ರೈಲು ನಿಲಾಣ ದ್ದಾರದಿಂದಲೇ ಬಿಎಂಟಿಸಿ ಸೇವೆ


Team Udayavani, Jan 4, 2020, 10:23 AM IST

bng-tdy-1

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಾಗಿಲಿನಿಂದಲೇ ಬಸ್‌ ಸೇವೆ ಆರಂಭಿಸುವ ಮೂಲಕ ಗಮನಸೆಳೆದಿದ್ದ ಬಿಎಂಟಿಸಿ, ಇದೀಗ ಅದೇ ಮಾದರಿಯಲ್ಲಿ ಮತ್ತೂಂದು ಪ್ರಯೋಗಕ್ಕೆ ಮುಂದಾಗಿದೆ.

ಯಶವಂತಪುರ ರೈಲು ನಿಲ್ದಾಣದ ಪ್ರವೇಶ ದ್ವಾರದಿಂದಲೇ ಮೆಜೆಸ್ಟಿಕ್‌ ಹಾಗೂ ನಗರದ ಇತರೆಡೆ ಬಸ್‌ ಸೇವೆ ಆರಂಭಿಸಲು ಚಿಂತನೆ ನಡೆದಿದೆ. ಈ ಕುರಿತು ಬಿಎಂಟಿಸಿ ಮತ್ತು ರೈಲ್ವೆ ಇಲಾಖೆ ಮಾತುಕತೆ ನಡೆಸಿದ್ದು, ಎರಡು ಇಲಾಖೆಗಳ ಸಹಭಾಗಿತ್ವದಲ್ಲಿ ಮುಂದಿನ ಒಂದೂವರೆ ತಿಂಗಳಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ. ಅಂದುಕೊಂಡಂತೆ ಈ ಪ್ರಯೋಗಕ್ಕೆ ಸಂಸ್ಥೆಯು ಮುಂದಾದರೆ, ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗುವುದರ ಜತೆಗೆ ಸಾರ್ವಜನಿಕ ಸಾರಿಗೆಗೆ ಒತ್ತು ಕೊಟ್ಟಂತಾಗುತ್ತದೆ.

ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಆಗಮಿಸುವ ಹತ್ತಾರು ರೈಲುಗಳು ಯಶವಂತಪುರದಲ್ಲೇ ನಿಲ್ಲುತ್ತವೆ. ಹೀಗಾಗಿ ಈ ನಿಲ್ದಾಣದಿಂದ ನಿತ್ಯ ಲಕ್ಷಕ್ಕೂ ಅಧಿಕ ಪ್ರಯಾಣಿಕರು ನಗರದ ನಾನಾ ಕಡೆಗೆ ಹೋಗುತ್ತಾರೆ. ಪರಿಣಾಮ ಈ ಭಾಗದಲ್ಲಿ ವಾಹನಗಳ ಸಂಚಾರದಟ್ಟಣೆ ಹೆಚ್ಚಾಗುತ್ತಿದೆ. ರೈಲ್ವೆ ನಿಲ್ದಾಣದ 300 ಮೀಟರ್‌ ದೂರದಲ್ಲೇ ಮೆಟ್ರೋ ನಿಲ್ದಾಣ ಇದೆ. ಆದರೆ, ಎಲ್ಲೆಡೆ ಮೆಟ್ರೋ ಸೇವೆ ಲಭ್ಯವಿಲ್ಲದಿರುವುದರಿಂದ ಅನಿವಾರ್ಯವಾಗಿ ಬಹುತೇಕ ಪ್ರಯಾಣಿಕರು ಆಟೋ, ಟ್ಯಾಕ್ಸಿ ಮೊರೆಹೋಗುತ್ತಾರೆ.

ಪ್ರಯಾಣ ದರ ಹೆಚ್ಚಳ: ನಿಲ್ದಾಣ ಸಮೀಪದಲ್ಲಿ ಟ್ಯಾಕ್ಸಿ ಸೇವೆ ಮತ್ತು ಪ್ರಿಪೇಯ್ಡ ಆಟೋ ನಿಲ್ದಾಣ ಇವೆ. ಆದರೂ ಪ್ರಯಾಣ ದರ ದುಪ್ಪಟ್ಟು ತೆತ್ತಬೇಕು. ಇನ್ನು ಮೆಟ್ರೋ ನಿಲ್ದಾಣದ ಕೆಳ ಭಾಗದಲ್ಲಿ ನಿಲ್ಲುವ ಆಟೋ ಚಾಲಕರು ಕೇವಲ 2-3 ಮೀಟರ್‌ ದೂರದ ಪ್ರಯಾಣಕ್ಕೂ ನೂರಾರು ರೂ. ವಸೂಲು ಮಾಡುತ್ತಾರೆ. ಈ ಸಂಬಂಧ ಕೆಲ ದೂರುಗಳು ಕೂಡ ಬಂದಿದ್ದು, ಸಾರ್ವಜನಿಕ ಸಾರಿಗೆ ಸಂಪರ್ಕ ಒದಗಿಸುವಂತೆ ಕೋರಿದ್ದರು. ಹೀಗಾಗಿ, ನಿಲ್ದಾಣದ ಪ್ರವೇಶ ದ್ವಾರದಿಂದಲೇ ನಗರದ ನಾನಾ ಕಡೆಗೆ ಬಸ್‌ ಸೇವೆ ಒದಗಿಸಲು ಸಿದ್ಧತೆ ನಡೆದಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಸರ್ವೇ ಆರಂಭ: ರೈಲು ನಿಲ್ದಾಣ ಮುಂಭಾಗದಲ್ಲಿ ಬಸ್‌ಗಳ ನಿಲುಗಡೆಗೆ ಕಾಮಗಾರಿ ನಡೆಯುತ್ತಿದ್ದು, ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಬಸ್‌ ಸಂಚಾರ ಯಾವ ಮಾರ್ಗಗಳಲ್ಲಿ ಪ್ರಾರಂ  ಭಿ ಸಬೇಕು ಎನ್ನುವ ಸಂಬಂಧ ರೈಲ್ವೆ ಇಲಾಖೆಯ ವೇಳಾಪಟ್ಟಿ ಹಾಗೂ ಪ್ರಯಾಣಿಕರು ಇಲ್ಲಿಂದ ಯಾವ ಮಾರ್ಗದಲ್ಲಿ ಹೆಚ್ಚು ಸಂಚಾರ ಮಾಡುತ್ತಾರೆ ಎಂಬ ಬಗ್ಗೆ ಸರ್ವೇ ಕಾರ್ಯ ನಡೆಯುತ್ತಿದೆ. ಈ ವೇಳೆ ಎಷ್ಟು ಪ್ರಯಾಣಿಕರು ಬಂದಿಳಿಯುತ್ತಾರೆ? ಯಾವ ಪ್ರವೇಶ ದ್ವಾರದಿಂದ ಹೆಚ್ಚು ಜನ ನಿರ್ಗಮಿಸುತ್ತಾರೆ? ಎಲ್ಲಿಗೆ ಹೆಚ್ಚು ಬೇಡಿಕೆ ಇದೆ? ಇದೆಲ್ಲದರ ಮಾಹಿತಿ ಕಲೆಹಾಕಲಾಗುವುದು. ಸದ್ಯ ನಿಲ್ದಾಣದಿಂದ ಮೆಜೆಸ್ಟಿಕ್‌, ಕೆ.ಆರ್‌.ಪುರ, ಹೆಬ್ಟಾಳ ಸೇರಿ ಕೆಲವೆಡೆ ಸೇವೆ ಒದಗಿಸಲು ನಿರ್ಧರಿಸ ಲಾಗಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್‌ಗಳು ಕಾರ್ಯನಿರ್ವಹಿಸಲಿವೆ.

ಸಾರ್ವಜನಿಕ ಸಾರಿಗೆಗೆ ಒತ್ತು: ನಗರದಲ್ಲಿ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು, ಸಾರ್ವಜನಿಕ ಸಾರಿಗೆ ಬಳಸು ವಂತೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧ್ಯವಾಗುತ್ತಿಲ್ಲ. ಆದರೆ, ಪ್ರಯಾಣಿಕರ ಬಳಿಗೇ ಬಸ್‌ ಸೇವೆ ಒದಗಿಸುವುದರಿಂದ ಒಂದಷ್ಟು ಪ್ರಮಾಣದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜತೆಗೆ ಸಾರ್ವಜನಿಕ ಸಾರಿಗೆಗೆ ಒತ್ತು ಕೊಟ್ಟಂತಾಗುತ್ತದೆ. ಸಂಸ್ಥೆಗೂ ಆದಾಯ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು.

ಮೂಲಸೌಕರ್ಯ ವ್ಯವಸ್ಥೆ ಅಗತ್ಯ :  ಯಶವಂತಪುರ ಮೆಟ್ರೋ ನಿಲ್ದಾಣದಿಂದ ನೇರವಾಗಿ ರೈಲು ನಿಲ್ದಾಣದ ಪ್ಲಾಟ್‌ಫಾರಂಗೆ ಪಾದಚಾರಿ ಮಾರ್ಗ ನಿರ್ಮಿಸಲು ಮೂರ್‍ನಾಲ್ಕು ವರ್ಷಗಳಿಂದ ಒತ್ತಾಯ ಕೇಳಿಬರುತ್ತಿದೆ. ಆದರೆ, ಈವರೆಗೆ ಇದು ಸಾಕಾರಗೊಂಡಿಲ್ಲ. ಪರಿಣಾಮ ಲಗೇಜುಗಳನ್ನು ಹೊತ್ತು, ವೃದ್ಧರು, ಮಹಿಳೆಯರು ಮಕ್ಕಳೊಂದಿಗೆ ರಸ್ತೆ ದಾಟಬೇಕಾದ ಅನಿವಾರ್ಯತೆ ಇದೆ. ಇದಲ್ಲದೆ, ಉದ್ದೇಶಿತ ನಿಲ್ದಾಣದಲ್ಲಿ ಬಸ್‌ಗಳ ನಿಲುಗಡೆ ಮಾತ್ರವಲ್ಲ. ಪ್ರಯಾಣಿಕರಿಗೂ ಮೂಲಸೌಕರ್ಯ ಒದಗಿಸುವ ಅಗತ್ಯವಿದೆ. ಪ್ರವೇಶ ದ್ವಾರದಿಂದ ಬರುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಕುರ್ಚಿ, ಬಿಸಿಲು, ಮಳೆಯಿಂದ ರಕ್ಷಣೆಗೆ ತಂಗುದಾಣ ನಿರ್ಮಾಣ ಹಾಗೂ ಕುಡಿಯುವ ನೀರಿನ ಘಟಕ ಸ್ಥಾಪನೆ ಅಗತ್ಯವಾಗಿದೆ. ಜತೆಗೆ ಬಸ್‌ ಮಾರ್ಗಗಳ ಬಗ್ಗೆಯೂ ಮಾಹಿತಿ ನೀಡಿದರೆ ಒಳಿತು ಎಂದು ಪ್ರಯಾಣಿಕರು ಅಭಿಪ್ರಾಯಪಡುತ್ತಾರೆ.

ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಈಚೆಗೆ ಆರಂಭಿಸಿರುವ ಬಸ್‌ ಸೇವೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಯಾಣಿಕರನ್ನು ಇಲ್ಲಿಂದ ನಿರೀಕ್ಷಿಸಲಾಗುತ್ತಿದೆ.  ಸಿ.ಶಿಖಾ, ಬಿಎಂಟಿಸಿ ಎಂ.ಡಿ

 

-ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

5banahatti

ಕಾಂಗ್ರೆಸ್ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಮತ ಕೇಳುತ್ತಿದ್ದಾರೆ: ಬನಹಟ್ಟಿ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid awarness

ವಾರದ ಹಿಂದೆ ನಗರಕ್ಕೆ ಬಂದಿಳಿದವರ ಶೋಧ..!

covid

ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್‌?

ಕಡಲೆ ಕಾಯಿ

ಗರಿಬಿಚ್ಚಿಕೊಂಡ ಹಳ್ಳಿ ಸೊಗಡು

ಪತ್ನಿಯನ್ನು ಕೊಂದಿದ್ದವನ ಶವ ಆಂಧ್ರದಲ್ಲಿ ಪತ್ತೆ

ಪತ್ನಿಯನ್ನು ಕೊಂದಿದ್ದವನ ಶವ ಆಂಧ್ರದಲ್ಲಿ ಪತ್ತೆ..!

fake marks cards

ನಕಲಿ ಅಂಕಪಟ್ಟಿ ದಂಧೆ: ನಾಲ್ವರು ವಶಕ್ಕೆ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

covid awarness

ವಾರದ ಹಿಂದೆ ನಗರಕ್ಕೆ ಬಂದಿಳಿದವರ ಶೋಧ..!

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

8bankloan

ಸಾಲ ಪಡೆಯಲು ಜನಜಂಗುಳಿ

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.