Udayavni Special

ಪತ್ನಿ ಅಪಹರಣ ನಾಟಕವಾಡಿದವನ ಸೆರೆ


Team Udayavani, Aug 29, 2018, 12:33 PM IST

patnio.jpg

ಬೆಂಗಳೂರು: ಹಣಕಾಸಿನ ವಿಚಾರವಾಗಿ ಪರಿಚಿತ ವ್ಯಕ್ತಿಯನ್ನು ಜೈಲಿಗೆ ಕಳುಹಿಸಲು ಹಾಗೂ ತನ್ನ ಪತ್ನಿಯನ್ನು ವೇಶ್ಯಾವಾಟಿಕೆ ದಂಧೆಗೆ ದೂಡುವ ಉದ್ದೇಶದಿಂದ ಆಕೆಯನ್ನೇ ಅಪಹರಿಸಿ ನಾಪತ್ತೆ ಪ್ರಕರಣ ದಾಖಲಿಸಿದ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಪಶ್ಚಿಮ ಬಂಗಾಳ ಮೂಲದ ಮೊಹಮದ್‌ ಸಮೀಮ್‌ ಜಮಾಲ್‌ (23) ಬಂಧಿತ. ಇದೇ ವೇಳೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪಾಯಲ್‌ ಎಂಬಾಕೆಯನ್ನು ಬಂಧಿಸಲಾಗಿದೆ. ಆರೋಪಿ ಪರಿಚಿತ ಹುಸೇನ್‌ ಎಂಬಾತನನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸಮೀಮ್‌ ಜಮಾಲ್‌ ಶಿವಾಜಿನಗರದಲ್ಲಿ ಎಂಬ್ರಾಯಡರಿ ಕೆಲಸ ಮಾಡಿಕೊಂಡಿದ್ದು, ಮಡಿವಾಳದ ಮಾರುತಿ ನಗರದಲ್ಲಿ ಎರಡನೇ ಪತ್ನಿ ಅನಿಸಾಳ ಜತೆ ವಾಸವಾಗಿದ್ದ. ಈ ಮಧ್ಯೆ ಎರಡು ತಿಂಗಳ ಹಿಂದಷ್ಟೇ ಶಿವಾಜಿನಗರದಲ್ಲಿ ಟೈಲರಿಂಗ್‌ ಕೆಲಸ ಮಾಡುವ ಹುಸೇನ್‌ ಎಂಬಾತನನ್ನು ಪರಿಚಯಿಸಿಕೊಂಡಿದ್ದ ಆರೋಪಿ, ಈತನಿಂದ 10ಸಾವಿರ ರೂ. ಸಾಲ ಪಡೆದಿದ್ದ. ಆದರೆ, ವಾಪಸ್‌ ಕೊಟ್ಟಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ಜಗಳ ನಡೆದಿತ್ತು.

ಇದರಿಂದ ಆಕ್ರೋಶಗೊಂಡ ಆರೋಪಿ, ಹುಸೇನ್‌ನನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸಿದ್ದ. ಅದರಂತೆ ತನ್ನ ಸ್ನೇಹಿತೆ, ವೇಶ್ಯಾವಾಟಿಕೆ ದಂಧೆ ನಡೆಸುವ ಪಾಯಲ್‌ ಜತೆ ಸೇರಿ 2ನೇ ಪತ್ನಿ ಅನಿಸಾಳನ್ನು ಮಡಿವಾಳದ ಲಾಡ್ಜ್ವೊಂದರಲ್ಲಿ ಕೂಡಿ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲೇ ಪತ್ನಿ ಜತೆ ಹೋಗಿ ದೂರು: ಸಂಚಿನಂತೆ ಆರೋಪಿ ಮೊಹಮ್ಮದ್‌ ಆ.16ರಂದು ಮೊದಲ ಪತ್ನಿ ಹಾಗೂ ಪುತ್ರನ ಜತೆ ಹೋಗಿ ಮಡಿವಾಳ ಠಾಣೆಯಲ್ಲಿ ತನ್ನ ಪತ್ನಿ ಅನಿಸಾಳನ್ನು ಶಿವಾಜಿನಗರದ ಹುಸೇನ್‌ ಎಂಬಾತ ಅಪಹರಣ ಮಾಡಿದ್ದು, 1ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿದ್ದ. ಈ ವೇಳೆ ಮೊದಲ ಪತ್ನಿಯನ್ನು ತನ್ನ ಸಹೋದರಿ ಎಂದು ಸುಳ್ಳು ಹೇಳಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಸೇನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲ ಮಾಹಿತಿ ಪತ್ತೆಯಾಗಿತ್ತು. ಬಳಿಕ ಆರೋಪಿಯನ್ನು ಕರೆದು ತೀವ್ರ ವಿಚಾರಣೆ ನಡೆಸಿದಾಗ ವಿಷಯ ಬಹಿರಂಗವಾಗಿದೆ.

ಪತ್ನಿಯನ್ನು ವೇಶ್ಯಾವಾಟಿಕೆಗೆ ದೂಡುವ ಯತ್ನ: ಆರೋಪಿ ಮೊಹಮ್ಮದ್‌ ಸಮೀಮ್‌ ಈಗಾಗಲೇ ಮದುವೆಯಾಗಿದ್ದು, ಒಂದು ಮಗುವಿದೆ. ಆದರೂ ಆರೋಪಿ ಅನಿಸಾಳನ್ನು 2ನೇ ವಿವಾಹವಾಗಿದ್ದ. ಈಕೆಯನ್ನು ಸ್ನೇಹಿತೆ ಪಾಯಲ್‌ ಜತೆ ಸೇರಿಕೊಂಡು ದಂಧೆಗೆ ದೂಡಿ ಹೆಚ್ಚು ಹಣ ಸಂಪಾದಿಸಲು ಆರೋಪಿ ನಿರ್ಧರಿಸಿದ್ದ. ಮತ್ತೂಂದೆಡೆ ಹುಸೇನ್‌ನನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸಿದ್ದ ಆರೋಪಿ ಅನಿಸಾಗಳಿಗೆ ಸುಳ್ಳು ಹೇಳಿ ಮಡಿವಾಳದ ಲಾಡ್ಜ್ವೊಂದರಲ್ಲಿ ಪಾಯಲ್‌ ಜತೆ ಇರಿಸಿದ್ದ. ಆದರೆ, ಪತಿಯ ಈ ವಿಚಾರ ಅನಿಸಾಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೃಷಿ ಮಸೂದೆಗೆ ವಿರೋಧ: ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ

ಕೃಷಿ ಮಸೂದೆಗೆ ವಿರೋಧ: ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ

ಕರ್ನಾಟಕ ಬಂದ್: ಹಾವೇರಿಯಲ್ಲಿ ರೈತ ಸಂಘಟನೆಗಳಿಂದ ವಿನೂತನ ರೀತಿಯ ಪ್ರತಿಭಟನೆ

ಕರ್ನಾಟಕ ಬಂದ್: ಹಾವೇರಿಯಲ್ಲಿ ರೈತ ಸಂಘಟನೆಗಳಿಂದ ವಿನೂತನ ರೀತಿಯ ಪ್ರತಿಭಟನೆ

ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲಿ ಬೆಂಬಲ: ಬಸ್ ನಿಲ್ದಾಣಕ್ಕೆ ಮುತ್ತಿಗೆ

ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲಿ ಬೆಂಬಲ: ಬಸ್ ನಿಲ್ದಾಣಕ್ಕೆ ಮುತ್ತಿಗೆ

ಕರ್ನಾಟಕ ಬಂದ್: ವಿಜಯಪುರದಲ್ಲಿ ಮಿಶ್ರ ಪ್ರತಿಕ್ರಿಯೆ

ಕರ್ನಾಟಕ ಬಂದ್: ವಿಜಯಪುರದಲ್ಲಿ ಮಿಶ್ರ ಪ್ರತಿಕ್ರಿಯೆ

ಉಡುಪಿ: ರಸ್ತೆ ತಡೆದು, ಬಸ್ ಬಂದ್ ಮಾಡಲು ಯತ್ನಿಸಿದ ಪ್ರತಿಭಟನಾಕಾರರ ಬಂಧನ

ಉಡುಪಿ: ರಸ್ತೆ ತಡೆದು, ಬಸ್ ಬಂದ್ ಮಾಡಲು ಯತ್ನಿಸಿದ ಪ್ರತಿಭಟನಾಕಾರರ ಬಂಧನ

ಪೂರನ್ ಫೀಲ್ಡಿಂಗ್

ಎಂಚಿನ ಫೀಲ್ಡಿಂಗ್ ಮಾರ್ರೆ:ಪೂರನ್ ಫೀಲ್ಡಿಂಗ್ ಕಂಡು ತುಳು ಟ್ವೀಟ್ ಮಾಡಿದ ಸ್ಟಾರ್ ಸ್ಪೋರ್ಟ್ಸ್

ಕರ್ನಾಟಕ ಬಂದ್: ಉಡುಪಿಯಲ್ಲಿ ಬಸ್ ಸಂಚಾರ ವಿರಳ, ಬಸ್ ಬಂದ್ ಮಾಡಲು ಸಂಘಟನೆಗಳ ಮನವಿ

ಕರ್ನಾಟಕ ಬಂದ್: ಉಡುಪಿಯಲ್ಲಿ ಬಸ್ ಸಂಚಾರ ವಿರಳ, ಬಸ್ ಬಂದ್ ಮಾಡಲು ಸಂಘಟನೆಗಳ ಮನವಿ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bng-tdy-4

ಮಾಸ್ಕ್ ಹಾಕದಿದ್ದರೆ ಸಾವಿರ ರೂ.ದಂಡ?

ಸಚಿವ ಈಶ್ವರಪ್ಪ ನಿವಾಸದಲ್ಲಿ ಕುರುಬ ಸಮಾಜ ನಾಯಕರ ಸಭೆ

ಸಚಿವ ಈಶ್ವರಪ್ಪ ನಿವಾಸದಲ್ಲಿ ಕುರುಬ ಸಮಾಜ ನಾಯಕರ ಸಭೆ

bng-tdy-3

ವಿಕ್ಟೋರಿಯಾ ಆಸ್ಪತ್ರೆಗಳ ಸೇವೆ ಪುನಾರಂಭ

ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿದ್ದವರ ಸೆರೆ

ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿದ್ದವರ ಸೆರೆ

ಫ್ಯಾಷನ್‌ ಲೋಕ ದಲ್ಲೂ ಡ್ರಗ್ಸ್‌; ದೆಂಬ್ಲಾಗೆ ಗ್ರಿಲ್‌

ಫ್ಯಾಷನ್‌ ಲೋಕ ದಲ್ಲೂ ಡ್ರಗ್ಸ್‌; ದೆಂಬ್ಲಾಗೆ ಸಿಸಿಬಿ ಗ್ರಿಲ್‌

MUST WATCH

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyam



ಹೊಸ ಸೇರ್ಪಡೆ

ಕೃಷಿ ಮಸೂದೆಗೆ ವಿರೋಧ: ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ

ಕೃಷಿ ಮಸೂದೆಗೆ ವಿರೋಧ: ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ

ಕರ್ನಾಟಕ ಬಂದ್: ಹಾವೇರಿಯಲ್ಲಿ ರೈತ ಸಂಘಟನೆಗಳಿಂದ ವಿನೂತನ ರೀತಿಯ ಪ್ರತಿಭಟನೆ

ಕರ್ನಾಟಕ ಬಂದ್: ಹಾವೇರಿಯಲ್ಲಿ ರೈತ ಸಂಘಟನೆಗಳಿಂದ ವಿನೂತನ ರೀತಿಯ ಪ್ರತಿಭಟನೆ

ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲಿ ಬೆಂಬಲ: ಬಸ್ ನಿಲ್ದಾಣಕ್ಕೆ ಮುತ್ತಿಗೆ

ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲಿ ಬೆಂಬಲ: ಬಸ್ ನಿಲ್ದಾಣಕ್ಕೆ ಮುತ್ತಿಗೆ

ಕರ್ನಾಟಕ ಬಂದ್: ವಿಜಯಪುರದಲ್ಲಿ ಮಿಶ್ರ ಪ್ರತಿಕ್ರಿಯೆ

ಕರ್ನಾಟಕ ಬಂದ್: ವಿಜಯಪುರದಲ್ಲಿ ಮಿಶ್ರ ಪ್ರತಿಕ್ರಿಯೆ

ಉಡುಪಿ: ರಸ್ತೆ ತಡೆದು, ಬಸ್ ಬಂದ್ ಮಾಡಲು ಯತ್ನಿಸಿದ ಪ್ರತಿಭಟನಾಕಾರರ ಬಂಧನ

ಉಡುಪಿ: ರಸ್ತೆ ತಡೆದು, ಬಸ್ ಬಂದ್ ಮಾಡಲು ಯತ್ನಿಸಿದ ಪ್ರತಿಭಟನಾಕಾರರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.