ಪ್ರೇಮಿಗಳ ದಿನಾಚರಣೆಗೆ ರಾಜಧಾನಿ ಸಜ್ಜು
Team Udayavani, Feb 14, 2018, 12:48 PM IST
ಬೆಂಗಳೂರು: ಪ್ರೇಮಾಂಕುರವಾದ ಗಳಿಗೆಯ ಸ್ಮರಣೆ, ನಿವೇದನೆಯ ದಿನ ಎಂದೇ ಬಿಂಬಿತ ವಾಗಿರುವ ಫೆ.14. ಪ್ರೇಮಿಗಳ ದಿನಾಚರಣೆಗೆ ರಾಜಧಾನಿ ಬೆಂಗಳೂರಿನ ಪ್ರೇಮಿಗಳು ಕಾತರರಾಗಿದ್ದಾರೆ.
ತಮ್ಮೊಳಗಿನ ಭಾವನೆಗಳನ್ನು ಮನಬಿಚ್ಚಿ ಮಾತನಾಡುವ ದಿನಕ್ಕಾಗಿ ಕಾಯುತ್ತಿರುವ ಪ್ರೇಮಿಗಳು, ಪ್ರೀತಿಸಿ ವಿವಾಹವಾದವರು ತಮ್ಮ ಹಳೆಯ ನೆನಪು ಮೆಲುಕು ಹಾಕಿ ಸಂಭ್ರಮಿಸುವುದು ಈ ದಿನದ ವಿಶೇಷ. ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ನಗರ ವಿವಿಧ ಬಡಾವಣೆಯ ಫ್ಯಾನ್ಸಿ ಸ್ಟೋರ್, ಶಾಪಿಂಗ್ ಮಾಲ್ ಮೊದಲಾದ ಕಡೆಗಳಲ್ಲಿ ಕೆಂಪು ಬಣ್ಣದ ಹೃದಯದಾಕಾರದ ಬಲೂನಿನ ಅಲಂಕಾರ ಮಾಡಲಾಗಿದೆ. ಕೆಲವೆಡೆ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ತಮಾಷೆ ಕ್ರೀಡೆಗಳನ್ನೂ ಆಯೋಜಿಸಲಾಗಿದ್ದು ಆದಕ್ಕಾಗಿಯೇ ಕೆಂಪು ಬಣ್ಣದ ಬಟ್ಟೆ ಧರಿಸು ಸಿದ್ಧಗೊಳಿಸಲಾಗಿದೆ. ನಗರದ ಮಾಲ್, ಹೋಟೆಲ್, ರೆಸ್ಟೊರೆಂಟ್ಗಳಲ್ಲಿ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ವಿಶೇಷ ರಿಯಾಯಿತಿ, ಕೊಡುಗೆ ಸಹ ಇದೆ.
ಪ್ರೇಮಿಗಳ ದಿನಾಚರಣೆಯ ಮತ್ತೂಂದು ವಿಶೇಷವಾದ ಗುಲಾಬಿ ಹೂವಿನ ವಿನಿಮಯ ವಾಡಿಕೆಯಾಗಿರುವುದರಿಂದ ಮಾರುಕಟ್ಟೆಗಳಲ್ಲಿ ಹೂವಿನ ದರವೂ ಹೆಚ್ಚಾಗಿದೆ. 5ರಿಂದ 10 ರೂ. ಇದ್ದ ಒಂದು ಗುಲಾಬಿ ಹೂವಿನ ಬೆಲೆ 20 ರಿಂದ 25ರೂ.ಗಳಿಗೆ ಏರಿಕೆಯಾಗಿದೆ.
ಮಲ್ಲೇಶ್ವರ, ಲಾಲ್ಬಾಗ್, ಕಬ್ಬನ್ ಪಾರ್ಕ್, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಬಿಟಿಎಂ
ಬಡಾವಣೆ, ಎಚ್ಎಸ್ಆರ್ ಬಡವಾಣೆ, ಸದಾಶಿವನಗರ, ಜಯನಗರ, ವಿಜಯನಗರ, ಯಶವಂತಪುರಗಳಲ್ಲಿನ ಮಾಲ್ಗಳಲ್ಲಿ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರೇಮಿಗಳ ದಿನಾಚರಣೆಗಾಗಿ ವಿಶೇಷ ಗಿಫ್ಟ್, ಗ್ರೀಟಿಂಗ್ ಕಾಡ್ಸ್, ಟಿ-ಶರ್ಟ್ ಇತ್ಯಾದಿ ಶಾಪಿಂಗ್ ಮಾಲ್ ಹಾಗೂ ಫ್ಯಾನ್ಸಿ ಸ್ಟೋರ್ಗಳಲ್ಲಿ ಮಾರಾಟಕ್ಕೆ ಇಡಲಾಗಿದೆ. ಬುಧವಾರ ಬೆಳಗ್ಗೆಯಿಂದಲೇ ಪ್ರೇಮಿಗಳು, ಶಾಪಿಂಗ್ ಮಾಲ್, ಪಾರ್ಕ್, ದೇವಸ್ಥಾನ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ಟ್ಯಾಟೋ ಆಫರ್: ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಪ್ರೇಮಿಗಳಿಗಾಗಿ ಟ್ಯಾಟೋ ಆಫರ್ ನೀಡಲಾಗಿದೆ. ಪ್ರೇಮಿಗಳಲ್ಲಿ ಒಬ್ಬರು ಟ್ಯಾಟೋ ಹಾಕಿಸಿಕೊಂಡರೇ ಇನ್ನೊಬ್ಬರಿಗೆ ಉಚಿತವಾಗಿ ಟ್ಯಾಟೋ ಹಾಕಿಸುತ್ತಾರೆ. ದೇವ್ ಟ್ಯಾಟೋ ವತಿಯಿಂದ ಪ್ರೇಮಿಗಳ ದಿನಾಚರಣೆ ಅಂಗವಾಗಿ ಈ ಕೊಡುಗೆ ಬಿಡಲಾಗಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ