Udayavni Special

ಬಾಂಡ್‌ ಪೇಪರ್‌ ಮೇಲೆ ಸಹಿ ಪಡೆದು ವಂಚನೆ


Team Udayavani, Dec 9, 2018, 12:20 PM IST

bond-papwer.jpg

ಬೆಂಗಳೂರು: ಮೀಟರ್‌ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಆನೇಕಲ್‌ ಕೃಷ್ಣಪ್ಪ, ಖಾಲಿ ಬಾಂಡ್‌ ಪೇಪರ್‌ಗಳಿಗೆ ಸಾಲಗಾರರ ಸಹಿ ಹಾಕಿಸಿಕೊಂಡು ಅವರ ಆಸ್ತಿಗಳನ್ನೆಲ್ಲ ಅಕ್ರಮವಾಗಿ ತನ್ನ ಹೆಸರಿಗೆ ಮಾಡಿಕೊಂಡು ವಂಚಿಸುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಆನೇಕಲ್‌ ಮೂಲದ ಕೃಷ್ಣಪ್ಪ ಕಳೆದ ಹತ್ತು ವರ್ಷಗಳಿಂದ ಸಾರ್ವಜನಿಕರಿಗೆ ಶೇ.10ರಷ್ಟು ಬಡ್ಡಿ ದರದಲ್ಲಿ ಲಕ್ಷಾತಂರ ರೂ. ಸಾಲ ನೀಡುತ್ತಿದ್ದ. ಸಾಲ ಕೊಡುತ್ತಿದ್ದ ವೇಳೆ ಸಾಲಗಾರರಿಂದ ಖಾಲಿ ಬಾಂಡ್‌ ಪೇಪರ್‌ಗಳ ಮೇಲೆ ಸಹಿ ಮಾಡಿಸಿಕೊಳ್ಳುತ್ತಿದ್ದ. ನಿಗದಿತ ಸಮಯಕ್ಕೆ ಸಾಲ ವಾಪಸ್‌ ಕೊಡದಿದ್ದರೆ, ಸಾಲಗಾರರ ಮನೆ ಬಳಿ ಹೋಗಿ ಗಲಾಟೆ ಮಾಡುತ್ತಿದ್ದ.

ಒಂದು ವೇಳೆ ಆರು ತಿಂಗಳು, ವರ್ಷವಾದರೂ ಹಣ ಹಿಂದಿರುಗಿಸದಿದ್ದರೆ,  ಖಾಲಿ ಬಾಂಡ್‌ ಪೇಪರ್‌ಗಳ ಮೇಲೆ ಆಸ್ತಿ ಖರೀದಿಸಿರುವುದಾಗಿ ಬರೆದುಕೊಂಡು ವಂಚಿಸುತ್ತಿದ್ದ. ಇದನ್ನು ಯಾರಾದರೂ ಪ್ರಶ್ನಿಸಿದರೆ, ಅಂತಹ ಸಾಲಗಾರರ ವಿರುದ್ಧ ಈತನೇ ಕೋರ್ಟ್‌ಗಳಲ್ಲಿ ಸಿವಿಲ್‌ ದಾವೆ ಹೂಡುತ್ತಿದ್ದ.

ವಿಚಾರಣೆ ಆರಂಭವಾಗುತ್ತಿದ್ದಂತೆ ಸಾಲಗಾರರಿಗೆ ನೋಟಿಸ್‌ ಜಾರಿ ಮಾಡಲಾಗುತ್ತಿತ್ತು. ಆದರೆ, ಆರೋಪಿ ತನ್ನ ಪ್ರಭಾವ ಬಳಸಿ ಸಾಲಗಾರರಿಗೆ ನೋಟಿಸ್‌ ತಲುಪದಂತೆ ನೋಡಿಕೊಳ್ಳುತ್ತಿದ್ದ. ಈ ಮೂಲಕ ಆಸ್ತಿ ಕಬಳಿಸುತ್ತಿದ್ದ ಎಂದು ಸಿಸಿಬಿ ಡಿಸಿಪಿ ಎಸ್‌.ಗಿರೀಶ್‌ ಹೇಳಿದರು.

ಸಂಘಟನೆ ಮುಖ್ಯಸ್ಥ: ಆರೋಪಿ “ಪ್ರಜಾ ವಿಮೋಚನಾ ಚಳವಳಿ’ ಎಂಬ ಸಂಘಟನೆ ಕಟ್ಟಿದ್ದು, ಅದರ ಮುಖ್ಯಸ್ಥ ಕೂಡ ಆಗಿದ್ದಾನೆ. ಈ ಸಂಘಟನೆ ನಕಲಿಯೋ ಅಥವಾ ಅಸಲಿಯೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಧ್ಯಮ ವರ್ಗದವರು, ದುರ್ಬಲರನ್ನೇ ಗುರಿಯಾಗಿಸಿಕೊಂಡು ದಂಧೆ ನಡೆಸುತ್ತಿದ್ದ ಆರೋಪಿ, ರೌಡಿಗಳ ಮೂಲಕ ಸಾಲಗಾರರಿಗೆ ಬೆದರಿಕೆ ಹಾಕುತ್ತಿದ್ದ. ಇದುವರೆಗೂ ಆರೋಪಿಯ ವಿರುದ್ಧ 8 ಮಂದಿ ದೂರು ಕೊಟ್ಟಿದ್ದಾರೆ. ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದರು.

100ಕ್ಕೂ ಹೆಚ್ಚು ಪ್ರಕರಣ: ಸಾರ್ವಜನಿಕರ ಜಮೀನುಗಳನ್ನು ಕಬಳಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಿರ್ಲೆ ವರದರಾಜು ವಿರುದ್ಧ ಇದುವರೆಗೂ 100ಕ್ಕೂ ಹೆಚ್ಚು ಮಂದಿ ದೂರು ನೀಡಿದ್ದಾರೆ. ಇನ್ನಷ್ಟು ಮಂದಿ ದೂರು ನೀಡುವ ಸಾಧ್ಯತೆಯಿದ್ದು, ತನಿಖೆ ಮುಂದುವರಿದಿದೆ.

ಪ್ರತ್ಯೇಕ ಖಾತೆ: ಅಂಬಿಡೆಂಟ್‌ ವಂಚನೆ ಪ್ರಕರಣ ಸಂಬಂಧ ಪ್ರತ್ಯೇತ ಖಾತೆ ತೆರೆಯಲಾಗಿದೆ. ಕಂಪನಿಯಿಂದ ಹಣ ಪಡೆದವರು ಡಿಡಿ ಮೂಲಕ ಆ ಖಾತೆಗೆ ಹಣ ಜಮೆ ಮಾಡಲು ಪೊಲೀಸರು ಸೂಚಿಸಿದ್ದಾರೆ. ಕಂಪನಿಯಿಂದ ಹಣ ಪಡೆದ ಪೈಕಿ ಕೆಲವರು ಹಣ ವಾಪಸ್‌ ಕೊಡಲು ಒಪ್ಪಿಕೊಂಡಿದ್ದಾರೆ.

ಟಾಪ್ ನ್ಯೂಸ್

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

d-k-shi

ಮೋದಿ ಹೆಬ್ಬೆಟ್ಟ್ ಗಿರಾಕಿ ಎಂದ ಕಾಂಗ್ರೆಸ್ ಟ್ವೀಟ್ ಗೆ ಡಿಕೆ ಶಿವಕುಮಾರ್ ವಿಷಾದ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

gjhgfds

ಓಟಿಟಿಯಲ್ಲಿ ‘ಸಲಗ’ ದರ್ಶನವಿಲ್ಲ

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಜಿ ಶಾಸಕ ಎಂ‌.ಪಿ. ಕರ್ಕಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

ಮಾಜಿ ಶಾಸಕ ಎಂ‌.ಪಿ. ಕರ್ಕಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021 ಪೂರ್ವಭಾವಿ ಸಿದ್ಧತೆ ಪರಿಶೀಲಿಸಿದ ಸಚಿವ ನಾರಾಯಣಗೌಡ

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021 ಪೂರ್ವಭಾವಿ ಸಿದ್ಧತೆ ಪರಿಶೀಲಿಸಿದ ಸಚಿವ ನಾರಾಯಣಗೌಡ

11

ಬೆಂಗಳೂರಿನಲ್ಲಿ ರೋಬೋಟಿಕ್‌ ಹೈಟೆಕ್‌ ಆಸ್ಪತ್ರೆ

ಪತ್ನಿ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ಪತಿ

ಪತ್ನಿ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ಪತಿ

An incident at Poorneshwara Nagar police station

ಕೊಲೆಗೈದು ಶವ ಸಮೇತ ಠಾಣೆಗೆ ಬಂದ್ರು

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

6

9 ಟನ್‌ ಜಾನುವಾರು ಚರ್ಮ ಜಪ್ತಿ

5

ಕುಮಾರಸ್ವಾಮಿ ಟೀಕಿಸಲು ಅನ್ಸಾರಿ-ಜಮೀರ್‌ಗಿಲ್ಲ ನೈತಿಕತೆ

4

ಮೆರವಣಿಗೆಗೆ ತಡೆ; ಮುಸ್ಲಿಮರ ಆಕ್ರೋಶ

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

3

ನಿಯಮ ಪಾಲಿಸಿ ಜಾತ್ರೆ ನಡೆಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.