ಸಿಎಎ: 70 ಲಕ್ಷ ಮಂದಿಗೆ ನೇರ ಮಾಹಿತಿ

Team Udayavani, Jan 20, 2020, 3:07 AM IST

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜಾಗೃತಿ ಅಭಿಯಾನದಡಿ ಈವರೆಗೆ 70 ಲಕ್ಷಕ್ಕೂ ಹೆಚ್ಚು ಮಂದಿಯನ್ನು ರಾಜ್ಯದಲ್ಲಿ ನೇರವಾಗಿ ಭೇಟಿಯಾಗಿ ಮಾಹಿತಿ ನೀಡಲಾಗಿದ್ದು, ಒಂದು ಕೋಟಿ ಜನರಿಗೆ ಮಾಹಿತಿ ಒದಗಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯ ದರ್ಶಿ, ಜಾಗೃತಿ ಅಭಿ ಯಾನದ ಸಂಚಾಲಕ ಎನ್‌.ರವಿ ಕುಮಾರ್‌ ಹೇಳಿದರು.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತ ನಾಡಿ, ಅಭಿಯಾನ ಡಿ.26ರವರೆಗೆ ನಡೆಯಲಿದ್ದು, ಗಣರಾಜ್ಯೋ ತ್ಸವದಂದು ರಾಜ್ಯದ 58,000 ಬೂತ್‌ಗಳಲ್ಲಿ ಏಕಕಾಲದಲ್ಲಿ ಧ್ವಜಾರೋಹಣ ನೆರವೇರಿಸಿ ಕಾಯ್ದೆ ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿ, ಸಭೆ ನಡೆಸಲಾಗುವುದು ಎಂದು ಹೇಳಿದರು.

ದಿನ ಕಳೆದಂತೆ ದೇಶಾದ್ಯಂತ ಸಿಎಎಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸಿಎಎ ಕುರಿತ ಜಾಗೃತಿ ಅಭಿಯಾನ ಜ.20ಕ್ಕೆ ಮುಕ್ತಾಯವಾಗಬೇಕಿತ್ತು. ಅದನ್ನು ಜ.26ರವರೆಗೆ ವಿಸ್ತರಿಸಲಾಗಿದೆ. ಜ.26ರಂದು ಬೆಳಗ್ಗೆ 9.30ರಿಂದ 10.30ರವರೆಗೆ ಎಲ್ಲ ಬೂತ್‌ಗಳಲ್ಲೂ ಧ್ವಜಾರೋಹಣ ನೆರವೇರಿಸಿ, ಪ್ರಧಾನಿಗೆ ಅಭಿನಂದಿಸಿ, ಸಭೆ ನಡೆಸಲಾಗುವುದು. ಹಾಗೆಯೇ ಕಾಯ್ದೆ ಬಗ್ಗೆ ಸುಳ್ಳು, ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್‌ ಧೋರಣೆ ಖಂಡಿಸಲಾಗುವುದು.

ಕಾಂಗ್ರೆಸ್‌ನ ನಿಜ ಬಣ್ಣ ಬಯಲು ಮಾಡಲಾಗುವುದು ಎಂದು ತಿಳಿಸಿದರು. ಎಲ್ಲ ಸಂಸದರು, ಶಾಸಕರು, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಸದಸ್ಯರು, ನಗರಸಭೆ ಸದಸ್ಯರು, ಪುರಸಭೆ ಸದಸ್ಯರು, ಮಾಜಿ ಸಂಸದರು, ಶಾಸಕರು, ಪಕ್ಷದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ “ಉಟ್ಟು ಬಟ್ಟೆಯಲ್ಲಿ ಹೊರಟು ಬಂದವರು’ ಕೃತಿ ಕುರಿತು ಚರ್ಚೆಯಾಗಲಿದೆ.

ಕಾಯ್ದೆಯಲ್ಲಿ ಮುಸ್ಲಿಮರಿಗೆ ತೊಂದರೆಯಾಗುವ ಒಂದು ಅಂಶವೂ ಇಲ್ಲ. ಹಾಗಿದ್ದರೂ ಕಾಂಗ್ರೆಸ್‌ ಸುಳ್ಳು ಹೇಳುತ್ತಾ ಅಪಪ್ರಚಾರ ಮಾಡುತ್ತಿದೆ. ಕಾಯ್ದೆಯ ಅಂಶಗಳ ಬಗ್ಗೆ ಬಹಿರಂಗ ಮುಕ್ತ ಚರ್ಚೆಗೆ ಬರುವಂತೆ ಕೇಂದ್ರ ಗೃಹ ಸಚಿವರಾದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಶನಿವಾರ ಹೇಳಿದ್ದಾರೆ. ಹಾಗಾಗಿ ಕಾಂಗ್ರೆಸ್‌ನವರು ಚರ್ಚೆಗೆ ಬರಲಿ ಎಂದು ಹೇಳಿದರು.

ಸಿಎಎ ಬಗ್ಗೆ ಉದ್ದೇಶಪೂರ್ವಕವಾಗಿ ವಿರೋಧಿಸುವವರಿಗೆ ಏನೂ ಮಾಡಲಾಗದು, ಅವರನ್ನು ಸರಿಪಡಿಸಲಾಗದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಅವರು ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುತ್ತಾರೆ. ಕಾಂಗ್ರೆಸ್‌ ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ಸಿಎಎ ಬಗ್ಗೆ ಬಹಿರಂಗ ಚರ್ಚೆಗೆ ಬಿಜೆಪಿ ಸಿದ್ಧವಿದೆ. ಮುಸ್ಲಿಮರನ್ನು ದೇಶದಿಂದ ಹೊರಗೆ ಕಳುಹಿಸಲಾಗುತ್ತದೆ ಎಂಬ ಅಂಶವನ್ನು ಕಾಂಗ್ರೆಸ್‌ನವರು ತೋರಿಸಲಿ.

ಕೇಂದ್ರ ಗೃಹ ಸಚಿವರು ಮುಕ್ತ ಚರ್ಚೆಗೆ ಕರೆ ನೀಡಿರುವುದರಿಂದ ನಾವು ಸಿದ್ಧರಿದ್ದೇವೆ. ಕಾಂಗ್ರೆಸ್‌ನವರೇ ಸಮಯ ನಿಗದಿಪಡಿಸಲಿ. ಕಾಂಗ್ರೆಸ್‌ನವರು ಮೊದಲಿಗೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ತಿಳಿಸಿದರು. ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್‌.ಆನಂದ್‌ ಉಪಸ್ಥಿತರಿದ್ದರು.

ಸಿಎಎ ಅಭಿಯಾನ ವಿವರ
* 61 ಚಿಂತನಾ ಸಭೆಗಳಾಗಿದ್ದು, 24,981 ಮಂದಿ ಭಾಗಿ.
* ಮನೆ- ಮನೆ ಸಂಪರ್ಕ ಅಭಿಯಾನದಡಿ 20.04,701 ಮನೆಗಳಿಗೆ ಸಂಪರ್ಕ.
* ಮಿಸ್ಡ್ ಕಾಲ್‌ ಅಭಿಯಾನದಡಿ 10,15,031 ಮಂದಿ ಮಿಸ್ಡ್ ಕಾಲ್‌ ನೀಡಿ ಬೆಂಬಲ.
* 8,065 ಕಡೆ ಭಾರತ ಮಾತಾ ಪೂಜಾ ಕಾರ್ಯಕ್ರಮಗಳಾಗಿದ್ದು, ಕಾಯ್ದೆ ಬೆಂಬಲಿಸುವಂತೆ ಚರ್ಚೆ.
* ಸಿಎಎ ಬೆಂಬಲಿಸಿ ಪ್ರಧಾನಿಯವರಿಗೆ 2,14,705 ಮಂದಿಯಿಂದ ಪತ್ರ.
* ಸಹಿ ಸಂಗ್ರಹ ಅಭಿಯಾನದಡಿ 5,23,332 ಮಂದಿ ಬೆಂಬಲ.
* 24 ರ್ಯಾಲಿಗಳಾಗಿದ್ದು, 1,93,700 ಮಂದಿ ಭಾಗಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತಿದೆ. ದೇಶದ ನಾನಾ ಭಾಗಗಳಿಂದ ಜನ ಇಲ್ಲಿಗೆ ಬಂದು ನೆಲೆಸಿದ್ದಾರೆ. ಬದುಕಿರುವಾಗ ಹೇಗೋ ನೆಲೆ ಸಿಗುತ್ತಿದೆ. ಆದರೆ ಅದೇ...

  • ಬೆಂಗಳೂರು: ಹುಳಿಮಾವು ಕೆರೆ ದುರಂತ ಸಂಭವಿಸಿ ಇಂದಿಗೆ (ಫೆ.24)ನಾಲ್ಕು ತಿಂಗಳಾಗಲಿದೆ. ಆದರೆ, ಇದಕ್ಕೆ "ಪರೋಕ್ಷವಾಗಿ ಕಾರಣರಾದ ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳ'...

  • ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ದಲಿತರು, ಅಲ್ಪಸಂಖ್ಯಾತರರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟ ಸಾಹು ಮಹಾರಾಜ್‌ ಹಾಗೂ ಶಿವಾಜಿ ವಂಶಸ್ಥರಾದ ಮರಾಠಿಗರನ್ನು...

  • ಬೆಂಗಳೂರು: ದೇಶಕ್ಕೆ ಅನ್ನ ನೀಡುವ ರೈತರು ಯಾವುದೇ ಕಾರಣಕ್ಕೂ ಹಳ್ಳಿ ಬಿಟ್ಟು ನಗರಕ್ಕೆ ಬರಬಾರದು ಎಂದು ನಟ ಶಿವರಾಜ್‌ಕುಮಾರ್‌ ರೈತರಲ್ಲಿ ಮನವಿ ಮಾಡಿದರು. ಕನಕಪುರ...

  • ಬೆಂಗಳೂರು: ರಾಜ್ಯದ್ಲಲಿ ಪೊಲೀಸರ ಕಾರ್ಯವೈಖರಿ ವಿರುದ್ಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಸಿಎಎ ವಿರುದ್ಧದ...

ಹೊಸ ಸೇರ್ಪಡೆ

  • ವರ್ಷಗಳ ಹಿಂದೆ ಪ್ರಮುಖ ಬ್ಯಾಂಕ್‌ಗಳ ಹಲವಾರು ಗ್ರಾಹಕರು ಎಟಿಎಂನಲ್ಲಿ ವಂಚನೆಗೊಳಗಾಗಿ ಲಕ್ಷಾಂತರ ಹಣ ಕಳೆದುಕೊಂಡ ಕುರಿತು ವರದಿಯಾಗಿತ್ತು. ತನಿಖೆ ನಡೆಸಿದಾಗ...

  • ಕಂಬದ ಮೇಲೆ ತೊಲೆಗಳು ಬರುವುದು ಎಲ್ಲೆಡೆ ಕಂಡುಬರುವ ಸಾಮಾನ್ಯ ಸಂಗತಿ. ಆದರೆ, ತೊಲೆಗಳ ಮೇಲೆ ಕಂಬಗಳನ್ನು ಹೊರಿಸಬೇಕು ಎಂದರೆ ಸ್ವಲ್ಪ ಹುಷಾರಾಗಿ ಮುಂದುವರಿಯಬೇಕಾಗುತ್ತದೆ....

  • 26 ಡಿಸೆಂಬರ್‌ 2019ರಂದು ರಾಜಸ್ಥಾನದ ಬಾರ್ಮೆರಿನ ರೈತ ಜುಗ್ತಾ ರಾಮ್‌ ಆಕಾಶದಲ್ಲಿ ಮಿಡತೆಗಳ ಬೃಹತ್‌ ಸೈನ್ಯ ಕಂಡು ಬೆಕ್ಕಸ ಬೆರಗಾದ. ಅದು ಲಕ್ಷಾಂತರ ಮಿಡತೆಗಳ ಹಿಂಡು....

  • ಲ್ಯಾರಿ ಟೆಸ್ಲರ್‌ ಎಂಬ ಕಂಪ್ಯೂಟರ್‌ ವಿಜ್ಞಾನಿ ಕೆಲ ದಿನಗಳ ಹಿಂದಷ್ಟೆ ತೀರಿಕೊಂಡರು. ಜಗತ್ತಿನೆಲ್ಲೆಡೆ ಅದು ಸುದ್ದಿಯಾಯಿತು. ಏಕೆಂದರೆ, ಇಂದು ಜಗತ್ತಿನಲ್ಲಿರುವ...

  • ಎಷ್ಟೋ ಬಾರಿ ನಮ್ಮದಲ್ಲದ ತಪ್ಪಿಗೆ ನಮ್ಮನ್ನು ಗುರಿಮಾಡಿದಾಗ ಕೋಪ, ಅಸಹನೆ, ದಃಖ ಹೀಗೆ ಎಲ್ಲೂವೂ ಒಟ್ಟಿಗೆ ಅಭಿವ್ಯಕ್ತಗೊಳ್ಳುವುದು ಸಹಜ. ಇಂತಹ ಸಂದರ್ಭದಲ್ಲಿ...