಿಂಗಳವರೆಗೆ 3 ಸಾವಿರ ರೂ., ತಿಂಗಳು ಮೇಲ್ಪಟ್ಟ ಕಾರ್ಯಕ್ರಮಗಳಿಗೆ 6 ಸಾವಿರ ರೂ. ಕರ ನಿಗದಿಪಡಿಸಲಾಗಿದೆ. ಖಾಸಗಿ ಕಾರ್ಯಕ್ರಮಗಳಿಗೆ ಸೇರುವ ಜನಸಂಖ್ಯೆ ಆಧಾರದ ಮೇಲೆ ಕಾರ್ಯಕ್ರಮ ಆಯೋಜಕರು ಕನಿಷ್ಠ 10 ಸಾವಿರದಿಂದ1 ಲಕ್ಷರೂ. ವರೆಗೆ ಪಾಲಿಕೆ ಮುಂಗಡಹಣ ಪಡೆಯಲಿದೆ. ಸಮಾರಂಭಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಬಿಬಿಎಂಪಿಗೆ ಪ್ರತಿ ಕೆ.ಜಿ. ತ್ಯಾಜ್ಯಕ್ಕೆ ನೂರು ರೂ.ಗಳಂತೆ ಪಾವತಿಸಬೇಕಾಗುತ್ತದೆ.

ನಿಯಮ ಉಲ್ಲಂಘನೆಗಳು ಮೊದಲಬಾರಿ ನಂತರ ಉಲ್ಲಂಘನೆ ಮಾಡಿದರೆ(ರೂ.ಗಳಲ್ಲಿ)
ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು, ಮೂತ್ರ ವಿರ್ಸಜನೆ 500 1,000
ಕಸ ವಿಂಗಣೆ ನಿಯಮ ಉಲ್ಲಂಘನೆ 500 1,000
ಕಸವಿಂಗಡಣೆ (ವಾಣಿಜ್ಯ ಉತ್ಪಾದಕರಿಗೆ) ಉಲ್ಲಂಘನೆ 1,000 5ಸಾವಿರದ ವರೆಗೆ
ಪ್ರಾಣಿಗಳ ತ್ಯಾಜ್ಯ ವಿಂಗಡಣೆ ವೈಫ‌ಲ್ಯ 1000 2,000
ಕಸ ಸುಟ್ಟರೆ 5000
ಕಸ(ವಾಣಿಜ್ಯ ಉತ್ಪಾದಕರಿಗೆ) ಸುಟ್ಟರೆ 25,000
ಕಟ್ಟಡ ತ್ಯಾಜ್ಯ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆ 5,000 10,000
ತ್ಯಾಜ್ಯ ಉತ್ಪಾದನೆಯ ಬಗ್ಗೆ ಸುಳ್ಳು ಮಾಹಿತಿ ನೀಡಿದರೆ 10 ಸಾವಿರ

ಎಲ್ಲಾ ತ್ಯಾಜ್ಯ ಉತ್ಪಾದಕರಿಗೆ ವಿಧಿಸುವ ಕರದರ
ವಸತಿ ಸಮುಚ್ಛಯಗಳು ಸೆಸ್‌(ಕರ)ದರ (ತಿಂಗಳಿಗೆ ರೂ.ಗಳಲ್ಲಿ)
1 ಸಾವಿರ ಚ.ಅಡಿವರೆಗೆ 30
1 ಸಾವಿರದಿಂದ 3 ಸಾವಿರ ಚ.ಅಡಿವರೆಗೆ 40
3 ಸಾವಿರ ಚ.ಅಡಿಗಿಂತ ಅಧಿಕ 50

ವಾಣಿಜ್ಯ ಕಟ್ಟಡಗಳು
1 ಸಾವಿರ ಚ.ಅಡಿವರೆಗೆ 50
1ರಿಂದ 5ಸಾವಿರ ಚ.ದ ಅಡಿವರೆಗೆ 100
5 ಸಾವಿರ ಚ.ದ ಅಡಿಗಿಂತ ಹೆಚ್ಚು 200

ಕೈಗಾರಿಕಾ ಕಟ್ಟಡಗಳು
1 ಸಾವಿರ ಚ.ಅಡಿವರೆಗೆ 100
1 ಸಾವಿರದಿಂದ 5 ಸಾವಿರ ಚ.ಅಡಿವರೆಗೆ 200
5 ಸಾವಿರ ಚ.ದ ಅಡಿಗಿಂತ ಅಧಿಕ 300

ಕಲ್ಯಾಣ ಮಂಟಪ, ಹೋಟೆಲ್‌ಗ‌ಳು ಮತ್ತು ಆರೋಗ್ಯ ಕೇಂದ್ರಗಳು
10 ಸಾವಿರ ಚ.ಅಡಿವರೆಗೆ 300
10 ಸಾವಿರದಿಂದ 50 ಸಾವಿರ ಚ.ಅಡಿವರೆಗೆ 500
50 ಸಾವಿರ ಚ.ಅಡಿಗಿಂತ ಹೆಚ್ಚಿದ್ದರೆ 600

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.