Udayavni Special

ಬೆಂವಿವಿ ಅಂಕಪಟ್ಟಿ ಆನ್‌ಲೈನ್‌ನಲ್ಲಿ


Team Udayavani, Jul 14, 2018, 12:15 PM IST

bvv.jpg

ಬೆಂಗಳೂರು: ಪ್ರಕಸ್ತ ಸಾಲಿನ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಅಂಕಪಟ್ಟಿ ಒದಗಿಸಿ, ಮುಂದಿನ ವರ್ಷದಿಂದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನೂ ಆನ್‌ಲೈನ್‌ ಮೂಲಕವೇ ನಡೆಸಲು ನಿರ್ಧರಿಸಿದ್ದೇವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಮಾಹಿತಿ ನೀಡಿದರು.

ಶುಕ್ರವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಞಾನಭಾರತಿಯಲ್ಲಿರುವ ಪರೀಕ್ಷಾ ಭವನವನ್ನು ಒಂದು ವರ್ಷದೊಳಗೆ ಉನ್ನತೀಕರಿಸಲಾಗುತ್ತದೆ. ನಿಗದಿತ ಸಮಯದೊಳಗೆ  ಫ‌ಲಿತಾಂಶ ನೀಡಲಿದ್ದೇವೆ. ಯುಜಿಸಿಯ ನ್ಯಾಷನಲ್‌ ಅಕಾಡೆಮಿಕ್‌ ಡೆಪಾಸಿಟರಿ (ಎನ್‌ಎಡಿ) ಕಾರ್ಯಕ್ರಮದ ಸಹಕಾರದೊಂದಿಗೆ ಎಲ್ಲ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ಮೂಲಕವೇ ಅಂಕಪಟ್ಟಿ ವಿತರಿಸಲಾಗುತ್ತದೆ ಎಂದರು.

ಎನ್‌ಎಡಿಯಲ್ಲಿ ವಿದ್ಯಾರ್ಥಿಗಳ ಫ‌ಲಿತಾಂಶದ ಮಾಹಿತಿ ಶೇಖರಿಸಿಡಲಿದ್ದೇವೆ. ಇದಕ್ಕೆ ಎಲ್ಲ ರೀತಿಯ ಭದ್ರತೆ ಒದಗಿಸಲಾಗುತ್ತದೆ. ಆಧಾರ್‌ ಕಾರ್ಡ್‌ ಮಾದರಿಯಲ್ಲಿ ವಿದ್ಯಾರ್ಥಿಗಳು ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈಗಾಗಲೇ ತಂದಿರುವ ಖಾಲಿ ಅಂಕಪಟ್ಟಿಗಳನ್ನು ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿತರಿಸಲಿದ್ದೇವೆ. ಹಾಗೆಯೇ ಮುಂದಿನ ವರ್ಷದಿಂದ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಆನ್‌ಲೈನ್‌ನಲ್ಲಿ ಮೌಲ್ಯಮಾಪನ ಮಾಡುವ ವ್ಯವಸ್ಥೆ ಜಾರಿಗೆ ತರಲಿದ್ದೇವೆ ಎಂದು ಹೇಳಿದರು.

ಮ್ಯಾಸೀವ್‌ ಒಪನ್‌ ಆನ್‌ಲೈನ್‌ ಕೋರ್ಸ್‌ ಕಡ್ಡಾಯ: 2019-2020ನೇ ಸಾಲಿನಿಂದ ಬೆಂವಿವಿಯಲ್ಲಿ  ಪದವಿ, ಸ್ನಾತಕೋತ್ತರ ಪದವಿ ಸೇರುವ ವಿದ್ಯಾರ್ಥಿಗಳು ಎರಡು ವಿಷಯಗಳಲ್ಲಿ ಕಡ್ಡಾಯವಾಗಿ ಮ್ಯಾಸೀವ್‌ ಒಪನ್‌ ಆನ್‌ಲೈನ್‌ ಕೋರ್ಸ್‌(ಎಂಒಒಸಿಎಸ್‌) ಪೂರೈಸಬೇಕು. ಇದು ಅಲ್ಪವಧಿಯ ಆನ್‌ಲೈನ್‌ ಕೋರ್ಸ್‌ ಆಗಿದ್ದು, ಪ್ರಮಾಣ ಪತ್ರ ನೀಡಲಾಗುತ್ತದೆ. ಅದರ ಆಧಾರದಲ್ಲಿ ಪದವಿ, ಸ್ನಾತಕೋತ್ತರ ಪದವಿ ವಿತರಿಸಲಾಗುತ್ತದೆ. ಯುಜಿಸಿ ನಿಯಮದಂತೆ ವ್ಯವಸ್ಥೆಯನ್ನು ಮುಂದಿನ ವರ್ಷ ಜಾರಿಗೆ ತರಲಿದ್ದೇವೆ ಎಂದು ಮಾಹಿತಿ ನೀಡಿದರು.

ಕೆಂಪೇಗೌಡ ಭವನ: ಬಿಬಿಎಂಪಿ ಸಹಯೋಗದೊಂದಿಗೆ ಜ್ಞಾನಭಾರತಿ ಆವರಣದಲ್ಲಿ ಕೆಂಪೇಗೌಡ ಭವನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬಿಬಿಎಂಪಿಯಿಂದ ಈಗಾಗಲೇ 50 ಕೋಟಿ ರೂ. ನೀಡಿದ್ದು, ಇನ್ನಷ್ಟು ಹಣ ಒದಗಿಸುವ ಭರವಸೆ ನೀಡಿದ್ದಾರೆ. ಮೂರು ಎಕರೆ ಜಾಗದಲ್ಲಿ ನಾಡಪ್ರಭು ಕೆಂಪೇಗೌಡ ಅಧ್ಯಯನ ಪೀಠ ಮತ್ತು ಸುಸಜ್ಜಿತ ಭವನ ನಿರ್ಮಾಣವಾಗಲಿದೆ. ಇದಾದ ನಂತರ ಜ್ಞಾನಜ್ಯೋತಿ ಸಭಾಂಗಣವನ್ನು ಬೆಂಗಳೂರು ಕೇಂದ್ರ ವಿವಿಗೆ ವರ್ಗಾಯಿಸಲಿದ್ದೇವೆ ಎಂದರು.

ಯುವಿಸಿಇಗೆ ಸ್ವಾಯತ್ತ ಸ್ಥಾನಮಾನ: ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಕಾಲೇಜ್‌ ಆಫ್ ಇಂಜಿನಿಯರಿಂಗ್‌ಗೆ (ಯುವಿಸಿಇ) ಸ್ವಾಯತ್ತ ಸ್ಥಾನಮಾನ ನೀಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ಅತಿ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಇಲ್ಲಿ ಸುಮಾರು 4500 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆ ಭರ್ತಿ ಮಾಡಿಕೊಳ್ಳಲಿದ್ದೇವೆ. ಬೆಂವಿವಿ ರಸಾಯಶಾಸ್ತ್ರ, ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರ  ವಿಭಾಗ ಸೇರಿದಂತೆ ವಿವಿಧ ಇಂಜಿನಿಯರಿಂಗ್‌ ವಿಭಾಗದಲ್ಲಿ ಒಟ್ಟು 200 ಬೋಧಕ ಹುದ್ದೆಗಳಲ್ಲಿ 96 ಹುದ್ದೆ ಖಾಲಿ ಇದ್ದು, ಅತಿ ಶೀಘ್ರದಲ್ಲಿ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಬೋಧಕೇತರ ಸಿಬ್ಬಂದಿ ನೇಮಕವು ನಡೆಯಲಿದೆ ಎಂದು ಹೇಳಿದರು.

ಸೋಲಾರ್‌ ಅಳವಡಿಕೆ: ಜ್ಞಾನಭಾರತಿ ಆವರಣದಲ್ಲಿ ಸೋಲಾರ್‌ ಪ್ಯಾನಲ್‌ಗ‌ಳನ್ನು ಅಳವಡಿಸುತ್ತಿದ್ದೇವೆ. ಇದರಿಂದ ಶೇ.50ರಷ್ಟು ವಿದ್ಯುತ್‌ ಬಿಲ್‌ ಉಳಿತಾಯವಾಗಲಿದೆ. ಸದ್ಯ ವಾರ್ಷಿಕ 80 ಲಕ್ಷ ವಿದ್ಯುತ್‌ ಬಿಲ್‌ ಪಾವತಿಸುತ್ತಿದ್ದು, ಅದು 40 ಲಕ್ಷಕ್ಕೆ ಇಳಿಯಲಿದೆ. ಹಾಗೆಯೇ ಮುಂದಿನ ಶೈಕ್ಷಣಿಕ ವರ್ಷದಿಂದ 25ಕ್ಕೂ ಅಧಿಕ ಹೊಸ ಕೋರ್ಸ್‌ಗಳನ್ನು ಆರಂಭಿಸಲಿದ್ದೇವೆ. ಯುವ ಸಂಶೋಧನಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸಂಶೋಧನಾ ನಿಧಿ ಸ್ಥಾಪಿಸಲಿದ್ದೇವೆ ಎಂದು ಮಾಹಿತಿ ನೀಡಿದರು. ಕುಲಸಚಿವ ಪ್ರೊ.ಬಿ.ಕೆ.ರವಿ ಸುದ್ದಿಗೋಷ್ಠಿಯಲ್ಲಿದ್ದರು.

ರಾಮನಗರ ವಿವಿಯಾಗಲಿ: ರಾಮನಗರ ಸ್ನಾತಕೋತ್ತರ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಎಂ.ಕಾಂ, ಅರ್ಥಶಾಸ್ತ್ರ ಕೋರ್ಸ್‌ಗಳ ಜತೆಗೆ ಈ ವರ್ಷ ಗಣಿತಶಾಸ್ತ್ರ, ಕನ್ನಡ, ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಕಾರ್ಯ ಕೋರ್ಸ್‌ಗಳನ್ನು ಆರಂಭಿಸಲಿದ್ದೇವೆ. ಮುಂದಿನ 10 ವರ್ಷದಲ್ಲಿ ಈ ಪಿಜಿ ಕೇಂದ್ರ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

ಕೊನೆಯ ಎಸೆತದಲ್ಲಿ ಚೆನ್ನೈ ವಿನ್‌

ಕೊನೆಯ ಎಸೆತದಲ್ಲಿ ಚೆನ್ನೈಗೆ ಜಯ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೆಡಿಎಸ್‌ ಹೆಸರಿಗಷ್ಟೇ ಜಾತ್ಯತೀತ, ಅವರದ್ದು ಅವಕಾಶವಾದಿ ರಾಜಕಾರಣ : ಸಿದ್ದರಾಮಯ್ಯ

ಜೆಡಿಎಸ್‌ ಹೆಸರಿಗಷ್ಟೇ ಜಾತ್ಯತೀತ, ಅವರದ್ದು ಅವಕಾಶವಾದಿ ರಾಜಕಾರಣ : ಸಿದ್ದರಾಮಯ್ಯ

ನನ್ನ ರಾಜೀನಾಮೆಗೆ ಪ್ರಧಾನಿ ಮೋದಿ ಕೂಡ ಆಶ್ಚರ್ಯ ಪಟ್ಟಿದ್ರು ; ಮಾಜಿ ಮುಖ್ಯಮಂತ್ರಿ ಬಿಎಸ್ ವೈ

ನನ್ನ ರಾಜೀನಾಮೆಗೆ ಪ್ರಧಾನಿ ಮೋದಿ ಕೂಡ ಆಶ್ಚರ್ಯ ಪಟ್ಟಿದ್ರು ; ಮಾಜಿ ಮುಖ್ಯಮಂತ್ರಿ ಬಿಎಸ್ ವೈ

sdfeswrw

ಕೋವಿಡ್ : ರಾಜ್ಯದಲ್ಲಿಂದು 775 ಪ್ರಕರಣ| 860 ಸೋಂಕಿತರು ಗುಣಮುಖ

tryhtr

ನಾಳೆಯ ‘ಭಾರತ್ ಬಂದ್‍’ಗೆ ಕಾಂಗ್ರೆಸ್ ಬೆಂಬಲ : ಡಿ.ಕೆ.ಶಿವಕುಮಾರ

ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸಿದರೆ ಕ್ರಮ

ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸಿದರೆ ಕ್ರಮ

MUST WATCH

udayavani youtube

ಶ್ರೀ ಕ್ಷೇತ್ರ ಕಮಲಶಿಲೆಗೆ ಸಚಿವ ಅಶ್ವಥ್ ನಾರಾಯಣ್ ದಂಪತಿ ಭೇಟಿ, ವಿಶೇಷ ಪೂಜೆ

udayavani youtube

ರೈತರಿಗೆ ನಿರಂತರ ಆದಾಯ ಕೊಡುವ ಲಿಂಬೆ ಬೆಳೆಯ ಬಗ್ಗೆ ಮಾಹಿತಿ

udayavani youtube

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

udayavani youtube

ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಾಜಕ್ಕೆ ಬಹಳಷ್ಟು ಅವಶ್ಯಕತೆ : ಡಾ| ಅಶ್ವತ್ಥನಾರಾಯಣ

udayavani youtube

ಕೋವಿಡ್ ಆತಂಕದ ನಡುವೆ ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ

ಹೊಸ ಸೇರ್ಪಡೆ

ಸ್ವಚ್ಛ ಕಡಲತೀರ, ಹಸುರು ಕೋಡಿ ಅಭಿಯಾನ

ಸ್ವಚ್ಛ ಕಡಲತೀರ, ಹಸುರು ಕೋಡಿ ಅಭಿಯಾನ

ಒತ್ತಿನೆಣೆ ತಿರುವು: ಹೆಚ್ಚಿದ ಅಪಘಾತ

ಒತ್ತಿನೆಣೆ ತಿರುವು: ಹೆಚ್ಚಿದ ಅಪಘಾತ

 ಕೊಕ್ಕಡ-ಗೋಳಿತೊಟ್ಟು ಸಂಪರ್ಕ ರಸ್ತೆ: ಕಾಂಕ್ರೀಟ್‌ಗೆ 2 ಕೋಟಿ ರೂ. ಪ್ರಸ್ತಾವನೆ

 ಕೊಕ್ಕಡ-ಗೋಳಿತೊಟ್ಟು ಸಂಪರ್ಕ ರಸ್ತೆ: ಕಾಂಕ್ರೀಟ್‌ಗೆ 2 ಕೋಟಿ ರೂ. ಪ್ರಸ್ತಾವನೆ

ಚಿನ್ನದ ಹುಡುಗಿ ಕೆರ್ವಾಶೆಯ ಅಕ್ಷತಾ ಪೂಜಾರಿಗೆ ಅದ್ದೂರಿ ಸ್ವಾಗತ

ಚಿನ್ನದ ಹುಡುಗಿ ಕೆರ್ವಾಶೆಯ ಅಕ್ಷತಾ ಪೂಜಾರಿಗೆ ಅದ್ದೂರಿ ಸ್ವಾಗತ

“ಲಡಾಖ್‌’ನಿಂದ “ಲಾಡಿ’ಗೆ ಮರಳಿದ ಆರಿಫ್‌

“ಲಡಾಖ್‌’ನಿಂದ “ಲಾಡಿ’ಗೆ ಮರಳಿದ ಆರಿಫ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.