
ಕದ್ದ ಬೈಕ್‌ಗಳಿಗೆ ಭಾರೀ ಬೇಡಿಕೆ! ರಾಜ್ಯಕ್ಕೆ ಕಾಲಿಟ್ಟಿದೆ ಬೈಕ್ ಕಳ್ಳರ ಗ್ಯಾಂಗ್
Team Udayavani, Jul 25, 2022, 7:15 AM IST

ಬೆಂಗಳೂರು : ರಾಜ್ಯದಲ್ಲಿ ದ್ವಿಚಕ್ರ ವಾಹನ ಕಳ್ಳರ ನೂರಾರು ಗ್ಯಾಂಗ್‌ಗಳು ಸಕ್ರಿಯ ವಾಗಿದ್ದು, ಕದ್ದ ಬುಲೆಟ್, ಪಲ್ಸರ್, ಕೆಟಿಎಂ ಡ್ನೂಕ್ ಹಾಗೂ ಸ್ಕೂಟರ್‌ಗಳಿಗೆ (ಗೇರ್‌ಲೆಸ್) ನೆರೆ ರಾಜ್ಯಗಳಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ 41,623 ದ್ವಿಚಕ್ರವಾಹನ ಕಳವು ಪ್ರಕರಣಗಳು ದಾಖಲಾಗಿವೆ.
ಅಂತಾರಾಜ್ಯ ದ್ವಿಚಕ್ರವಾಹನ ಕಳ್ಳರ ತಂಡಗಳು ರಾಜ್ಯದ ಪ್ರಮುಖ ನಗರಗಳಿಗೆ ಸಕ್ರಿಯಲಾಗಿದ್ದು, ತಡರಾತ್ರಿ ಕಾರ್ಯಾಚರಣೆ ನಡೆಸುತ್ತವೆ. ಅತಿ ನಿಪುಣ ತಂಡವಾಗಿರುವ ಇವು, ಕೇವಲ 1ರಿಂದ 2 ನಿಮಿಷದಲ್ಲಿ ಬೈಕ್ ಲಪಟಾಯಿಸುವ ತಂತ್ರಗಾರಿಕೆ ಯನ್ನು ಹೊಂದಿವೆ. ಕದ್ದ ಬೈಕ್‌ನಲ್ಲೇ ಊರು ಸೇರಿ ಅದರ ನಂಬರ್ ಪ್ಲೇಟ್ ಸಹಿತ ಎಲ್ಲ ಬಿಡಿ ಭಾಗಗಳನ್ನು ಸಂಪೂರ್ಣ ಬದಲಾಯಿಸಿ 10 ಸಾವಿರ ದಿಂದ 35 ಸಾ.ರೂ.ವರೆಗೆ ಮಾರಾಟ ಮಾಡುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
6 ತಿಂಗಳಲ್ಲಿ 5,559 ಬೈಕ್‌ಗಳು ಕಳವು
2018ರಲ್ಲಿ 9,892, 2019ರಲ್ಲಿ 9,062, 2020ರಲ್ಲಿ 7,991 ದ್ವಿಚಕ್ರ ಕಳವು ಪ್ರಕರಣ ದಾಖಲಾಗಿದ್ದವು. 2021ರಲ್ಲಿ 9,119ರಷ್ಟು ಪ್ರಕರಣ ದಾಖಲಾಗಿದ್ದರೆ, ಈ ವರ್ಷ (ಜೂನ್ ವರೆಗೆ) ಕೇವಲ 6 ತಿಂಗಳಲ್ಲಿ 5,559 ದ್ವಿಚಕ್ರವಾಹನ ಕಳ್ಳತನವಾಗಿರುವುದು ಆತಂಕ ಮೂಡಿಸಿದೆ.
ಕದ್ದ ಐಷಾರಾಮಿ ಬೈಕ್‌ಗಳಿಗೆ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಹಾಗೂ ಉತ್ತರ ಭಾರತದ ಕೆಲ ಗ್ರಾಮೀಣ ಭಾಗಗಳಲ್ಲಿ ಭಾರೀ ಬೇಡಿಕೆ ಇದೆ. ಕದ್ದ ಬೈಕ್‌ಗಳನ್ನು ಗೂಡ್ಸ್ ವಾಹನಗಳಲ್ಲಿ ಉತ್ತರ ಭಾರತಕ್ಕೆ ಸಾಗಿಸಿರುವ ಹಲವು ನಿದರ್ಶನಗಳಿವೆ.
ಬೋಟ್‌ಗೆ ಬುಲೆಟ್ ಎಂಜಿನ್
ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಬುಲೆಟ್ ಬೈಕ್‌ನ ಎಂಜಿನ್‌ಗಳನ್ನು ಬೋಟ್‌ಗಳಿಗೆ ಅಳವಡಿಸುವ ಜಾಲವೂ ಸಕ್ರಿಯವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪತ್ತೆಯಾಗದಿರುವುದು ಯಾಕೆ?
– ಕದ್ದ ಬೈಕ್‌ಗಳ ಎಂಜಿನ್‌ಗಳ ಬಿಡಿ ಭಾಗಗಳನ್ನು ಹಳೆ ವಾಹನಗಳಿಗೆ ಅಳವಡಿಸುವುದು.
– ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ
– ಗ್ಯಾರೇಜ್‌ಗೆ ಕಡಿಮೆ ಬೆಲೆಗೆ ಮಾರಾಟ ಅಥವಾ ಗುಜರಿಗೆ ಹಾಕುವುದು.
– ಹಳ್ಳಿಗಾಡಿನ ಜನರೇ ಹೆಚ್ಚಾಗಿ ಬಳಸುವುದು.
– ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
