ಹೆಲ್ಮೆಟ್ ಹಾಕದೆ ವ್ಹೀಲಿಂಗ್! ಭೀಕರ ಅಪಘಾತದಲ್ಲಿ ಮೂವರು ಸಾವು
Team Udayavani, Jun 21, 2020, 4:49 PM IST
ಬೆಂಗಳೂರು: ನಗರದ ಯಲಹಂಕದ ಜಿಕೆವಿಕೆಯ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮಹಮ್ಮದ್ ಆಯಾನ್ (16), ಮಾಜ್ ಅಹಮ್ಮದ್ ಖಾನ್(17) ಹಾಗೂ ಸಯ್ಯದ್ ರಿಯಾಜ್ (22) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ವ್ಹೀಲಿಂಗ್ ಮಾಡುವ ಬೈಕ್ ಗಳು ಢಿಕ್ಕಿಯಾಗಿ ಇವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ವ್ಹೀಲಿಂಗ್ ಮಾಡುವ ವೇಳೆ ಯುವಕರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ. ಅಜಾಗರೂಕತೆಯಿಂದ, ವೇಗವಾಗಿ ಬೈಕ್ ಓಡಿಸುತ್ತಿದ್ದ ಇವರು ನಿಯಂತ್ರಣ ತಪ್ಪಿ ಮುಖಾಮುಖಿ ಢಿಕ್ಕಿ ಹೊಡೆದುಕೊಂಡಿದ್ದಾರೆ. ಬೈಕ್ ಗಳು ನುಜ್ಜುಗುಜ್ಜಾಗಿದ್ದು, ತಲೆಗೆ ಬಲವಾಗಿ ಗಾಯವಾದ ಕಾರಣ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯುವಕರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.